ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನಲ್ಲಿ ರಕ್ತ ಹೀರುವ ಜಿಗಣೆಗಳೇ ಜೀವ ರಕ್ಷಕರು!

|
Google Oneindia Kannada News

ಮಳೆಗಾಲ ಬಂತೆಂದರೆ ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬದುಕುವವರಿಗೆ ಜಿಗಣೆಗಳಿಂದ ಕಚ್ಚಿಸಿಕೊಂಡು ಬದುಕೋದು ಅನಿವಾರ್ಯವಾಗುತ್ತದೆ. ಮಳೆ ಬೀಳುತ್ತಿದ್ದಂತೆಯೇ ತೇವಾಂಶವಿರುವ ಸ್ಥಳಗಳಲ್ಲಿ ಧುತ್ತನೆ ಪ್ರತ್ಯಕ್ಷವಾಗುವ ಜಿಗಣೆಗಳು ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿಗಳ ಮೇಲೆ ದಾಳಿ ಮಾಡಿ ರಕ್ತ ಹೀರುತ್ತವೆ.

ಮಲೆನಾಡಿನಲ್ಲಿ ಅದರಲ್ಲೂ ಕೊಡಗಿನ ತೋಟಗಳಲ್ಲಿ ಕೆಲಸ ಮಾಡುವವರು ತಮ್ಮ ದೇಹದಲ್ಲಿರುವ ರಕ್ತದಲ್ಲಿ ಒಂದಷ್ಟು ಭಾಗವನ್ನು ಜಿಗಣೆಗಳಿಗೆ ನೀಡಲೇಬೇಕಾಗುತ್ತದೆ.

ದರ್ಪ, ಅಹಂಕಾರ, ಅಣುವಿಗೆ ಹೆದರಿ ಕುಳಿತಿದೆ: ಮಾನವನ ಅಹಂಗೆ ಭಗವಂತನ ಉತ್ತರ ಇದೇ ಏನೋ? ದರ್ಪ, ಅಹಂಕಾರ, ಅಣುವಿಗೆ ಹೆದರಿ ಕುಳಿತಿದೆ: ಮಾನವನ ಅಹಂಗೆ ಭಗವಂತನ ಉತ್ತರ ಇದೇ ಏನೋ?

ತೋಟದಲ್ಲಿ ಕೆಲಸ ಮಾಡುವಾಗ ಅವುಗಳು ಕೆಲವೊಮ್ಮೆ ದೇಹಕ್ಕೆ ಕಚ್ಚಿ ರಕ್ತ ಹೀರಿ ಬೀಳುವುದೇ ಗೊತ್ತಾಗುವುದಿಲ್ಲ. ಹಾಗೆಂದು ಜಿಗಣೆಗೆ ಹೆದರಿ ಕೂರುವಂತಿಲ್ಲ. ಮೈಗೆ ಕಚ್ಚಿ ರಕ್ತ ಹೀರುವ ಜಿಗಣೆಯನ್ನು ಕಿತ್ತೆಸೆದು ತಮ್ಮ ಪಾಡಿಗೆ ತಾವು ಕೆಲಸ ಮಾಡುವುದು ಮಲೆನಾಡಿಗರಿಗೆ ರೂಢಿಯಾಗಿರುತ್ತದೆ. ಇವುಗಳು ಮೈಗೆ ಹತ್ತದಂತೆ ಕೈ ಕಾಲುಗಳಿಗೆ ನಿಂಬೆಹಣ್ಣಿನ ರಸ, ಸೋಪಿನ ದ್ರಾವಣ, ತಂಬಾಕು ರಸವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಜಿಗಣೆ ಕಚ್ಚಿ ಆಸ್ಪತ್ರೆಗೆ ಸೇರಿದವರು ಇಲ್ಲವೇ ಇಲ್ಲ ಎನ್ನಬೇಕು.

 ಉಪದ್ರವಿಯಾದರೂ ಜೀವಕ್ಕೆ ಕಂಟಕವಲ್ಲ

ಉಪದ್ರವಿಯಾದರೂ ಜೀವಕ್ಕೆ ಕಂಟಕವಲ್ಲ

ಜಿಗಣೆ ಎಂದರೆ ಮಾರು ಉದ್ದ ಓಡುವ, ಅಸಹ್ಯ ಪಡುವ ಜನ ಬಹಳಷ್ಟಿದ್ದಾರೆ. ಆದರೆ ಈ ಜಿಗಣೆಗಳು ಕಚ್ಚುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಮಲೆನಾಡಿನಲ್ಲಿ ಇವುಗಳ ನಡುವೆ ಬದುಕುವವರ ಅನುಭವಕ್ಕೆ ಬಂದಿರುತ್ತದೆ. ಕಜ್ಜಿ, ವೃಣಗಳ ಜಾಗಕ್ಕೆ ಜಿಗಣೆಗಳು ಕಚ್ಚಿ ರಕ್ತ ಹೀರುವುದರಿಂದ ಬ್ಯಾಕ್ಟೀರಿಯಾ ಜಿಗಣೆಯನ್ನು ಸೇರಿ ಗಾಯಗಳು ವಾಸಿಯಾದ ನಿದರ್ಶನಗಳು ಬೇಕಾದಷ್ಟಿವೆ. ತೋಟ, ಕಾಡುಗಳಲ್ಲಿರುವ ಈ ಜಿಗಣೆಗಳು ಒಂದು ರೀತಿಯಲ್ಲಿ ಉಪದ್ರವಿಯಂತೆ ಕಂಡರೂ ಇವುಗಳಿಂದ ಯಾವುದೇ ತೊಂದರೆಯಿಲ್ಲ. ಇವು ಕಚ್ಚಿದರೂ ನೋವಾಗುವುದಿಲ್ಲ. ಜತೆಗೆ ದೇಹದಲ್ಲಿರುವ ಗಾಯವನ್ನೇ ಹುಡುಕಿ ಕಚ್ಚುವ ಇವು ಕೆಲವೊಮ್ಮೆ ಕಚ್ಚಿದ ಸ್ಥಳದಲ್ಲಿದ್ದ ಗಾಯಗಳು ಬಹುಬೇಗ ಗುಣಮುಖವಾಗುತ್ತವೆ.

 ಜನಪ್ರಿಯವಾಗುತ್ತಿರುವ ಲೀಚ್ ಥೆರಪಿ

ಜನಪ್ರಿಯವಾಗುತ್ತಿರುವ ಲೀಚ್ ಥೆರಪಿ

ಇದೆಲ್ಲದರ ನಡುವೆ ವೈದ್ಯರು ಜಿಗಣೆ ಚಿಕಿತ್ಸೆ ನೀಡಿ ಚರ್ಮರೋಗಗಳನ್ನು ವಾಸಿ ಮಾಡಿ ಯಶಸ್ಸು ಸಾಧಿಸಿದ್ದು, ಲೀಚ್ ಥೆರಪಿ ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಒಂದೆರಡು ದಶಕಗಳ ಹಿಂದೆಯೇ ಬೆಂಗಳೂರಿನ ಡಾ.ಶುಭಾ ಶಂಕರಿ ಎಂಬುವವರು ಜಿಗಣೆಯನ್ನು ಬಳಸಿ ಚಿಕಿತ್ಸೆ ನೀಡುವುದರ ಮೂಲಕ ಹಲವು ರೀತಿಯ ಚರ್ಮ ರೋಗಗಳನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನುಷ್ಯನ ದೇಹದ ಮೇಲೆ ಕಾಣಬರುವ ಸುಮಾರು ಹದಿನೆಂಟು ಚರ್ಮರೋಗಗಳಲ್ಲಿ ಯಕ್ಸಿಮಾ, ಕುರು, ದುಷ್ಟವೃಣ, ಗ್ರಂಥಿಗೆಡ್ಡೆ ಮುಂತಾದ ಎಲ್ಲ ರೀತಿಯ ಚರ್ಮ ವ್ಯಾಧಿಗಳಿಗೂ ಜಿಗಣೆಯ ಮೂಲಕ ಚಿಕಿತ್ಸೆ ನೀಡಿ ಕಾಯಿಲೆ ವಾಸಿ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಜಿಗಣೆಯಲ್ಲಿ 650 ವಿಧಗಳಿವೆಯಂತೆ

ಜಿಗಣೆಯಲ್ಲಿ 650 ವಿಧಗಳಿವೆಯಂತೆ

ಹಾಗೆ ನೋಡಿದರೆ ಜಿಗಣೆಯಲ್ಲಿ ಆಧುನಿಕ ವಿಜ್ಞಾನದ ಪ್ರಕಾರ ಸುಮಾರು 650 ವಿಧಗಳಿದ್ದು, ಆಯುರ್ವೇದದ ಪ್ರಕಾರ 12 ವಿಧ ಮಾತ್ರ ಲಭ್ಯ ಇವೆ ಎನ್ನಲಾಗಿದೆ. ಅವುಗಳಲ್ಲಿ ಆರು ವಿಧಗಳು ವಿಷರಹಿತವಾಗಿದ್ದು, ಇವುಗಳನ್ನು ಮಾತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಜಿಗಣೆಗಳು ಕೆರೆ, ಕೊಳ ಮುಂತಾದ ಸಿಹಿ ನೀರಿನ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತವೆ. ದನ ಜಿಗಣೆ(ಹಿರುಡಿನಿಯ ಗ್ಯಾನ್ಯು ಲೋಸೆ) ಪ್ರಭೇದದ ಜಿಗಣೆಯು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡು ಬರುತ್ತದೆ.

ಜಿಗಣೆಗೆ ದೇಹದ ಎರಡು ತುದಿಗಳಲ್ಲಿಯೂ ಬಟ್ಟಲಿನಂತಹ ಚೂಷಕ(ಸಕ್ಕರ್)ಗಳಿದ್ದು, ಕೊರೆಯಲು ಸ್ಕ್ರೂನಂತಹ ಮೂರು ದವಡೆ ಹಲ್ಲುಗಳಿವೆ. ಈ ಸ್ಕ್ರೂನಂತಹ ದವಡೆ ಹಲ್ಲುಗಳಿಂದ ಮನುಷ್ಯನ ಅಥವಾ ಪ್ರಾಣಿಯ ದೇಹವನ್ನು ಅರಿವಿಗೆ ಬಾರದಂತೆ ಕೊರೆದು ರಕ್ತ ಹೀರುತ್ತವೆ. ಇವುಗಳ ಜೊಲ್ಲಿನಲ್ಲಿ ಕರಣೆ ರೋಧಕ ವಸ್ತು 'ಹಿರುಡಿನ್' ಇದ್ದು, ರಕ್ತ ಹೀರುವಾಗ ರಕ್ತ ಹೆಪ್ಪುಗಟ್ಟದಂತೆ ಇದು ಸಹಾಯ ಮಾಡುತ್ತದೆ. ಒಮ್ಮೆ ಪ್ರಾಣಿಯ ದೇಹವನ್ನು ಕಚ್ಚಿದ ಜಿಗಣೆಯು ತನ್ನ ತೂಕದ ಮೂರರಿಂದ ಆರರಷ್ಟು ಹೆಚ್ಚಿನ ರಕ್ತವನ್ನು ಹೀರಿಯೇ ಪ್ರಾಣಿಯ ದೇಹವನ್ನು ಬಿಡುತ್ತದೆ.
ಮಣ್ಣಿನ ಮಡಕೆಯಲ್ಲಿ ಸಂಗ್ರಹಣೆ

ಮಣ್ಣಿನ ಮಡಕೆಯಲ್ಲಿ ಸಂಗ್ರಹಣೆ

ಇವುಗಳ ಜೀರ್ಣಾಂಗಗಳಲ್ಲಿ ರಕ್ತವನ್ನು ತುಂಬಿಕೊಳ್ಳಲು ವಿಶೇಷವಾದ ಚೀಲವಿದ್ದು, ಒಮ್ಮೆ ಹೊಟ್ಟೆ ತುಂಬಾ ರಕ್ತ ಹೀರಿದ ಜಿಗಣೆ ಒಂದು ವರ್ಷ ಕಾಲ ಉಪವಾಸವಾಗಿರಬಲ್ಲದು ಎಂದು ಹೇಳಲಾಗಿದೆ. ಸಿಹಿ ನೀರಿನಲ್ಲಿರುವ ಅಂದರೆ ಕೊಳಗಳಲ್ಲಿರುವ ಜಿಗಣೆಗಳನ್ನು ಕಾಲಿಗೆ ತುಪ್ಪ ಹಚ್ಚಿ ಕೊಳಕ್ಕೆ ಇಳಿದು ಜಿಗಣೆಗಳು ಕಾಲಿಗೆ ಅಂಟಿಕೊಂಡಾಗ ಅದನ್ನು ಹಿಡಿದು ಮಣ್ಣಿನ ಮಡಕೆಯಲ್ಲಿ ಹುಲ್ಲು ಹಾಕಿ ಬಟ್ಟೆಕಟ್ಟಿ ಸಂಗ್ರಹಿಸಿಟ್ಟುಕೊಂಡು ಬಳಿಕ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಒಟ್ಟಾರೆ ಜಿಗಣೆಯಲ್ಲಿ ಆರೋಗ್ಯಕಾರಿ ಗುಣಗಳಿರುವುದರಿಂದಲೇ ಇಂದಿಗೂ ಜಿಗಣೆಗಳ ನಡುವೆ ಬದುಕುವುದು ಮಲೆನಾಡಿಗರಿಗೆ ಅಭ್ಯಾಸವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್

English summary
In Malenadu's Workers in farms need to give some of the blood in their bodies to the Leeches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X