ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಮ್ ಬೂಮ್ ಬೋರಿಸ್: ದಿಗ್ಗಜ ಕ್ರೀಡಾಪಟುವಿನ ದುರದೃಷ್ಟಕರ ಕತೆ ವ್ಯಥೆ

|
Google Oneindia Kannada News

ತನ್ನ ವೃತ್ತಿಯಲ್ಲಿ ಹಲವು ಒತ್ತಡಗಳನ್ನ ನಿಭಾಯಿಸಿ ಯಶಸ್ಸಿನ ಉತ್ತುಂಗಕ್ಕೇರಿದ ಒಬ್ಬ ಕ್ರೀಡಾಪಟು ತನ್ನ ಕ್ರೀಡೆಯಾಚೆಗಿನ ವೈಯಕ್ತಿಕ ಬದುಕಿನ ಜವಾಬ್ದಾರಿ, ಒತ್ತಡಗಳನ್ನ ನಿಭಾಯಿಸಲಾಗದೇ ಪ್ರಪಾತಕ್ಕೆ ಕುಸಿಯುವ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಸಿಗುತ್ತವೆ. ಟೆನಿಸ್ ಲೋಕದ ದಂತಕಥೆ ಎನಿಸಿದ್ದ ಬೋರಿಸ್ ಬೆಕರ್ ಈ ಪಟ್ಟಿಗೆ ಸೇರಿದ್ದಾರೆ. ಹದಿಹರೆಯದ ವಯಸ್ಸಿನಲ್ಲೇ ಚಂಡಪ್ರಚಂಡರನ್ನು ಸೋಲಿಸಿ ಗ್ರ್ಯಾನ್ ಸ್ಲಾಮ್ (Grandslam) ಪ್ರಶಸ್ತಿಗಳನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದ ಬೋರಿಸ್ ಬೆಕರ್ ಇದೀಗ ಹಣ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿದ್ದಾರೆ.

ಜರ್ಮನಿ ದೇಶದ ಬೋರಿಸ್ ಬೆಕರ್ ಅವರು ಜೈಲು ಸೇರಲು ಕಾರಣವಾದ ಹಾದಿಯನ್ನು ಗಮನಿಸುವುದು ಇತರ ಕ್ರೀಡಾಪಟುಗಳಿಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಒಂದು ಅನನ್ಯ ಪಾಠವಾಗಬಹುದು. ಕ್ರೀಡೆಯಾಚೆಗಿನ ವ್ಯವಹಾರ ಮತ್ತು ಜೀವನವನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಎಂಥ ಯಡವಟ್ಟಾಗಬಹುದು ಎಂಬುದಕ್ಕೆ ಬೆಕರ್ ಸಾಕ್ಷಿಯಾಗಿದ್ದಾರೆ.

ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್‌ಗೆ 2 ವರ್ಷ ಜೈಲುಶಿಕ್ಷೆಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್‌ಗೆ 2 ವರ್ಷ ಜೈಲುಶಿಕ್ಷೆ

ಬೂಮ್ ಬೂಮ್ ಬೋರಿಸ್:
1967ರಲ್ಲಿ ಜನಿಸಿದ ಜರ್ಮನಿಯ ಬೋರಿಸ್ ಬೆಕರ್ 1980ರಷ್ಟರಲ್ಲಿ ಟೆನಿಸ್ ಕ್ರೀಡೆಯಲ್ಲಿ ತಮ್ಮ ದೇಶದೊಳಗೆ ಛಾಪು ಮೂಡಿಸಿದ್ದರು. 1984ರಲ್ಲಿ ವೃತ್ತಿಪರ ಟೆನಿಸ್‌ಗೆ ಅಡಿ ಇಟ್ಟ ಬೆಕರ್ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. 1985ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಅವರು ವಿಂಬಲ್ಡನ್ ಗೆದ್ದು ಇತಿಹಾಸ ಸೃಷ್ಟಿಸಿದರು. ಅತಿ ಕಿರಿಯ ವಯಸ್ಸಿನ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಎಂಬ ದಾಖಲೆ ಒಂದೆರಡು ವರ್ಷ ಉಳಿದುಕೊಂಡಿತು. ನಂತರ ಅವರು ಸಿನ್ಸಿನಾಟಿ ಓಪನ್ ಗೆದ್ದರು, ಮರುವರ್ಷ ಮತ್ತೊಮ್ಮೆ ವಿಂಬಲ್ಡನ್ ಗೆದ್ದರು. ಹೀಗೆ ಸಣ್ಣ ವಯಸ್ಸಿನಲ್ಲೇ ಸಾಲು ಸಾಲು ಪ್ರಮುಖ ಟೂರ್ನಿಗಳನ್ನ ಗೆದ್ದ ಬೋರಿಸ್ ಬೆಕರ್ ಅವರಿಗೆ ಅವರ ಪ್ರಬಲ ಸರ್ವ್ ನೆರವಿಗೆ ಬಂದಿತ್ತು. ಅಂತೆಯೇ ಬೂಮ್ ಬೂಮ್ ಬೋರಿಸ್ ನಾಮಧೇಯವೂ ಅವರಿಗೆ ಅಂಟಿಕೊಂಡಿತು.

Boris Becker: The Rise and Fall of German Tennis Legend

1999ರಲ್ಲಿ ನಿವೃತ್ತರಾಗುವವರೆಗೂ ಬೋರಿಸ್ ಬೆಕರ್ 6 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ವಿಂಬಲ್ಡನ್ 3 ಬಾರಿ, ಆಸ್ಟ್ರೇಲಿಯನ್ ಓಪನ್ 2 ಬಾರಿ, ಯುಎಸ್ ಓಪನ್ 1 ಬಾರಿ ಗೆದ್ದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಮಾತ್ರ ಅವರು ಫೈನಲ್ ಹಂತಕ್ಕೂ ಬರಲು ಸಾಧ್ಯವಾಗಲಿಲ್ಲ.

ಎರಡು ವರ್ಷಗಳ ನಂತರ ಚೀನಾಗೆ ಭಾರತದ ವಿದ್ಯಾರ್ಥಿಗಳು ಮರಳಲು ಅವಕಾಶ ಎರಡು ವರ್ಷಗಳ ನಂತರ ಚೀನಾಗೆ ಭಾರತದ ವಿದ್ಯಾರ್ಥಿಗಳು ಮರಳಲು ಅವಕಾಶ

ಸಮಕಾಲೀನರು:
ಬೋರಿಸ್ ಬೆಕರ್ ಆಡುವ ವೇಳೆ ಅವರು ಹಲವು ದಿಗ್ಗಜರನ್ನ ಎದುರಿಸಿ ಜಯಿಸಿದ್ದಾರೆ. ಜಾನ್ ಮೆಕೆನ್ರೋ, ಜಿಮ್ ಕೊರಿಯರ್, ಇವಾನ್ ಲೆಂಡಲ್, ಪೀಟ್ ಸಾಂಪ್ರಾಸ್, ಆಂಡ್ರೆ ಅಗಾಸ್ಸಿ ಮೊದಲಾದವರನ್ನ ಎದುರಿಸಿ ಪ್ರಜ್ವಲಿಸಿದ ಪ್ರತಿಭೆ ಬೆಕರ್ ಅವರಾಗಿದ್ದರು.

ಟೆನಿಸ್‌ನಿಂದ ಹೇರಳ ಹಣ ಸಂಪಾದನೆ:
ಬೋರಿಸ್ ಬೆಕರ್ 1999ರಲ್ಲಿ ಕೇವಲ 32ನೇ ವಯಸ್ಸಿನಲ್ಲಿ ನಿವೃತ್ತರಾಗುವ ಸಾಕಷ್ಟು ಹಣ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಟೆನಿಸ್ ಪ್ರಶಸ್ತಿಗಳು, ಜಾಹೀರಾತುಗಳು, ಪ್ರಾಯೋಜಕತ್ವ ಇತ್ಯಾದಿ ಕ್ರೀಡಾಸಂಬಂಧಿ ಆದಾಯಗಳಿಂದ ಅವರು ಆಗಲೇ 39 ಮಿಲಿಯನ್ ಪೌಂಡ್ ಹಣ ಸಂಪಾದನೆ ಮಾಡಿದ್ದರು. ಈಗಿನ ಕಾಲಕ್ಕೆ ಅದನ್ನ ತಾಳೆಹಾಕಿದರೆ 100 ಮಿಲಿಯನ್ ಪೌಂಡ್ ಆಗುತ್ತದೆ. ಅಂದರೆ, ಸುಮಾರು 960 ಕೋಟಿ ರೂಪಾಯಿ ಹಣವನ್ನು ಅವರು ಕ್ರೀಡಾಪಟುವಾಗಿ ಗಳಿಸಿದ್ದರು.

Boris Becker: The Rise and Fall of German Tennis Legend

ನಿವೃತ್ತಿ ನಂತರ ಕೆಟ್ಟ ದೆಶೆ ಶುರು:

ಬಹಳ ಸಣ್ಣ ವಯಸ್ಸಿನಲ್ಲೇ ಅಪಾರ ಹಣ ಕಂಡ ಬೋರಿಸ್ ಬೆಕರ್ ಅವರು ನಿವೃತ್ತರಾದ ಬಳಿಕ ಹಣದ ಮೌಲ್ಯ ಸರಿಯಾಗಿ ಅರಿಯಲಿಲ್ಲವೆನಿಸುತ್ತದೆ. ಬಹಳ ಐಷಾರಾಮಿ ಜೀವನ ನಡೆಸಿದ ಅವರು ಅದಕ್ಕಾಗಿ ಬಹಳ ದುಂದುವೆಚ್ಚ ಮಾಡಿದರು. ಮಕ್ಕಳ ಓದಿಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದರು.

ಅನೈತಿಕ ಸಂಬಂಧಗಳು ಮತ್ತು ವಿವಾಹಗಳು:

ಬೋರಿಸ್ ಬೆಕರ್ ಅವರ ವೈಯಕ್ತಿಕ ಜೀವನದಲ್ಲಿ ಬೇಜವಾಬ್ದಾರಿತನ ಮತ್ತು ಉಡಾಫೆ ಮೈದಳೆದಿತ್ತು. ಬಹಳಷ್ಟು ವಿವಾಹಬಾಹಿರ ಸಂಬಂಧಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಇವೇ ವಿಚಾರಕ್ಕೆ ಅವರ ಮೊದಲ ಪತ್ನಿ ಬರ್ಬಾರ ಅವರು 2001ರಲ್ಲಿ ಡಿವೋರ್ಸ್ ಪಡೆದು ಭಾರೀ ಮೊತ್ತದ ಜೀವನಾಂಶ ಪಡೆದರು. ಅದು ಬೋರಿಸ್ ಬೆಕರ್ ಅವರ ಹಣಕಾಸು ಪರಿಸ್ಥಿತಿ ಬಿಗಡಾಯಿಸಲು ಪ್ರಮುಖ ಕಾರಣವಾಯಿತು. ಅದಾದ ಬಳಿಕವೂ ಬೆಕರ್ ಅವರ ಕಾಮಚಾಳಿ ಬಿಡಲಿಲ್ಲ. 2009ರಲ್ಲಿ ಡಚ್ ಮಾಡೆಲ್‌ವೊಬ್ಬರನ್ನು ವಿವಾಹವಾದರೆನ್ನಲಾಗಿದೆ. ಅದಾದ ಬಳಿಕ ಬೆಕರ್ ಕೆಲ ಅನೈತಿಕ ಸಂಬಂಧಗಳಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬರುತ್ತಲೇ ಇದೆ.

Boris Becker: The Rise and Fall of German Tennis Legend

ತೆರಿಗೆ ವಂಚನೆ:

ಬೋರಿಸ್ ಬೆಕರ್ ನಿವೃತ್ತರಾಗುವ ಮುನ್ನವೇ ತಮ್ಮ ತವರು ಜರ್ಮನಿ ದೇಶದಲ್ಲಿ ತೆರಿಗೆ ವಂಚನೆ ಮಾಡಿದ ಆರೋಪ ಎದುರಿಸಿದ್ದರು. ತಮ್ಮ ಟ್ಯಾಕ್ಸ್ ರಿಟರ್ಸ್ ಸಲ್ಲಿಸುವ ವೇಳೆ ಸುಳ್ಳು ದಾಖಲೆಗಳನ್ನು ಕೊಟ್ಟಿದ್ದು ಬೆಳಕಿಗೆ ಬಂದಿತ್ತು. 2002ರಲ್ಲಿ ಮ್ಯೂನಿಕ್ ಕೋರ್ಟ್ ಬೋರಿಸ್‌ಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತು. ಆದರೆ, ಬೇರೆ ಕಾರಣಕ್ಕೆ ಇದು ಜಾರಿಯಾಗಲಿಲ್ಲ.

ದಿವಾಳಿಯಾದ ಬೋರಿಸ್:

2013ರಲ್ಲಿ ಸ್ಪೇನ್ ದೇಶ ಮಲೋರ್ಕಾ ಎಂಬ ನಗರದಲ್ಲಿ ಆಸ್ತಿ ಖರೀದಿಸಿದ್ದ ಬೋರಿಸ್ ಬೆಕರ್ ಅವರು ಬ್ರಿಟನ್ ದೇಶದ ಆರ್ಬುದ್ನಾಟ್ ಲಾಥಮ್ ಎಂಬ ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆ ಸಾಲದ ಬಾಕಿ 35 ಲಕ್ಷ ಪೌಂಡ್ (ಸುಮಾರು 33 ಕೋಟಿ ರೂಪಾಯಿ) ಹಣವನ್ನು ಪಾವತಿ ಮಾಡಿರಲಿಲ್ಲ. ಈ ಕಾರಣಕ್ಕೆ 2017ರಲ್ಲಿ ಅವರನ್ನ ದಿವಾಳಿ ಎಂದು ಘೋಷಿಸಲಾಯಿತು.

ಹಾಗೆಯೇ, 2014ರಲ್ಲಿ ಬ್ರಿಟನ್ ಉದ್ಯಮಿ ಜಾನ್ ಕೌಡ್ವೆಲ್ ಅವರಿಂದ 12 ಲಕ್ಷ ಪೌಂಡ್ (11 ಕೋಟಿ ರೂ) ಸಾಲ ಪಡೆದು ಬಡ್ಡಿಯನ್ನೂ ಕಟ್ಟದೆ ಬಾಕಿ ಉಳಿಸಿಕೊಂಡಿದ್ದರು.

Boris Becker: The Rise and Fall of German Tennis Legend

ಟ್ರೋಫಿಗಳನ್ನು ಮರೆಮಾಚಿದ ಆರೋಪ:

ಸಾಕಷ್ಟು ಸಾಲದ ಹಣ ಬಾಕಿ ಉಳಿಸಿಕೊಂಡಿದ್ದ ಬೋರಿಸ್ ಬೆಕರ್ ಅವರ ಆಸ್ತಿಗಳನ್ನು ಹರಾಜಿಗೆ ಹಾಕುವ ಪ್ರಯತ್ನವಾಗಿತ್ತು. ಅದಕ್ಕಾಗಿ ಅವರು ಆಡುತ್ತಿದ್ದ ಕಾಲದಲ್ಲಿ ಗಳಿಸಿದ್ದ ವಿವಿಧ ಟ್ರೋಫಿ ಇತ್ಯಾದಿ ಸ್ಮರಣಿಕೆಗಳನ್ನು ಒಪ್ಪಿಸುವಂತೆ ಕೋರ್ಟ್ ಹೇಳಿತು. ಆದರೆ, ಅವೆಲ್ಲವೂ ಕಳೆದುಹೋಗಿವೆ ಎಂದು ಬೆಕರ್ ಹೇಳಿದ್ದರು. ಅವರು ಹೇಳಿದ್ದು ಸುಳ್ಳು ಎಂದು ಸಾಬೀತಾಗಿತ್ತು. ಹಾಗೆಯೇ, ತಮ್ಮ ಕೆಲ ರಿಯಲ್ ಎಸ್ಟೇಟ್ ಆಸ್ತಿಯನ್ನೂ ಬೆಕರ್ ಮರೆಮಾಚಿದ್ದರು.

ಹೆಸರು ಕೆಡಿಸಿಕೊಂಡ ನಂತರ ಇನ್ನೂ ಕಷ್ಟ:

ಬೋರಿಸ್ ಬೆಕರ್ ದಿವಾಳಿ ಎಂದು ಘೋಷಿತವಾದ ಬಳಿಕ ಅವರ ಘನತೆಗೆ ಸಾಕಷ್ಟು ಹೊಡೆತ ಬಿದ್ದಿತು. ಅವರ ಆದಾಯ ಗಣನೀಯವಾಗಿ ಇಳಿಮುಖವಾಯಿತು. ಸಾಲ ತೀರಿಸುವ ದಾರಿ ಮುಚ್ಚಿಹೋಗುತ್ತಲೇ ಇದ್ದವು. ಈ ವಿಷಯವನ್ನು ಬೋರಿಸ್ ಬೆಕರ್ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದರು. ಹಾಗೆಯೇ, ಬೆಕರ್ ಅವರು ತಮ್ಮ ಸಲಹೆಗಾರರ ಮೇಲೆ ತೀರಾ ಅವಲಂಬಿತವಾಗಿದ್ದು ಇಷ್ಟೆಲ್ಲಾ ಹಣಕಾಸು ಅವ್ಯವಹಾರದ ಆರೋಪ ಎದುರಿಸಲು ಕಾರಣ ಎಂದು ಅವರ ಪರ ವಕೀಲರು ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
German tennis legend Boris Becker who created sensation during teenage days, is sentenced jail on a case related to 2017 bankruptcy. Here is a look at his rise and fall as a star.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X