• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಿದ್ದರಾಮಯ್ಯನವರ ಮಾತಿಗೆ ಥರಗುಟ್ಟಿ ಹೋದ ಬಿಜೆಪಿಯ ನಾಯಕರು'

By ಡಾ. ಹೆಚ್. ಸಿ. ಮಹದೇವಪ್ಪ
|
Google Oneindia Kannada News

ಮುಖ್ಯಮಂತ್ರಿ ಆದರೆ ದಲಿತರ ಪರವಾಗಿ ಅನುಕೂಲಕರ ಯೋಜನೆಗಳನ್ನು ಕೈಗೊಳ್ಳುತ್ತೇನೆ ಎಂಬ ಸಿದ್ದರಾಮಯ್ಯನವರ ಮಾತಿಗೆ ಬಿಜೆಪಿಯ ನಾಯಕರು ಥರಗುಟ್ಟಿ ಹೋಗಿದ್ದಾರೆ. 40% ನಿಂದ ಹಿಡಿದು ಕಮಿಷನ್ ಆಧಾರಿತ ಅಕ್ರಮ ನೇಮಕಾತಿಯವರೆಗೆ ಜನ ಸಾಮಾನ್ಯರು ಮತ್ತು ಯುವ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿಗರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಜನಪರವಾಗಿಯೇ ದುಡಿದ ಸಿದ್ದರಾಮಯ್ಯ ಅಂತ ಮೇರು ನಾಯಕರ ಬೆನ್ನು ಬಿದ್ದಿದ್ದಾರೆ.

ಕೆಲಸ ಮಾಡುವ ಸಂದರ್ಭದಲ್ಲಿ ಬರೀ ತರಲೆ ಮಾಡಿಕೊಂಡು ಕೆಳ ದರ್ಜೆಯ ಜೀವನ ಮಾಡುತ್ತಿರುವ ಬಿಜೆಪಿಗರಿಗೆ ಹುಚ್ಚು ಹಿಡಿದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಜಾರಿಗೊಳಿಸಿದ SCP/TSP ಕಾನೂನನ್ನು ಸುಪ್ರೀಂ ಕೋರ್ಟ್ ನವರೇ ಇದು " Law of the land" ಅಂದರೆ " ಈ ನೆಲದ ಕಾನೂನು", ಎಂದು ಬಣ್ಣಿಸಿರುವುದು ಸುಮ್ಮನೆ ತಮಾಷೆಗೆ ಅಲ್ಲ ಎಂಬ ಸಂಗತಿಯನ್ನು ಬಿಜೆಪಿಗರು ಅರಿಯಬೇಕು.

ನಮ್ಮದೇ ನಡೆಯಬೇಕು ಎಂಬುದು ಬ್ರಾಹ್ಮಣ್ಯದ ಕೆಟ್ಟತನನಮ್ಮದೇ ನಡೆಯಬೇಕು ಎಂಬುದು ಬ್ರಾಹ್ಮಣ್ಯದ ಕೆಟ್ಟತನ

ಇದರ ಜೊತೆಗೆ ಬಡ್ತಿ ಮೀಸಲಾತಿ, ಗುತ್ತಿಗೆ ಮೀಸಲಾತಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಜಾಗತಿಕ ಮಟ್ಟದ ವಿಚಾರ ಸಂಕಿರಣ (ಜಿಕೆವಿಕೆ), ಹೆಚ್ಚು ದಲಿತರು ಮತ್ತು ಹಿಂದುಳಿದವರಿಗೆ ಸಚಿವ ಸ್ಥಾನ ಮತ್ತು ಎಲ್ಲರಿಗೂ ಕ್ಷೇತ್ರಾಭಿವೃದ್ಧಿಗೆ ಅಪಾರ ಪ್ರಮಾಣದ ಅನುದಾನವನ್ನು ಒದಗಿಸಿ ಬಿಜೆಪಿ ಮತ್ತು ಆರ್ ಎಸ್ ಎಸ್ ನಿಂದಲೇ ಭೇಷ್ ಎನಿಸಿಕೊಂಡಿರುವ ಅವರಿಗೆ ಈ ಚುನಾವಣಾ ಸಂದರ್ಭದ ಅಪಪ್ರಚಾರ ಏನೂ ಹೊಸದಲ್ಲ.

ಜಗತ್ತಿನ ಇತಿಹಾಸ ಗಮನಿಸಿದರೆ ಜನಪರವಾಗಿ ಇದ್ದವರಿಗೆ ನೂರೆಂಟು ಸಮಸ್ಯೆಗಳು. ಕೊನೆಗೆ ಅವರ ನಂತರದಲ್ಲಿ ಅವರ ಕೆಲಸಗಳನ್ನು ಎಲ್ಲರೂ ಪಕ್ಷಾತೀತವಾಗಿ ನೆನೆತ್ತಾರೆ ಮತ್ತು ಅದೇ ರೀತಿ ಅವರು ಇದ್ದಾಗ ಪಕ್ಷಾತೀತವಾಗಿ ಸಂಚು ರೂಪಿಸಿ ಅಪಪ್ರಚಾರ ಮಾಡುತ್ತಾರೆ.

ಆಹಾರ ಯೋಜನೆಯನ್ನು ಅಸೂಯೆಯಿಂದ ನೋಡಬಾರದು; ಮಹದೇವಪ್ಪಆಹಾರ ಯೋಜನೆಯನ್ನು ಅಸೂಯೆಯಿಂದ ನೋಡಬಾರದು; ಮಹದೇವಪ್ಪ

 ಬಿಜೆಪಿಗರು ದಲಿತರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಸಂಗತಿ

ಬಿಜೆಪಿಗರು ದಲಿತರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಸಂಗತಿ

ನನಗೆ ತಿಳಿದ ಮಟ್ಟಿಗೆ ಇಡೀ ದಲಿತ ಸಮುದಾಯವೇ ಹೆಮ್ಮೆ ಪಡುವಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅವರು ಜಾರಿಗೊಳಿಸಿದ ದಲಿತರ ಪರವಾದ ಕಾಯ್ದೆಗಳನ್ನು ಇನ್ಯಾರೇ ಆಗಿದ್ದರೂ ಜಾರಿಗೊಳಿಸಲು ಹೆಣಗುತ್ತಿದ್ದರು. ಅಂತಹದ್ದರಲ್ಲಿ ಬೀದಿ ಬದಿಯ ಅಪಾಪೋಲಿಗಳಂತೆ ಮಾತನಾಡುವುದನ್ನು ಬಿಜೆಪಿಗರು ನಿಲ್ಲಿಸಬೇಕು. ದಲಿತರ ಪರವಾದ ಅನುದಾನಕ್ಕೆ ಕತ್ತರಿ ಹಾಕಿ, ಗಂಗಾ ಕಲ್ಯಾಣದಂತಹ ಯೋಜನೆಯಲ್ಲೂ 40% ಪಡೆಯುವಂತಹ ಸನ್ನಿವೇಶವನ್ನು ರೂಪಿಸಿರುವ ಬಿಜೆಪಿಗರು ದಲಿತರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಸಂಗತಿ.

 ದಲಿತ ಸಿಎಂ ಕೂಗನ್ನು ಅವರೇ ತೇಲಿ ಬಿಡುತ್ತಾರೆ

ದಲಿತ ಸಿಎಂ ಕೂಗನ್ನು ಅವರೇ ತೇಲಿ ಬಿಡುತ್ತಾರೆ

ಇನ್ನು ಭಾವನಾತ್ಮಕ ಮತ್ತು ಅಷ್ಟೇ ಸ್ವಾಭಿಮಾನಿ ಜೀವಿಗಳಾಗಿರುವ ದಲಿತರ ಮನಸ್ಸನ್ನು ಒಡೆಯಲು, ಬಿಜೆಪಿಗರು ಸರಿಯಾಗಿ ಚುನಾವಣೆಯ ಹೊತ್ತಿಗೆ, ದಲಿತ ಸಿಎಂ ಕೂಗನ್ನು ಅವರೇ ತೇಲಿ ಬಿಡುತ್ತಾರೆ. ತಮಾಷೆ ಎಂದರೆ ಸಿದ್ದರಾಮಯ್ಯ ದಲಿತ ಸಿಎಂ ಮಾಡಲು ಅಡ್ಡಿಯಾಗಿದ್ದಾರೆ ಎಂದು ಹೇಳುವ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದಲಿತರನ್ನು ಸಿಎಂ ಮಾಡುವ ಮಾತು ಹಾಗಿರಲಿ, ಅವರನ್ನು ಕನಿಷ್ಠ ಪಕ್ಷ ಪ್ರೀತಿಯಿಂದ ಮಾತನಾಡಿಸುವುದೂ ಇಲ್ಲ. ಇನ್ನು ಅವರ ಪರವಾಗಿ ಕಾಯ್ದೆ ಮಾಡುತ್ತಾರೆ ಮತ್ತು ಯೋಜನೆಗಳನ್ನು ರೂಪಿಸುತ್ತಾರೆ ಎನ್ನುವುದು ಕನಸಿನ ಮಾತು.

 ಎಸ್ ಟಿ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ST ಸಮುದಾಯದ ಬೆಂಬಲ

ಎಸ್ ಟಿ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ST ಸಮುದಾಯದ ಬೆಂಬಲ

ಇವರು ಅಧಿಕಾರಕ್ಕೆ ಬರುವ ಮುನ್ನ ಎಸ್ ಟಿ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ST ಸಮುದಾಯದ ಬೆಂಬಲ ಪಡೆದಿದ್ದರು. ಆದರೆ ಕೊನೆಗೆ ST ಸಮುದಾಯದ ಶ್ರೀರಾಮುಲು ಅವರನ್ನೇ ಸಚಿವ ಸ್ಥಾನದಿಂದ ಕೆಳಗೆ ಇಳಿಸಿ ಮನೆಗೆ ಕಳಿಸಿದರು. ಎಸ್ ಟಿ ಸಮುದಾಯದ ಕೂಗಿಗೆ ಆದ ಪರಿಸ್ಥಿತಿಯೇ ರಾಮುಲು ಅವರಿಗೂ ಬಂದಿದೆ ಎಂಬುದು ಈ ಹೊತ್ತು ನಮಗೆ ಕಾಣುವ ಸತ್ಯವಾಗಿದೆ. ಸಿದ್ದರಾಮಯ್ಯ ಅಥವಾ ಜನಪರ ನಾಯಕತ್ವವನ್ನು ಅಭಿವೃದ್ಧಿ ಚರ್ಚೆಯಿಂದ ಬಗ್ಗಿಸಲು ಸಾಧ್ಯವಿಲ್ಲದ ಬಿಜೆಪಿಗರು ಕೆಲವು ದಾರಿಗಳನ್ನು ಕಂಡುಕೊಂಡಿದ್ದಾರೆ.

 ಒಳ ಮೀಸಲಾತಿ ವಿಷಯವನ್ನು ತೇಲಿ ಬಿಡುವುದು

ಒಳ ಮೀಸಲಾತಿ ವಿಷಯವನ್ನು ತೇಲಿ ಬಿಡುವುದು

ಈ ಪೈಕಿ ಮೊದಲನೆಯದು, ಚುನಾವಣೆ ಸಂದರ್ಭಕ್ಕೆ ಸರಿಯಾಗಿ ಒಳ ಮೀಸಲಾತಿ ವಿಷಯವನ್ನು ತೇಲಿ ಬಿಡುವುದು. ( ಕೇಂದ್ರ ಮತ್ತು ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದ್ದರೂ ಕೂಡಾ ಇವರು ಸುಮ್ಮನಿದ್ದು, ಆ ಬಗ್ಗೆ ದನಿ ಎತ್ತದೇ ಚುನಾವಣೆಗಾಗಿ ಮಾತನಾಡುವುದು ಇವರ ಗುರಿಯಾಗಿದೆ). ನನ್ನ ಪ್ರಕಾರ ಚುನಾವಣೆ ಹತ್ತಿರ ಬಂದಂತೆ ನಾವು ಸದಾಶಿವ ಆಯೋಗದ ವರದಿಯನ್ನು ಅನುಮೋದನೆಗೆ ಕಳಿಸಿದ್ದೇವೆ ಎಂಬ ಭಯಂಕರ ಸುಳ್ಳನ್ನು ಇವರು ಹೇಳಿದರೂ ಹೇಳಬಹುದು. ಇಂದು ಎರಡನೆಯದು

 ಎಷ್ಟಾದರೂ ಸಾವರ್ಕರ್ ವಂಶಸ್ಥರಲ್ಲವೇ?

ಎಷ್ಟಾದರೂ ಸಾವರ್ಕರ್ ವಂಶಸ್ಥರಲ್ಲವೇ?

ಲಿಂಗಾಯತ ಧರ್ಮದ ಬಗ್ಗೆ. ಈಗಾಗಲೇ ಮುಗಿದು ಹೋಗಿರುವ ವಿಷಯಕ್ಕೆ ಲೇಪನ ಹಚ್ಚುವ ಇವರು, ಎಂ ಬಿ ಪಾಟೀಲರಿಗೆ ಮತ್ತು ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡಲು ಆಗಾಗ್ಗೆ ಪ್ರಯತ್ನ ಮಾಡುತ್ತಾರೆ. ( ಹೋದ ವರ್ಷವಂತೂ ವಿಜಯವಾಣಿ ಪತ್ರಿಕೆಯಲ್ಲಿ ಪೂರ್ಣ ಪುಟ, ಸುಳ್ಳು ಪ್ರಕಟಿಸಿ ಆ ಬಗ್ಗೆ ದನಿ ಎತ್ತಿದ ಕೂಡಲೇ, ಮಾರನೇ ದಿನ ಮತ್ತೊಂದು ಪೂರ್ಣ ಪುಟದಲ್ಲಿ ಬಹಿರಂಗ ಕ್ಷಮೆಯನ್ನು, ಕೋರಿದ್ದರು) ಎಷ್ಟಾದರೂ ಸಾವರ್ಕರ್ ವಂಶಸ್ಥರಲ್ಲವೇ?

 ಹಿಂದೂ ಹತ್ಯೆ ಆಗಿದೆ ಎಂದು ಮಾಧ್ಯಮಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ

ಹಿಂದೂ ಹತ್ಯೆ ಆಗಿದೆ ಎಂದು ಮಾಧ್ಯಮಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ

2018 ರಲ್ಲಿ ಹಿಂದೂ ಹತ್ಯೆ ಆಗಿದೆ ಎಂದು ಮಾಧ್ಯಮಗಳನ್ನು ಬಳಸಿಕೊಂಡು ಸುಳ್ಳು ಹಬ್ಬಿಸಿದ್ದ ಇವರು ಈವರೆಗೂ ಸಹ ಸರಿಯಾದ ತನಿಖೆ ನಡೆಸದೇ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಶವ ರಾಜಕೀಯ ಮಾಡುವವರಿಗೆ ಅಭಿವೃದ್ಧಿಯ ಪ್ರಜ್ಞೆ ಏನಾದರೂ ಇದೆಯೇ? ಇನ್ನು ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವೇ ದಲಿತ ಸಿಎಂ ಗಳನ್ನು ಮಾಡುವಲ್ಲಿ ಯಶಸ್ವಿಯಾಗಿವೆ. ಕರ್ನಾಟಕದಲ್ಲೂ ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಕಾರಗೊಳ್ಳಿದೆ.

 ಪಂಜಾಬಿನಲ್ಲಿ ಚರಣ್ ಜೀತ್ ಸಿಂಗ್ ಚನ್ನಿ ಅವರ ಉದಾಹರಣೆ

ಪಂಜಾಬಿನಲ್ಲಿ ಚರಣ್ ಜೀತ್ ಸಿಂಗ್ ಚನ್ನಿ ಅವರ ಉದಾಹರಣೆ

ಇತ್ತೀಚಿಗೆ ಪಂಜಾಬಿನಲ್ಲಿ ಚರಣ್ ಜೀತ್ ಸಿಂಗ್ ಚನ್ನಿ ಅವರ ಉದಾಹರಣೆ ನಿಮಗೆ ಗೊತ್ತೇ ಇದೆ. ಹೀಗಾಗಿ ಬಿಜೆಪಿಗರ ಪುಗಸಟ್ಟೆ ದೇಶಪ್ರೇಮ ಮತ್ತು ದಲಿತ ಪ್ರೇಮದ ಭಾಷಣವನ್ನು ನೀವು ನಾವೆಲ್ಲರೂ ಆ ಕಿವಿಯಿಂದ ಕೇಳಿ ಈ ಕಿವಿಯಲ್ಲಿ ಬಿಡಬೇಕಿದೆ. ದಲಿತರ ಮೇಲೆ ಅಷ್ಟೊಂದು ಪ್ರೇಮ ಇದ್ದಿದ್ದರೆ ಅವರೇ ಮಾಡಬಹುದಿತ್ತಲ್ಲ.? ಇಂತಹ ನಯ ವಂಚಕರಿಗೂ ದಲಿತರ ಪರವಾಗಿ ದುಡಿದ ಮತ್ತು ಮುಂದೆಯೂ ತಮ್ಮ ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಕಾಂಗ್ರೆಸ್ ಪಕ್ಷಕ್ಕೂ ಅಜಗಜಾಂತರ ವ್ಯತ್ಯಾಸ ಇದೆ

 ಚುನಾವಣಾ ಹೊಸ್ತಿಲಲ್ಲಿ ಹತ್ತು ಹಲವು ಅಪಪ್ರಚಾರ

ಚುನಾವಣಾ ಹೊಸ್ತಿಲಲ್ಲಿ ಹತ್ತು ಹಲವು ಅಪಪ್ರಚಾರ

ಇನ್ನು ಚುನಾವಣಾ ಹೊಸ್ತಿಲಲ್ಲಿ ಹತ್ತು ಹಲವು ಅಪ ಪ್ರಚಾರಗಳುನ್ನು ಒಂದಿಲ್ಲೊಂದು ರೀತಿಯಲ್ಲಿ ಮಾಡುತ್ತಲೇ ಇರುತ್ತಾರೆ. ಆದರೆ ಈ ಪುಗಸಟ್ಟೆ ಮಾತನಾಡುವ ಬಿಜೆಪಿಯ ಯಾವನೂ ಸಹ ಜನಪರವಾಗಿ ಯೋಚಿಸುವುದಿಲ್ಲ ಮತ್ತು 40% ಬಿಟ್ಟರೆ ಅವರ ತಲೆಯಲ್ಲಿ ಜೇಡಿಮಣ್ಣೂ ಇಲ್ಲ. ಈ ಹಿನ್ನಲೆಯಲ್ಲಿ ಜನಪರ ನಾಯಕರನ್ನು ಉಳಿಸಿಕೊಳ್ಳುವುದು ಈ ಹೊತ್ತಿನ ಕರ್ನಾಟಕಕ್ಕೆ ಅತ್ಯಂತ ಜರೂರಾದ ಸಂಗತಿಯಾದೆ.

   ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada
   English summary
   BJP Leaders Stunned On Siddaramaiah Statement On Dalit: Article By Dr. H C Mahadevappa. Know More,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X