ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಬಾರಿ ಗೆದ್ದಿರುವ ಶಾಸಕ ಉಮೇಶ್ ಕತ್ತಿ ಪರಿಚಯ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ‌ ಉಮೇಶ್ ವಿಶ್ವನಾಥ್ ಕತ್ತಿ ಯಡಿಯೂರಪ್ಪ ಸಂಪುಟ ಸೇರುತ್ತಿದ್ದಾರೆ. 9 ಬಾರಿ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ, ನಾಲ್ಕನೇ ಬಾರಿಗೆ ಸಚಿವರಾಗುತ್ತಿದ್ದಾರೆ.

ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ರಾಜಭವನದಲ್ಲಿ ನಡೆಯಲಿದೆ. ಸಂಪುಟ ಸೇರುವ ಶಾಸಕರ ಹೆಸರನ್ನು ಸ್ವತಃ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸಹಕಾರಿ ಬ್ಯಾಂಕ್ ಆರ್‌ಬಿಐ ವ್ಯಾಪ್ತಿಗೆ: ಕೇಂದ್ರದ ನಿರ್ಧಾರಕ್ಕೆ ಸೈ ಎಂದ ರಮೇಶ್ ಕತ್ತಿಸಹಕಾರಿ ಬ್ಯಾಂಕ್ ಆರ್‌ಬಿಐ ವ್ಯಾಪ್ತಿಗೆ: ಕೇಂದ್ರದ ನಿರ್ಧಾರಕ್ಕೆ ಸೈ ಎಂದ ರಮೇಶ್ ಕತ್ತಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಉಮೇಶ್ ಕತ್ತಿ ಸಚಿವರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆಗ ಅವರ ಹೆಸರು ಕೈಬಿಡಲಾಗಿತ್ತು. ಈಗ ಅವರು ಸಚಿವರಾಗುತ್ತಿದ್ದು, ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕಿದೆ.

ಸಂಪುಟ ವಿಸ್ತರಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಈಶ್ವರಪ್ಪ ಸಂಪುಟ ವಿಸ್ತರಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಈಶ್ವರಪ್ಪ

 BJP MLA Umesh Vishwanath Katti Profile

ಉಮೇಶ್ ಕತ್ತಿ ಪರಿಚಯ

* ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು

* 2018ರ ಚುನಾವಣೆಯಲ್ಲಿ ಪಡೆದ ಮತಗಳು 83,588

* 1961 ಮಾರ್ಚ್ 14ರಂದು ನಿಪ್ಪಾಣಿಯಲ್ಲಿ ಜನನ

* ಮಾಜಿ ಶಾಸಕ ವಿಶ್ವನಾಥ್ ಕತ್ತಿಯವರ ಹಿರಿಯ ಪುತ್ರ

* ಸಹೋದರ ರಮೇಶ್ ಕತ್ತಿ ಮಾಜಿ ಸಂಸದರು

* ಉಮೇಶ್ ಕತ್ತಿಯವರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ

* ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನ ನಂತರ ಜನತಾ ಪಕ್ಷದಿಂದ ರಾಜಕೀಯಕ್ಕೆ ಬಂದರು

* 1985ರಲ್ಲಿ ಹುಕ್ಕೇರಿ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆ. ಬಳಿಕ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

* 1996ರಲ್ಲಿ ಮೊದಲ ಬಾರಿ ಸಕ್ಕರೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದರು

* 2008ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾಗಿ ಕಾರ್ಯ ನಿರ್ವಹಣೆ

* 2010ರಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಣೆ. ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದ ಖ್ಯಾತಿ ಉಮೇಶ್ ಕತ್ತಿ ಅವರದ್ದು.

English summary
Belagavi district Hukkeri BJP MLA Umesh Vishwanath Katti (Umesh Katti ) will join B. S. Yediyurappa cabinet. Here are the profile of MLA who contest for 9 elections and won 8 times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X