• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಅಭ್ಯರ್ಥಿಯ ಆಸ್ತಿ 5 ವರ್ಷದಲ್ಲಿ ಶೇ 144ರಷ್ಟು ಹೆಚ್ಚಳ

|

ಪಾಟ್ನಾ, ಅ. 23: ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಶಾಸಕ ಅನಂತ್ ಕುಮಾರ್ ಸಿಂಗ್ ಅವರು ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರು. ಕಳೆದ ಐದು ವರ್ಷಗಳಲ್ಲಿ ಅನಂತ್ ಕುಮಾರ್ ಅವರ ಆಸ್ತಿ ಮೌಲ್ಯ ಶೇ 144ರಷ್ಟು ಏರಿಕೆಯಾಗಿದೆ ಎಂದು ಅಸೋಸಿಯೇಷನ್ ಫಾರ್ಡ್ ಡೆಮಾಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ನೀಡಿದೆ.

ಸಿಂಗ್ ಅವರ ಆಸ್ತಿ ಮೌಲ್ಯ 2015ರಲ್ಲಿ 28ಕೋಟಿ ರು ಇದ್ದದ್ದು ಈಗ 68 ಕೋಟಿ ರುಗೇರಿದೆ. ಸ್ಥಿರಾಸ್ತಿ(ಕೃಷಿ, ಕೃಷಿಯೇತರ ಭೂಮಿ, ವಾಣಿಜ್ಯ, ವಸತಿ ಕಟ್ಟಡ) ಮೌಲ್ಯ 50 ಕೋಟಿ ರು ಹಾಗೂ ಚರಾಸ್ತಿ 18 ಕೋಟಿ ರು ಇದೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊಕಮಾ ಜೈಲಿನಲ್ಲಿದ್ದುಕೊಂಡು ಗೆಲುವು ದಾಖಲಿಸಿದ್ದರು.

ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ

ಕಾಂಗ್ರೆಸ್ಸಿನ ಬಾರ್ಬಿಗಾ ಅಭ್ಯರ್ಥಿ ಗಜಾನಂದ್ ಸಹ್ನಿ ಒಟ್ಟಾರೆ 61 ಕೋಟಿ ರು ಹೊಂದಿದ್ದು ಮತ್ತೊಬ್ಬ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ.

ಜೆಡಿಯು ಪಕ್ಷದ ಮನೋರಮಾ ದೇವಿ ಘೋಷಿತ ಆಸ್ತಿ 50 ಕೋಟಿ ರು ಲೆಕ್ಕ ತೋರಿಸಿದ್ದಾರೆ. ಆದರೆ, 89.77 ಕೋಟಿ ರು ಎಂದು ಮಾಹಿತಿ ಇದೆ. ವಜೀರ್ ಗಂಜ್ ನಿಂದ ಸ್ಪರ್ಧಿಸಿರುವ ರಾಜೇಂದ್ರ ಕುಮಾರ್ ವರ್ಮಾ 50 ಕೋಟಿ ರು ಆಸ್ತಿ ತೋರಿಸಿದ್ದಾರೆ.

ಬಿಹಾರ ಕಣದಲ್ಲಿ ನರೇಶ್ ದಾಸ್ (ಎಸ್ ಯು ಸಿಐ-ಸಿ) ಆರ್ಥಿಕವಾಗಿ ಅತ್ಯಂತ ಬಡ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಅವರ ಘೋಷಿತ ಆಸ್ತಿ ಮೌಲ್ಯ 3,500 ರು ದಾಟುವುದಿಲ್ಲ. ಇನ್ನು ಗಯಾ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಲೋಕ್ ಜನ ಪಕ್ಷ (ಸೆಕ್ಯುಲರ್) ದ ರಿಂಕು ಕುಮಾರ್ ಅವರು 2,700 ರು ಎಂದು ಆಸ್ತಿ ಘೋಷಿಸಿದ್ದಾರೆ. ಜೆಎಪಿಯ ಅನಿಲ್ ಕುಮಾರ್ ಆಸ್ತಿ 7,000 ರು ಇದೆ.

ಒಟ್ಟು 375 ಕೋಟ್ಯಧಿಪತಿಗಳು
ಬಿಹಾರದಲ್ಲಿ ಒತ್ತು 1064 ಅಭ್ಯರ್ಥಿಗಳಿದ್ದು, ಶೇ 35ರಷ್ಟು 375 ಮಂದಿ ಕೋಟ್ಯಧಿಪತಿಗಳಿದ್ದಾರೆ. ಆರ್ ಜೆ ಡಿಯಲ್ಲಿ ಶೇ 95ರಷ್ಟು ಮಂದಿ (41) 1 ಕೋಟಿ ರುಗೂ ಅಧಿಕ ಆಸ್ತಿ ಹೊಂದಿದ್ದಾರೆ. ಜೆಡಿಯು ಪಕ್ಷದಲ್ಲಿ 35ರಲ್ಲಿ 31 ಮಂದಿ (89%) 1 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದಾರೆ. ಒಟ್ಟಾರೆ ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 1.99 ಕೋಟಿ ರು ಎಂದು ವರದಿ ಬಂದಿದೆ.

English summary
RJD MLA Anant Kumar Singh is the wealthiest candidate in phase one of the upcoming Bihar Assembly elections. Singh, who was the third-richest candidate in the last election, saw about a 144% jump in his assets in the last five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X