ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನತಿಯತ್ತ ಮೈನ್‌ಪುರಿ ತಂಬಾಕು: ವ್ಯಾಪಾರಿಗಳಿಗೆ ನೆರವಾಗುತ್ತಾ 3ನೇ ಹಂತದ ಚುನಾವಣೆ

|
Google Oneindia Kannada News

ಲಕ್ನೋ ಫೆಬ್ರವರಿ 16: ಉತ್ತರ ಪ್ರದೇಶ ಮೂರನೇ ಹಂತದ ಮತದಾನ ಫೆಬ್ರವರಿ 20 ರಂದು ನಡೆಯಲಿದೆ. ಈ ಸಮಯದಲ್ಲಿ ಅಖಿಲೇಶ್ ಯಾದವ್ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ. ಈ ಮಧ್ಯೆ ಪ್ರಸಿದ್ಧ ಮೈನ್‌ಪುರಿ ತಂಬಾಕು ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೆಸರಾಂತ ಮೈನ್‌ಪುರಿ ತಂಬಾಕು ಮಾರಾಟಗಾರರ ವ್ಯಾಪಾರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಡಿಮೆಯಾಗಿದೆ. ತಂಬಾಕು ಮಾರಾಟಗಾರರಿಗೆ ಸವಾಲುಗಳು ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಮೈನ್‌ಪುರಿ ತಂಬಾಕಿಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬೇಡಿಕೆಯಿತ್ತು. ಈಗ ಅದರ ಮೇಲಿನ ನಿರ್ಬಂಧಗಳಿಂದಾಗಿ ಕೆಲವೇ ಜನರು ಇದರ ವ್ಯಾಪಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ತಮ್ಮ ವ್ಯಾಪಾರ ನಡೆಸಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎನ್ನುತ್ತಾರೆ ಮೈನ್‌ಪುರಿ ತಂಬಾಕು ಅಂಗಡಿ ಮಾಲೀಕರು.

ಬೆಲೆ ಬಾಳುವ ತಂಬಾಕು ಕಚ್ಚಾ ವಸ್ತುಗಳಿಂದಾಗಿ ವ್ಯಾಪಾರವನ್ನು ಉಳಿಯುವ ಸವಾಲು ಎದುರಾಗಿದೆ ಎಂದು ಅಂಗಡಿ ಮಾಲೀಕರು ಹೇಳಿಕೊಂಡಿದ್ದಾರೆ. ತಮ್ಮ ತಂಬಾಕು ಕಪೂರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಎಂದು ತಂಬಾಕು ಮಾರಾಟಗಾರರು ಹೇಳುತ್ತಾರೆ. ಇದರಲ್ಲಿ ಬಹಳ ನುಣ್ಣಗೆ ಕತ್ತರಿಸಿದ ವೀಳ್ಯದೆಲೆ ಮತ್ತು ರುಬ್ಬಿದ ಲವಂಗ ಮತ್ತು ಏಲಕ್ಕಿ, ಕೇವ್ರಾ ಮತ್ತು ಶ್ರೀಗಂಧದ ಪುಡಿಯನ್ನು ಅದರಲ್ಲಿ ಬೆರೆಸಲಾಗುತ್ತದೆ. ಮೂರನೇ ಹಂತದ ಚುನಾವಣೆಯ ಮಧ್ಯೆ ಮೌನಪುರಿ ತಂಬಾಕು ಮಾರಾಟ ಮಾಡುವ ಅಂಗಡಿಕಾರರು ಕಚ್ಚಾ ವಸ್ತುಗಳಿಂದ ತೆರಿಗೆ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಯುಪಿ: ಕರ್ಹಾಲ್‌ನ ಬಿಜೆಪಿ ಅಭ್ಯರ್ಥಿ ವಾಹನದ ಮೇಲೆ ದಾಳಿ
'ತಂಬಾಕು ವ್ಯಾಪಾರ ಅಂತ್ಯ'

ಕಳೆದ 6 ದಶಕಗಳಿಂದ ಮುನಿಮ್ ಜಿ ಎಂಬ ಹೆಸರಿನಲ್ಲಿ ಕಪೂರಿ ಮತ್ತು ಮೈನ್‌ಪುರಿ ತಂಬಾಕು ಅಂಗಡಿಯನ್ನು ನಡೆಸುತ್ತಿರುವ ವಿಮಲ್ ಪಾಂಡೆ, ದುಬಾರಿ ಕಚ್ಚಾ ವಸ್ತುಗಳಿಂದಾಗಿ ತಮ್ಮ ವ್ಯಾಪಾರವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ ಎಂದು ಹೇಳುತ್ತಾರೆ. ತಾವು ಕಳೆದ 60 ವರ್ಷಗಳಿಂದ ತಂಬಾಕು ವ್ಯಾಪಾರ ಮಾಡುತ್ತಿದ್ದಾರೆ. ಕಚ್ಚಾ ವಸ್ತುವು ದುಬಾರಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಪಾನ್ ಮಸಾಲಾದೊಂದಿಗೆ ಅವರ ವ್ಯಾಪಾರವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ಅಳಿವಿನಂಚಿನಲ್ಲಿರುವ ತಂಬಾಕು ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆಗೆ ಮತ್ತೊಬ್ಬ ಅಂಗಡಿಯವರು ಈಗ ತಂಬಾಕು ವ್ಯಾಪಾರ ಅಂತ್ಯಗೊಳ್ಳುತ್ತಿದೆ. ಈ ತಂಬಾಕಿನ ಇತಿಹಾಸ ಬಹಳ ಹಳೆಯದು. ಮೈನ್‌ಪುರಿಯ ರಾಣಿ ತಂಬಾಕು ತಿನ್ನುತ್ತಿದ್ದರು. ಅಂದಿನಿಂದ ಅದರ ಟ್ರೆಂಡ್ ಶುರುವಾಯಿತು. ಆದರೀಗ ನಾವು ಉಳಿಸಿಕೊಂಡು ಕಸಬನ್ನು ನಿಲ್ಲಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Big Challenge in Front of the Shopkeepers to Save Historical f ‘Mainpuri Tobacco’
ಕಚ್ಚಾವಸ್ತುಗಳ ಮೇಲಿನ ತೆರಿಗೆ ಇಳಿಸಲು ಆಗ್ರಹ

ಯುಪಿಯಲ್ಲಿ ಮೂರನೇ ಹಂತದಲ್ಲಿ ಮೈನ್‌ಪುರಿಯಲ್ಲಿಯೂ ವಿಧಾನಸಭೆ ಚುನಾವಣೆ ನಡೆಯಲಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೈನ್‌ಪುರಿಯ ಕರ್ಹಾಲ್ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದಾರೆ. ಚುನಾವಣೆಯ ನಡುವೆಯೇ ಮೈನ್‌ಪುರಿ ತಂಬಾಕು ಅಂಗಡಿಕಾರರ ನೋವು ಮುನ್ನೆಲೆಗೆ ಬಂದಿದೆ. ಕಚ್ಚಾ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರಿಗಳ ಈ ಬೇಡಿಕೆಯನ್ನು ಅಖಿಲೇಶ್ ಈಡೇರಿಸುತ್ತಾರಾ ಕಾದು ನೋಡಬೇಕಿದೆ.

Big Challenge in Front of the Shopkeepers to Save Historical f ‘Mainpuri Tobacco’
ಎಲ್ಲರ ಚಿತ್ತ ಕರ್ಹಾಲ್‌ನತ್ತ

ಕರ್ಹಾಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಎಸ್‌ಪಿ ಬಘೇಲ್ ಕಣಕ್ಕಿಳಿದಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಿರುವಾಗ ಇಡೀ ರಾಜ್ಯದ ಕಣ್ಣು ಈ ಕ್ಷೇತ್ರದ ಮೇಲೆ ನೆಟ್ಟಿದೆ. ಫೆಬ್ರವರಿ 20 ರಂದು ಯುಪಿ ಮೂರನೇ ಹಂತದ ಚುನಾವಣೆಯಲ್ಲಿ ಕರ್ಹಾಲ್‌ನಲ್ಲಿ ಮತದಾನ ನಡೆಯಲಿದ್ದು, ಈ ಸಮಯದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

English summary
Main History of Mainpuri Tobacco is 150 to 200 years old. The biggest challenge is facing the traders to save the business. This huge demand for the government is possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X