ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರಕ್ಕೆ ಲಗ್ಗೆಯಿಟ್ಟ ಬಿಜೆಪಿ... ಕಾಂಗ್ರೆಸ್‌ನಲ್ಲಿ ಆತಂಕ ಶುರು

|
Google Oneindia Kannada News

ಚಾಮರಾಜನಗರ, ನವೆಂಬರ್ 03: ಚಾಮರಾಜನಗರದ ನಗರಸಭೆ ಆಡಳಿತದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿರುವುದು ಬಿಜೆಪಿ ನಾಯಕರ ಸಂಘಟನಾ ಕಾರ್ಯಕ್ಕೆ ಇನ್ನಷ್ಟು ಹುಮ್ಮಸ್ಸು ತಂದಿದ್ದರೆ, ಕಾಂಗ್ರೆಸ್ ಪಾಳಯದಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಾಮರಾಜನಗರ ಜಿಲ್ಲೆಗೆ ನಿಧಾನವಾಗಿ ಬಿಜೆಪಿ ಲಗ್ಗೆಯಿಡುತ್ತಿದೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ತಲಾ ಒಬ್ಬ ಸಂಸದ ಹಾಗೂ ಶಾಸಕರಿದ್ದು. ಇದೀಗ ನಗರ ಸಭೆಯ ಆಡಳಿತ ಚುಕ್ಕಾಣಿ ಹಿಡಿಯುವುದರೊಂದಿಗೆ ಮುಂದಿನ ಗ್ರಾ.ಪಂ ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಳ್ಳತೊಡಗಿದೆ. ಮುಂದೆ ಓದಿ...

 ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದು 'ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ’ ಹೊಡೆದ ರೂಪಾಲಿ ನಾಯ್ಕ ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದು 'ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ’ ಹೊಡೆದ ರೂಪಾಲಿ ನಾಯ್ಕ

 ಸಂಘಟನೆಯಲ್ಲಿ ಬಿಜೆಪಿ ಸದಾ ಮುಂದು

ಸಂಘಟನೆಯಲ್ಲಿ ಬಿಜೆಪಿ ಸದಾ ಮುಂದು

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಸಂಘಟನೆಯ ನೆನಪಾಗುತ್ತದೆ. ಅಷ್ಟೇ ಅಲ್ಲ ಪಕ್ಷದ ನಾಯಕರು ಕೇವಲ ಎದುರಾಳಿ ಮೇಲೆ ಆರೋಪ ಮಾಡಿ ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಬಿಜೆಪಿಯಲ್ಲಿ ಹಾಗಲ್ಲ. ಚುನಾವಣೆ ಮುಗಿಯಿತು, ಇನ್ನು ಮುಂದಿನ ಚುನಾವಣೆ ಬಂದಾಗ ನೋಡಿಕೊಂಡರಾಯಿತು ಎಂದು ತೆಪ್ಪಗಾಗದೆ ತಳಮಟ್ಟದಿಂದಲೇ ಪಕ್ಷದ ಸಂಘಟನೆಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ, ಚಾಮರಾಜನಗರದಲ್ಲಿ ನಡೆಯುತ್ತಿರುವ ಪಕ್ಷದ ಸಂಘಟನೆಯ ಕೆಲಸ ಎಂದರೆ ತಪ್ಪಾಗಲಾರದು.

 ಗ್ರಾ.ಪಂ. ಚುನಾವಣೆ ಮೇಲೆ ಬಿಜೆಪಿ ಕಣ್ಣು

ಗ್ರಾ.ಪಂ. ಚುನಾವಣೆ ಮೇಲೆ ಬಿಜೆಪಿ ಕಣ್ಣು

ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಆದರೆ ಇಷ್ಟರಲ್ಲೇ ಚಾಮರಾಜನಗರದಲ್ಲಿ ಪಕ್ಷದ ಸಂಘಟನೆಯ ಕೆಲಸ ಆರಂಭವಾಗಿದೆ. ಸದ್ಯ ಪಕ್ಷದ ಸಂಸದ ವಿ.ಶ್ರೀನಿವಾಸಪ್ರಸಾದ್, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಬರಲಿರುವ ಗ್ರಾಮ ಪಂಚಾಯಿತಿ ಚುನಾವಣೆಯತ್ತ ಆಸಕ್ತಿ ತೋರಿದ್ದಾರೆ. ಈ ನಾಯಕರು ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಈಗಿನಿಂದಲೇ ಮಾಡುತ್ತಿದ್ದಾರೆ.

 ನಗರಸಭೆ ಅಧಿಕಾರ ಹಿಡಿದ ಬಿಜೆಪಿ

ನಗರಸಭೆ ಅಧಿಕಾರ ಹಿಡಿದ ಬಿಜೆಪಿ

ಇದೆಲ್ಲದರ ನಡುವೆ ಚಾಮರಾಜನಗರ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಸಂಪೂರ್ಣ ಬಹುಮತ ಪಡೆದುಕೊಂಡೇ ಅಧಕ್ಷ ಹಾಗೂ ಉಪಾಧ್ಯಕ್ಷ ಗದ್ದುಗೆಯನ್ನು ಬಿಜೆಪಿ ಏರಿರುವುದು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಪ್ರಾಬಲ್ಯ ಸಾಧಿಸಿಕೊಂಡು ಮುನ್ನಡೆಯಲು ದಾರಿ ಮಾಡಿಕೊಟ್ಟಂತಾಗಿದೆ.
ವಿ.ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಸಂಸದರಾದ ಬಳಿಕ ನಿಧಾನವಾಗಿ ಬಿಜೆಪಿ ಕಡೆಗೆ ಒಲವು ಹೆಚ್ಚಾಗುತ್ತಿದ್ದು, ಸ್ಥಳೀಯ ಸಂಸದರು ಸೇರಿದಂತೆ 17 ಮತಗಳನ್ನು ಪಡೆಯುವುದರೊಂದಿಗೆ ಬಿಜೆಪಿ ಬೆಂಬಲಿತ ನಗರದ 7ನೇ ವಾರ್ಡ್ ಸದಸ್ಯೆ ಆಶಾ ನಟರಾಜು ಅಧ್ಯಕ್ಷೆಯಾಗಿಯೂ ಹಾಗೂ 29ನೇ ವಾರ್ಡ್ ಸದಸ್ಯೆ ಸುಧಾ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಇದೊಂದು ಬಲವಾದ ಹೊಡೆತವೂ ಹೌದು.

 ಶುರುವಾಯ್ತು ಕೈಗೆ ಕಮಲ ಭಯ

ಶುರುವಾಯ್ತು ಕೈಗೆ ಕಮಲ ಭಯ

31 ಸಂಖ್ಯಾ ಬಲದ ನಗರ ಸಭೆಯಲ್ಲಿ "ಕಮಲ" ಹಿಡಿದು ಆಯ್ಕೆಯಾಗಿರುವವರು 15 ಸದಸ್ಯರಾದರೆ, ಕಾಂಗ್ರೆಸ್ 'ಕೈ' ಹಿಡಿದು ಆಯ್ಕೆಯಾದವರು 8 ಸದಸ್ಯರು. ಎಸ್.ಡಿ.ಪಿ.ಐ ಪಕ್ಷದಿಂದ 6 ಸದಸ್ಯರು. ಒಬ್ಬರು ಪಕ್ಷೇತರ, ಮತ್ತೊಬ್ಬರು ಬಿಎಸ್ಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರೂ ಅದು ಯಾವುದೇ ಫಲ ಕೊಡಲಿಲ್ಲ. ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಪಕ್ಷೇತರ ಸದಸ್ಯ ಬಸವಣ್ಣ ಗೈರು ಹಾಜರಾಗಿದ್ದರು.
ಒಟ್ಟಾರೆ ಸ್ಥಳೀಯ ಸಂಸ್ಥೆ ಮೇಲೂ ಬಿಜೆಪಿ ಹಿಡಿತ ಸಾಧಿಸಲು ಮುಂದಾಗಿರುವುದು ಇತರೆ ಪಕ್ಷಗಳ ನಾಯಕರಲ್ಲಿ ಸಣ್ಣಗಿನ ಆತಂಕಕ್ಕೆ ಕಾರಣವಾಗಿದೆ. ಹೀಗೆಯೇ ಮುಂದುವರೆದರೆ ಬಿಜೆಪಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಕಾಂಗ್ರೆಸ್ ಗೆ ಮುಳುಗು ನೀರಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

 ಕೈಗೆ ಮಗ್ಗುಲ ಮುಳ್ಳಾದ ಎರಡು ಪಕ್ಷಗಳು

ಕೈಗೆ ಮಗ್ಗುಲ ಮುಳ್ಳಾದ ಎರಡು ಪಕ್ಷಗಳು

ಒಂದು ವೇಳೆ ಕಾಂಗ್ರೆಸ್ ನ ಪ್ರಾಬಲ್ಯ ಕಡಿಮೆಯಾಗಲು ಬಿಜೆಪಿ ಕಾರಣ ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಜಿಲ್ಲೆಯಲ್ಲಿ ಎಸ್.ಡಿ.ಪಿ.ಐ ಮತ್ತು ಬಿ.ಎಸ್.ಪಿ ಪಕ್ಷಗಳು ಇತ್ತೀಚೆಗಿನ ವರ್ಷಗಳಲ್ಲಿ ಸಕ್ರಿಯವಾಗುತ್ತಿವೆ. ಅದರ ಪರಿಣಾಮ ಕಾಂಗ್ರೆಸ್‌ನ ಮೇಲಾಗುತ್ತಿದ್ದು, ಇದರ ಲಾಭ ಬಿಜೆಪಿಗೆ ದಕ್ಕುತ್ತಿದೆ ಎಂಬುದಂತು ಸತ್ಯ.

English summary
BJP first time get into the administration of chamarajanagar Municipal Council. It has given even more enthusiasm to the organizing work of the BJP leaders,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X