• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Who is Lt Gen Anil Chauhan : ಭಾರತದ ನೂತನ ಸಿಡಿಎಸ್ ಅನಿಲ್ ಚೌಹಾಣ್ ನಡೆದು ಬಂದ ದಾರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ದುರಂತ ಸಾವಿನ ನಂತರ ಖಾಲಿಯಾಗಿದ್ದ ಹುದ್ದೆಗೆ ಒಂಬತ್ತು ತಿಂಗಳ ನಂತರ ಲೆಫ್ಟಿನೆಂಟ್ ಜನರಲ್(ನಿವೃತ್ತ) ಅನಿಲ್ ಚೌಹಾಣ್ ಅನ್ನು ನೇಮಿಸಲಾಗಿದೆ.

"ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಅವರನ್ನು ಮುಂದಿನ ರಕ್ಷಣಾ ಸಿಬ್ಬಂದಿಯಾಗಿ (ಸಿಡಿಎಸ್) ನೇಮಿಸಲು ಸರ್ಕಾರ ನಿರ್ಧರಿಸಿದೆ. ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ'' ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

Breaking; ಲೆ. ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಸಿಡಿಎಸ್ ಮುಖ್ಯಸ್ಥBreaking; ಲೆ. ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಸಿಡಿಎಸ್ ಮುಖ್ಯಸ್ಥ

ದೇಶದ ರಕ್ಷಣಾ ಸಿಬ್ಬಂದಿಯ ಹೊಸ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಚೌಹಾಣ್ ಅನ್ನು ಬುಧವಾರ ಹೆಸರಿಸಲಾಗಿದೆ. ಅವರನ್ನು ಸಿಡಿಎಸ್ ಆಗಿ ನೇಮಕ ಮಾಡಿರುವುದಾಗಿ ರಕ್ಷಣಾ ಸಚಿವಾಲಯವು ಪ್ರಕಟಣೆ ಹೊರಡಿಸಿದೆ. ಹಾಗಿದ್ದರೆ ಈ ಅನಿಲ್ ಚೌಹಾಣ್ ಯಾರು?, ದೇಶದ ಭದ್ರತಾ ಸೇವೆಯಲ್ಲಿ ಅವರು ನಡೆದು ಬಂದಿರುವ ಹಾದಿ ಹೇಗಿದೆ?, ಅವರ ಮೂಲ ಯಾವುದು ಎಂಬುದು ಸೇರಿದಂತೆ ಚೌಹಾಣ್ ಸಾಧನೆ ಹಾದಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸೇನಾ ಸೇವೆಯಲ್ಲಿ 40 ವರ್ಷಗಳ ಅನುಭವ

ಸೇನಾ ಸೇವೆಯಲ್ಲಿ 40 ವರ್ಷಗಳ ಅನುಭವ

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾನ್ 40 ವರ್ಷಗಳ ಮಿಲಿಟರಿ ವೃತ್ತಿಜೀವನದ ಅನುಭವವನ್ನು ಹೊಂದಿದ್ದಾರೆ. ಇದರಲ್ಲಿ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ನೇಮಕಾತಿ ಅಧಿಕಾರವನ್ನು ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಂತಹ ಪ್ರದೇಶಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

ಅನಿಲ್ ಚೌಹಾಣ್ ಬೆಳವಣಿಗೆ ಹಾದಿ

ಅನಿಲ್ ಚೌಹಾಣ್ ಬೆಳವಣಿಗೆ ಹಾದಿ

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ 1961ರ ಮೇ 18ರಂದು ಜನಿಸಿದರು. 1981ರಲ್ಲಿ ಅವರು ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲ್ಪಟ್ಟರು.

ಲೆಫ್ಟಿನೆಂಟ್ ಜನರಲ್ ಚೌಹಾಣ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA), ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ (IMA), ಡೆಹ್ರಾಡೂನ್‌ನ ಹಳೆಯ ವಿದ್ಯಾರ್ಥಿ ಆಗಿದ್ದರು. ಅವರು ಮೇಜರ್ ಜನರಲ್ ಶ್ರೇಣಿಯಲ್ಲಿ ಉತ್ತರ ಕಮಾಂಡ್‌ನಲ್ಲಿ ನಿರ್ಣಾಯಕ ಬಾರಾಮುಲ್ಲಾ ಸೆಕ್ಟರ್‌ನಲ್ಲಿ ಪದಾತಿದಳ ವಿಭಾಗಕ್ಕೆ ಕಮಾಂಡರ್ ಆಗಿದ್ದರು.

ಕಳೆದ 2021ರ ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿ

ಕಳೆದ 2021ರ ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿ

ಲೆಫ್ಟಿನೆಂಟ್ ಜನರಲ್ ಆಗಿ ತಮ್ಮ ವೃತ್ತಿಜೀವನದ ನಂತರ ಈಶಾನ್ಯದಲ್ಲಿ ಕಾರ್ಪ್ಸ್ ಅನ್ನು ಕಮಾಂಡ್ ಮಾಡಿದರು. ನಂತರ ಅವರು ಸೆಪ್ಟೆಂಬರ್ 2019 ರಿಂದ ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ನೇಮಕಗೊಂಡರು. ಮೇ 2021ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ ಅನಿಲ್ ಚೌಹಾಣ್ ಅಧಿಕಾರವನ್ನು ಹೊಂದಿದ್ದರು.

ಕಮಾಂಡ್ ನೇಮಕಾತಿಗಳ ಹೊರತಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ತಮ್ಮ ವೃತ್ತಿಜೀವನದಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಸೇರಿದಂತೆ ಪ್ರಮುಖ ಸಿಬ್ಬಂದಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂಗೋಲಾಕ್ಕೆ ವಿಶ್ವಸಂಸ್ಥೆಯ ಮಿಷನ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ಮೇ 31, 2021 ರಂದು ಭಾರತೀಯ ಸೇನೆಯಿಂದ ನಿವೃತ್ತರಾದರು. ಭಾರತೀಯ ಸೇನೆಯಿಂದ ನಿವೃತ್ತರಾದ ನಂತರವೂ ಹೊಸ ಸಿಡಿಎಸ್ ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದರು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಲೆ. ಜನರಲ್ ಅನಿಲ್ ಚೌಹಾಣ್ ಸೇವೆಗೆ ಸಂದ ಗೌರವ

ಲೆ. ಜನರಲ್ ಅನಿಲ್ ಚೌಹಾಣ್ ಸೇವೆಗೆ ಸಂದ ಗೌರವ

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ ಹಲವು ಪದಕಗಳನ್ನು ನೀಡಿ ಗೌರವಿಸಲಾಗಿದೆ. ಈ ಪೈಕಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಲಾಗಿದೆ.

English summary
Biography: Who is India new CDS Lt Gen Anil Chauhan (Retd), named Gen Bipin Rawat's successor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X