ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ಕಣದಲ್ಲಿ 328 ಕ್ರಿಮಿನಲ್ ಹಿನ್ನೆಲೆಯವರು, 375 ಕೋಟ್ಯಧಿಪತಿಗಳು

|
Google Oneindia Kannada News

ಪಟ್ನಾ, ಅಕ್ಟೋಬರ್ 20: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ 1066 ಅಭ್ಯರ್ಥಿಗಳ ಪೈಕಿ 1064 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ವಿಶ್ಲೇಷಣೆಗೆ ಒಳಪಡಿಸಿದೆ. ಅಕ್ಟೋಬರ್ 28ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ 375 ಮಂದಿ ಕೋಟ್ಯಧಿಪತಿಗಳು ಕಣದಲ್ಲಿರುವುದು ಗೊತ್ತಾಗಿದೆ. ಹಾಗೆಯೇ ಮೊದಲ ಹಂತದ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳಲ್ಲಿ 328 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ ಟ್ರಕ್ ಚಾಲಕನ ಮಗಳು ಬಿಹಾರದ ಅತಿ ಶ್ರೀಮಂತ ಅಭ್ಯರ್ಥಿ

ಬಿಹಾರ ವಿಧಾನಸಭೆ ಚುನಾವಣೆ 2020ರ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವವರಲ್ಲಿ 244 (ಶೇ 23) ಅಭ್ಯರ್ಥಿಗಳು ಅತ್ಯಂತ ಗಂಭೀರ ಅಪರಾಧ ಪ್ರಕರಣಗಳನ್ನು (ಹಲ್ಲೆ, ಕೊಲೆ, ಅಪಹರಣ, ಅತ್ಯಾಚಾರ ಸಂಬಂಧಿ ಪ್ರಕರಣಗಳು) ಎದುರಿಸುತ್ತಿದ್ದಾರೆ.

ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?

ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಅಪರಾಧ ಹಿನ್ನೆಲೆಯುಳ್ಳ ಅತಿ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರ ನಂತರದ ಸ್ಥಾನದಲ್ಲಿ ಬಿಜೆಪಿ ಇದೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ, ಆರ್‌ಜೆಡಿಯ 41 ಅಭ್ಯರ್ಥಿಗಳಲ್ಲಿ 30 ಮಂದಿ (73%) ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಕಣಕ್ಕಿಳಿಸುತ್ತಿರುವ 29 ಅಭ್ಯರ್ಥಿಗಳ ಪೈಕಿ 21 ಮಂದಿ (72%) ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಮುಂದೆ ಓದಿ.

ಅಪರಾಧದ ಹಿನ್ನೆಲೆಯವರು

ಅಪರಾಧದ ಹಿನ್ನೆಲೆಯವರು

ಚಿರಾಜ್ ಪಾಸ್ವಾನ್ ಅವರ ಎಲ್‌ಜೆಪಿಯಿಂದ 41 ಅಭ್ಯರ್ಥಿಗಳಲ್ಲಿ 24 (59%) ಅಭ್ಯರ್ಥಿಗಳು, ಕಾಂಗ್ರೆಸ್‌ನ 21 ರಲ್ಲಿ 12 (57%) ಅಭ್ಯರ್ಥಿಗಳು, ಜೆಡಿಯುದ 35ರಲ್ಲಿ 15 (43%) ಅಭ್ಯರ್ಥಿಗಳು ಮತ್ತು ಬಿಎಸ್‌ಪಿಯ 26 ಅಭ್ಯರ್ಥಿಗಳ ಪೈಕಿ 8 (31%) ಮಂದಿ ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ.

ಅತಿ ಗಂಭೀರ ಅಪರಾಧದ ಹಿನ್ನೆಲೆ

ಅತಿ ಗಂಭೀರ ಅಪರಾಧದ ಹಿನ್ನೆಲೆ

* ಆರ್‌ಜೆಡಿಯ 22 ಅಭ್ಯರ್ಥಿಗಳು (ಶೇ 54)

* ಎಲ್‌ಜೆಪಿಯ 20 ಅಭ್ಯರ್ಥಿಗಳು (ಶೇ 49)

* ಬಿಜೆಪಿಯ 13 ಅಭ್ಯರ್ಥಿಗಳು (ಶೇ 45)

* ಕಾಂಗ್ರೆಸ್‌ನ 9 ಅಭ್ಯರ್ಥಿಗಳು (ಶೇ 43)

* ಜೆಡಿಯುದ 10 ಅಭ್ಯರ್ಥಿಗಳು (ಶೇ 29)

* ಬಿಎಸ್‌ಪಿಯ 5 ಅಭ್ಯರ್ಥಿಗಳು (ಶೇ 19) ಅತಿ ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.

ಭಾರತದಲ್ಲಿ ಚುನಾವಣೆಗಳ ಖರ್ಚಿನ ಮಿತಿ ಶೇ.10ರಷ್ಟು ಹೆಚ್ಚಳಭಾರತದಲ್ಲಿ ಚುನಾವಣೆಗಳ ಖರ್ಚಿನ ಮಿತಿ ಶೇ.10ರಷ್ಟು ಹೆಚ್ಚಳ

29 ಅಭ್ಯರ್ಥಿಗಳು ಮಹಿಳೆಯ ವಿರುದ್ಧ ಅಪರಾಧ ಎಸಗಿದ ಪ್ರಕರಣ ಎದುರಿಸುತ್ತಿದ್ದರೆ, ಅವರಲ್ಲಿ ಮೂವರು ಅತ್ಯಾಚಾರ ಸಂಬಂಧಿ (ಐಪಿಸಿ ಸೆಕ್ಷನ್ 375 ಮತ್ತು 376) ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಮೊದಲ ಹಂತದಲ್ಲಿ ಕೋಟ್ಯಧಿಪತಿಗಳು

ಮೊದಲ ಹಂತದಲ್ಲಿ ಕೋಟ್ಯಧಿಪತಿಗಳು

1064 ಅಭ್ಯರ್ಥಿಗಳ ಪೈಕಿ 375 ಮಂದಿ (ಶೇ 35) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. 93 ಅಭ್ಯರ್ಥಿಗಳು (ಶೇ 9) ತಮ್ಮ ಸಂಪತ್ತು 5 ಕೋಟಿ ರೂ.ಗೂ ಅಧಿಕವಿದೆ ಎಂದು ತಿಳಿಸಿದ್ದಾರೆ. 123 ಮಂದಿ (ಶೇ 12) ಅಭ್ಯರ್ಥಿಗಳು 2-5 ಕೋಟಿ ರೂ ಸಂಪತ್ತು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು ಅಭ್ಯರ್ಥಿಗಳ ಸರಾಸರಿ ಆಸ್ತಿ 1.99 ಕೋಟಿ ರೂ ಮೌಲ್ಯದ್ದಾಗಿದೆ.

ಪಕ್ಷವಾರು ಕೋಟ್ಯಧಿಪತಿಗಳು

ಪಕ್ಷವಾರು ಕೋಟ್ಯಧಿಪತಿಗಳು

* ಆರ್‌ಜೆಡಿ 41 ಅಭ್ಯರ್ಥಿಗಳಲ್ಲಿ 39 ಮಂದಿ (ಶೇ 95) 1 ಕೋಟಿ ರೂ.ಗೂ ಅಧಿಕ ಸಂಪತ್ತು ಘೋಷಿಸಿದ್ದಾರೆ.

* ಜೆಡಿಯುದಲ್ಲಿ 35 ಅಭ್ಯರ್ಥಿಗಳಲ್ಲಿ 31 (ಶೇ 89) ಮಂದಿ

* ಬಿಜೆಪಿಯಲ್ಲಿ 29 ಅಭ್ಯರ್ಥಿಗಳಲ್ಲಿ 24 (ಶೇ 83) ಮಂದಿ

* ಎಲ್‌ಜೆಪಿಯ 41 ರಲ್ಲಿ 30 ಅಭ್ಯರ್ಥಿಗಳು (ಶೇ 73)

* ಕಾಂಗ್ರೆಸ್‌ನ 21ರಲ್ಲಿ 14 ಅಭ್ಯರ್ಥಿಗಳು (ಶೇ 67)

* ಬಿಎಸ್‌ಪಿಯ 26ರಲ್ಲಿ 12 ಅಭ್ಯರ್ಥಿಗಳು (ಶೇ 46).

ಸಂಪತ್ತುಗಳ ವಿವರ

ಸಂಪತ್ತುಗಳ ವಿವರ

* 5 ಕೋಟಿ ಮತ್ತು ಅದಕ್ಕಿಂತ ಹೆಚ್ಚು 93 ಅಭ್ಯರ್ಥಿಗಳು'

* 2-5 ಕೋಟಿ ರೂ 123 ಅಭ್ಯರ್ಥಿಗಳು

* 50 ಲಕ್ಷದಿಂದ 2ಕೋಟಿ ರೂ- 301 ಅಭ್ಯರ್ಥಿಗಳು

* 10-50 ಲಕ್ಷ ರೂ- 315 ಅಭ್ಯರ್ಥಿಗಳು

* 10 ಲಕ್ಷಕ್ಕಿಂತ ಕಡಿಮೆ- 232 ಅಭ್ಯರ್ಥಿಗಳು

English summary
Bihar Assembly Election 2020: 328 candidates with criminal case and 375 candidates who are crorepatis are contesting in the first phase election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X