ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯ

|
Google Oneindia Kannada News

ಪಕ್ಕದಲ್ಲೇ ಗೊತ್ತಾಗದಂತೆ ಇದ್ದು, ರಾಕ್ಷಸನ ರೀತಿ ಎಲ್ಲವನ್ನೂ ನುಂಗಿ ಹಾಕುವ ಕಪ್ಪು ಕುಳಿ (Black Hole) ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಂದಹಾಗೆ ಈ ಬ್ರಹ್ಮಾಂಡವೇ ಒಂದು ವಿಸ್ಮಯ, ಬೆದಕಿದಷ್ಟು ಆಶ್ಚರ್ಯಗಳು ಒಂದೊಂದಾಗಿ ಹೊರಗೆ ಬರುತ್ತವೆ. ಈಗ ಇಂತಹದ್ದೇ ವಿಸ್ಮಯಕಾರಿ ವಿಚಾರವನ್ನ ಇಟಲಿಯ ಬಾಹ್ಯಾಕಾಶ ವಿಜ್ಞಾನಿಗಳು ಹೊರಹಾಕಿದ್ದಾರೆ. ಅರೆ ಏನದು ವಿಸ್ಮಯ..? ಅಂತಾ ನೀವೂ ಕುತೂಹಲದಿಂದ ಕೇಳಬಹುದು.

ಅಷ್ಟಕ್ಕೂ ಕಪ್ಪು ಕುಳಿಗಳ ಬಗ್ಗೆ ಇದುವರೆಗೂ ಸಿಗದ ಮಾಹಿತಿ ಸಿಕ್ಕಿಬಿಟ್ಟಿದೆ. ನಮ್ಮಂತೆ ಬ್ಲ್ಯಾಕ್ ಹೋಲ್ ಅಥವಾ ಕಪ್ಪು ಕುಳಿಗೂ ಜಡೆ ಇರುತ್ತದೆ ಎಂಬ ವಿಚಾರವನ್ನ ವಿಜ್ಞಾನಿಗಳು ಬಯಲು ಮಾಡಿದ್ದಾರೆ. ಅಲ್ಬರ್ಟ್ ಐನ್‍ಸ್ಟೈನ್ ಪ್ರತಿಪಾದಿಸಿದ್ದ ಸಿದ್ಧಾಂತದ ಪ್ರಕಾರ, ಕಪ್ಪು ಕುಳಿ (Black Hole) ಅತಿವೇಗವಾಗಿ ಸುತ್ತಿದರೆ ಅವುಗಳ ತಲೆ ಮೇಲೆ ಜಡೆಯಂತಹ ಆಕಾರ ಮೂಡುತ್ತದೆ. ಇದು ಕೂದಲಿನಂತೆ ಆಕಾರವನ್ನು ಹೊಂದಿರುತ್ತದೆ ಎಂದು ಇಟಲಿಯ 'ಇಂಟರ್‌ನ್ಯಾಷನಲ್ ಸ್ಕೂಲ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್' ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳ ಈ ಸಂಶೋಧನೆಯಿಂದ ಡಾರ್ಕ್ ಮ್ಯಾಟರ್ ಅಧ್ಯಯನ ಇನ್ನಷ್ಟು ಸುಲಭವಾಗಲಿದೆ ಎಂಬ ಅಭಿಪ್ರಾಯಗಳು ಹೊರಬಿದ್ದಿವೆ.

‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

ಈ ಬ್ರಹ್ಮಾಂಡದಲ್ಲಿ ಮನುಕುಲ ಅತಿಹೆಚ್ಚು ಭಯಪಟ್ಟ ವಿಚಾರವೆಂದರೆ ‘ಕಪ್ಪು ಕುಳಿ'. ‘ಬ್ಲ್ಯಾಕ್ ಹೋಲ್' ಬಗ್ಗೆ ಒಂದು ಕಾಲದಲ್ಲಿ ಇಡೀ ಬಾಹ್ಯಾಕಾಶ ವಿಜ್ಞಾನ ಲೋಕವೇ ತಲೆಕೆಡಿಸಿಕೊಂಡಿತ್ತು. ಮಾನವನ ವಿನಾಶ ಹೀಗೆ ಆಗುತ್ತದೆ ಎಂಬ ಸಿದ್ಧಾಂತಗಳೂ ಮಂಡನೆಯಾಗಿದ್ದವು. ಆದರೆ ನಮ್ಮ ಅದೃಷ್ಟ, ಭೂಮಿಗೆ ಸಮೀಪದಲ್ಲಿ ಅಷ್ಟು ಭಯಾನಕ ‘ಬ್ಲ್ಯಾಕ್ ಹೋಲ್' ಎಲ್ಲೂ ಇಲ್ಲ. ಇದ್ದರೂ ಅದು ತುಂಬಾ ದೂರದಲ್ಲಿ ತನ್ನ ಪಾಡಿಗೆ ತಾನು ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿ ಹಾಕುತ್ತಿದೆ. ಅಕಸ್ಮಾತ್ ರಾಕ್ಷಸ ಗಾತ್ರದ ‘ಬ್ಲ್ಯಾಕ್ ಹೋಲ್' ಭೂಮಿಗೆ ಸಮೀಪವೇ ಬಂದರೆ ಕತೆ ಏನು ಎಂಬ ಪ್ರಶ್ನೆಗಳು ಮೂಡಿದಾಗ, ಅದಕ್ಕಿರುವ ಒಂದೇ ಪದದ ಉತ್ತರ ಸರ್ವನಾಶ..!

ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?

‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

ಕಳೆದ ವರ್ಷ ವಿಸ್ಮಯವೊಂದು ನಡೆದಿತ್ತು. ಅಂತಾರಾಷ್ಟ್ರೀಯ ಟೆಲಿಸ್ಕೋಪ್ ಮಹತ್ತರದ ಸಾಧನೆ ಮಾಡಿತ್ತು. ಕಪ್ಪು ಕುಳಿ ಫೋಟೋ ಕ್ಲಿಕ್ಕಿಸುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದರು. ಮೊದಲ ಬಾರಿಗೆ ಕಪ್ಪು ಕುಳಿ ಮತ್ತು ಅದರ ನೆರಳಿನ ಚಿತ್ರ ಸೆರೆಹಿಡಿಯಲಾಗಿತ್ತು. ಇವೆಂಟ್ ಹಾರಿಜಾನ್ ಟೆಲಿಸ್ಕೋಪ್ ಇದನ್ನು ಸಾಧಿಸಿತ್ತು. ಅರೆ ಫೋಟೋ ತೆಗೆಯುವುದರಲ್ಲಿ ಏನಿದೆ ಎಂದು ನೀವು ಪ್ರಶ್ನಿಸಬಹುದು. ಆದರೆ ಕಪ್ಪು ಕುಳಿ ಫೋಟೋ ಕ್ಲಿಕ್ ಮಾಡುವುದು ಸುಲಭವಲ್ಲ. ಕಪ್ಪು ಕುಳಿ ಅತ್ಯಂತ ಸಾಂದ್ರವಾದ ವಸ್ತು. ಎಷ್ಟು ಪ್ರಬಲ ಎಂದರೆ ಬೆಳಕು ಕೂಡ ಎಸ್ಕೇಪ್ ಆಗಲಾರದು. ಅದನ್ನು ಕಪ್ಪು ಕುಳಿಯೇ ನುಂಗಿಬಿಡುತ್ತದೆ ಹಾಗೂ ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿಯನ್ನ ಕಪ್ಪು ಕುಳಿ ಹೊಂದಿರುತ್ತದೆ.

ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ

‘ಬ್ಲ್ಯಾಕ್ ಹೋಲ್’ ಮೂಲವೇ ನಿಗೂಢ

‘ಬ್ಲ್ಯಾಕ್ ಹೋಲ್’ ಮೂಲವೇ ನಿಗೂಢ

ಕಪ್ಪು ಕುಳಿ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಸುತ್ತ ವೃತ್ತಾಕಾರದ ಹೊರವಲಯ ಬಿಂಬವು ಪ್ರಖರವಾಗಿ ಪ್ರಜ್ವಲಿಸುತ್ತದೆ. ಪ್ರಖರ ಹಿನ್ನೆಲೆಗೆ ವಿರುದ್ಧವಾಗಿ ಬಿಂಬದಂತೆ ಕಪ್ಪು ಕುಳಿ ನೆರಳು ಚೆಲ್ಲುವಂತೆ ಗೋಚರಿಸುತ್ತದೆ. ಸಣ್ಣ ಪ್ರಮಾಣದ ಕಪ್ಪು ರಂಧ್ರಗಳಾದರೆ ಪತನವಾಗುವ ನಕ್ಷತ್ರದಿಂದ ಬರುತ್ತದೆ. ಆದರೆ ದೊಡ್ಡ ಪ್ರಮಾಣದ ಕಪ್ಪು ಕುಳಿಯ ಮೂಲ ನಿಗೂಢವಾಗಿದೆ. ಬೆಳಕು ಹೀರಿಕೊಳ್ಳುವ ಈ ದೈತ್ಯದ ಬಗ್ಗೆ ಶತಮಾನದ ಹಿಂದೆಯೇ ಐನ್‍ಸ್ಟೈನ್ ತಿಳಿಸಿದ್ದರು. ದಶಕಗಳ ಕಾಲ ಇದನ್ನು ಅಧ್ಯಯನ ನಡೆಸಿ ಖಾತರಿ ಪಡಿಸಲಾಗಿದೆ. ಈ ಕಪ್ಪು ಕುಳಿ ನೋಡಲು ಉರಿಯುವ ಕಿತ್ತಳೆ, ಹಳದಿ ಹಾಗೂ ಕಪ್ಪು ಉಂಗುರದಂತೆ ಕಂಡುಬರುತ್ತದೆ.

ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!

‘ನಾಸಾ’ ಕೂಡ ಕಷ್ಟಪಟ್ಟಿತ್ತು

‘ನಾಸಾ’ ಕೂಡ ಕಷ್ಟಪಟ್ಟಿತ್ತು

ಬೆಳಕಿನ ವಿಭಿನ್ನ ತರಂಗಾಂತರ ಬಳಸಿ ಕಪ್ಪು ರಂಧ್ರವನ್ನು ಅಧ್ಯಯನ ಮಾಡಲು ನಾಸಾದ ಅನೇಕ ಬಾಹ್ಯಾಕಾಶ ನೌಕೆಗಳು ಶ್ರಮವಹಿಸಿವೆ. ಅಲ್ಲದೆ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸಿದ್ಧಾಂತ ಬಳಸಿಕೊಂಡು ಅನೇಕ ಪ್ರಯತ್ನಗಳನ್ನು ನಡೆಸಿದೆ. ಆದರೆ ಇದರಲ್ಲಿ ನಾಸಾ ಯಶಸ್ಸಿಗಿಂತ ಸಾಕಷ್ಟು ಸೋಲುಗಳನ್ನೇ ಕಂಡಿದೆ. ಈಗಾಗಲೇ ಸೌರ ಮಂಡಲದ ಗೆರೆಯನ್ನೂ ದಾಟಿರುವ ನಾಸಾ ನೌಕೆಗಳಿಗೆ ಕಪ್ಪು ಕುಳಿ ಬಗೆಗಿನ ಅಧ್ಯಯನವು ದೊಡ್ಡ ಸವಾಲಾಗಿದೆ. ಇಂತಹ ಹೊತ್ತಲ್ಲೇ ಇಟಲಿ ವಿಜ್ಞಾನಿಗಳು ಮತ್ತೊಂದು ಹಿಂಟ್ ಕೊಟ್ಟಿದ್ದು, ಅಮೆರಿಕದ ನಾಸಾ ಸಂಸ್ಥೆ ಇದರ ಜಾಡು ಹಿಡಿದು ಹೊರಟರೂ ಹೊರಡಬಹುದು.

ನಿಗೂಢ 'ಕಪ್ಪು ರಂಧ್ರ' ಪತ್ತೆ ಹಚ್ಚಿದ ವಿದ್ಯಾರ್ಥಿನಿಗೂಢ 'ಕಪ್ಪು ರಂಧ್ರ' ಪತ್ತೆ ಹಚ್ಚಿದ ವಿದ್ಯಾರ್ಥಿ

English summary
International Astrophysicist group has found black holes can grow hair if spin fast enough, providing fresh insights at the fringe of our understanding of universe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X