ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಸಿಎಂ ಪಟ್ಟದ ರೇಸ್: ನಿತೀಶ್ ಮುಂದೆ, ತೇಜಸ್ವಿ ಹಿಂದೆ

|
Google Oneindia Kannada News

ಬಿಹಾರ ವಿಧಾನಸಭೆ ಚುನಾವಣೆ 2020ಗೆ ಸಂಬಂಧಿಸಿದಂತೆ ಎಬಿಪಿ-ಸಿವೋಟರ್ ಸಂಸ್ಥೆ ನೀಡಿರುವ ಅಭಿಮತ ಇಲ್ಲಿದೆ. ಎಬಿಪಿ-ಸಿವೋಟರ್ ಸಂಸ್ಥೆ ಅಕ್ಟೋಬರ್ 01ರಿಂದ ಅಕ್ಟೋಬರ್ 28ರ ತನಕ 30 ಸಾವಿರ ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲಾಗಿದೆ.

ಎಬಿಪಿ-ಸಿವೋಟರ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎನ್ಡಿಎ ಮತ್ತೆ ಅಧಿಕಾರಕ್ಕೇರುವುದು, ನಿತೀಶ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ

ಮೋದಿ ಅಲೆ ಮುಂದೆ ಆಡಳಿತ ವಿರೋಧಿ ಅಲೆ ಸಣ್ಣದಾಗಿದ್ದು, ಮತದಾರರು ಮತ್ತೊಮ್ಮೆ ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಕಾಣಲು ಬಯಸಿದ್ದಾರೆ ಸುಮಾರು ಶೇ 29.5ರಷ್ಟು ಮಂದಿ ಎಬಿಪಿ-ಸಿವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಿತೀಶ್ ಪರ ಮತ ಹಾಕಿದ್ದಾರೆ.

ಆರ್ ಜೆಡಿಯ ತೇಜಸ್ವಿ ಯಾದವ್ ಶೇ 191.9ರಷ್ಟು ಮತ ಗಳಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ತೇಜಸ್ವಿ ಅವರ ತಂದೆ ಮಾಜಿ ಸಿಎಂ ಲಾಲೂ ಪ್ರಸಾದ್ ಅವರನ್ನು ಮತ್ತೆ ಸಿಎಂ ಆಗಿ ನೋಡಲು ಶೇ 9.8ರಷ್ಟು ಮಂದಿ ಬಯಸಿದ್ದಾರೆ. ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಶೇ 13.8 ಮತ ಪಡೆದಿದ್ದು, ನಿಧಾನಗತಿಯಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ.

Bihar Elections 2020: ABP-CVoter Opinion Poll Nitish Kumar Emerges As Most Preferred CM

ಶೇಕಡಾವಾರು ಮತಗಳಿಕೆಯಲ್ಲಿ ಎನ್ಡಿಎ ಶೇ 28ರಷ್ಟು ಗಳಿಸಿದ್ದರೆ, ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಶೇ 46ರಷ್ಟು ಮತಗಳಿಸುವ ಸಾಧ್ಯತೆಯಿದೆ. ಎಲ್ ಜೆಪಿ ಶೇ 4 ಹಾಗೂ ಇತರೆ ಪಕ್ಷಗಳು ಶೇ 22ರಷ್ಟು ಮತಗಳಿಸಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆ

ಚುನಾವಣೆ ಮುಖ್ಯ ವಿಷಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರ ಹೀಗಿದೆ: ನಿರುದ್ಯೋಗ 52% ಮುಖ್ಯ ವಿಷಯವಾಗಿದ್ದರೆ, ಮಿಕ್ಕಂತೆ ವಿದ್ಯುತ್ ಪೂರೈಕೆ, ಕುಡಿಯುವ ನೀರು,ರಸ್ತೆ ಮೂಲ ಸೌಕರ್ಯ, ಕೊರೊನಾ ಸೋಂಕು, ಶೈಕ್ಷಣಿಕ ಸಮಸ್ಯೆ, ಸಿಎಎ/ ಎನ್ ಆರ್ ಸಿ/ ಎನ್ ಪಿ ಆರ್ ನಂತರದ ಸ್ಥಾನದಲ್ಲಿವೆ.

English summary
Bihar Assembly Elections 2020: ABP-CVoter Opinion Poll predicts say Nitish Kumar Emerges As Most Preferred CM, Tejashwi Not Far Behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X