ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಬಿಹಾರದಲ್ಲಿ ನಿತೀಶ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆ

|
Google Oneindia Kannada News

ಬಿಹಾರ ವಿಧಾನಸಭೆ ಚುನಾವಣೆ 2020ಗೆ ಸಂಬಂಧಿಸಿದಂತೆ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಂದಿದ್ದು, ಇದರಲ್ಲೂ ನಿತೀಶ್ ಕುಮಾರ್ ಅವರ ಪರ ಫಲಿತಾಂಶ ಬಂದಿದೆ. ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆಯಂತೆ ಎನ್ಡಿಎ 147 ಸ್ಥಾನಗಳಿಸಲಿದ್ದು, ನಿತೀಶ್ ಅವರು ನಾಲ್ಕನೇ ಬಾರಿಗೆ ಸಿಎಂ ಆಗಲಿದ್ದಾರೆ.

ಅಕ್ಟೋಬರ್ 01ರಿಂದ ಅಕ್ಟೋಬರ್ 23ರ ತನಕ 30, 678 ಸಾವಿರ ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿ ಟೈಮ್ಸ್ ನೌ ಹಾಗೂ ಸಿವೋಟರ್ ಸಂಸ್ಥೆ ಈ ವರದಿ ನೀಡಿವೆ.

ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ

ಎಬಿಪಿ-ಸಿವೋಟರ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎನ್ಡಿಎ ಮತ್ತೆ ಅಧಿಕಾರಕ್ಕೇರುವುದು, ನಿತೀಶ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಟೈಮ್ಸ್ ನೌ ಸಮೀಕ್ಷೆ ಫಲಿತಾಂಶ

ಟೈಮ್ಸ್ ನೌ ಸಮೀಕ್ಷೆ ಫಲಿತಾಂಶ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 122. ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆಯಂತೆ ಎನ್ಡಿಎ 147 ಸ್ಥಾನ, ಯುಪಿಎ 87, ಎಲ್ ಜೆಪಿ 9. ನಿತೀಶ್ ಕುಮಾರ್ ಅವರು ಮತ್ತೆ ಸಿಎಂ ಆಗಲಿ ಎಂದು ಹೆಚ್ಚು ಮಂದಿ ಮತ ಹಾಕಿದ್ದಾರೆ. 57 ಕ್ಷೇತ್ರಗಳಲ್ಲಿ ಫಲಿತಾಂಶ ನಿರೀಕ್ಷೆ ಅತಂತ್ರವಾಗಿದ್ದು, ಗೆಲುವಿನ ಮಾರ್ಜಿನ್ ಶೇ 3ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರರು, ಬಿಜೆಪಿ ಹಾಗೂ ಜೆಡಿಯು ಪರಸ್ಪರ ಬೆಸೆತುಕೊಂಡಿದ್ದು, ಪರಸ್ಪರ ಲಾಭದೊಂದಿಗೆ ನಡೆಯುತ್ತಿದ್ದು, ಇದರ ಪ್ರಯೋಜನ ಜನತೆಗೆ ಶೀಘ್ರದಲ್ಲೇ ಸಿಗಲಿದೆ. ಸಮೀಕ್ಷೆ ಫಲಿತಾಂಶ ನಿರೀಕ್ಷಿತವಾಗಿದೆ ಎಂದಿದ್ದಾರೆ.

2015ರಲ್ಲಿ ನಿತೀಶ್ ಅಧಿಕಾರಕ್ಕೆ

2015ರಲ್ಲಿ ನಿತೀಶ್ ಅಧಿಕಾರಕ್ಕೆ

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

ಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆ ಅಪ್ಡೇಟ್ಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆ ಅಪ್ಡೇಟ್

ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ

ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಇದೇ ನಿಯಮ ಪ್ರಿಂಟ್ ಹಾಗೂ ವೆಬ್ ಮೀಡಿಯಾಗಳಿಗೂ ಅನ್ವಯವಾಗಲಿದ್ದು, ಯಾವ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆ ಎರಡಕ್ಕೂ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ

ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

English summary
Bihar Assembly Elections 2020:Times Now-C Voter survey has predicted NDA projected to get 147, UPA 87; Nitish most preferred CM candidate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X