ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಕೋಮು ಗಲಭೆ ಸರಣಿ: ಬಿಜೆಪಿಗೆ ಲಾಭ, ಕಾಂಗ್ರೆಸ್‌ಗೆ ನಷ್ಟ

|
Google Oneindia Kannada News

ಪ್ರವಾದಿ ವಿರುದ್ಧ ಬಿಜೆಪಿಯ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯನ್ನು ಹಂಚಿಕೊಂಡ ಆರೋಪದಲ್ಲಿ ಜೂನ್ 28 ರಂದು ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಉದಯ‌ಪುರ ಟೈಲರ್ ಕನ್ಹಯ್ಯಾ ಲಾಲ್‌ರನ್ನು ಹತ್ಯೆ ಮಾಡಿದ ನಂತರ ರಾಜಸ್ಥಾನದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜ್ಯ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಘಟನೆಯ ನಂತರ ಪರಿಸ್ಥಿತಿ ನಿಯಂತ್ರಿಸಲು ಗೆಹ್ಲೋಟ್ ಸರ್ಕಾರವು ರಾಜಸ್ಥಾನವನ್ನು ಹೈ ಅಲರ್ಟ್‌ನಲ್ಲಿ ಇರಿಸಿತು, ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಒಂದು ತಿಂಗಳ ಕಾಲ ಕರ್ಫ್ಯೂ ವಿಧಿಸಿತು ಮತ್ತು ಜೈಪುರ ಸೇರಿದಂತೆ ರಾಜ್ಯದಾದ್ಯಂತ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿತು.

ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಹೇಳೋಕೆ ಆಗುತ್ತಾ? ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಹೇಳೋಕೆ ಆಗುತ್ತಾ?

ಸಿಎಂ ಗೆಹ್ಲೋಟ್, ಗುರುವಾರ ದಿನಪತ್ರಿಕೆಗಳಲ್ಲಿ ಮತ್ತು ಡಿಜಿಟಲ್‌ನಲ್ಲಿ ಮೊದಲ ಪುಟದ ಜಾಹೀರಾತುಗಳ ಮೂಲಕ ರಾಜ್ಯದ ಜನರಿಗೆ ಮನವಿ ಮಾಡಿದರು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಕರೆ ನೀಡಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಸಮಯವಿದ್ದರೂ ಸಹ, ಗೆಹ್ಲೋಟ್ ಅದರ ರಾಜಕೀಯ ಪರಿಣಾಮಗಳೊಂದಿಗೆ ಹಿಡಿತ ಸಾಧಿಸಲು ಹೆಣಗಾಡುತ್ತಿರುವಂತೆ ತೋರುತ್ತಿದೆ.

ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ

ರಾಜಸ್ಥಾನದಲ್ಲಿ ಸರಣಿ ಕೋಮು ಗಲಭೆ

ರಾಜಸ್ಥಾನದಲ್ಲಿ ಸರಣಿ ಕೋಮು ಗಲಭೆ

ಕಳೆದ ಹಲವು ತಿಂಗಳುಗಳಿಂದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೋಮುಗಲಭೆಯ ಘಟನೆಗಳ ಸರಣಿಯೊಂದಿಗೆ, ಧ್ರುವೀಕರಣದ ಉಲ್ಬಣಕ್ಕೆ ಕಾರಣವಾಗಿದೆ.

ಏಪ್ರಿಲ್ 2 ರಂದು, ಕರೌಲಿಯಲ್ಲಿ ಹಿಂದೂ ಹೊಸ ವರ್ಷದ ದಿನದಂದು ಮುಸ್ಲಿಂ ಪ್ರಾಬಲ್ಯದ ಪ್ರದೇಶದ ಮೂಲಕ ಹಾದುಹೋಗುವ ಮೋಟಾರ್‌ಸೈಕಲ್ ರ್‍ಯಾಲಿಯಲ್ಲಿ ಕಲ್ಲು ತೂರಾಟ ನಡೆದ ನಂತರ ಕೋಮು ಘರ್ಷಣೆಗಳು ಭುಗಿಲೆದ್ದವು.

ಮೇ 2 ರಂದು, ಈದ್‌ನ ಒಂದು ದಿನ ಮುಂಚಿತವಾಗಿ, ಕರ್ಫ್ಯೂ ವಿಧಿಸಲಾಯಿತು ಮತ್ತು ಗೆಹ್ಲೋಟ್ ಸ್ವಕ್ಷೇತ್ರ ಜೋಧ್‌ಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆಯ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದ ನಂತರ ಕೋಮು ಘರ್ಷಣೆಗಳು ಭುಗಿಲೆದ್ದ ನಂತರ ಇಂಟರ್ನೆಟ್ ಸೇವೆ ನಿಷೇಧಿಸಲಾಯಿತು.

ಮೂರು ದಿನಗಳ ನಂತರ, ಭಿಲ್ವಾರಾದಲ್ಲಿ ಕೋಮು ಉದ್ವಿಗ್ನತೆ ಉಂಟಾಯಿತು, ಇದು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು. ಮೇ 10 ರಂದು ಮತ್ತೊಮ್ಮೆ, ಭಿಲ್ವಾರಾ ಮತ್ತೆ ಕೋಮು ಜ್ವಾಲೆಯಲ್ಲಿ ಬೆಂದಿತು. ಅದರ ನಂತರದ ದಿನ ಹನುಮಾನ್‌ಗಢದಲ್ಲಿ ಅಂತಹ ಮತ್ತೊಂದು ಘಟನೆ ನಡೆಯಿತು.

ಕೋಮು ಗಲಭೆ ತಡೆಯಲು ಹರಸಾಹಸ

ಕೋಮು ಗಲಭೆ ತಡೆಯಲು ಹರಸಾಹಸ

ಕೋಮು ಘಟನೆಗಳನ್ನು ನಿಭಾಯಿಸಲು, ರಾಜಸ್ಥಾನ ಪೊಲೀಸರು ಮೇ ತಿಂಗಳಲ್ಲಿ 15 ದಿನಗಳ ಕಾರ್ಯಾಚರಣೆ ನಡೆಸಿದರು. ಗಲಭೆಯಲ್ಲಿ ಪಾಲ್ಗೊಂಡ 4,600 ಕ್ಕೂ ಹೆಚ್ಚು ಜನರನ್ನು ಬಂಧಿಸಿದರು.

ಜೂನ್ 10 ರಂದು ರಾಮ ನವಮಿಯ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ, ಇತರ ರಾಜ್ಯಗಳಿಂದ ಕೋಮು ಘಟನೆಗಳು ವರದಿಯಾದಾಗ, ರಾಜಸ್ಥಾನದಲ್ಲಿ ಯಾವುದೇ ಹಿಂಸಾಚಾರ ನಡೆಯಲಿಲ್ಲ. ರಾಜ್ಯದ 33 ಜಿಲ್ಲೆಗಳ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಗೆಹ್ಲೋಟ್ ಸರ್ಕಾರ ಹಿಂಸಾಚಾರವನ್ನು ತಡೆಯಿತು.

ಕನ್ಹಯ್ಯಾ ಲಾಲ್ ಹತ್ಯೆ ಮತ್ತು ಹಿಂದೂಗಳು

ಕನ್ಹಯ್ಯಾ ಲಾಲ್ ಹತ್ಯೆ ಮತ್ತು ಹಿಂದೂಗಳು

ಕನ್ಹಯ್ಯಾ ಲಾಲ್ ಹತ್ಯೆಯು ಕಾಂಗ್ರೆಸ್ ಮತ್ತು ಪ್ರಧಾನ ಪ್ರತಿಪಕ್ಷ ಬಿಜೆಪಿಯ ನಡುವೆ ಹೊಸ ಮಾತಿನ ಸಮರಕ್ಕೆ ಕಾರಣವಾಯಿತು, ಆಡಳಿತ ಪಕ್ಷವು ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿತು.

ರಾಜ್ಯದಲ್ಲಿ ಈಗಾಗಲೇ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಲೇ ಇದೆ. ಪದೇ ಪದೇ ರಾಜ್ಯದಲ್ಲಿ ಸಂಭವಿಸುತ್ತಿರುವ ಕೋಮು ಗಲಭೆಗಳು ಹಿಂದೂಗಳು ಆಡಳಿತ ಸರ್ಕಾರದ ವಿರುದ್ಧ ಅಸಹನೆ ಮೂಡಿಸಲು ಕಾರಣವಾಗುತ್ತಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪು ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತದೆ. ಧರ್ಮಧ ಅಡಿಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ. ಕಾಂಗ್ರೆಸ್‌ಗೆ ಇದು ಎರಡು ಅಲಗಿನ ಕತ್ತಿಯಂತಾಗಿದೆ, ತನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯಲಾಗದೆ, ಎರಡೂ ಧರ್ಮದವರ ಕೋಪಕ್ಕೆ ಕಾರಣವಾಗುತ್ತಾರೆ.

ಪ್ರಮುಖ ಜಾತಿಗಳ ಓಲೈಸಲು ಎರಡೂ ಪಕ್ಷಗಳು ಪೈಪೋಟಿ

ಪ್ರಮುಖ ಜಾತಿಗಳ ಓಲೈಸಲು ಎರಡೂ ಪಕ್ಷಗಳು ಪೈಪೋಟಿ

ದಶಕಗಳಿಂದ, ಬಿಜೆಪಿ ಮತ್ತು ಕಾಂಗ್ರೆಸ್‌ ರಾಜಸ್ಥಾನದಲ್ಲಿ ಜಾಟ್‌ಗಳು, ರಜಪೂತರು, ಗುಜ್ಜರ್‌ಗಳು, ಮೀನಾಗಳು ಮತ್ತು ಬ್ರಾಹ್ಮಣರನ್ನು ಒಳಗೊಂಡಿರುವ ಪ್ರಬಲ ಜಾತಿಗಳನ್ನು ಓಲೈಸಲು ಪ್ರಯತ್ನಿಸುತ್ತಿವೆ.

ಮೀಸಲಾತಿ ಬೇಡಿಕೆಗಳು, ಸಮುದಾಯದ ಮುಖಂಡರು, ಸಮುದಾಯದ ಪಕ್ಷದ ನಾಯಕರು, ಮತ್ತು ಚಲನಚಿತ್ರಗಳಲ್ಲಿ ಸಮುದಾಯದ ಹಿಂದಿನ ಆಡಳಿತಗಾರರ ಚಿತ್ರಣ ಇತ್ಯಾದಿ ಕ್ರಮಗಳಿಂದ ಜನರ ಮತ ಸೆಳೆಯಲು ಎರಡೂ ಪಕ್ಷಗಳು ಯತ್ನಿಸುತ್ತವೆ.

ರಾಜ್ಯದಲ್ಲಿ ರಜಪೂತರು ಮತ್ತು ಜಾಟ್‌ಗಳು ಹಾಗೂ ಮೀನರು ಮತ್ತು ಗುಜ್ಜರರ ನಡುವೆ ಸಾಂಪ್ರದಾಯಿಕ ಪೈಪೋಟಿ ಇರುತ್ತದೆ. ರಜಪೂತರು ಬೆಂಬಲಿಸುವ ರಾಜಕೀಯ ಪಕ್ಷಕ್ಕೆ ವಿರುದ್ಧವಾಗಿ ಇನ್ನೊಂದು ಜಾತಿ ಎದುರಾಳಿ ಪಕ್ಷವನ್ನು ಬೆಂಬಲಿಸುತ್ತದೆ.

ಹೆಚ್ಚಿದ ಧ್ರುವೀಕರಣದೊಂದಿಗೆ, ಹಿಂದೂ ಜಾತಿಗಳ ನಡುವಿನ ಅಂತರವು ಮಸುಕಾಗಬಹುದು ಮತ್ತು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ರಾಜಕೀಯವನ್ನು "ಸಾಮಾನ್ಯ ಶತ್ರು" ಎಂದು ಬದಲಾಯಿಸಬಹುದು ಎಂದು ರಾಜಕೀಯ ವಿಶ್ಲೇಷಕ ಅಶ್ಫಾಕ್ ಕಾಯಂಖಾನಿ ಹೇಳುತ್ತಾರೆ.

ಧ್ರುವೀಕರಣದಿಂದ ಕಾಂಗ್ರೆಸ್‌ಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಸಮುದಾಯದ ಪಕ್ಷವೆಂದು ಬಣ್ಣಿಸಲ್ಪಡುವ ರೀತಿ, ಇದು ಎರಡೂ ಸಮುದಾಯಗಳಲ್ಲಿ ಕಾಂಗ್ರೆಸ್ ವಿರುದ್ಧ ಕೋಪಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

2023ರ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲಿದೆ ಎಂದು ಸಮಾಜಶಾಸ್ತ್ರಜ್ಞ ರಾಜೀವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

Recommended Video

ISRO ದಿಂದ 3 ಉಪಗ್ರಹ ಯಶಸ್ವಿ ಉಡಾವಣೆ? ಇದರ ಪ್ರಯೋಜನ ಏನು ಗೊತ್ತಾ? | *India | OneIndia Kannada

English summary
Rajasthan has been on edge since the gruesome killing of an Udaipur tailor Kanhaiya Lal by two men. These incidents leads to protests erupting in different parts of the state, forcing the Congress government led by Chief Minister Ashok Gehlot to rush to deal with the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X