ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಜೆಡಿ ಅಭ್ಯರ್ಥಿ ಕೋಟ್ಯಧಿಪತಿ ಶರದ್ ಯಾದವ್ ಆಸ್ತಿ ವಿವರ

|
Google Oneindia Kannada News

ಪಾಟ್ನಾ, ಏಪ್ರಿಲ್ 04: ಲೋಕಸಭೆ ಚುನಾವಣೆಯಲ್ಲಿ ಮಹಾಘಟಬಂದನ್ ನ ಉಗಮ ಸ್ಥಾನ ಎನಿಸಿರುವ ಬಿಹಾರದಲ್ಲಿ ಘಟನಾಘಟಿ ರಾಜಕೀಯ ಮುಖಂಡರು ಈ ಬಾರಿ ಕಣದಲ್ಲಿದ್ದಾರೆ. ಜನತಾ ದಳ -ಸಂಯುಕ್ತ (ಜೆಡಿಯು)ದ ಮಾಜಿ ಅಧ್ಯಕ್ಷ. ಲೋಕತಾಂತ್ರಿಕ್ ಜನತಾ ದಳ(ಎಲ್ ಜೆಡಿ) ಸ್ಥಾಪಕ ಶರದ್ ಯಾದವ್ ಅವರು ರಾಷ್ಟ್ರೀಯ ಜನತಾ ದಳ(ಆರ್ ಜೆ ಡಿ) ಅಭ್ಯರ್ಥಿಯಾಗಿ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದರು. ಶರದ್ ಯಾದವ್ ಅವರ ಅಸ್ತಿ ವಿವರ, ಸಾಲಸೋಲ ಅಂಕಿ ಅಂಶ ಇಲ್ಲಿದೆ.

ಕಾಂಗ್ರೆಸ್ ನೇತೃತ್ವದ ಮಹಾಘಟಬಂದನ್ ನ ಭಾಗವಾಗಿರುವ ಆರ್ ಜೆಡಿ ಜೊತೆಗೆ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ( ಆರ್ ಎಲ್ ಎಸ್ ಪಿ), ಹಿಂದೂಸ್ತಾನಿ ಆವಾಮ್ ಮೋರ್ಚಾ (ಎಚ್ಎಎಂ), ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ( ವಿಐಪಿ) ಮುಂತಾದ ಪಕ್ಷಗಳಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2016ರಲ್ಲಿ ಶರದ್ ಯಾದವ್ ಅವರ ಅಸ್ತಿ ವಿವರ ಹೀಗಿತ್ತು:
ಚರಾಸ್ತಿ : 1.28 ಕೋಟಿ ರು
ಸ್ಥಿರಾಸ್ತಿ : 6.17 ಕೋಟಿ ರು
ಒಟ್ಟು ಆಸ್ತಿ : 7.45 ಕೋಟಿ ರು
2014-15ರ ಐಟಿ ರಿಟರ್ನ್ಸ್ ನಂತೆ 2077 ಲಕ್ಷ ರು ಆದಾಯ
ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

2019ರಲ್ಲಿ ಮಾಧೇಪುರದಿಂದ ಸಂಸತ್ತಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ ವಿವರ ಮುಂದಿದೆ..

2019ರಲ್ಲಿ ಸಲ್ಲಿಸಿರುವ ಅಫಿಡವಿಟ್ ನಂತೆ ವಿವರ

2019ರಲ್ಲಿ ಸಲ್ಲಿಸಿರುವ ಅಫಿಡವಿಟ್ ನಂತೆ ವಿವರ

ಹೆಸರು : ಶರದ್ ಯಾದವ್(71 ವರ್ಷ)
ತಂದೆ: ನಂದ್ ಕಿಶೋರ್ ಯಾದವ್
ವಿಳಾಸ: ಬಿಹಾರದ ಮಾಧೇಪುರದ ಕರ್ಪೂರಿ ಚೌಕ್ ಬಳಿ ಮನೆ
*ಬಿಹಾರದ ಮಾಧೇಪುರ ಅಸೆಂಬ್ಲಿ(73) ರಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ
*ಇ ಮೇಲ್ ಹೊಂದಿದ್ದಾರೆ.
*ಜಬಲ್ ಪುರ್ ಇಂಜಿಯರಿಂಗ್ ಕಾಲೇಜಿನಿಂದ ಬಿ.ಇ(ಎಲೆಕ್ಟ್ರಿಕಲ್), ಬಿಎಸ್ ಇ

ವಸುಂಧರಾ ರಾಜೆ ದಪ್ಪವಾಗಿದ್ದಾರೆ, ಅವರಿಗೆ ರೆಸ್ಟ್ ಕೊಡಿ: ಶರದ್ ಯಾದವ್!ವಸುಂಧರಾ ರಾಜೆ ದಪ್ಪವಾಗಿದ್ದಾರೆ, ಅವರಿಗೆ ರೆಸ್ಟ್ ಕೊಡಿ: ಶರದ್ ಯಾದವ್!

ಶರದ್ ಹಾಗೂ ಅವರ ಪತ್ನಿ ಐಟಿ ರಿಟರ್ನ್ಸ್

ಶರದ್ ಹಾಗೂ ಅವರ ಪತ್ನಿ ಐಟಿ ರಿಟರ್ನ್ಸ್

ಶರದ್ ಯಾದವ್

2013-14ರಲ್ಲಿ 8,28,840 ರು ಅದಾಯ
2017-18ರಲ್ಲಿ ಐಟಿ ರಿಟರ್ನ್ಸ್ ನಲ್ಲಿ 10,94,770 ರು ಆದಾಯ
ರೇಖಾ ಯಾದವ್
2013-14ರಲ್ಲಿ 15,66,570 ರು ಆದಾಯ
2017-18ರಲ್ಲಿ 9,13,300 ರು ಆದಾಯ
* ಯಾರು ನಮ್ಮ ಅದಾಯವನ್ನು ಅವಲಂಬಿಸಿಲ್ಲ
* ನಮ್ಮ ವಿರುದ್ಧ ಯಾವುದೆ ಕ್ರಿಮಿನಲ್ ಮೊಕದ್ದಮೆ ಇಲ್ಲ ಎಂದಿದ್ದಾರೆ.
* ಚುನಾವಣಾ ಅಕ್ರಮ, ಉದಾ: ನಿಗದಿತ ಸಮಯದ ಬಳಿಕ ಹೆಲಿಕಾಪ್ಟರ್ ಲ್ಯಾಂಡಿಂಗ್ ಇತ್ಯಾದಿ ಕೇಸುಗಳಿದ್ದು, ಬಿಹಾರದ ಎಸಿಜೆಎಂ ಕೋರ್ಟಿನ ದಾಖಲೆ ನೀಡಿದ್ದು, ಪ್ರಕರಣದಲ್ಲಿ ಅಪರಾಧಿಯಾಗಿಲ್ಲ ಎಂದು ಘೋಷಿಸಿದ್ದಾರೆ.

2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ: ಭವಿಷ್ಯ ನುಡಿದಿದ್ದು ಯಾರು?!2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ: ಭವಿಷ್ಯ ನುಡಿದಿದ್ದು ಯಾರು?!

ನಗದು ಹಾಗೂ ಬ್ಯಾಂಕ್ ಠೇವಣಿ ವಿವರ

ನಗದು ಹಾಗೂ ಬ್ಯಾಂಕ್ ಠೇವಣಿ ವಿವರ

* ಶರದ್ ಯಾದವ್ ಕೈಲಿ 55,000 ರು ನಗದು ಇದೆ,
* ಶರದ್ ಯಾದವ್ ಅವರು ನವದೆಹಲಿಯ ಎಸ್ ಬಿಐಯ ಉಳಿತಾಯ ಖಾತೆಯಲ್ಲಿ 35,40,130 ರು, ಮಧ್ಯಪ್ರದೇಶದ ಎಸ್ ಬಿಐ (2,192 ರು), ದೆಹಲಿಯ ಯುಕೋ ಬ್ಯಾಂಕ್(57,861 ರು), ದೆಹಲಿಯ ಅಂಚೆ ಕಚೇರಿ (1,01,685 ರು), ಮಾಧೇಪುರದ ಕೆನರಾ ಬ್ಯಾಂಕ್(1,000ರು)

ಶರದ್ ಪತ್ನಿ ರೇಖಾ:
* ಪತ್ನಿ ರೇಖಾ ಕೈಲಿ 35,000 ರು ನಗದು ಇದೆ.
* ದೆಹಲಿಯ ಯುಕೋ ಬ್ಯಾಂಕ್ 6,30,148 ರು, ಕೆನರಾ ಬ್ಯಾಂಕ್ (1,33,902 ರು), ಮತ್ತೊಂದು ಯುಕೋ ಬ್ಯಾಂಕಿನಲ್ಲಿ 16,84,803 ರು, ಅಂಚೆ ಕಚೇರಿಯಲ್ಲಿ 88,857 ರು, ಯುಕೋ ಬ್ಯಾಂಕ್ ಎಫ್ಡಿ 65,00,000ರು

ಶರದ್ ಹಾಗೂ ರೇಖಾ ಉಳಿತಾಯ, ಚಿನ್ನಾಭರಣ

ಶರದ್ ಹಾಗೂ ರೇಖಾ ಉಳಿತಾಯ, ಚಿನ್ನಾಭರಣ

ಶರದ್ ಯಾದವ್
* ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ಎಸ್ ಸಿ) ಒಟ್ಟು 1,05,000ರು
* ಮತ್ತೊಂದು ಖಾತೆಯಿಂದ 1,15,000ರು ಹಾಗೂ 1,11,000ರು, 1,05,000 ರು, 10,000ರು, 1,50,000 ರು ಉಳಿತಾಯ.
* ಚಿನ್ನಾಭರಣ 100 ಗ್ರಾಮ್ ಮೌಲ್ಯ 3,12,500 ರು, 2 ಕೆಜಿ ಬೆಳ್ಳಿ 83,000 ರು

ರೇಖಾ ಯಾದವ್
* ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ಎಸ್ ಸಿ) ಖಾತೆಗಳಿಂದ
75,000ರು, 1,01,000ರು, 75,000 ರು, 10,000 ರು,1,50,000 ರು ಉಳಿತಾಯ
* ಎಲ್ ಐಸಿ ಉಳಿತಾಯ 2,46,612 ರು
* ಚಿನ್ನಾಭರಣ - 400 ಗಾಮ್ 12,50,000 ರು ಮೌಲ್ಯ, ಸಿಲ್ವರ್ ವೇರ್ 2 ಕೆಜಿ 83,000ರು

ಒಟ್ಟು ಚರಾಸ್ತಿ: 47,49,368 ರು ಪ್ಲಸ್ 1,11,29,322 ರು =15878690 ರು

English summary
Former Janata Dal-United (JD-U) President and founder of the Loktantrik Janata Dal (LJD) Sharad Yadav filed his nomination papers as the RJD candidate from Madhepura constituency for the Lok Sabha polls in Bihar. Here are his declared Assets and Liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X