ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ನಿರುದ್ಯೋಗ ತಾಂಡವ, ತಲಾದಾಯ ಕುಸಿತ

|
Google Oneindia Kannada News

ಪಟ್ನಾ, ಅಕ್ಟೋಬರ್ 28: ಏಪ್ರಿಲ್ ಮತ್ತು ಮೇ ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಬಿಹಾರದಲ್ಲಿ ನಿರುದ್ಯೋಗದ ಪ್ರಮಾಣ ಶೇ 47ರಷ್ಟು ಏರಿಕೆಯಾಗಿತ್ತು. ಇದರ ಅರ್ಥ ಹೆಚ್ಚೂಕಡಿಮೆ ಎರಡರಲ್ಲಿ ಒಬ್ಬ ಬಿಹಾರಿಗೆ ಕೆಲಸ ಸಿಗುತ್ತಿರಲಿಲ್ಲ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣದಿಂದ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ದೇಶದ ಆರ್ಥಿ ಪರಿಸ್ಥಿತಿ ಇದರಿಂದ ಹದಗೆಟ್ಟಿದೆ. ಆದರೆ ಈಗಲೂ ಬಿಹಾರ ನಿರುದ್ಯೋಗಿಗಳ ರಾಜ್ಯವಾಗಿ ಮುಂದುವರಿದಿದೆ. ಲಾಕ್‌ಡೌನ್‌ನ ಎರಡು ತಿಂಗಳಲ್ಲಿ ಒಟ್ಟಾರೆ ರಾಷ್ಟ್ರದ ನಿರುದ್ಯೋಗ ಪ್ರಮಾಣ ಶೇ 24ರಷ್ಟಿತ್ತು. ಅಂದರೆ ಬಿಹಾರದ ಅರ್ಧದಷ್ಟು.

ಬಿಹಾರ ಸುದೀರ್ಘ ಸಮಯದಿಂದ ನಿರುದ್ಯೋಗದ ಭೂತವನ್ನು ಎದುರಿಸುತ್ತಿದೆ. ರಾಜ್ಯದ 2019-20ರ ಆರ್ಥಿಕ ಸಮೀಕ್ಷೆಯ ಪ್ರಕಾರ ತಲಾದಾಯ 30,617 ರೂ ಇದೆ. ಇದು ದೇಶದ ತಲಾದಾಯದ ಸರಾಸರಿಯ ಮೂರರಷ್ಟು ಇರಬಹುದು.

ಬಿಜೆಪಿ ಪೋಸ್ಟರ್‌ಗಳಲ್ಲಿ ನಿತೀಶ್‌ಗೆ ಜಾಗವಿಲ್ಲ!: ಚುನಾವಣೆ ಹೊಸ್ತಿಲಲ್ಲೇ ಎನ್‌ಡಿಎದಲ್ಲಿ ಸಂಘರ್ಷ?ಬಿಜೆಪಿ ಪೋಸ್ಟರ್‌ಗಳಲ್ಲಿ ನಿತೀಶ್‌ಗೆ ಜಾಗವಿಲ್ಲ!: ಚುನಾವಣೆ ಹೊಸ್ತಿಲಲ್ಲೇ ಎನ್‌ಡಿಎದಲ್ಲಿ ಸಂಘರ್ಷ?

ರಾಜ್ಯದಲ್ಲಿ ಮಹಿಳೆಯರ ಉದ್ಯೋಗ ಸ್ಥಿತಿ ಕಳವಳಕಾರಿಯಾಗಿದೆ. ಮಹಿಳಾ ಉದ್ಯೋಗದಲ್ಲಿ ರಾಷ್ಟ್ರೀಯ ಸರಾಸರಿ ಶೇ 24ರಷ್ಟಿದ್ದರೆ, ಬಿಹಾರದಲ್ಲಿ ಗ್ರಾಮೀಣ ಮಹಿಖಾ ಉದ್ಯೋಗದ ಪ್ರಮಾಣ ಶೇ 3.9ರಷ್ಟು ಮಾತ್ರ ಇದೆ. ಭಾರತದ ಮಟ್ಟದಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ಗ್ರಾಮೀಣ ಮಹಿಳೆಗೆ ಕೆಲಸ ಸಿಗುವಂತಿದ್ದರೆ, ಬಿಹಾರದಲ್ಲಿ 100 ಗ್ರಾಮೀಣ ಮಹಿಳೆಯರಲ್ಲಿ ನಾಲ್ಕು ಮಹಿಳೆಯರಿಗೆ ಮಾತ್ರವೇ ಕೆಲಸ ಸಿಗುತ್ತಿದೆ.

ದುಪ್ಪಟ್ಟುಗೊಂಡಿರುವ ನಿರುದ್ಯೋಗ ಪ್ರಮಾಣ, ತಲಾದಾಯದಲ್ಲಿನ ಕುಸಿತ ಮುಂತಾದವು ಬಿಹಾರದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹೀನಾಯಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಆರ್ಥಿಕತೆ ಸಂಗತಿ ಮಹತ್ವ ಪಡೆಯುತ್ತದೆಯೇ? ಮುಂದೆ ಓದಿ.

ಬಿಹಾರದ ಜನರಿಗೆ ಸರ್ಕಾರಿ ಉದ್ಯೋಗ ಏಕೆ ಸಿಗುತ್ತಿಲ್ಲ: ಮೋದಿ ಬಿಹಾರದ ಜನರಿಗೆ ಸರ್ಕಾರಿ ಉದ್ಯೋಗ ಏಕೆ ಸಿಗುತ್ತಿಲ್ಲ: ಮೋದಿ

ನಿರುದ್ಯೋಗದಲ್ಲಿ ಏರಿಕೆ

ನಿರುದ್ಯೋಗದಲ್ಲಿ ಏರಿಕೆ

ಸಿಎಂಐಇ ಮಾಹಿತಿ ಪ್ರಕಾರ ಬಿಹಾರದಲ್ಲಿ ಲಾಕ್‌ಡೌನ್ ತೆರವುಗೊಂಡ ಬಳಿಕ ಉದ್ಯೋಗ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಆದರೆ ಸೆಪ್ಟೆಂಬರ್ ತಿಂಗಳ ನಿರುದ್ಯೋಗದ ಪ್ರಮಾಣ ಶೇ 12ರಷ್ಟಿದೆ. ರಾಷ್ಟ್ರೀಯ ನಿರುದ್ಯೋಗದ ಪ್ರಮಾಣಕ್ಕಿಂತಲೂ (ಶೇ 6.67) ಹೆಚ್ಚಾಗಿಯೇ ಉಳಿದಿದೆ. ಇಷ್ಟೇ ಅಲ್ಲ, ಬಿಹಾರದಲ್ಲಿ ನಿರುದ್ಯೋಗದ ಪ್ರಮಾಣ ಏರಿಕೆಯಾಗುತ್ತಲೇ ಇದೆ. 2018ರ ಬಳಿಕ ಪರಿಸ್ಥಿತಿ ಹದಗೆಟ್ಟಿದೆ. 2018ರ ಬಳಿಕ ರಾಷ್ಟ್ರೀಯ ನಿರುದ್ಯೋಗ ಸರಾಸರಿಗಿಂತ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. 2016, 2017ರಲ್ಲಿ ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇತ್ತು.

ತಲಾದಾಯ ಏರಿಕೆಯಾದರೂ ಕಡಿಮೆ

ತಲಾದಾಯ ಏರಿಕೆಯಾದರೂ ಕಡಿಮೆ

ಬಿಹಾರದ ತಲಾದಾಯ 2011-12ರ 21,750ರಿಂದ 2018-19ರ ವೇಳೆಗೆ 30,617ಕ್ಕೆ ಏರಿಕೆಯಾಗಿದೆ. ಆದರೆ ಇತರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತಿಕಡಿಮೆ ತಲಾದಾಯ ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. 2018-19ರಲ್ಲಿ ಇದು ರಾಷ್ಟ್ರೀಯ ಸರಾಸರಿಯ (92,565) ಶೇ 33.1ರಷ್ಟು ಮಾತ್ರವಿದೆ.

ಡಬ್ಲ್ಯೂಪಿಆರ್ ಅನುಪಾತ

ಡಬ್ಲ್ಯೂಪಿಆರ್ ಅನುಪಾತ

ಬಿಹಾರದ ಕೆಲಸಗಾರರ ಜನಸಂಖ್ಯೆ ಅನುಪಾತವು (ಡಬ್ಲ್ಯೂಪಿಆರ್) ಪುರುಷರಲ್ಲಿ ಶೇ 64ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಸುಮಾರು ಶೇ 8ರಷ್ಟು ಕಡಿಮೆ. 2017-18ರಲ್ಲಿ ಶೇ 55.9ರಷ್ಟು ಪುರುಷರು ಸ್ವ ಉದ್ಯೋಗಿಗಳಾಗಿದ್ದು, ಸಾಮಾನ್ಯ ಕಾರ್ಮಿಕರ ಪ್ರಮಾಣವು ಶೇ 32.1ರಷ್ಟಿದೆ. ಇದು ದೇಶದ ಒಟ್ಟು ಸಾಮಾನ್ಯ ಕಾರ್ಮಿಕರ ಪ್ರಮಾಣವಾದ ಶೇ 24.3ರಷ್ಟು ಅಧಿಕ.

ಜಿವಿಎ ಕೊಡುಗೆ

ಜಿವಿಎ ಕೊಡುಗೆ

ದೇಶದ ಕೈಗಾರಿಕಾ ವಲಯದ ಆದಾಯದಲ್ಲಿ ಬಿಹಾರದ ಕೊಡುಗೆ ಅತ್ಯಲ್ಪ. 2016-17ನೇ ಸಾಲಿನಲ್ಲಿ ದೇಶದ ಒಟ್ಟು ಮೌಲ್ಯವರ್ಧನೆಯಲ್ಲಿ (ಜಿವಿಎ) ಶೇ 0.5ರಷ್ಟು ಮಾತ್ರವೇ ಕೊಡುಗೆ ನೀಡಿದ್ದ ಬಿಹಾರ, ಈ ವರ್ಷದ ಆರಂಭದಲ್ಲಿ ಒಟ್ಟು ಜಿಬಿಎದಲ್ಲಿ ಪಾಲನ್ನು ಶೇ 0.3ಕ್ಕೆ ಇಳಿಸಿಕೊಂಡಿದೆ.

English summary
Bihar Assembly Election 2020: Unemployment rate in bihar is higher than the national unemployment rate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X