ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವವೈವಿಧ್ಯವನ ಭಾಗ 10: ನೀರು ಇಂಗಿಸುವ ಭಗೀರತ ಪ್ರಯತ್ನ-ಯಶ ಕಂಡಾಗ

By ನಾಗೇಶ್.ಕೆ.ಎನ್
|
Google Oneindia Kannada News

1. ಜ್ಞಾನಭಾರತಿ ಆವರಣದ ಜೀವವೈವಿಧ್ಯ ವನದಲ್ಲಿ ಮಳೆ ನೀರು ಸಂಗ್ರಹಕ್ಕೆ ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ ?

ರೇಣುಕಾ ಪ್ರಸಾದ್: ಜ್ಞಾನಭಾರತಿ ಆವರಣ ಜ್ಞಾನ ಭಂಡಾರವಷ್ಟೇ ಅಲ್ಲ. ಇಲ್ಲೊಂದು ಜಲ ಭಂಡಾರವೂ ಇದೆ. ಬಿದ್ದ ಮಳೆ ನೀರನ್ನು ಓಡಲು ಬಿಡದೆ ಹಿಡಿದಿಡುವ ಸಾಮರ್ಥ್ಯ ಉಳ್ಳ ಪ್ರದೇಶವಾಗಿ ಆವರಣ ರೂಪುಗೊಂಡಿದೆ. ಇಲ್ಲಿನ ಭೂಪದರಗಳು-ಭೂರಚನೆ ಇದಕ್ಕೆ ಸಹಕಾರಿ. ಭೌಗೋಳಿಕವಾಗಿಯೂ ಇದೊಂದು ಪ್ರಶಸ್ತ ಪ್ರದೇಶ. ಇವೆಲ್ಲಾ ಅಂಶಗಳನ್ನು ಗಣಿಸಿದಲ್ಲಿ ಮಳೆ ನೀರು ಸಂಗ್ರಹಕ್ಕೆ ಜ್ಞಾನಭಾರತಿ ಆವರಣ ಹೇಳಿ ಮಾಡಿಸಿದ ಪ್ರದೇಶವೆನ್ನಬಹುದು. ಹಾಗಾಗಿ ಇಲ್ಲಿ ಚೆಕ್ ಡ್ಯಾಮ್, ಒಡ್ಡು, ನಾಲಾ ಬದು, ಕಲ್ಯಾಣಿ, ತಾರಸಿ ಮಳೆ ನೀರು ಸಂಗ್ರಹ, ಬಿಂದು ಮರುಪೂರಣ ಇತ್ಯಾದಿ ರಚನೆಗಳ ಮೂಲಕ ಇಲ್ಲಿ ಜಲಸಂರಕ್ಷಣಾ ಕಾರ್ಯ ನಡೆದಿದೆ.

ಜೀವವೈವಿಧ್ಯವನ ಭಾಗ 8; ಜೀವವೈವಿಧ್ಯವನ ಭಾಗ 8; "ಜ್ಞಾನಭಾರತಿ ಆವರಣದ ವನ ಕಡಿಯದಂತೆ ಸರ್ಕಾರ ಸುಗ್ರೀವಾಜ್ಞೆ ತರಲಿ"

2. ವಾರ್ಷಿಕ ಎಷ್ಟು ಪ್ರಮಾಣದ ಮಳೆ ಬೀಳುತ್ತದೆ ? ಮಳೆ ನೀರಿ ಹಿಡಿದಿಡುವ ಪ್ರಮಾಣವೆಷ್ಟು?

ರೇಣುಕಾ ಪ್ರಸಾದ್: ಈ ಪ್ರದೇಶದಲ್ಲಿ ವಾರ್ಷಿಕವಾಗಿ ಬೀಳುವ ಮಳೆ ಸುಮಾರು 900 mm. ಇದರ ಶೇಕಡಾ 60 ರಷ್ಟು ಪ್ರಮಾಣ ವಿವಿಧ ರಚನೆಗಳ ಮೂಲಕ ಹಿಡಿದಿಡಲಾಗುತ್ತಿದೆ. ಇದರ ಮೊತ್ತ ಸುಮಾರು ಒಂದು ಲಕ್ಷ ಅರವತ್ತು ಸಾವಿರ ಘನ ಕ್ಯೂಬಿಕ್ ಮೀಟರ್ ಎಂದು ಅಂದಾಜು ಮಾಡಲಾಗಿದೆ.

Biodiversity Part 10: Attempt To Conserve Water At Gnanabharathi Success


3. ಕೆರೆ ಕಟ್ಟೆ ಕಲ್ಯಾಣಿ ಚೆಕ್ ಡ್ಯಾಂ ಗಳ ಸಂಖ್ಯೆ ಅವುಗಳ ಉದ್ದಗಲ, ನೀರಿ ಹಿಡಿದಿಡುವ ಪ್ರಮಾಣ. ಭೂಮಿಗೆ ಹಿಂಗುವ ಪ್ರಮಾಣದ ಬಗ್ಗೆ ತಿಳಿಸಿ?

Phase I : Central Ground Water Board funding:

• Catchment area- about one sq.km

• Structures - 3 check dams

• Run-off harvested - 43,290 cu.m /anum

• Unit cost 20 paise per 1000 litres of water

• Capacity of CD's 1200 to 4000 cu.m per filling.

Total Annual Recharge = 1200000 cu.m= 12 Cr litres

• Cost of the project : 13.5 lakhs

Phase II : Central Ground Water Board funding:

• Catchment area- 0.6 sq.km

• Structures - 2 check dams & one vertical shaft

• Run-off harvested - 112000 cu.m /annum

• Unit cost Paise 30 per 1000 litres of water

• Capacity of CD's 8500 to 16750 cu.m per filling &

Total Recharge 167500 cum.m = 1,675 Cr litres

• Cost of the project : 29.55 lakhs

Phase III: Collins Aeronautics Co. funding:
Check Dam -3 Cr liters
Boulder check -1 Cr litres
Check dam repair - Earlier subsurface dyke CD
Water Pool - 1 Cr liters
Recharge Wells (8 Nos.) - 3.5 Cr litres
Point Recharge Structure - 3.5 Cr litrs
Total Recharge- 12 Cr litres
Planting around Boulder Check & Water Pool - 500 Diversified plants
Total Expenditure - 36.42 lakhs

Total recharge from all the three phases Annually = Around 26 Cr litres
Total cost for all the Recharge structures = 79 .47 lakhs


Additional Phases:
Recharge Enhancement of Subsurface dyke - Rs. 30,000/-
ರೋಟರಿ, ಜಯನಗರ ಅವರಿಂದ ಚೆಕ್ ಅಣೆಕಟ್ಟು 1 ಮೀ ಹೆಚ್ಚಾಗಿದೆ

ರವೀಂದ್ರ ಅವರಿಂದ ಅಣೆಕಟ್ಟು ಹಾನಿ ನಿಯಂತ್ರಣವನ್ನು ಪರಿಶೀಲನೆ - ರೂ .10000
ವಾಟರ್ ಪೂಲ್ ಬಳಿ ಬೋರ್ ವೆಲ್ ಪಾಯಿಂಟ್ ರೀಚಾರ್ಜ್ - ರೂ, 43,000
ಶ್ರೀ ರಾಜು ಅವರಿಂದ.

ಶ್ರೀ ರಾಜು ಅವರಿಂದ ನೀರಿನ ಬಾವಿ ಬಳಿ ಬೋರ್ ವೆಲ್ - ರೂ. 1,01,000 / -

ಹೊಂಬಾಳೆ ಕನ್ಸ್ಟ್ರಕ್ಷನ್ ನಿಂದ ಪಂಪ್ ಸೆಟ್ - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ

ವಿದ್ಯುತ್ ಸಂಪರ್ಕದೊಂದಿಗೆ ಬೋರೆವೆಲ್ ಮತ್ತು ಪಂಪ್ - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ
BISSAE Co. in the fruit Garden

ವಿದ್ಯುತ್ ಸಂಪರ್ಕದೊಂದಿಗೆ ಪಂಪ್ ಸೆಟ್ ಮತ್ತು ಬೋರ್ ವೆಲ್ - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ
by Olety Construction for Appemidi vana

ಶ್ರೀ ರಮೇಶ್ ಭಟ್ ಅವರಿಂದ ಟೆರೆಗಾವೊ ಮಾವು ಮತ್ತು ಇತರ ಸಸ್ಯಗಳಿಗೆ ಬೋರ್ ವೆಲ್ - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ

ಹೀರೋ ಮೋಟಾರ್‌ಗಳಿಂದ ನಾಲ್ಕು ಬೋರ್‌ವೆಲ್‌ಗಳು - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ
Intense planting four patches

ಬಯೋಪಾರ್ಕ್ 2 ಗಾಗಿ ಶ್ರೀ ಮೃತ್ಯುಂಜಯರಿಂದ ಹನಿ ನೀರಾವರಿಗಾಗಿ ವಾಟರ್ ಟ್ಯಾಂಕ್ - ವೆಚ್ಚವನ್ನು ಬಹಿರಂಗಪಡಿಸಿಲ್ಲ

ಶ್ರೀ ಸೆಂಥಿಲ್ ಅವರು ಪಂಪ್‌ನೊಂದಿಗೆ ಸಿಸ್ಟರ್ನ್ - ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲ
For MIyawaki

ಶ್ರೀ ಮೃತ್ಯುಂಜಯ ಅವರಿಂದ ಹನಿ ನೀರಾವರಿ - ವೆಚ್ಚವನ್ನು ಬಹಿರಂಗಪಡಿಸಿಲ್ಲ
ಸುಮಾರು 20000 ಸಸ್ಯಗಳು

ಬಯೋಪಾರ್ಕ್ 2 ರಲ್ಲಿ ವಾಕರ್ಸ್‌ನಿಂದ ಹನಿ ನೀರಾವರಿ - ರೂ .43000

Recharge further enhancement - Around 5 Cr litres

ಅಂದಾಜು 21 ಲಕ್ಷ ವೆಚ್ಚ

ಎಲ್ಲರೂ 2000ನೇ ಇಸವಿಯಿಂದ 30 ಕೋಟಿ ನೀರು ಕೊಯ್ಲಿಗಾಗಿ ಒಂದು ಕೋಟಿ ರೂ.ಗಿಂತ ಹೆಚ್ಚಿನದನ್ನು ಒಟ್ಟುಗೂಡಿಸಿದ್ದಾರೆ. ವಿಶ್ವವಿದ್ಯಾಲಯವು ಇದಕ್ಕಾಗಿ ಯಾವುದೇ ಮೊತ್ತವನ್ನು ಖರ್ಚು ಮಾಡಿಲ್ಲ.

4. ಜಲಸಂರಕ್ಷಣಾ ಕಾರ್ಯಗಳಿಗೂ ಮುನ್ನ ಈ ಪ್ರದೇಶದ ಅಂತರ್ಜಲ ಮಟ್ಟ ಎಷ್ಟಿತ್ತು ? ಈಗ ಎಷ್ಟಿದೆ?

Biodiversity Part 10: Attempt To Conserve Water At Gnanabharathi Success

ರೇಣುಕಾ ಪ್ರಸಾದ್: ಜಲಸಂರಕ್ಷಣಾ ಕಾರ್ಯಗಳಿಗೂ ಮುನ್ನ ಅಂತರ್ಜಲ ಮಟ್ಟ ಸುಮಾರು 20 ರಿಂದ 30 ಮೀಟರ್ಸ್ ಇತ್ತು. ಕಾರ್ಯಕ್ರಮ ಹಮ್ಮಿಕೊಂಡ ನಂತರ ಅಂತರ್ಜಲ 2 ರಿಂದ 5 ಮೀಟರ್ ಸುಧಾರಣೆ ಕಂಡುಬಂದಿದೆ. ಇದಕ್ಕಿಂತಲೂ ಮುಖ್ಯವಾಗಿ ಸತತವಾಗಿ ಇಳಿಯುತ್ತಿದ್ದ ಅಂತರ್ಜಲ ಮಟ್ಟವು ಮಳೆ ನೀರು ಸಂಗ್ರಹಣೆ ಮತ್ತು ಮರುಪೂರಣಾ ಕಾರ್ಯಕ್ರಮದಿಂದಾಗಿ ಹತೋಟಿಗೆ ಬಂದಿರುವುದು ಅಧ್ಯಯನಗಳ ಮ್ಲಕ ಸಾಬೀತಾಗಿದೆ.

Recommended Video

ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada
Biodiversity Part 10: Attempt To Conserve Water At Gnanabharathi Success

5. ಜಲಸಂರಕ್ಷಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಿ

ರೇಣುಕಾ ಪ್ರಸಾದ್: ಜ್ಞಾನಭಾರತಿ ಆವರಣ ಬೆಂಗಳೂರು ನಗರದ ಒಂದು ಪ್ರಮುಖ ಹಸಿರು ಭೂಪ್ರದೇಶ. ಸಾಕಷ್ಟು ಆಮ್ಲಜನಕವನ್ನು ವಾತಾವರಣಕ್ಕೆ ಒದಗಿಸುವ ಪ್ರದೇಶ. ಇಲ್ಲಿನ ವಿಶೇಷವೆಂದರೆ ಜಲಸಂರಕ್ಷಣೆಯೊಂದಿಗೆ ಹಸಿರು ಗಿಡ ಮರಗಳ ಸಂರಕ್ಷಣೆ. ಇದಲ್ಲದೆ ವಿವಿಧ ರೀತಿಯ ಕಲ್ಲಿನ ರಚನೆಗಳೂ ಇಲ್ಲಿ ಮಾಡಲಾಗಿದೆ. ಇದೊಂದು ಮಹತ್ವದ ಕೆಲಸ. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಇದೊಂದು ಅಧ್ಯಯನ ಯೋಗ್ಯ ಸ್ಥಳವಾಗಿದೆ. ವರ್ಷೊಂಬತ್ತು ಕಾಲ ಹಸಿರು ಹೊದ್ದು ನಳನಳಿಸುವ ಇಂಥದೊಂದು ಜೈವಿಕ ವನವನ್ನು ಬೆಂಗಳೂರಿನಂಥ ಕಾಂಕ್ರೀಟ್ ಕಾಡಿನಲ್ಲಿ ಬೆಳೆಸಿ ಉಳಿಸಿರುವುದು ಬಹು ದೊಡ್ಡ ಕೆಲಸವೆಂದೇ ಹೇಳಬೇಕು. ಇದನ್ನು ಉಳಿಸಿಕೊಳ್ಳುವುದು ಎಲ್ಲಾ ಪ್ರಾಜ್ಞರ ಕರ್ತವ್ಯವಾಗಬೇಕು.

English summary
An area devoted to rain water harvesting is Gnanabharathi Campus. Water conservation work has been done here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X