ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bihar Exit Poll: ನ್ಯೂಸ್ ಎಕ್ಸ್ ಸಮೀಕ್ಷೆಯ ವಿವರ

|
Google Oneindia Kannada News

ನ್ಯೂಸ್ ಎಕ್ಸ್ ಮತ್ತು ಡಿವಿ ರಿಸರ್ಚ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾ ಮೈತ್ರಿಕೂಟ ಸರಳ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100ರಂತೆ ಒಟ್ಟು 243 ವಿಧಾನಸಭೆ ಕ್ಷೇತ್ರಗಳಲ್ಲಿ 24,300 ಮಂದಿಯನ್ನು ಈ ಸಮೀಕ್ಷೆಗೆ ಬಳಸಲಾಗಿತ್ತು.

ನ್ಯೂಸ್ ಎಕ್ಸ್-ಡಿವಿ ರೀಸರ್ಚ್ ಸಮೀಕ್ಷೆಯು ಎನ್‌ಡಿಎ 110-117 ಸೀಟುಗಳೊಂದಿಗೆ ಸರಳ ಬಹುಮತಕ್ಕೆ ಕೊರತೆ ಎದುರಿಸಲಿದೆ ಎಂದು ಹೇಳಿದೆ. ಇನ್ನೊಂದೆಡೆ ಆರ್‌ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ವಿರೋಧಪಕ್ಷವು 108-123 ಮತಗಳನ್ನು ಗಳಿಸಲಿದೆ ಎಂದು ಅಂದಾಜಿಸಿದೆ.

ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಹೆಚ್ಚಿನ ಮಂದಿ ತೇಜಸ್ವಿ ಯಾದವ್ ಎಂದು ಹೆಸರಿಸಿದ್ದಾರ. ಶೇ 34% ಮಂದಿ ತೇಜಸ್ವಿ ಯಾದವ್ ಪರ ಇದ್ದಾರೆ. ನಿತೀಶ್ ಕುಮಾರ್ ಪರ ಶೇ 32% ರಷ್ಟು ಮಂದಿ ಒಲವು ತೋರಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಶೇ 28ರಷ್ಟು ಮಂದಿಗೆ ನಿರುದ್ಯೋಗ ಮತ್ತು ಶಿಕ್ಷಣ ಅತಿ ದೊಡ್ಡ ಸಮಸ್ಯೆಗಳು ಎನಿಸಿವೆ. ಶೇ 20ರಷ್ಟು ಜನರು ಅಭಿವೃದ್ಧಿಗಾಗಿ ಮತ ನೀಡಿರುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ.

ಮೈತ್ರಿಕೂಟಗಳು ಪಡೆಯಲಿರುವ ಸೀಟುಗಳು

ಮೈತ್ರಿಕೂಟಗಳು ಪಡೆಯಲಿರುವ ಸೀಟುಗಳು

ಎನ್‌ಡಿಎ: 110-117

ಮಹಾಮೈತ್ರಿಕೂಟ: 108-123

ಎಲ್‌ಜೆಪಿ: 4-10

ಇತರೆ 8-23

ಮತ ಹಂಚಿಕೆ

ಮತ ಹಂಚಿಕೆ

ಮಹಾ ಮೈತ್ರಿಕೂಟ: 39-47%

ಎನ್‌ಡಿಎ: 33-41%

ಎಲ್‌ಜೆಪಿ: 7-12%

ಇತರೆ: 5-14%

ಚುನಾವಣೆಯ ಮೇಲೆ ಪ್ರಭಾವ

ಚುನಾವಣೆಯ ಮೇಲೆ ಪ್ರಭಾವ

ಮೋದಿ ಅವರ ಸಮಾವೇಶಗಳು ನಿರ್ಧಾರ ಬದಲಿಸಿದೆ ಎಂದು ಶೇ 42ರಷ್ಟು ಮಂದಿ ಹೇಳಿದ್ದಾರೆ. ಶೇ 25ರಷ್ಟು ಮಂದಿ ಅವರ ಮಾತುಗಳು ತಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ ಎಂದಿದ್ದಾರೆ. ಶೇ 33ರಷ್ಟು ಜನರಿಗೆ ಆ ಸಮಾವೇಶಗಳ ಪ್ರಭಾವದ ಬಗ್ಗೆ ಖಾತರಿಯಿಲ್ಲ.

Recommended Video

Bihar Election 2020 : ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ | Oneindia kannada
ಮತ ಹಾಕಲು ಕಾರಣ

ಮತ ಹಾಕಲು ಕಾರಣ

ಶೇ 33ರಷ್ಟು ಮಂದಿ ನಿರುದ್ಯೋಗದ ಸಮಸ್ಯೆ ಕಾರಣದಿಂದ ಆರ್‌ಜೆಡಿ ಅಥವಾ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ತಮಗೆ ಮುಖ್ಯವಾಗುತ್ತದೆ ಎಂದು ಶೇ 34ರಷ್ಟು ಮಂದಿ ಹೇಳಿದ್ದಾರೆ. ಶೇ 41ರಷ್ಟು ಜನರು ಆರ್‌ಜೆಡಿಯು ಕೆಲಸ ಒದಗಿಸುವುದರ ಬಗ್ಗೆ ನೀಡಿರುವ ಭರವಸೆಯು ಎನ್‌ಡಿಎ ಭರವಸೆಗಿಂತ ವಿಶ್ವಾಸಾರ್ಹವಾಗಿದೆ ಎಂದಿದ್ದಾರೆ.

English summary
Bihar Election Exit Poll Results 2020 in Kannada: News X and DV research has projected grand alliance lead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X