• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಬಿಪಿ-ಸಿವೋಟರ್ ಸಮೀಕ್ಷೆ: ಬಿಹಾರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ

|

ಬಿಹಾರ ವಿಧಾನಸಭೆ ಚುನಾವಣೆ 2020ಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಬರಲಾರಂಭಿಸಿವೆ. ಎಬಿಪಿ-ಸಿವೋಟರ್ ಸಂಸ್ಥೆ ನೀಡಿರುವ ಅಭಿಮತ ಇಲ್ಲಿದೆ. ಎಬಿಪಿ-ಸಿವೋಟರ್ ಸಂಸ್ಥೆ ಅಕ್ಟೋಬರ್ 01ರಿಂದ ಅಕ್ಟೋಬರ್ 28ರ ತನಕ 30 ಸಾವಿರ ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲಾಗುತ್ತಿದೆ.

ಎಬಿಪಿ-ಸಿವೋಟರ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎನ್ಡಿಎ ಮತ್ತೆ ಅಧಿಕಾರಕ್ಕೇರುವುದು, ನಿತೀಶ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆ ಅಪ್ಡೇಟ್

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

ಬಿಹಾರದಲ್ಲಿ ಸಿಎಂ ಪಟ್ಟದ ರೇಸ್: ನಿತೀಶ್ ಮುಂದೆ, ತೇಜಸ್ವಿ ಹಿಂದೆ

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಇದೇ ನಿಯಮ ಪ್ರಿಂಟ್ ಹಾಗೂ ವೆಬ್ ಮೀಡಿಯಾಗಳಿಗೂ ಅನ್ವಯವಾಗಲಿದ್ದು, ಯಾವ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆ ಎರಡಕ್ಕೂ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮ್ಯಾಜಿಕ್ ನಂಬರ್ 122

ಮ್ಯಾಜಿಕ್ ನಂಬರ್ 122

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 122.

* ಈ ಪೈಕಿ ಎನ್ಡಿಎ 135 ರಿಂಡ 159 ಸ್ಥಾನಗಳನ್ನು ಗೆಲ್ಲಬಹುದು.

ಆರ್ ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 7 7 ರಿಂದ 98 ಸ್ಥಾನ ಗಳಿಸಬಹುದು.

* ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ 1 ರಿಂದ 5 ಸ್ಥಾನಗಳಿಸಲಿದ್ದರೆ, ಇತರೆ ಪಕ್ಷಗಳು 4 ರಿಂದ 8 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.

ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಡೆಸಿದ ಸಮೀಕ್ಷೆ

ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಡೆಸಿದ ಸಮೀಕ್ಷೆ

ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇ 29.5 ಪಡೆದು ನಿತೀಶ್ ಮಿಕ್ಕವರಿಗಿಂತ ಮುಂದಿದ್ದಾರೆ.

ಶೇಕಡಾವಾರು ಮತಗಳಿಕೆಯಲ್ಲಿ ಎನ್ಡಿಎ ಶೇ 28ರಷ್ಟು ಗಳಿಸಿದ್ದರೆ, ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಶೇ 46ರಷ್ಟು ಮತಗಳಿಸುವ ಸಾಧ್ಯತೆಯಿದೆ. ಎಲ್ ಜೆಪಿ ಶೇ 4 ಹಾಗೂ ಇತರೆ ಪಕ್ಷಗಳು ಶೇ 22ರಷ್ಟು ಮತಗಳಿಸಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆ

ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನ10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ

ನ10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

English summary
Bihar Assembly Elections 2020: ABP-CVoter Opinion Poll predicts clear majority to Nitish Kumar-led NDA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X