ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ವಯಸ್ಸಲ್ಲೇ ಬಿಪಿ ಯಾಕೆ ಬರುತ್ತೆ? ಆಹಾರ ಬಗ್ಗೆ ಹುಷಾರ್

|
Google Oneindia Kannada News

ಬ್ಲಡ್ ಪ್ರೆಷರ್ (BP- Blood Pressure) ಅಥವಾ ರಕ್ತದೊತ್ತಡ ತೀರಾ ಸಾಮಾನ್ಯವಾಗಿರುವ ಕಾಯಿಲೆ. ಸಾಮಾನ್ಯ ಮಾತ್ರವಲ್ಲ ಬಹಳ ಮಾರಕ ಕೂಡ. ನಮ್ಮ ದೇಹದ ಹಲವು ಅಂಗಗಳಿಗೆ ಹಾನಿ ಮಾಡುವ ಕ್ರೋನಿಕ್ ಕಾಯಿಲೆ.

ಹಿಂದೆಲ್ಲಾ ಬಿಪಿ, ಶುಗರ್ ಬಂದರೆ, ವಯಸ್ಸಾಯ್ತು ಬಂತು ಎಂದು ಹೇಳಲಾಗುತ್ತಿತ್ತು. ಈಗ ಸಣ್ಣ ವಯಸ್ಸಿಗೇ ರಕ್ತದೊತ್ತಡ ತೊಂದರೆ ಶುರುವಾಗುತ್ತಿದೆ. ಅನೇಕ ಮಕ್ಕಳಿಗೆ ಬಿಪಿ ಸಮಸ್ಯೆ ಬಾಧಿಸುತ್ತಿದೆ. ಆಟವಾಡುತ್ತಾ ಬೆಳೆಯುವ ಮಕ್ಕಳಲ್ಲಿ ಬ್ಲಡ್ ಪ್ರೆಷರಾ? ಅಚ್ಚರಿ ಎನಿಸಬಹುದು. ಆದರೆ, ವಾಸ್ತವ ಅರ್ಥ ಮಾಡಿಕೊಳ್ಳಬೇಕು.

ನಾಲ್ವರಲ್ಲಿ ಒಬ್ಬರಿಗೆ ಹೈ ಬಿಪಿ, ಏಮ್ಸ್‌ನಿಂದ ಗಂಭೀರ ಮಾಹಿತಿನಾಲ್ವರಲ್ಲಿ ಒಬ್ಬರಿಗೆ ಹೈ ಬಿಪಿ, ಏಮ್ಸ್‌ನಿಂದ ಗಂಭೀರ ಮಾಹಿತಿ

ಬೆಲ್ಜಿಯಂನಲ್ಲಿರುವ ಯೂರೋಪಿಯನ್ ಸೊಸೈಟ್ ಆಫ್ ಕಾರ್ಡಿಯಾಲಜಿ ಹೊರತರುವ ಜರ್ನಲ್‌ವೊಂದರಲ್ಲಿ ಇತ್ತೀಚೆಗೆ ಬಹಳ ಗಮನ ಸೆಳೆಯುವ ಮತ್ತು ಕುತೂಹಲ ಮೂಡಿಸುವ ಅಧ್ಯಯನ ವರದಿ ಪ್ರಕಟವಾಗಿತ್ತು. ಅದರಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲಿ ಬಿಪಿ ಯಾಕೆ ಬರುತ್ತದೆ? ಎಂಬ ಬಗ್ಗೆ ಅಧ್ಯಯನ ಅಂಶಗಳ ಸಮೇತ ವರದಿಯಾಗಿತ್ತು.

ನಿಜಕ್ಕೂ ಬೆಚ್ಚಿಬೀಳಿಸುವ ಅಂಶಗಳು ಆ ವರದಿಯಲ್ಲಿವೆ. ನಮ್ಮ ಜೀವನ ಶೈಲಿಯ ಕಠೋರ ಪರಿಣಾಮಗಳ ಕಟು ವಾಸ್ತವತೆಯನ್ನು ಈ ವರದಿ ತೆರೆದಿಟ್ಟಿದೆ. ಅಷ್ಟಕ್ಕೂ ಏನಿದೆ ಆ ವರದಿಯಲ್ಲಿ....?

ಬಿಪಿಗೆ ಕಾರಣ ಇದು

ಬಿಪಿಗೆ ಕಾರಣ ಇದು

ರಕ್ತದೊತ್ತಡ ಬಂದಿರುವ 6ರಿಂದ 16 ವರ್ಷ ವಯಸ್ಸಿನ ಮಕ್ಕಳ ಮೇಲೆ ಅಧ್ಯಯನ ಮಾಡಲಾಗಿದೆ. ಅವರ ಪೈಕಿ ಶೇ 90ರಷ್ಟು ಮಕ್ಕಳಿಗೆ ಬಿಪಿ ಬರಲು ಅವರ ಜೀವನಶೈಲಿ ಮತ್ತು ಆಹಾರ ಕ್ರಮವೇ ಕಾರಣ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಚಟುವಟಿಕೆ ರಹಿತ ಜೀವನಶೈಲಿ ಒಂದು ಪ್ರಮುಖ ಕಾರಣ. ಹಾಗೆಯೇ, ಸಕ್ಕರೆ ಮತ್ತು ಉಪ್ಪು ಹೆಚ್ಚು ಇರುವ ಆಹಾರ ಸೇವಿಸುವುದು ಇನ್ನೊಂದು ಕಾರಣ. ಹಾಗು ಹೆಚ್ಚು ದೇಹ ತೂಕ ಇರುವ ಮಕ್ಕಳಿಗೆ ಬಿಪಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ಯೂರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ಇವು ನಿಜಕ್ಕೂ ಬೆಚ್ಚಿಬೀಳಿಸುವ ಅಂಶಗಳೇ. ಶೇ. 15ರಷ್ಟು ದಢೂತಿ (Obese) ಮಕ್ಕಳಲ್ಲಿ ಬಿಪಿ ಇದೆಯಂತೆ. ನಿಗದಿತ ಮಟ್ಟಕ್ಕಿಂತ ಹೆಚ್ಚು ತೂಕ (Overweight) ಇರುವ ಶೇ. 5 ಮಕ್ಕಳಲ್ಲಿ ರಕ್ತದೊಡ್ಡ ಸಮಸ್ಯೆ ತಲೆದೋರಿದೆ. ಶೇ. 2ರಷ್ಟು ಸಹಜ ಮಕ್ಕಳಲ್ಲೂ ಬಿಪಿ ಇದೆ. ಸಹಜ ಮಕ್ಕಳಲ್ಲಿ ಬಿಪಿ ಬರಲು ಕಾರಣ ಅನುವಂಶಿಕ ಇರಬಹುದು.

World Breastfeeding Week: ತಾಯಿ-ಮಗುವಿಗೆ ಎದೆಹಾಲು ಎಷ್ಟು ಮುಖ್ಯ ತಿಳಿಯಿರಿWorld Breastfeeding Week: ತಾಯಿ-ಮಗುವಿಗೆ ಎದೆಹಾಲು ಎಷ್ಟು ಮುಖ್ಯ ತಿಳಿಯಿರಿ

ಮಕ್ಕಳು ಏನು ಆಹಾರ ಸೇವಿಸಬೇಕು?

ಮಕ್ಕಳು ಏನು ಆಹಾರ ಸೇವಿಸಬೇಕು?

* ಮಕ್ಕಳು ತಾಜಾ ತರಕಾರಿ, ಹಣ್ಣು, ಫೈಬರ್‌ಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.
* ಉಪ್ಪು ಹೆಚ್ಚು ಹಾಕದ ಆಹಾರ.
* ಕೋಕ್ ಇತ್ಯಾದಿ ವಿಪರೀತ ಸಕ್ಕರೆ ಹಾಕಿದ ಪಾನೀಯಗಳಿಂದ ದೂರ ಇರಬೇಕು.
* ಸ್ಯಾಚುರೇಟೆಡ್ ಫ್ಯಾಟ್ ಅಥವಾ ಕೊಬ್ಬು ಇರುವ ಆಹಾರದ ಸೇವನೆ ಕಡಿಮೆ ಮಾಡಬೇಕು.

ಕೊಬ್ಬರಿ ಎಣ್ಣೆ, ಬೆಣ್ಣೆ, ತುಪ್ಪ, ಬೇಕರಿ ಆಹಾರ, ಪಾಮ್ ಆಯಿಲ್ ಇತ್ಯಾದಿ ಆಹಾರ ವಸ್ತುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅಧಿಕವಾಗಿರುತ್ತದೆ. ಹಾಗೆಯೇ, ಮಟನ್‌ನಲ್ಲಿರುವ ನೆಣದಲ್ಲೂ ಇದು ಹೆಚ್ಚು ಇರುತ್ತದೆ. ಕೋಳಿಯ ಚರ್ಮದಲ್ಲಿ ಇರುತ್ತದೆ. ಚಿಕನ್ ತರುವಾಗ ಸ್ಕಿನ್ ಔಟ್ ಮಾಡಿಸುವುದು ಒಳ್ಳೆಯದು.

ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ

ಮಕ್ಕಳು ಹೆಚ್ಚು ಹೊತ್ತು ಟಿವಿ ಮತ್ತು ಮೊಬೈಲ್‌ನಲ್ಲಿ ಮುಳುಗಿಹೋಗದಂತೆ ನಿಗಾ ವಹಿಸುವುದು ಉತ್ತಮ. ಅವರಿಗೆ ಹೊರಗಿನ ಚಟುವಟಿಕೆಗಳಿಗೆ ಅವಕಾಶ ಕೊಡಿ. ಎರಡು ಗಂಟೆಗೂ ಹೆಚ್ಚು ಕಾಲ ಅವರು ಮೊಬೈಲ್ ಅಥವಾ ಟಿವಿ ಮುಂದೆ ಕೂರುವ ಪ್ರವೃತ್ತಿ ಬೆಳೆಸಿಕೊಂಡರೆ ಕಷ್ಟ.

ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಉತ್ತೇಜಿಸಿ. ಮಕ್ಕಳು ಜಾಗಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ. ಸೈಕಲ್ ಮತ್ತು ಈಜು ಉತ್ತಮ.

ಮಕ್ಕಳಿಗೆ ಆಟ ಮತ್ತು ಪಾಠ ಬಹಳ ಮುಖ್ಯ. ಪಾಠ ಬಿಟ್ಟು ಉಳಿದ ಹೆಚ್ಚಿನ ಸಮಯವನ್ನು ಮಕ್ಕಳು ಆಟ ಹಾಗು ಇತರ ದೈಹಿಕ ಚಟುವಟಿಕೆಯಲ್ಲಿ ಕಳೆಯಲಿ.

ಪೋಷಕರು ನಿಗಾ ಇಟ್ಟಿರಲಿ

ಪೋಷಕರು ನಿಗಾ ಇಟ್ಟಿರಲಿ

ರಕ್ತದೊತ್ತಡ ಬಂದಿರುವ ಮಕ್ಕಳ ಪ್ರತಿಯೊಂದು ಚಟುವಟಿಕೆ ಮೇಲೂ ಪೋಷಕರು ನಿಗಾ ವಹಿಸಬೇಕು. ದಿನದಲ್ಲಿ ಅವರು ಹೆಚ್ಚು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು. ಮಗುವಿನ ತೂಕ ಹೆಚ್ಚುತ್ತಿದೆಯಾ ಎಂಬುದನ್ನು ಪರಿಶೀಲಿಸುತ್ತಿರಬೇಕು.

ಜಂಕ್ ಫುಡ್‌ನಿಂದ ಆಗುವ ಅಪಾಯವನ್ನು ಮಗುವಿಗೆ ತಿಳಿಸಿದರೆ ಅದು ಸ್ವಯಂಪ್ರೇರಿತವಾಗಿ ಅಂಥ ಆಹಾರದ ಗೋಜಿಗೆ ಹೋಗುವುದಿಲ್ಲ. ಪೌಷ್ಟಿಕಾಂಶಯುಕ್ತ ಆಹಾರವನ್ನು ಮನೆಯಲ್ಲಿ ಹೆಚ್ಚಾಗಿ ಇಟ್ಟುಕೊಂಡಿರಿ. ಮಗು ಹಸಿದಾಗ ಅದನ್ನು ಕೊಡಲು ಸಾಧ್ಯವಾಗುತ್ತದೆ.

(ಒನ್ಇಂಡಿಯಾ ಸುದ್ದಿ)

Recommended Video

Hubli ಯಲ್ಲಿ ಧ್ವಜ ತಯಾರಿಕ ಕಾರ್ಖಾನೆಗೆ ಭೇಟಿ ಕೊಟ್ಟ Rahul Gandhi | *Politics | OneIndia Kannada

English summary
Nine out Ten Children having got blood pressure due to food habits and lifestyle problems says European researchers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X