ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?

|
Google Oneindia Kannada News

ನವದೆಹಲಿ, ಏಪ್ರಿಲ್ 24: ಕ್ರಿಕೆಟಿಗ ಗೌತಮ್ ಗಂಭಿರ್ ಬಿಜೆಪಿ ಸೇರ್ಪಡೆಯಾಗಿ ಈಗ ಚುನಾವಣಾ ಕಣಕ್ಕೂ ಧುಮುಕಿದ್ದಾರೆ.

ಅವರು ಪೂರ್ವ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸೇರ್ಪಡೆಯಾದ ಕೇವಲ ಒಂದು ತಿಂಗಳಲ್ಲಿ ಅವರು ಬಿಜೆಪಿ ಟಿಕೆಟ್ ಧಕ್ಕಿಸಿಕೊಂಡಿದ್ದಾರೆ.

ಗ್ವಾಲಿಯಾರ್ ರಾಜಮನೆತನ ಜ್ಯೋತಿರಾಧಿತ್ಯ ಸಿಂಧಿಯಾ ಆಸ್ತಿ ವಿವರ ಗ್ವಾಲಿಯಾರ್ ರಾಜಮನೆತನ ಜ್ಯೋತಿರಾಧಿತ್ಯ ಸಿಂಧಿಯಾ ಆಸ್ತಿ ವಿವರ

ಕ್ರಿಕೆಟಿಗರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದ ಗೌತಮ್ ಗಂಭೀರ್ ಅವರು ರಾಜಕಾರಣಿಯಾಗಿ ಯಶಸ್ಸು ಗಳಿಸಬಲ್ಲರೆ ಎಂದು ಕಾದು ನೋಡಬೇಕಿದೆ.

ಗೌತಮ್ ಗಂಭೀರ್ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ನಿಯಮದಂತೆ ತಮ್ಮ ಆಸ್ತಿ ವಿವರ, ಶೈಕ್ಷಣಿಕ ವಿವರ ಮತ್ತು ಇತರೆ ವಿವರಗಳನ್ನು ಸಲ್ಲಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಸ್ತಿ ವಿವರಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಸ್ತಿ ವಿವರ

ಗೌತಮ್ ಗಂಭೀರ್ ಅವರು 2017-18ನೇ ಸಾಲಿನಲ್ಲಿ 12.40 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದಾರೆ. ಅವರ ಪತ್ನಿ ನತಾಶಾ ಅವರು ಇದೇ ಸಾಲಿನಲ್ಲಿ 6.15 ಲಕ್ಷ ಆದಾಯ ತೆರಿಗೆ ಕಟ್ಟಿದ್ದಾರೆ. ಗಂಭೀರ್ ಅವರ ಬಳಿ 72,000 ನಗದು ಇದೆ, ಪತ್ನಿ ಬಳಿ 28,000 ನಗದು ಇದೆ.

ಗಂಭೀರ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ?

ಗಂಭೀರ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ?

ಗೌತಮ್ ಗಂಭೀರ್ ಅವರ ವಿವಿಧ ಬ್ಯಾಂಕ್ ಖಾತೆಯಲ್ಲಿ 1.88 ಕೋಟಿ ರೂಪಾಯಿ ಹಣವಿದೆ. ಅವರು ವಿವಿರ ಷೇರು, ಡಿಬೆಂಚರ್ ಹಾಗೂ ಸರ್ಕಾರಿ ಎನ್‌ಎಸ್‌ಎಸ್‌, ಪೋರ್ಟಲ್‌ಗಳಲ್ಲಿ 28 ಕೋಟಿ ಹೂಡಿಕೆ ಮಾಡಿದ್ದಾರೆ. ಗಂಭೀರ್ ಅವರು ಒಟ್ಟು 87.24 ಕೋಟಿ ಹಣವನ್ನು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ ನೀಡಿದ್ದಾರೆ.

ಗೌತಿ ಬಳಿ ಇರುವ ಕಾರುಗಳು ಎಷ್ಟು?

ಗೌತಿ ಬಳಿ ಇರುವ ಕಾರುಗಳು ಎಷ್ಟು?

ಗೌತಮ್ ಗಂಭೀರ್ ಅವರ ಬಳಿ ಐದು ಕಾರು ಮತ್ತು ಒಂದು ಬೈಕ್ ಇದೆ. ಬಿಎಂಡಬ್ಲು, ಆಡಿ ಮತ್ತು ಮಾರುತಿ ಬೊಲೆನೋ ಕಾರನ್ನು ಅವರು ಖರೀದಿಸಿದ್ದಾರೆ ಇವುಗಳ ಒಟ್ಟು ಮೌಲ್ಯ 1.27 ಕೋಟಿ. ಮಾರುತಿ ಎಸ್‌ಎಕ್‌4, ಬೊಲೆನೊ ಮತ್ತು ಕೆಟಿಎಂ ಬೈಕ್ ಉಡುಗೊರೆಯಾಗಿ ಅವರಿಗೆ ಸಿಕ್ಕಿದೆ.

ನರೇಂದ್ರ ಮೋದಿ ಪ್ರಭಾವಕ್ಕೊಳಗಾಗಿ ಬಿಜೆಪಿ ಸೇರ್ಪಡೆ: ಗಂಭೀರ್ನರೇಂದ್ರ ಮೋದಿ ಪ್ರಭಾವಕ್ಕೊಳಗಾಗಿ ಬಿಜೆಪಿ ಸೇರ್ಪಡೆ: ಗಂಭೀರ್

ಗಂಭೀರ್ ಬಳಿ ಇರುವ ಆಸ್ತಿ ಎಷ್ಟು?

ಗಂಭೀರ್ ಬಳಿ ಇರುವ ಆಸ್ತಿ ಎಷ್ಟು?

ಗೌತಮ್ ಗಂಭೀರ್ ಅವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲ. ಆದರೆ ಕೃಷಿಯೇತರ ಜಮೀನು ಇದೆ. ಅವರ ಹೆಸರಿನಲ್ಲಿ 5 ಕೋಟಿ ಮೌಲ್ಯದ ಕೃಷಿಯೇತರ ಜಮೀನಿದೆ. ಗಂಭೀರ್ ಅವರ ಹೆಸರಿನಲ್ಲಿ 16 ಕೋಟಿ ಮೌಲ್ಯದ ವಸತಿ ಗೃಹಗಳಿವೆ. ಗಂಭೀರ್ ಅವರ ಬಳಿ ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ.

ಗಂಭಿರ್ ಅವರಿಗಿರುವ ಸಾಲವೆಷ್ಟು?

ಗಂಭಿರ್ ಅವರಿಗಿರುವ ಸಾಲವೆಷ್ಟು?

ಗಂಭೀರ್ ಅವರಿಗೆ 34.15 ಕೋಟಿ ಸಾಲವಿದೆ. ಜೊತೆಗೆ 1.32 ಕೋಟಿ ಸರ್ಕಾರಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಗಂಭೀರ್ ಅವರ ಬಳಿ 5.21 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಗಂಭಿರ್ ಪತ್ನಿ ಬಳಿ 23.98 ಲಕ್ಷ ಮೌಲ್ಯದ ಆಭರಣಗಳಿವೆ.

ಆಸ್ತಿ ವಿವರ: ಪ್ರಜ್ವಲ್ ರೇವಣ್ಣ ವಿರುದ್ಧ ಆಯೋಗಕ್ಕೆ ಗಂಭೀರ ದೂರು ಆಸ್ತಿ ವಿವರ: ಪ್ರಜ್ವಲ್ ರೇವಣ್ಣ ವಿರುದ್ಧ ಆಯೋಗಕ್ಕೆ ಗಂಭೀರ ದೂರು

ಗೌತಮ್ ಗಂಭೀರ್ ಅವರ ಒಟ್ಟು ಆಸ್ತಿ ಎಷ್ಟು?

ಗೌತಮ್ ಗಂಭೀರ್ ಅವರ ಒಟ್ಟು ಆಸ್ತಿ ಎಷ್ಟು?

ಗೌತಮ್ ಗಂಭೀರ್ ಅವರ ಒಟ್ಟು ಚರಾಸ್ತಿ 116.38 ಕೋಟಿ, ಅವರ ಪತ್ನಿ ಅವರ ಒಟ್ಟು ಚರಾಸ್ತಿ 1.15 ಕೋಟಿ. ಗಂಭೀರ್ ಅವರ ಒಟ್ಟು ಸ್ಥಿರಾಸ್ತಿ 21 ಕೋಟಿ. ಒಟ್ಟು 137.38 ಕೋಟಿ ಆಸ್ತಿಯನ್ನು ಗಂಭೀರ್ ಹೊಂದಿದ್ದಾರೆ. ಜೊತೆಗೆ ಅವರ ಹೆಸರಿನಲ್ಲಿ 34.20 ಕೋಟಿ ಸಾಲ ಇದೆ. ಗಂಭೀರ್ ಅವರಿಗೆ ಕ್ರಿಕೆಟ್ ವೀಕ್ಷಕ ವಿವರಣೆ ನೀಡುವುದರಿಂದ, ಹೂಡಿಕೆ ಮೇಲಿನ ಬಡ್ಡಿ ಮತ್ತು ವ್ಯವಹಾರದಿಂದ ಆದಾಯ ಬರುತ್ತಿದೆ.

English summary
Former cricketer Gautam Gambhir contesting to lok sabha elections 2019 from East Delhi as BJP candidate. He files nomination yesterday and here is his assets details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X