ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ಬಿಜೆಪಿಯ ಮತ ಗಳಿಕೆಯಲ್ಲಿ ಭಾರಿ ಏರಿಕೆ

|
Google Oneindia Kannada News

ಪಟ್ನಾ, ಅಕ್ಟೋಬರ್ 17: ಪ್ರಾದೇಶಿಕ ಪಕ್ಷಗಳು ಹೆಚ್ಚು ಪ್ರಾಬಲ್ಯ ಸಾಧಿಸಿದ್ದ ಬಿಹಾರದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳ ಮತ ಗಳಿಕೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಮುಖ್ಯವಾಗಿ ಬಿಜೆಪಿಯು ಬಿಹಾರದಲ್ಲಿ ತನ್ನ ಸಂಪೂರ್ಣ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ತನ್ನ ಮತ ಹಂಚಿಕೆಯನ್ನು ದುಪ್ಪಟ್ಟುಗೊಳಿಸಿಕೊಂಡಿದ್ದರ ಜತೆಯಲ್ಲಿಯೇ ಬಿಹಾರದಲ್ಲಿ ಎರಡಂಕಿ ಮತಗಳಿಕೆಯನ್ನು ಕಂಡ ಏಕೈಕ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಯೂ ಬಿಜೆಪಿಗೆ ಇದೆ.

2000ದ ನವೆಂಬರ್‌ನಲ್ಲಿ ಬಿಹಾರದಿಂದ ಜಾರ್ಖಂಡ್ ಬೇರ್ಪಟ್ಟ ಸಂದರ್ಭದಿಂದ ರಾಜ್ಯದಲ್ಲಿ ನಾಲ್ಕು ವಿಧಾನಸಭೆ ಚುನಾವಣೆಗಳು ನಡೆದಿವೆ. 2005ರ ಫೆಬ್ರವರಿ ಮತ್ತು ಅಕ್ಟೋಬರ್, 2010 ಮತ್ತು 2015ರಲ್ಲಿ ಚುನಾವಣೆ ನಡೆದಿದ್ದು, ಈ ಚುನಾವಣೆಗಳಲ್ಲಿ ಪಾಲ್ಗೊಂಡ ಆರು ರಾಷ್ಟ್ರೀಯ ಪಕ್ಷಗಳ ನಡುವೆ ಮತ ಹಂಚಿಕೆ ಆಸಕ್ತಿಕರವಾಗಿದೆ. 2005ರ ಫೆಬ್ರವರಿಯಲ್ಲಿ ಸೇ 23.57ರಷ್ಟಿದ್ದ ಬಿಜೆಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳಗೊಂಡಂತೆ ಆರು ರಾಷ್ಟ್ರೀಯ ಪಕ್ಷಗಳ ಮತ ಹಂಚಿಕೆಯು 2015ರ ವೇಳೆಗೆ ಶೇ 35.6ಕ್ಕೆ ಏರಿಕೆಯಾಗಿದೆ.

ಬಿಹಾರ ಮಹಾಘಟಬಂಧನ ಮೈತ್ರಿಕೂಟದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಬಿಹಾರ ಮಹಾಘಟಬಂಧನ ಮೈತ್ರಿಕೂಟದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬಿಹಾರ ವಿಭಜನೆಯಾಗಿದ್ದರೂ 2005ರಲ್ಲಿ (ಫೆಬ್ರವರಿ) ಬಿಜೆಪಿ ಪಡೆದಿದ್ದ 10.9%ರ ಮತಹಂಚಿಕೆಯು 2015ರಲ್ಲಿ 24.42%ಕ್ಕೆ ಏರಿಕೆಯಾಗುತ್ತು. ಈ ಹಿಂದೆ 102-103 ಸೀಟುಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, 2015ರಲ್ಲಿ 157 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಸಹ ಮತ ಹಂಚಿಕೆ ಏರಿಕೆಗೆ ಕಾರಣಗಳಲ್ಲಿ ಒಂದು. 2015ರ ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಬಿಜೆಪಿ, ಜೆಡಿಯು ಜತೆಗೂಡಿ ಸ್ಪರ್ಧಿಸಿತ್ತು. ಆದರೆ, ಇತರೆ ಪಕ್ಷಗಳೂ ಹೆಚ್ಚಿನ ಸೀಟುಗಳಲ್ಲಿ ಸ್ಪರ್ಧಿಸಿದ್ದರೂ, ಅವುಗಳ ಮತ ಹಂಚಿಕೆ ಇಳಿಕೆಯಾಗಿದೆ. ಮುಂದೆ ಓದಿ.

ಇತರೆ ಪಕ್ಷಗಳಿಗೆ ಹಿನ್ನಡೆ

ಇತರೆ ಪಕ್ಷಗಳಿಗೆ ಹಿನ್ನಡೆ

2015ರಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿಯೇ ಅತಿ ಹೆಚ್ಚು (228) ಸೀಟುಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಿತ್ತು. ಬಿಜೆಪಿ 157, ಸಿಪಿಐ 98, ಸಿಪಿಎಂ 43, ಕಾಂಗ್ರೆಸ್ 41 ಮತ್ತು ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು. ಕಾಂಗ್ರೆಸ್‌ನ ಸ್ವಲ್ಪಮಟ್ಟಿನ ಮತ ಹಂಚಿಕೆ ಏರಿಕೆಯನ್ನು ಹೊರತುಪಡಿಸಿ, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತಹಂಚಿಕೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆಬಿಹಾರ ಚುನಾವಣೆಯಲ್ಲಿ ಎನ್‌ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆ

ಬಿಜೆಪಿ ಮತಗಳಿಗೆ ಏರಿಕೆ

ಬಿಜೆಪಿ ಮತಗಳಿಗೆ ಏರಿಕೆ

2005-2015ರ ನಡುವೆ ಬಿಜೆಪಿಯ ಸ್ಪರ್ಧೆ 102 ರಿಂದ 157ಕ್ಕೆ ಏರಿಕೆಯಾಗಿತ್ತು. ಹಾಗೆಯೇ ಅದರ ಮತ ಗಳಿಕೆ ಪ್ರಮಾಣ ಶೇ 10.97ರಿಂದ ಶೇ 24.42ಕ್ಕೆ ಹೆಚ್ಚಳವಾಗಿತ್ತು. 2010ರಲ್ಲಿ ಕಾಂಗ್ರೆಸ್ ಗರಿಷ್ಠ ಎಂದರೆ ಎಲ್ಲ 243 ಸೀಟುಗಳಲ್ಲಿ ಸ್ಪರ್ಧಿಸಿದ್ದರೆ, 2015ರಲ್ಲಿ ಕನಿಷ್ಠ 41 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಆದರೆ ಅದರ ಮತ ಗಳಿಕೆ 2005ರಲ್ಲಿ ಶೇ 5ರಿಂದ 2010ರ ಶೇ 8.37ಕ್ಕೆ ಮಾತ್ರವೇ ಏರಿಕೆಯಾಗಿತ್ತು.


ಬಿಹಾರದಲ್ಲಿ ಪ್ರತಿ ಬಾರಿಯೂ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿರುವ ಬಿಎಸ್‌ಪಿ ಶೇ 4.41ರಷ್ಟು ಮತ ಗಳಿಕೆಯೊಂದಿಗೆ ಆರಂಭಿಸಿ ಈಗ ಶೇ 2.07ಕ್ಕೆ ಕುಸಿದಿದೆ.

ಎಡಪಕ್ಷಗಳ ಕುಸಿತ

ಎಡಪಕ್ಷಗಳ ಕುಸಿತ

ಸಿಪಿಐ ಅಭ್ಯರ್ಥಿಗಳ ಸಂಖ್ಯೆ 2005ರಲ್ಲಿ 17 ಕ್ಷೇತ್ರಗಳಿಂದ 2015ರಲ್ಲಿ 98ಕ್ಕೆ ಏರಿಕೆಯಾಗಿದ್ದರೂ, ಮತಗಳ ಹಂಚಿಕೆ 1.36% ರಿಂದ 2.09%ರಷ್ಟು ಮಾತ್ರವೇ ಬದಲಾಗಿದೆ. ಸಿಪಿಎಂ ಸ್ಥಿತಿ ಇನ್ನೂ ಕಳಪೆಯಾಗಿದೆ. 2005ರಲ್ಲಿ 10 ಸ್ಥಾನದಲ್ಲಿ ಸ್ಪರ್ಧಿಸಿ 0.61% ಮತ ಪಡೆದಿದ್ದ ಸಿಪಿಎಂ, 2015ರಲ್ಲಿ 43 ಕ್ಷೇತ್ರಗಳಲ್ಲಿ ಪಡೆದಿದ್ದು ಶೇ 0.71 ಮತಗಳನ್ನು ಮಾತ್ರ. 2005ರಲ್ಲಿ ಎಂಟು ಸೀಟುಗಳಲ್ಲಿ ಮಾತ್ರವೇ ಕಣಕ್ಕಿಳಿದಿದ್ದ ಎನ್‌ಸಿಪಿ, 2010ರಲ್ಲಿ 171 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿತ್ತು. ಆದರೆ ಅದು 1.82%ಕ್ಕಿಂತ ಹೆಚ್ಚು ಮತಗಳನ್ನೇನೂ ಪಡೆಯಲಿಲ್ಲ.

ಬಿಹಾರ: 5 ವರ್ಷಗಳಲ್ಲೇ ಮಾಜಿ ಸಿಎಂ ಆಸ್ತಿಯಲ್ಲಿ 16 ಲಕ್ಷ ಇಳಿಕೆ!ಬಿಹಾರ: 5 ವರ್ಷಗಳಲ್ಲೇ ಮಾಜಿ ಸಿಎಂ ಆಸ್ತಿಯಲ್ಲಿ 16 ಲಕ್ಷ ಇಳಿಕೆ!

Recommended Video

Corona ರೋಗದ ಮೊದಲನೇ ಲಕ್ಷಣ ನೆಗಡಿ | Oneindia Kannada
ಪ್ರಾದೇಶಿಕ ಪಕ್ಷಗಳ ಮತ ಗಳಿಕೆ

ಪ್ರಾದೇಶಿಕ ಪಕ್ಷಗಳ ಮತ ಗಳಿಕೆ

ಬಿಹಾರದ ಮೂರು ಪ್ರಮುಖ ಪ್ರಾದೇಶಿಕ ಪಕ್ಷಗಳ ನಡುವಿನ ಮತ ಹಂಚಿಕೆ ಪ್ರಮಾಣವನ್ನು ಹೋಲಿಸಿದರೆ, 2005ರ ಅಕ್ಟೋಬರ್‌ನಲ್ಲಿ ಎಲ್‌ಜೆಪಿ 203 ಸೀಟುಗಳಲ್ಲಿ ಸ್ಪರ್ಧಿಸಿ 11.10% ಮತಗಳನ್ನು ಪಡೆದಿತ್ತು. ಆರ್‌ಜೆಡಿ 175 ಸ್ಥಾನಗಳಲ್ಲಿ ಶೇ 23.45 ಮತಗಳನ್ನು ಗಳಿಸಿತ್ತು. ಹಾಗೆಯೇ ಜೆಡಿಯು 139 ಸ್ಥಾನಗಳಿಂದ ಶೇ 20.46 ಮತಗಳನ್ನು ಗಳಿಸಿತ್ತು. 2015ರಲ್ಲಿ ಎಲ್‌ಜೆಪಿ ಶೇ 4.83 (42 ಕ್ಷೇತ್ರ), ಆರ್‌ಜೆಡಿ ಶೇ 18.35 (101 ಸ್ಥಾನ) ಮತ್ತು ಜೆಡಿಯು ಶೇ 16.83 (101 ಸ್ಥಾನ) ಮತಗಳನ್ನು ಪಡೆದುಕೊಂಡಿದ್ದವು.

ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಬಿಹಾರದ ಪ್ರಾದೇಶಿಕ ಪಕ್ಷಗಳ ಮತ ಗಳಿಕೆಯಲ್ಲಿ ಇಳಿಕೆಯಾಗಿದೆ. 2005ರಲ್ಲಿ ಶೇ 57.39ರಿಂದ 2015ರಲ್ಲಿ ಶೇ 42.58ಕ್ಕೆ ಕುಸಿದಿತ್ತು.

English summary
Bihar Assembly Election 2020: BJP vote share has surged since 2005 as compared to other national parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X