ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Super Buck Moon : ಜುಲೈ 13ರಂದು ಈ ವರ್ಷದ ಅತಿದೊಡ್ಡ ಸೂಪರ್‌ ಮೂನ್, ವಿಶೇಷತೆ

|
Google Oneindia Kannada News

ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಜುಲೈ 13ರಂದು ಕಾಣಸಿಗಲಿದೆ. ವಿಶ್ವದ ಅನೇಕ ದೇಶಗಳಲ್ಲಿ ಈ ವಿಶೇಷ ವಿದ್ಯಮಾನವನ್ನು ವೀಕ್ಷಿಸಬಹುದು. ಹುಣ್ಣಿಮೆ ಚಂದ್ರನನ್ನು ದೊಡ್ಡ ಆಕಾರದಲ್ಲಿ ಕಂಡು ಕಣ್ತುಂಬಿಸಿಕೊಳ್ಳಬಹುದು.

ಮಂಗಳವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆವರೆಗೆ ಮೂರು ದಿನಗಳ ಕಾಲ ಹುಣ್ಣಿಮೆ ಚಂದ್ರನ ಮನೋಹರ ದೃಶ್ಯವನ್ನು ಕಾಣಬಹುದು. ಭಾರತೀಯ ಕಾಲಮಾನದಲ್ಲಿ ಬುಧವಾರ ಮಧ್ಯ ರಾತ್ರಿ ಪರಿಪೂರ್ಣ ಸೂಪರ್ ಮೂನ್ ದರ್ಶನ ಆಗುತ್ತದೆ.

ಸೂಪರ್ ಸುದ್ದಿ: ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 960 ರೂ ಇಳಿಕೆ! ಸೂಪರ್ ಸುದ್ದಿ: ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 960 ರೂ ಇಳಿಕೆ!

ಸೂಪರ್ ಮೂನ್ ಎಂದರೆ?; ಹುಣ್ಣಿಮೆ ಅಥವಾ ಪೌರ್ಣಿಮೆ ದಿನದಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಅಂದರೆ ಅಂದು ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇರುತ್ತದೆ. ಸೂರ್ಯನ ಪ್ರಕಾಶದಲ್ಲಿ ಇಡೀ ಚಂದ್ರ ಹೊಳೆಯುತ್ತಿರುವುದನ್ನು ಭೂಮಿಯಿಂದ ಕಾಣಬಹುದು.

Biggest Supermoon of 2022 on July 13: When, Where to Watch the Super Buck Moon

ಪ್ರತೀ ತಿಂಗಳು ಹುಣ್ಣಿಮೆ ಬರುತ್ತದೆ. ಒಂದು ವರ್ಷದಲ್ಲಿ ಆ ದಿನದಂದು ಭೂಮಿಗೆ ಚಂದ್ರ ಅತಿ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ ಮೂನ್ ಎನ್ನುತ್ತಾರೆ. ವರ್ಷದಲ್ಲಿ ಮೂರ್ನಾಲ್ಕು ಸೂಪರ್ ಮೂನ್ ವಿದ್ಯಮಾನ ಇದೆ. ಈ ವಾರ ಬರುವ ಸೂಪರ್ ಮೂನ್ ಅತಿ ದೊಡ್ಡದು.

ಸೂರ್ಯನನ್ನು ಭೂಮಿ ಸುತ್ತುಹಾಕಲು 365 ದಿನ ತೆಗೆದುಕೊಳ್ಳುತ್ತದೆ. ಚಂದ್ರ ಭೂಮಿಯ ಪ್ರದಕ್ಷಿಣೆಗೆ 27 ದಿನ ಬೇಕಾಗುತ್ತದೆ. ಹೀಗೆ ಸುತ್ತು ಹಾಕುವಾಗ ಭೂಮಿಗೆ ಚಂದ್ರ ಅತಿ ಸಮೀಪ ಬರುವುದು 3,63,600 ಕಿಮೀ ದೂರದಲ್ಲಿ. ಈ ಅಂತರವನ್ನು ಪೆರಿಗೀ (Perigee) ಎನ್ನುತ್ತಾರೆ. ಅತಿ ದೂರ ಎಂದರೆ 4,05,500 ಕಿಮೀ. ಅತಿ ಕಡಿಮೆ ದೂರವಾದ ಪೆರಿಗಿಯ ಶೇ. 90ರಷ್ಟು ಅಂತರಕ್ಕೆ ಹುಣ್ಣಿಮೆಯಂದು ಚಂದ್ರ ಬಂದರೆ ಅದಕ್ಕೆ ಸೂಪರ್ ಮೂನ್ ಎನ್ನುವುದು.

ಬಕ್ ಸೂಪರ್ ಮೂನ್; ಈ ಬಾರಿಯ ಸೂಪರ್ ಮೂನ್ ಅನ್ನು ಬಕ್ ಸೂಪರ್ ಮೂನ್, ಥಂಡರ್ ಸೂಪರ್ ಮೂನ್, ಹೇ ಮೂನ್, ಮೀಡ್ ಮೂನ್ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಆಯಾ ಪ್ರದೇಶಗಳ ವೈಶಿಷ್ಟ್ಯತೆಗೆ ತಕ್ಕಂತೆ ಈ ಹೆಸರು ಕೊಡಲಾಗಿದೆ. ಬಕ್ ಎಂಬುದು ಜಿಂಕೆ ಜಾತಿಯ ಕಾಡುಪ್ರಾಣಿ. ಈ ಸೂಪರ್ ಮೂನ್ ಅವಧಿಯಲ್ಲಿ ಈ ಪ್ರಾಣಿಗಳಿಗೆ ಕೊಂಬು ಬೆಳೆಯುತ್ತದಂತೆ. ಹೀಗಾಗಿ, ಇದಕ್ಕೆ ಬಕ್ ಸೂಪರ್ ಮೂನ್ ಎಂದು ಕರೆಯುತ್ತಾರೆ.

Biggest Supermoon of 2022 on July 13: When, Where to Watch the Super Buck Moon

ಅಲೆಗಳ ತೀವ್ರತೆ ಹೆಚ್ಚು; ಹುಣ್ಣಿಮೆ ದಿನದಂದು ಸಮುದ್ರದ ಅಲೆಗಳು ಹೆಚ್ಚು ರಭಸದಲ್ಲಿ ಅಪ್ಪಳಿಸುವುದನ್ನು ನೀವು ನೀಡಿರಬಹುದು. ಆದರೆ, ಸೂಪರ್ ಮೂನ್ ವೇಳೆ ಈ ಅಲೆ ಇನ್ನೂ ತೀವ್ರತೆಯಲ್ಲಿ ಏಳುತ್ತದೆ. ಈ ವಾರ ಬರಲಿರುವ ಸೂಪರ್ ಮೂನ್ ಈ ವರ್ಷದ ಅತಿ ದೊಡ್ಡದು ಎನಿಸಿದ್ದು, ಸಮುದ್ರದ ಅಲೆಗಳು ಇನ್ನೂ ಹೆಚ್ಚು ತೀವ್ರತೆಯಲ್ಲಿ ಪುಟಿದೇಳುವುದನ್ನು ಕಾಣಬಹುದು. ಹೀಗಾಗಿ, ನೀವು ಈ ಹುಣ್ಣಿಮೆಯಂದು ಸಮುದ್ರದ ಬಳಿ ಹೋದರೆ ಹುಷಾರ್.

(ಒನ್ಇಂಡಿಯಾ ಸುದ್ದಿ)

Recommended Video

Basavaraj Bommai ಇಂದಿನಿಂದ ಎರೆಡು ದಿನ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ | *Karnataka | OneIndia

English summary
Read on to know about biggest 'Supermoon' of the Year is on July 13: When, Where to Watch the Super Buck Moon and other details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X