• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್

|

ನವದೆಹಲಿ, ಮಾರ್ಚ್ 14: ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಜೈಷ್-ಎ- ಮೊಹಮ್ಮದ್ ಮುಖ್ಯಸ್ಥ ಮೌಲನಾ ಮಸೂದ್ ಅಜರ್‌ನನ್ನು 'ಜಾಗತಿಕ ಉಗ್ರ' ಎಂದು ವಿಶ್ವಸಂಸ್ಥೆಯಲ್ಲಿ ಘೋಷಣೆ ಮಾಡಲು ಭಾರತ ಮಾಡಿದ್ದ ಮನವಿಗೆ ಚೀನಾ ಮತ್ತೊಮ್ಮೆ ತಡೆಯೊಡ್ಡಿದೆ. 2009ರಿಂದ ಇಲ್ಲಿ ತನಕ ನಾಲ್ಕು ಬಾರಿ ಅಜರ್ ನನ್ನು ರಕ್ಷಿಸಿರುವ ಚೀನಾ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿವೆ.

ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ

ಭದ್ರತಾ ಸಮಿತಿಯಲ್ಲಿ ವಿಟೋ ಅಧಿಕಾರ ಉಳ್ಳ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಕೂಡಾ ಒಂದು. ಈ ಬಾರಿ ಭಾರತದ ಪರವಾಗಿ ಉಗ್ರ ಅಜರ್ ಗೆ ನಿರ್ಬಂಧ ಹೇರುವ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಮುಂದೆ ಫ್ರಾನ್ಸ್ ಮುಂದಿಟ್ಟಿತ್ತು.

ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ

ಯುಎಸ್, ಯುಕೆ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ, ಪಾಕಿಸ್ತಾನದ ಪಾಲಿನ ಸರ್ವ ಋತು ಮಿತ್ರ ದೇಶ ಚೀನಾ ಮಾತ್ರ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಟ್ಟಿತು.

ಚೀನಾ ಉತ್ಪನ್ನ, ಚೀನಿ ಆಪ್ ಗಳನ್ನು ನಿಷೇಧಿಸಿ

ಅಜರ್ ಬೆನ್ನಿಗೆ ನಿಂತ ಚೀನಾ, 'ಚೀನಾ ಉತ್ಪನ್ನ ನಿಷೇಧಿಸಿ' ಟ್ರೆಂಡ್ ಜಾರಿಯಲ್ಲಿದ್ದು, ಚೀನಾ ದೇಶದ ಉತ್ಪನ್ನಗಳಲ್ಲದೆ, ಚೀನಾದ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಿ ಎಂದು ಆಪ್ ಗಳ ಪಟ್ಟಿ ಕೊಟ್ಟ ಸಾರ್ವಜನಿಕರು.

ಮಸೂದ್ ಅಜರ್ ಪ್ರಯಾಣದ ಮೇಲೆ ನಿರ್ಬಂಧ ಬೀಳುತ್ತಿತ್ತು

ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೆ ಆತನ ಆಸ್ತಿ ಮೇಲೆ, ಪ್ರಯಾಣ ಮೇಲೆ ನಿರ್ಬಂಧ ಬೀಳುತ್ತಿತ್ತು. ಜಾಗತಿಕವಾಗಿ ಪ್ರಯಾಣವೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲ ದೇಶಗಳಲ್ಲಿನ ಆತನ ಹಣಕಾಸು ಮೂಲಕ್ಕೆ ತಡೆ ಆಗುತ್ತಿತ್ತು. ಇನ್ನು ಯಾವುದೇ ದೇಶದ ಮೂಲಕ ಮತ್ತೊಂದು ದೇಶಕ್ಕೆ ಹೋಗುವುದು ಸಹ ಅಸಾಧ್ಯವಾಗುತ್ತಿತ್ತು.

ಅಜರ್ ಮೇಲಿನ ನಿರ್ಬಂಧಕ್ಕೆ ಅಡ್ಡಿಯಾಗಿದೆ

ಯಾವುದೇ ದೇಶದ ಶಸ್ತ್ರಾಸ್ತ್ರ ಪೂರೈಕೆ, ಸೇನಾ ತರಬೇತಿ, ತಾಂತ್ರಿಕ ಸಲಹೆ, ಎಲ್ಲ ಬಗೆಯ ಸಲಕರಣೆಗಳು ನೇರ-ಪರೋಕ್ಷ ಮಾರಾಟ, ಹಸ್ತಾಂತರ ಮಾಡುವುದಕ್ಕೆ ಅಜರ್ ಮೇಲೆ ನಿರ್ಬಂಧ ಬೀಳುತ್ತಿತ್ತು.

ಪುಲ್ವಾಮಾ ದಾಳಿ, ಬಾಲಕೋಟ್ ದಾಳಿ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಗಡಿ ನಿಯಂತ್ರಣ ರೇಖೆ ಬಳಿ ಇರುವ ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಉಗ್ರದ ಅಡಗುತಾಣಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತು.

ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ

ವಿಶ್ವಸಂಸ್ಥೆಯ 1267 ಭದ್ರತಾ ಸಮಿತಿಯ ಮುಂದೆ ಈ ವಿಚಾರ ಚರ್ಚೆಗೆ ಬಂದಾಗ, ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಾಗುತ್ತದೆ. ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ

ಅಮೆರಿಕ ಬೆಂಬಲಿಸುತ್ತಾ ಬಂದಿದೆ

ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ ರೂವಾರಿ ಮೌಲನಾ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಬಾರಿ ಬೆಂಬಲ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಪಾನ್ ನಿಂದ ಭಾರತ ಕಲಿಯುವುದು ಸಾಕಷ್ಟಿದೆ

ಜಪಾನ್ ನಿಂದ ಭಾರತ ಕಲಿಯುವುದು ಸಾಕಷ್ಟಿದೆ. ಬಲಿಷ್ಠ ಯುಎಸ್ಎಗೆ ಸವಾಲು ಹಾಕಿ, ಸಮರ್ಥವಾಗಿ ಬೆಳೆದು ನಿಂತಿದೆ.

ಪಾಕಿಸ್ತಾನ- ಚೀನಾ ಉತ್ಪನ್ನಗಳಿಗೆ ನಿಷೇಧ ಹೇರಿ

ಚೀನಾ ಉತ್ಪನ್ನಗಳಿಗೆ ನಿಷೇಧ ಹೇರುವ ಮೂಲಕ ಪಾಕಿಸ್ತಾನದ ಉತ್ಪನ್ನಗಳಿಗೂ ನಿರ್ಬಂಧ ಹಾಕಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's bid to get Pakistan-based Jaish-e-Mohammed's chief Masood Azhar as a "global terrorist" by the UN Security Council was once again blocked by China despite his outfit carrying out the ghastly Pulwama attack. This is the fourth time that China has blocked the resolution against Azhar since 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more