ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್‌ಗೆ ಮತ್ತೊಂದು ಅವಕಾಶ ಬೇಕೆ?

|
Google Oneindia Kannada News

ಪಾಟ್ನಾ, ಅಕ್ಟೋಬರ್ 20 : ಬಿಹಾರದಲ್ಲಿ ನಿತೀಶ್ ಕುಮಾರ್‌ಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಶೇ 31ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ಬಂದಿದೆ.

ಮಂಗಳವಾರ ಇಂಡಿಯಾ ಟುಡೇ- ಆಜ್ ತಕ್ ಸಂಸ್ಥೆ ಜೊತೆಗೆ ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಗೆ ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಚುನಾವಣೆ ನಡೆಯಲಿದೆ.

ಲೋಕನೀತಿ-ಸಿಎಸ್ಡಿಎಸ್ ಅಭಿಮತ: ಬಿಹಾರಕ್ಕೆ ನಿತೀಶ್ ಸಿಎಂ ಲೋಕನೀತಿ-ಸಿಎಸ್ಡಿಎಸ್ ಅಭಿಮತ: ಬಿಹಾರಕ್ಕೆ ನಿತೀಶ್ ಸಿಎಂ

ಅಕ್ಟೋಬರ್ 10 ರಿಂದ 17ರ ಅವಧಿಯಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ವರದಿ ಇಂದು ಪ್ರಕಟವಾಗಿದೆ. ಪ್ರಸ್ತುತ ಬಿಹಾರ ಮುಖ್ಯಮಂತ್ರಿಯಾಗಿರುವ ನಿತೀಶ್‌ ಕುಮಾರ್‌ಗೆ ಮತ್ತೊಂದು ಅವಕಾಶ ಕೊಡಬೇಕೆ? ಎಂದು ಜನರನ್ನು ಪ್ರಶ್ನಿಸಲಾಗಿತ್ತು.

ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?

ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮಹಾಘಟಬಂಧನ್ ಮಾಡಿಕೊಂಡಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇದರಲ್ಲಿವೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿದೆ. ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿವೆ.

ಬಿಹಾರ ವಿಧಾನಸಭೆ ಚುನಾವಣೆ; ಮೋದಿಯಿಂದ 12 ಸಮಾವೇಶ ಬಿಹಾರ ವಿಧಾನಸಭೆ ಚುನಾವಣೆ; ಮೋದಿಯಿಂದ 12 ಸಮಾವೇಶ

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಪಕ್ಷ ಬಿಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದೆ.

ಮತ್ತೊಂದು ಅವಧಿಗೆ ಸಿಎಂ ಆಗಲಿ

ಮತ್ತೊಂದು ಅವಧಿಗೆ ಸಿಎಂ ಆಗಲಿ

ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಶೇ 31ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಶೇ 26ರಷ್ಟು ಜನರು ಮತ್ತೊಂದು ಅವಕಾಶ ಬೇಡ ಎಂದು ಹೇಳಿದ್ದಾರೆ. ಹೊಸ ನಾಯಕ ಬೇಕು ಎಂದು ಶೇ 34ರಷ್ಟು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಬಿಜೆಪಿಯ ಪರವಾಗಿ ಮತ ಚಲಾವಣೆ ಮಾಡುವ ಶೇ 58ರಷ್ಟು ಜನರು ಮಾತ್ರ ನಿತೀಶ್ ಕುಮಾರ್‌ಗೆ ಮತ್ತೊಂದು ಅವಕಾಶ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್

ಬಿಹಾರದಲ್ಲಿ ಜನಪ್ರಿಯ ನಾಯಕ ಯಾರು?

ಬಿಹಾರದಲ್ಲಿ ಜನಪ್ರಿಯ ನಾಯಕ ಯಾರು?

ಬಿಹಾರದಲ್ಲಿ ಜನಪ್ರಿಯ ನಾಯಕ ಯಾರು? ಎಂದು ಜನರನ್ನು ಪ್ರಶ್ನೆ ಮಾಡಲಾಗಿತ್ತು. ನಿತೀಶ್ ಕುಮಾರ್ ಪರವಾಗಿ ಶೇ 31ರಷ್ಟು ಜನರು ಮತ ನೀಡಿದ್ದಾರೆ. ಲಾಲೂ ಪ್ರಸಾದ್ ಯಾದವ್ ಕುಟುಂಬದ ಪರವಾಗಿ ಶೇ 30ರಷ್ಟು ಜನರು ಮತ ನೀಡಿದ್ದಾರೆ. 2015ರಲ್ಲಿ ನಿತೀಶ್ ಕುಮಾರ್ ಪರ ಶೇ 40, ಲಾಲೂ ಪ್ರಸಾದ್ ಕುಟುಂಬದ ಪರ ಶೇ 9ರಷ್ಟು ಜನರು ಮತ ನೀಡಿದ್ದರು.

ಬಿಜೆಪಿ ಮತದಾರರು ನಿತೀಶ್ ಪರವಾಗಿದ್ದಾರೆಯೇ?

ಬಿಜೆಪಿ ಮತದಾರರು ನಿತೀಶ್ ಪರವಾಗಿದ್ದಾರೆಯೇ?

ಬಿಹಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿದೆ. ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಹಾಗಾದರೆ ಬಿಜೆಪಿಯ ಮತದಾರರು ನಿತೀಶ್ ಪರವಾಗಿದ್ದಾರೆಯೇ?
ಶೇ 55ರಷ್ಟು ಬಿಜೆಪಿ ಬೆಂಬಲಿಸುವ ಜನರು ನಿತೀಶ್‌ ಕುಮಾರ್‌ಗೆ ತಮ್ಮ ಬೆಂಬಲ ನೀಡಿದ್ದಾರೆ. 2010ರಲ್ಲಿ ಶೇ 91ರಷ್ಟು ಜನರು ನಿತೀಶ್ ಪರವಾಗಿದ್ದರು.

ಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿ

ಬಿಹಾರದಲ್ಲಿ ವೋಟ್ ಶೇರ್ ಹೇಗಿದೆ?

ಬಿಹಾರದಲ್ಲಿ ವೋಟ್ ಶೇರ್ ಹೇಗಿದೆ?

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಶೇ 38 ರಷ್ಟು, ಮಹಾಘಟಬಂಧನ್ ಶೇ 32ರಷ್ಟು, ಜಿಡಿಎಸ್‌ಎಫ್ ಶೇ 7, ಎಲ್‌ಜೆಪಿ ಶೇ 6 ಮತ್ತು ಇತರರು ಶೇ 17ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆಯ ವರದಿ ಹೇಳಿದೆ.

English summary
In the Lokniti-CSDS Bihar assembly elections 2020 opinion poll 31 per cent of the people said that Nitish Kumar should be given another chance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X