ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ನಿತೀಶ್ ಜಾದೂ ವೈಫಲ್ಯ, ಮಿಂಚಿದ ತೇಜಸ್ವಿ ಯಾದವ್: ಸಮೀಕ್ಷೆ ವಿಶ್ಲೇಷಣೆ

|
Google Oneindia Kannada News

ಬಿಹಾರ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿವೆ. ಬಹುತೇಕ ಸಮೀಕ್ಷೆಗಳು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಅಂದಾಜಿಸಿವೆ. ಆದರೆ ಸಿ ವೋಟರ್ ಸಂಸ್ಥೆ ಜತೆಗೂಡಿ ನಡೆಸಿದ ಸಮೀಕ್ಷೆಯಲ್ಲಿ ಟೈಮ್ಸ್ ನೌ ಅತಂತ್ರ ವಿಧಾನಸಭೆಯ ಸ್ಥಿತಿ ಉಂಟಾಗಲಿದೆ ಎಂದು ಹೇಳಿದೆ.

ಆದರೆ ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆಯ ಪ್ರಕಾರ ತೇಜಸ್ವಿ ಯಾದವ್ ಅವರು ಸರ್ಕಾರ ರಚಿಸಲು ದಟ್ಟ ಅವಕಾಶಗಳಿವೆ. ಏಕೆಂದರೆ ಅವರ ನೇತೃತ್ವದ ಮಹಾಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಕೇವಲ ಎರಡು ಸೀಟುಗಳ ಅಗತ್ಯ ಬೀಳಲಿವೆ. ಪಕ್ಷೇತರ ಅಥವಾ ಇತರೆ ಸಣ್ಣಪುಟ್ಟ ಪಕ್ಷಗಳ ನೆರವಿನೊಂದಿಗೆ ಅಧಿಕಾರಕ್ಕೇರಲು ವಿಪುಲ ಅವಕಾಶಗಳಿವೆ.

Bihar Exit Poll Times Now-C Voter: ಬಿಹಾರದಲ್ಲಿ ಅತಂತ್ರ ಫಲಿತಾಂಶ?Bihar Exit Poll Times Now-C Voter: ಬಿಹಾರದಲ್ಲಿ ಅತಂತ್ರ ಫಲಿತಾಂಶ?

ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ 120 ಮತಗಳನ್ನು ಪಡೆದುಕೊಳ್ಳಲಿದೆ. 243 ಸೀಟುಗಳಿರುವ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ ತಲುಪಲು ಬೇಕಿರುವುದು 122 ಸೀಟುಗಳು. ಈ ಎರಡೂ ಮೈತ್ರಿಕೂಟಗಳೊಂದಿಗೆ ಕೈಜೋಡಿಸದ ಎಲ್‌ಜೆಪಿ ಹೊರತಾದ ಇತರೆ ಪಕ್ಷಗಳು ಅಥವಾ ಪಕ್ಷೇತರರು ಆರು ಸೀಟುಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಊಹಿಸಿದೆ. ಅದು ನಿಜವಾದರೆ ಪಕ್ಷೇತರ ಅಥವಾ ಸಣ್ಣಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸುವುದು ಮಹಾಮೈತ್ರಿಕೂಟಕ್ಕೆ ಸುಲಭವಾಗಲಿದೆ. ಮುಂದೆ ಓದಿ.

ಎನ್‌ಡಿಎ ಮೈತ್ರಿಕೂಟ

ಎನ್‌ಡಿಎ ಮೈತ್ರಿಕೂಟ

ಇನ್ನೊಂದೆಡೆ ಆಡಳಿತಾರೂಢ ಜೆಡಿಯು, ಬಿಜೆಪಿ, ವಿಕಾಸಶೀಲ ಇನ್ಸಾನ್ ಪಕ್ಷ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾ (ಜಾತ್ಯತೀತ) ಪಕ್ಷಗಳು ಜತೆಗೂಡಿ ಎನ್‌ಡಿಎ ಒಕ್ಕೂಟದಿಂದ ಸ್ಪರ್ಧಿಸಿವೆ. ಈ ಎರಡೂ ಸಣ್ಣ ಪಕ್ಷಗಳಿಂದ ಹೆಚ್ಚೆಂದರೆ ನಾಲ್ಕು ಸೀಟುಗಳು ಎನ್‌ಡಿಎಗೆ ಸಿಗಬಹುದು. ಉಳಿದ ಪ್ರಮುಖ ಸೀಟುಗಳನ್ನು ಗೆಲ್ಲುವ ಹೊಣೆಗಾರಿಗೆ ಬಿಜೆಪಿ ಮತ್ತು ಜೆಡಿಯುಗೆ ಇದೆ.

ಬಿಜೆಪಿಗೆ 70 ಸೀಟುಗಳು

ಬಿಜೆಪಿಗೆ 70 ಸೀಟುಗಳು

ಬಿಜೆಪಿ 121 ಸೀಟುಗಳಲ್ಲಿ ಸ್ಪರ್ಧಿಸಿದ್ದು ವಿಐಪಿ ಪಕ್ಷಕ್ಕೆ ತನ್ನ ಭಾಗದಲ್ಲಿ ಪಾಲು ನೀಡಿತ್ತು. ಇನ್ನು ಜೆಡಿಯು 122 ಸೀಟುಗಳಲ್ಲಿ ಸ್ಪರ್ಧಿಸಿದ್ದು, ತನ್ನ ಪಾಲಿನಿಂದ ಏಳು ಸೀಟುಗಳನ್ನು ಮಾಜಿ ಸಿಎಂ ಜಿತನ್ ರಾಂ ಮಾಂಜಿ ಅವರ ಎಚ್‌ಎಎಂಎಂಗೆ ನೀಡಿತ್ತು. ಆದರೆ ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಜೆಪಿ 70 ಸೀಟುಗಳಲ್ಲಿ ಗೆಲ್ಲಲಿದ್ದರೆ, ಜೆಡಿಯು ಕೇವಲ 42 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.

By Election Exit Poll: ಮಧ್ಯಪ್ರದೇಶದಲ್ಲಿ ಬಿಜೆಪಿ ರಾಜ್ಯಭಾರ ಸುಗಮBy Election Exit Poll: ಮಧ್ಯಪ್ರದೇಶದಲ್ಲಿ ಬಿಜೆಪಿ ರಾಜ್ಯಭಾರ ಸುಗಮ

ಜೆಡಿಯು ಕಳಪೆ ಸಾಧನೆ

ಜೆಡಿಯು ಕಳಪೆ ಸಾಧನೆ

ಅಂದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯುದ ಕೊಡುಗೆ ತೀರಾ ಕಳಪೆಯಾಗಲಿದೆ. ಸ್ಪರ್ಧಿಸಿದ ಸೀಟುಗಳಲ್ಲಿ ಅರ್ಧದಷ್ಟು ಕ್ಷೇತ್ರಗಳಲ್ಲಿಯೂ ಗೆಲ್ಲುವಲ್ಲಿ ವಿಫಲವಾಗಲಿದೆ. ಹೀಗಾಗಿ ಎನ್‌ಡಿಎ 116 ಸೀಟುಗಳಿಗೆ ತೃಪ್ತಿಪಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಎನ್‌ಡಿಎದಿಂದ ಹೊರಬಂದಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರ ಪಕ್ಷ ಕೇವಲ ಒಂದು ಸೀಟಿನಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಬಿಜೆಪಿ ಸರ್ಕಾರ ರಚಿಸಿದರೂ ಅಚ್ಚರಿಯಿಲ್ಲ

ಬಿಜೆಪಿ ಸರ್ಕಾರ ರಚಿಸಿದರೂ ಅಚ್ಚರಿಯಿಲ್ಲ

ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಪ್ರಕಾರ ಎನ್‌ಡಿಎ ಒಕ್ಕೂಟಕ್ಕೆ ಸರ್ಕಾರ ರಚಿಸಲು ಆರು ಸೀಟುಗಳು ಬೇಕಾಗಲಿದ್ದರೆ, ಮಹಾ ಮೈತ್ರಿಕೂಟಕ್ಕೆ ಎರಡು ಸೀಟುಗಳ ಅಗತ್ಯಬೀಳಲಿದೆ. ಇಲ್ಲಿ ಮಹಾಘಟಬಂಧನಕ್ಕೆ ಹೆಚ್ಚಿನ ಅವಕಾಶವಿದ್ದರೂ, ರಾಜಕೀಯದಲ್ಲಿ ಯಾವುದನ್ನೂ ಊಹಿಸಲು ಸಾಧ್ಯವಾಗುವುದಿಲ್ಲ. ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಮಿತ್ರಪಕ್ಷಗಳ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ರಚಿಸಿದ ದೃಷ್ಟಾಂತ ನಮ್ಮೆದುರು ಇದೆ. ಹೀಗಾಗಿ ಬಿಹಾರದಲ್ಲಿ ಕೇವಲ ಆರು ಸೀಟುಗಳು ಅಗತ್ಯ ಇರುವಾಗ ಬಿಜೆಪಿ ಸರ್ಕಾರ ರಚಿಸಿದರೂ ಅಚ್ಚರಿಯಾಗುವುದಿಲ್ಲ. 2015ರ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಪಾಳೆಯದಲ್ಲಿದ್ದ ಜೆಡಿಯು, ಸರ್ಕಾರವನ್ನು ಉರುಳಿಸಿ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ.

Todays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆTodays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆ

Recommended Video

Bihar Election 3rd Phase: Ashwamesh Devi ಅಭ್ಯರ್ಥಿ ತಮ್ಮ ಮತ ಚಲಾಯಿಸಿದರು | Oneindia kannada
ಸಮೀಕ್ಷೆಗಳ ಸಮೀಕ್ಷೆಯಲ್ಲಿ ಯುಪಿಎಗೆ ಮುನ್ನಡೆ

ಸಮೀಕ್ಷೆಗಳ ಸಮೀಕ್ಷೆಯಲ್ಲಿ ಯುಪಿಎಗೆ ಮುನ್ನಡೆ

ಇನ್ನೊಂದೆಡೆ ಸಮೀಕ್ಷೆಗಳ ಸಮೀಕ್ಷೆಗಳನ್ನಾಧರಿಸಿ ಟೈಮ್ಸ್ ನೌ ಬಿಡುಗಡೆ ಮಾಡಿದ ವರದಿಯಲ್ಲಿ ಮಹಾ ಮೈತ್ರಿಕೂಟದ ಯುಪಿಎ ಸರಳ ಬಹುಮತ ಪಡೆದುಕೊಳ್ಳಲಿದೆ.

ಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ

ಎನ್‌ಡಿಎ 112

ಯುಪಿಎಗೆ 122

ಎಲ್‌ಜೆಪಿ 4

ಇತರೆ 5

English summary
Bihar Election Exit Poll Results 2020 in Kannada: Here is the analysis on Times Now and C-Voter prediction of Hung house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X