ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್‌ಕಾಯಿನ್‌: ದೆಹಲಿಯಿಂದ ಸಿಎಂ ಬೊಮ್ಮಾಯಿಗೆ ಸುರ್ಜೇವಾಲ 6 ಪ್ರಶ್ನೆಗಳು

|
Google Oneindia Kannada News

ನವದೆಹಲಿ/ಬೆಂಗಳೂರು, ನ 14: ಸದ್ಯ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್‌ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆರು ಪ್ರಶ್ನೆಯನ್ನು ಎಸೆದಿದ್ದಾರೆ. ಈ ಸಂಬಂಧ, ಕಾಂಗ್ರೆಸ್ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಯಥಾವತ್ ಕಾಪಿ ಹೀಗಿದೆ:

ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವ ಬಿಟ್ ಕಾಯಿನ್ ಹಗರಣವು ಭಾರತದ ಅತ್ಯಂತ ದೊಡ್ಡ ಪ್ರಕರಣವಾಗಿದೆ. ಆದರೆ ಇದನ್ನ ನ್ಯಾಯಯುತವಾಗಿ ತನಿಖೆ ನಡೆಸುತ್ತಿಲ್ಲ. ಅದರ ಬದಲಾಗಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವಂತೆ ಕಂಡು ಬರುತ್ತಿದೆ.

ಬಿಟ್ ಕಾಯಿನ್: ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಮುಜುಗರ?ಬಿಟ್ ಕಾಯಿನ್: ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಮುಜುಗರ?

ನವೆಂಬರ್ 14, 2020ರಂದು ಬೆಂಗಳೂರು ಪೊಲೀಸರು ಹ್ಯಾಕರ್ ಶ್ರೀಕೃಷ್ಣನ ಹಾಗೂ ಆತನ ಸಹಚರ ರಾಬಿನ್ ಖಂಡೇಲ್ವಾಲ್ ನನ್ನ ಐದು ವಿವಿಧ ಪ್ರಕಣಗಳಿಗೆ ಸಂಬಂಧಿಸಿದಂತೆ ಬಂಧಿಸಿದರು. ಆರೋಪಿಗಳನ್ನು 100 ದಿನಗಳಿಗೂ ಹೆಚ್ಚು ಕಾಲ ವಶದಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಲಾಯಿತು.

ಅಪರಾಧ ಸಂಖ್ಯೆ. 91/2020- ಕ್ಕೆ ಸಂಬಂಧಿಸಿದಂತೆ 17ನೇ ನವೆಂಬರ್, 2020 ರಂದು ಶ್ರೀಕೃಷ್ಣನನ್ನು ದಸ್ತಗಿರಿ ಮಾಡಿ 14 ದಿನಗಳ ಕಾಲ ವಿಚಾಣೆಗೆ ಒಳಪಡಿಸಲಾಯಿತು. ಅಪರಾಧ ಸಂಖ್ಯೆ. 153/2020 ಕ್ಕೆ ಸಂಬಂಧ ಪಟ್ಟಂತೆ ಡಿಸೆಂಬರ್ 2, 2020 ರಂದು ಮತ್ತೆ ಬಂಧಿಸಲಾಯಿತು ಇದರಲ್ಲಿ 12 ದಿನಗಳ ಕಸ್ಟಡಿಯಲ್ಲಿ ಇರಿಸಿಕೊಂಡು ವಿಚಾರಣೆ ಮಾಡಲಾಯಿತು. ಬಳಿಕ ಅಪರಾಧ ಸಂಖ್ಯೆ 287/2020 ಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 14, 2020 ರಂದು ಮತ್ತೆ ಅರೆಸ್ಟ್ ಮಾಡಲಾಯಿತು.

 2 ದಿನದಲ್ಲಿ ಕೆಪಿಸಿಸಿ 'ಬಿಟ್ ಕಾಯಿನ್' ಪತ್ರಿಕಾಗೋಷ್ಠಿ: ಬಿಜೆಪಿ ವಿರುದ್ದ ಬಾಂಬ್ 2 ದಿನದಲ್ಲಿ ಕೆಪಿಸಿಸಿ 'ಬಿಟ್ ಕಾಯಿನ್' ಪತ್ರಿಕಾಗೋಷ್ಠಿ: ಬಿಜೆಪಿ ವಿರುದ್ದ ಬಾಂಬ್

ಈ ಪ್ರಕರಣದಲ್ಲಿ ಈತನನ್ನು 14 ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇದಾದ ಮೇಲೆ 2020ರ ಅಪರಾಧ ಸಂಖ್ಯೆ 45ಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿಸಿ 14 ದಿನಗಳವರೆಗೆ ಕಸ್ಟಡಿಯಲ್ಲಿರಸಲಾಗಿತ್ತು. ಬಳಿಕ 2019 ರ ಅಪರಾಧ ಸಂಖ್ಯೆ 9ಕ್ಕೆ ಸಂಬಂಧಿಸಿದಂತೆ ಮತ್ತು 14 ದಿನಗಳವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇದಾದ ಬಳಿಕ ಶ್ರೀಕೃಷ್ಣನನ್ನು ಏಪ್ರಿಲ್ 17 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಶ್ರೀಕೃಷ್ಣ ಮೆಟ್ರೋಪಾಲಿಟನ್ ನ್ಯಾಯಾಧೀಶರ ಸ್ವಯಂಪ್ರೇರಿತ ಹೇಳಿಕೆ

ಶ್ರೀಕೃಷ್ಣ ಮೆಟ್ರೋಪಾಲಿಟನ್ ನ್ಯಾಯಾಧೀಶರ ಸ್ವಯಂಪ್ರೇರಿತ ಹೇಳಿಕೆ

2020ರ ಡಿಸೆಂಬರ್ ನಲ್ಲಿ (ದಿನಾಂಕ ಸ್ಪಷ್ಟವಾಗಿಲ್ಲ) ಶ್ರೀಕೃಷ್ಣ ಬೆಂಗಳೂರಿನ ಮೆಟ್ರೋಪಾಲಿಟನ್ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾನೆ. ಇದರ ನಕಲನ್ನು ಎ1ನಲ್ಲಿ ದಾಖಲಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದುಕೊಂಡ ಪ್ರಕರಣವಾಗಿದ್ದರೂ ಐದು ತಿಂಗಳ ಕಾಲ ಈ ಬಗ್ಗೆ ಇಂಟರ್ ಪೋಲ್‌ಗೆ ಯಾವುದೇ ಮಾಹಿತಿಯನ್ನ ನೀಡಿರಲಿಲ್ಲ. ಬಳಿಕ 2021 ಏಪ್ರಿಲ್ 24ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ಪತ್ರ ಬರೆದು ಇಂಟರ್ ಪೋಲ್ ಹಾಗೂ ಇತರೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಆದೇಶ ನೀಡಿದರು.

ಪ್ರಸ್ತುತ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಪ್ರಸ್ತುತ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಪ್ರಸ್ತುತ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರು 2019ರ ಆಗಸ್ಟ್ ನಿಂದ ಜುಲೈ 28, 2021ರವರೆಗೆ ರಾಜ್ಯದ ಗೃಹ ಸಚಿವರಾಗಿದ್ದರು. ಶ್ರೀಕೃಷ್ಣನ ಮೇಲೆ ಇರುವ ಆರೋಪಗಳು ಬಿಟ್ ಕಾಯಿನ್/ ಕ್ರಿಪ್ಟೋಕರೆನ್ಸಿ/ ಎಕ್ಸ್ ಚೇಂಜ್‌ಗಳು/ ವೆಬ್ ಸೈಟ್‌ಗಳ ಹ್ಯಾಕಿಂಗ್ ಆರೋಪ. ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಜಾಲಕ್ಕೆ 2016ರ ಆಗಸ್ಟ್‌ನಲ್ಲಿ ಕಳವು ಮಾಡಲಾಗಿದೆ ಎಂದು ನೆದರ್ ಲ್ಯಾಂಡ್‌ನ ಆಮ್ ಸ್ಟಾರ್ ಡ್ಯಾಮ್ ಬಿಟ್ ಫಿನೆಕ್ಸ್ ಎಂಬ ಹೆಸರಿನ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ. ಈ ಜಾಲದ ಮೂಲಕ 2 ಸಾವಿರ ಬಿಟ್ ಕಾಯಿನ್‌ಗಳನ್ನು ಕಳವು ಮಾಡಲಾಗಿದೆ ಅನ್ನುವ ಆರೋಪ ಇದೆ.

ರಷ್ಯಾ ಮೂಲದ ಕ್ರಿಪ್ಟೋ ಕರೆನ್ಸಿ ಬಿಟಿಸಿ

ರಷ್ಯಾ ಮೂಲದ ಕ್ರಿಪ್ಟೋ ಕರೆನ್ಸಿ ಬಿಟಿಸಿ

ರಷ್ಯಾ ಮೂಲದ ಕ್ರಿಪ್ಟೋ ಕರೆನ್ಸಿ ಬಿಟಿಸಿ - ಇ 2017 ರಲ್ಲಿ ಸ್ಥಗಿತಗೊಂಡಿದೆ. ಇದರಿಂದ 3 ಸಾವಿರ ಬಿಟ್ ಕಾಯಿನ್‌ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿ ಹೇಳಿದ್ದಾನೆ. ಲುಕ್ಸಂಬರ್ಗ್ ನ ಸಿಸಿಇ ಬಿಟ್ ಸ್ಟ್ಯಾಂಪ್ ವೆಬ್ ಸೈಟ್‌ಗೆ ಕನ್ನಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ಎಷ್ಟು ಪ್ರಮಾಣದ ಬಿಟ್ ಕಾಯಿನ್ ಅನ್ನುವುದನ್ನು ಈತ ಪೊಲೀಸರಿಗೆ ಹೇಳಿಲ್ಲ. ಸಿಸಿ ಪೋರ್ಟಲ್ ಬಿಗ್ ಸೆಂಟರ್ ಕಾರ್ಡ್ ವೆಬ್‌ಗೂ ಈತ ಕನ್ನ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ, ಬಿಟ್ ಕಾಯಿನ್ ಮೈನಿಂಗ್ ಪೂಲ್ ಸ್ಲಷ್ ಪೂಲ್‌ನ ಅಕೌಂಟ್‌ಗೆ ಕನ್ನಹಾಕಿದ್ದೀನಿ ಎಂದು ಹೇಳಿ ಕೊಂಡಿದ್ದಾನೆ. ಆದರೆ ಅದರ ಮೊತ್ತದ ಬಗ್ಗೆ ಹೇಳಿಲ್ಲ.

ಆರೋಪಿ ಕನ್ನ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ

ಆರೋಪಿ ಕನ್ನ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ

ಸಿಸಿ ಕಾಯಿನ್ ಇಎಸ್‌ಎಸ್‌ಎಲ್ 59 ದೇಶಗಳ ಗ್ರಾಹಕರನ್ನು ಹೊಂದಿದೆ. ಇದಕ್ಕೂ ಆರೋಪಿ ಕನ್ನ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಅದರ ಪ್ರಮಾಣವನ್ನೂ ಈತ ಹೇಳಿಲ್ಲ. ಸಿಸಿಇ ಪೇಟಿಸ್ ಎಂಪೆಕ್ಸ್ ಬಿಟ್ ಕಾಯಿನ್ ಸ್ಟಾಕ್ ಟ್ರೇಡಿಂಗ್‌ನ ಪ್ರಮುಖ ಫ್ಲಾಟ್ ಫಾರ್ಮ್ ಎಂದು ಪ್ರಸಿದ್ಧಿ ಪಡೆದಿರುವ ಹ್ಯಾವ್ಲಾಕ್ ಇನ್ ವೆಸ್ಟ್ ಮೆಂಟ್ ಹಾಗೂ ಬಿಟ್ ಕಾಯಿನ್ ಎಕ್ಸ್ ಚೇಂಜ್ ಬಿಟಿಸಿ 2 ಪಿಎಂಎಇ ಅಕೌಂಟ್‌ಗಳಿಗೂ ಕನ್ನ ಹಾಕಲಾಗಿದೆ. ಆದರೆ ಎಷ್ಟು ಕಾಯಿನ್‌ಗಳಿಗೆ ಕನ್ನ ಹಾಕಲಾಗಿದೆ ಅನ್ನುವುದರ ವಿವರ ಗೊತ್ತಾಗಿಲ್ಲ.

ಪೊಲೀಸರು ವಶಪಡಿಸಿಕೊಂಡ ಬಿಟ್‌ಕಾಯಿನ್‌ಗಳ ಕಾಣೆಯಾಗಿದೆ

ಪೊಲೀಸರು ವಶಪಡಿಸಿಕೊಂಡ ಬಿಟ್‌ಕಾಯಿನ್‌ಗಳ ಕಾಣೆಯಾಗಿದೆ

ಜನವರಿ 8, 2021 ರಂದು ಶ್ರೀಕೃಷ್ಣನಿಂದ 31 ಬಿಟ್‌ಕಾಯಿನ್‌ಗಳ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರು ತಮ್ಮ ಪಂಚನಾಮೆಯಲ್ಲಿ ತಿಳಿಸಿರುತ್ತಾರೆ. ಜೊತೆಗೆ ಜನವರಿ 12, 2021 ರಂದು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಖಚಿತಪಡಿಸಿದ್ದಾರೆ. ಅದೇ ರೀತಿ ಜನವರಿ 22, 2021 ರಂದು ಶ್ರೀ ಕೃಷ್ಣನಿಂದ 186 ಬಿಟ್‌ಕಾಯಿನ್‌ಗಳನ್ನು ವಾಪಸ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ವೇಲ್ ಅಲರ್ಟ್ ಇದು ದೊಡ್ಡ ಪ್ರಮಾಣದ ಕ್ರಿಪ್ಟೋಕರೆನ್ಸಿ ವಹಿವಾಟು

ವೇಲ್ ಅಲರ್ಟ್ ಇದು ದೊಡ್ಡ ಪ್ರಮಾಣದ ಕ್ರಿಪ್ಟೋಕರೆನ್ಸಿ ವಹಿವಾಟು

ಬೆಂಗಳೂರು ಪೊಲೀಸರ ಪ್ರಕಾರ 31 ಮತ್ತು 186 ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲಾಗಿಲ್ಲ. ವೇಲ್ ಅಲರ್ಟ್ ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್ ಎಕ್ಸ್ ಚೇಂಜ್ ಸಂಸ್ಥೆಯಿಂದ ಯುಎಸ್‌ಡಿ 704. 8 ಮಿಲಿಯನ್ ಮೌಲ್ಯದ ಸುಮಾರು 14,682.731 ಬಿಟ್‌ ಕಾಯಿನ್‌ಗಳು ವರ್ಗಾವಣೆ ಆಗಿರೋದು ಸ್ಪಷ್ಟವಾಗುತ್ತೆ. ಇದರ ಮೌಲ್ಯ ಸುಮಾರು 5,240 ಕೋಟಿಗಳಷ್ಟಿದೆ.

'ವೇಲ್ ಅಲರ್ಟ್' ಇದು ದೊಡ್ಡ ಪ್ರಮಾಣದ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಟ್ರ್ಯಾಕ್ ಮಾಡುವ ಟ್ವಿಟ್ಟರ್ ಖಾತೆ. ಇದರಲ್ಲಿ ಉಲ್ಲೇಖ ಆಗಿರುವುದು ಏನಂದರೆ, ಡಿಸೆಂಬರ್ 1ರ 2020 ರಂದು ಮತ್ತು ಏಪ್ರಿಲ್ 14, 2021 ರಂದು ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್ ವಿನಿಮಯದ ಪ್ರಕಾರ 2016 ಹ್ಯಾಕ್‌ನಿಂದ ಬಿಟ್‌ಕಾಯಿನ್‌ಗಳು ವರ್ಗಾವಣೆ ಆಗಿದೆ. ಇದರ ಮೌಲ್ಯ USಆ 704.8 ಮಿಲಿಯನ್ USD (ಅಂದರೆ ಇದು ಭಾರತೀಯ ರೂಪಾಯಿಗಳಲ್ಲಿ 5,240 ಕೋಟಿಗಳಿಗೆ ಸಮ) ಈ ಟ್ವೀಟ್‌ಗಳನ್ನು ಅನುಬಂಧ 3 ರಲ್ಲಿ ಗುರುತಿಸಲಾಗಿದೆ.

ವರ್ಗಾವಣೆಯಾದ ಕೆಲ ಬಿಟ್‌ಕಾಯಿನ್‌ಗಳು ಶ್ರೀ ಕೃಷ್ಣನದ್ದೇ ಅನ್ನೋದು ಗೊತ್ತಾಗಿದೆ

ವರ್ಗಾವಣೆಯಾದ ಕೆಲ ಬಿಟ್‌ಕಾಯಿನ್‌ಗಳು ಶ್ರೀ ಕೃಷ್ಣನದ್ದೇ ಅನ್ನೋದು ಗೊತ್ತಾಗಿದೆ

ಬೆಂಗಳೂರು ನಗರ ಪೊಲೀಸರು ಶ್ರೀಕಷ್ಣನನ್ನು ನವೆಂಬರ್ 14ರ 2020 ರಂದು ಬಂಧಿಸಿದರು. (ಅಧಿಕೃತವಾಗಿ ನವೆಂಬರ್ 17, 2020 ರಂದು) ಹಾಗೇ ಏಪ್ರಿಲ್ 14ರ 2021 ರಂದು ಬೆಂಗಳೂರು ಪೊಲೀಸ್ ಕಸ್ಟಡಿಯಲ್ಲಿದ್ದರು. ಈ ವೇಳೆ ಸ್ವತಂತ್ರ ತನಿಖೆ ನಡೆಸಿದಾಗ ವರ್ಗಾವಣೆಯಾದ ಕೆಲ ಬಿಟ್‌ಕಾಯಿನ್‌ಗಳು ಶ್ರೀ ಕೃಷ್ಣನದ್ದೇ ಅನ್ನೋದು ಗೊತ್ತಾಗಿದೆ. ಆನ್‌ಲೈನ್ ಪೋರ್ಟಲ್‌ಗಳ ಹ್ಯಾಕಿಂಗ್ ಮಾಡಲಾಗಿದೆ ಎಂದು ವಿದೇಶಿ ಕಂಪನಿಗಳಿಂದ ಆರೋಪ

ಹ್ಯಾಕ್ ಮಾಡಿದ ವಿವಿಧ ವಿದೇಶಿ ಕಂಪನಿಗಳು ಪೋರ್ಟಲ್‌

ಹ್ಯಾಕ್ ಮಾಡಿದ ವಿವಿಧ ವಿದೇಶಿ ಕಂಪನಿಗಳು ಪೋರ್ಟಲ್‌

ಶ್ರೀ ಕೃಷ್ಣ ತನ್ನ ಸ್ವಯಂ ಹೇಳಿಕೆಯಲ್ಲಿ (ಅನುಬಂಧ 1) ತಾನು ಹ್ಯಾಕ್ ಮಾಡಿದ ವಿವಿಧ ವಿದೇಶಿ ಕಂಪನಿಗಳು ಪೋರ್ಟಲ್‌ಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ. ಮತ್ತು ತಾನು ಅಕ್ರಮವಾಗಿ ಗಳಿಸಿದ ಮಿಲಿಯನ್ ಡಾಲರ್‌ಗಳನ್ನು ಅಂದರೆ (1) RuneScape (2) Tip.It (3) ಸೈಥೆ ( 4) ಜಿಜಿಪೋಕರ್ (5) ಸಿಸಿಐ ಪನಾಮ. ಪೋಕರ್‌ಬಾಜಿ ಎಂದು ಕರೆಯಲ್ಪಡುವ ಭಾರತೀಯ ವೆಬ್ ಸೈಟ್‌ನ್ನು ಕೂಡಾ ಹ್ಯಾಕ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

"ಆಪರೇಷನ್ ಕವರ್‌ಅಪ್”, “ಮರೆಮಾಚುವಿಕೆ”, ವಂಚನೆ ಸಂಚು “ವೈಟ್‌ವಾಶ್”

ಶ್ರೀ ಕೃಷ್ಣ ತನ್ನ ಸ್ವಯಂ ಹೇಳಿಕೆಯಲ್ಲಿ (ಅನುಬಂಧ 1) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಸೈಟ್‌ಗೆ 2019 ರ ಮೇ/ಜೂನ್‌ನಲ್ಲಿ ಬಿಡ್‌ದಾರರ ಮಾಹಿತಿ ಮತ್ತು ಚಾಲ್ತಿಯಲ್ಲಿರುವ ಬಿಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಫೈಲ್‌ಗಳಿಗೂ ಕನ್ನಹಾಕಿ ಹ್ಯಾಕ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರ ಜೊತೆ ಮತ್ತೊಂದು ಸ್ವಯಂ ಹೇಳಿಕೆ ನೀಡಿದ್ದು ಇದರಲ್ಲಿ ತಾನು 18 ಕೋಟಿ ಮತ್ತು 28 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿರುವುದಾಗಿ ಹೇಳಿದ್ದಾನೆ.

"ಆಪರೇಷನ್ ಕವರ್‌ಅಪ್", "ಮರೆಮಾಚುವಿಕೆ", ವಂಚನೆ ಸಂಚು "ವೈಟ್‌ವಾಶ್", ಕರ್ನಾಟಕದ ಅಧಿಕಾರಸ್ಥರ ಮೇಲೆ ಗಂಭೀರ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತವೆ. 2021 ರ ನವೆಂಬರ್ 11 ರಂದು ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮತ್ತು ಗೃಹ ಸಚಿವರನ್ನ ಭೇಟಿ ಮಾಡಿದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಡೀ ವಿಷಯದ ಬಗ್ಗೆ ಮೌನವಾಗಿರುವುದು ಇನ್ನಷ್ಟು ಆಘಾತಕಾರಿಯಾಗಿದೆ.

ಬಿಟ್‌ಕಾಯಿನ್ ಕವರ್ ಅಪ್ ಸ್ಕ್ಯಾಮ್

ಬಿಟ್‌ಕಾಯಿನ್ ಕವರ್ ಅಪ್ ಸ್ಕ್ಯಾಮ್" ನಲ್ಲಿ ಹಿಂದಿರೋರು ಯಾರು?

1. ಬಿಟ್‌ಕಾಯಿನ್ ಕವರ್ ಅಪ್ ಸ್ಕ್ಯಾಮ್" ನಲ್ಲಿ ಹಿಂದಿರೋರು ಯಾರು?

2. ಕಳುವಾಗಿದೆ ಎನ್ನಲಾಗುತ್ತಿರುವ ಬಿಟ್‌ಕಾಯಿನ್‌ಗಳನ್ನು ಆಪಾದಿತ ಹ್ಯಾಕರ್ ಶ್ರೀ ಕೃಷ್ಣನ ವ್ಯಾಲೆಟ್‌ನಿಂದ ವರ್ಗಾಯಿಸಲಾಗಿದೆಯೇ? ಹಾಗಿದ್ದರೆ ಎಷ್ಟು ಬಿಟ್‌ಕಾಯಿನ್‌ಗಳು ಮತ್ತು ಅದರ ಮೌಲ್ಯ ಎಷ್ಟು ? ಇನ್ನು ಪೊಲೀಸ್ ವ್ಯಾಲೆಟ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾದ 31 ಮತ್ತು 186 ಬಿಟ್‌ಕಾಯಿನ್‌ಗಳು ಕಳೆದುಹೋಗಿವೆಯಾ ಅಥವಾ ನಕಲಿ ವಹಿವಾಟುಗಳು ನಡೆದಿದೆಯಾ ಇದನ್ನು (22ನೇ ಜನವರಿ 2021 ರ ಮೂರನೇ ಪಂಚನಾಮದಲ್ಲಿ) ಹೇಗೆ ಸೂಚಿಸುತ್ತಾರೆ?

3. ವೇಲ್ ಅಲಾರ್ಟ್ಸ ಮಾಹಿತಿಯಂತೆ 14,682 ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳ ವರ್ಗಾವಣೆಯನ್ನ ಎರಡು ದಿನಾಂಕಗಳಲ್ಲಿ ಅಂದರೆ ಡಿಸೆಂಬರ್ 1ರ 2020 ರಂದು 5,240 ಕೋಟಿ ರೂಪಾಯಿ ಹಾಗೂ 14 ಏಪ್ರಿಲ್, 2021, ಶ್ರೀ ಕೃಷ್ಣ ಮಾಡಲಾಗಿದೆ. ಇದು ಶ್ರೀ ಕೃಷ್ಣ ಬಂಧನದಲ್ಲಿ ಇದ್ದಾಗ ನಡೆದಿದೆ. ವರ್ಗಾವಣೆಗೊಂಡ ಕೆಲವು ಬಿಟ್‌ಕಾಯಿನ್‌ಗಳು ಶ್ರೀಕೃಷ್ಣನ ವ್ಯಾಲೆಟ್‌ನಿಂದ ಬಂದಿದ್ದರೆ ಅದನ್ನು ತನಿಖೆ ಮಾಡಲಾಗಿದೆಯೇ?

ಬಸವರಾಜ ಬೊಮ್ಮಾಯಿ ಉಸ್ತುವಾರಿ ಗೃಹ ಸಚಿವರಾಗಿದ್ದವರು

ಬಸವರಾಜ ಬೊಮ್ಮಾಯಿ ಉಸ್ತುವಾರಿ ಗೃಹ ಸಚಿವರಾಗಿದ್ದವರು

4. ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಬಂಧಿತ ಸಮಯದಲ್ಲಿ ಉಸ್ತುವಾರಿ ಗೃಹ ಸಚಿವರಾಗಿದ್ದವರು) ಮತ್ತು ಇತರರ ಪಾತ್ರ ಮತ್ತು ಜವಾಬ್ದಾರಿ ಏನು?

5. ಸ್ಪಷ್ಟ ಅಂತರಾಷ್ಟ್ರೀಯ ಕವಲುಗಳಿರುವ ಇಂತಹ ದೊಡ್ಡ ಅಪರಾಧಗಳ ಹೊರತಾಗಿಯೂ ಇಂಟರ್‌ಪೋಲ್‌ಗೆ ಏಕೆ ಮಾಹಿತಿ ನೀಡಲಿಲ್ಲ? 2021ರ ಏಪ್ರಿಲ್ 17ರಂದು ಶ್ರೀಕೃಷ್ಣನ ಬಿಡುಗಡೆಯಾದ ನಂತರವೂ ಇಂಟರ್‌ಪೋಲ್‌ಗೆ ಪತ್ರ ಬರೆಯಲು ಬಿಜೆಪಿ ಸರ್ಕಾರ 24ನೇ ಏಪ್ರಿಲ್ 2021ರವರೆಗೆ ಐದು ತಿಂಗಳವರೆಗೆ ಏಕೆ ಕಾದು ಕುಳಿತಿತ್ತು.

6. ಕರ್ನಾಟಕ ಬಿಜೆಪಿ ಸರ್ಕಾರದಿಂದ NIA/SFIO/ED ಏಕೆ ತಿಳಿಸಲಾಗಿಲ್ಲ?

English summary
Bitcoin Scandal In Karnataka: KPCC Incharge Randeep Surjewala 6 Questions To CM Bommai. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X