ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಹವಾ-3: ಗಡಿಯಲ್ಲಿ ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿದ ಬೈಡನ್

|
Google Oneindia Kannada News

ಟ್ರಂಪ್ ಮಾಡಿದ್ದ ಒಂದೊಂದೇ ಎಡವಟ್ಟಿನ ಕೆಲಸಕ್ಕೆ ಬಾಂಬ್ ಇಟ್ಟು ಉಡಾಯಿಸುತ್ತಿದ್ದಾರೆ ನೂತನ ಅಧ್ಯಕ್ಷ ಬೈಡನ್. ಇದೇ ರೀತಿ ಅಮೆರಿಕ-ಮೆಕ್ಸಿಕೋ ಗಡಿಭಾಗದಲ್ಲಿ ಲಕ್ಷಾಂತರ ಕೋಟಿ ಖರ್ಚು ಮಾಡಿ ನಿರ್ಮಿಸಲು ಉದ್ದೇಶಿಸಿದ್ದ ಬಾರ್ಡರ್ ವಾಲ್‌ಗೂ ಬೈಡನ್ ಎಳ್ಳುನೀರು ಬಿಟ್ಟಿದ್ದಾರೆ. ಈ ಮೂಲಕ ಅತ್ಯಂತ ವಿವಾದಾತ್ಮಕ ಯೋಜನೆಗೆ ಅಂತ್ಯ ಹಾಡಿದ್ದಾರೆ. ಅಮೆರಿಕದ ಪ್ರಜೆಯಾಗಬೇಕು, ನಮಗೂ ನೆಮ್ಮದಿಯ ನೆಲೆ ಸಿಗಬೇಕೆಂದು ಕೋಟ್ಯಂತರ ಯುವಕರು ಕನಸು ಕಾಣುತ್ತಾರೆ. ಆದರೆ ತಮ್ಮ ಈ ಆಸೆ ಪೂರೈಸಿಕೊಳ್ಳಲು ಅವರೆಲ್ಲಾ ಅಡ್ಡದಾರಿ ಹಿಡಿಯುವುದು ಮಾಮೂಲಾಗಿದೆ.

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

ಲ್ಯಾಟಿನ್ ಅಮೆರಿಕ ಅಂದರೆ ದಕ್ಷಿಣ ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಅಮೆರಿಕದ ಒಳಗೆ ಪ್ರತಿವರ್ಷ ಲಕ್ಷಾಂತರ ಜನರು ನುಸುಳುತ್ತಾರೆ. ಆದರೆ ಇದನ್ನು ತಪ್ಪಿಸುತ್ತೇನೆ ಅಂತಾ ಗಡಿಯಲ್ಲಿ ಗೋಡೆ ಕಟ್ಟಲು ಟ್ರಂಪ್ ಮುಂದಾಗಿದ್ದರು. ಟ್ರಂಪ್ ಕೈಗೊಂಡಿದ್ದ ಈ ಯೋಜನೆಯಿಂದಾಗಿ ಅಮೆರಿಕ ಹಾಗೂ ಮೆಕ್ಸಿಕೋ ಸಂಬಂಧ ಹಾಳಾಗುವ ಮುನ್ಸೂಚನೆ ಸಿಕ್ಕಿತ್ತು.

ಇದರ ಜೊತೆಗೆ ಅಮೆರಿಕ ವಿಲನ್ ಆಗುವ ಸಾಧ್ಯತೆ ದಟ್ಟವಾಗಿತ್ತು. ಜಗತ್ತಿನ ಗಮನ ಸೆಳೆದಿದ್ದ ವಿವಾದಾತ್ಮಕ ಯೋಜನೆಗೆ ಬೈಡನ್ ಕೊನೇ ಮೊಳೆ ಹೊಡೆದು, ಟ್ರಂಪ್ ಬೆಂಬಲಿಗರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಗೋಡೆ ಕಟ್ಟುವ ದುಡ್ಡಲ್ಲಿ ‘ಅನ್ನ’..!

ಗೋಡೆ ಕಟ್ಟುವ ದುಡ್ಡಲ್ಲಿ ‘ಅನ್ನ’..!

ಬೈಡನ್ ಗೋಡೆ ಒಡೆದು ಹಾಕುವ ಜೊತೆಗೆ, ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಬಳಸುವ ದುಡ್ಡನ್ನೇ ಬಡ ಜನರಿಗೆ ನೀಡಲು ಮುಂದಾಗಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ನಲುಗಿ ಹೋಗಿರುವ ಬಡವರ ಅಭಿವೃದ್ಧಿಗೆ ಬೈಡನ್ ಪಣ ತೊಟ್ಟಿದ್ದಾರೆ. ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಅಮೆರಿಕ ಅಂದಾಜು 1 ಲಕ್ಷ 40 ಸಾವಿರ ಕೋಟಿ ವೆಚ್ಚ ಮಾಡಬೇಕಿತ್ತು. ಆದರೆ ಈ ಅಪಾರ ಪ್ರಮಾಣದ ಹಣವನ್ನು ಕೊರೊನಾ ಕಷ್ಟದಲ್ಲಿ ನರಳುತ್ತಿರುವ ಅಮೆರಿಕದ ಬಡವರಿಗೆ ಬಳಸಲು ಜೋ ಬೈಡನ್ ಆಡಳಿತ ನಿರ್ಧರಿಸಿದೆ. ಸುಮ್ಮನೆ ಟ್ರಂಪ್ ಖರ್ಚು ಮಾಡಲು ಹೊರಟಿದ್ದ ಯೋಜನೆಗೆ ಎಳ್ಳುನೀರು ಬಿಟ್ಟಂತಾಗಿದೆ.

 ಗೋಡೆ ಕಟ್ಟಿದರೂ ಪ್ರಯೋಜನವಿಲ್ಲ

ಗೋಡೆ ಕಟ್ಟಿದರೂ ಪ್ರಯೋಜನವಿಲ್ಲ

ಅಮೆರಿಕ ತನ್ನ ಗಡಿಯ ರಕ್ಷಣೆಗೆ ಗೋಡೆ ಕಟ್ಟಿದ್ರೆ ತಪ್ಪೇನು ಅಂತಾ ಎಲ್ಲರೂ ಅಂದುಕೊಳ್ಳಬಹುದು. ಆದರೆ ಈ ಯೋಜನೆಯಿಂದ ಆಗುವ ಲಾಭ ಅಷ್ಟಕ್ಕಷ್ಟೇ. ಈಗಾಗಲೇ ಅಮೆರಿಕ-ಮೆಕ್ಸಿಕೋ ಗಡಿಯ ಹಲವು ಭಾಗಗಳಲ್ಲಿ ಗಡಿ ಗೋಡೆ ನಿರ್ಮಾಣವಾಗಿದೆ. ಆದರೂ ಅಕ್ರಮ ವಲಸಿಗರು ಗೋಡೆಗಳನ್ನು ಸಲೀಸಾಗಿ ಹತ್ತಿ ಒಳನುಗ್ಗಿದ್ದಾರೆ. ಗೋಡೆ ಕಟ್ಟುವುದರಿಂದ ಅಮೆರಿಕದ ಘನತೆಗೆ ಧಕ್ಕೆ ಆಗುವ ಜೊತೆಗೆ ಲಕ್ಷಾಂತರ ಕೋಟಿ ರೂಪಾಯಿ ವ್ಯರ್ಥ ಆಗುತ್ತಿದೆ. ಹೀಗಾಗಿ ಜೋ ಬೈಡನ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಅಂತಿದ್ದಾರೆ ತಜ್ಞರು.

 ಮೂಲತಃ ಮೆಕ್ಸಿಕೋ ಜಾಗ..!

ಮೂಲತಃ ಮೆಕ್ಸಿಕೋ ಜಾಗ..!

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಈಗಿನ ಅಮೆರಿಕದ ಬಹುಭಾಗ ಮೆಕ್ಸಿಕೋ ದೇಶಕ್ಕೆ ಸೇರಬೇಕು. ಆದರೆ ಸುಮಾರು 300 ವರ್ಷಗಳ ಹಿಂದೆ ಬ್ರಿಟೀಷ್ ದೊರೆಗಳು ಯುದ್ಧ ಮಾಡಿ, ಮೆಕ್ಸಿಕೋ ದೇಶಕ್ಕೆ ಸೇರಿದ್ದ ಭೂ ಭಾಗವನ್ನೂ ಕಿತ್ತುಕೊಂಡಿದ್ದರು. ಇದು ಬಿಡಿ ಇಡೀ ಅಮೆರಿಕದಲ್ಲಿ ಸಾವಿರಾರು ವರ್ಷಗಳಿಂದ ನೆಲೆಯನ್ನು ಕಂಡುಕೊಂಡಿದ್ದ ಲಕ್ಷಾಂತರ ಮೂಲ ನಿವಾಸಿಗಳನ್ನು ಇದೇ ಮೆಕ್ಸಿಕೋ ದೇಶಕ್ಕೆ ಓಡಿಸಿದ್ದರು. ಆದರೆ ಇತಿಹಾಸ ಈಗ ಮರುಕಳಿಸುತ್ತಿದೆ. ಮೆಕ್ಸಿಕೋ ಕಡೆಯಿಂದ ಕೋಟ್ಯಂತರ ಜನರು ಗಡಿ ದಾಟಿ ನುಗ್ಗುತ್ತಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಅಮೆರಿಕ ಅವರನ್ನೆಲ್ಲಾ ಹಿಡಿದು ಜೈಲಿಗೆ ಹಾಕುತ್ತಿದೆ. ಇದು ಎಷ್ಟು ಸರಿ ಎಂಬುದು ಮತ್ತೊಂದು ವರ್ಗದ ವಾದವಾಗಿದೆ.

 ಬಡವರಿಗೆ 1 ಲಕ್ಷ ರೂಪಾಯಿ

ಬಡವರಿಗೆ 1 ಲಕ್ಷ ರೂಪಾಯಿ

ಕೊರೊನಾ ಕಂಟಕದಿಂದ ಪಾರಾಗಲು ಬೈಡನ್ ಸರ್ಕಾರ ಬೃಹತ್ ಯೋಜನೆ ಹಾಕಿಕೊಂಡು, ಸುಮಾರು 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಬೈಡನ್ ಸರ್ಕಾರದ ಮಹತ್ವಕಾಂಕ್ಷೆಯ ಪ್ಯಾಕೇಜ್‌ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಬಡ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ಕೆಲಸ ಕಳೆದುಕೊಂಡು ನರಳಾಡುತ್ತಿದ್ದ ಅಮೆರಿಕದ ಬಡ ಕುಟುಂಬಗಳಿಗೆ ಸರ್ಕಾರದ ಸಹಾಯ ಒಂದಷ್ಟು ಚೇತರಿಕೆ ನೀಡಿದೆ. ಹೀಗೆ ಪ್ರೋತ್ಸಾಹಧನ ನೀಡುವ ಜೊತೆ ಉದ್ಯೋಗ ಸೃಷ್ಟಿಸುವಲ್ಲಿಯೂ ಬೈಡನ್ ಯಶಸ್ವಿಯಾಗುತ್ತಿದ್ದಾರೆ. ಇದೀಗ ಗೋಡೆ ಕಟ್ಟುವುದನ್ನು ನಿಲ್ಲಿಸಿ, ಅದರಿಂದ ಉಳಿಯುವ ಲಕ್ಷಾಂತರ ಕೋಟಿ ಹಣವನ್ನೂ ಬಡವರ ಉದ್ಧಾರಕ್ಕೆ ಬಳಸಲು ಬೈಡನ್ ಮುಂದಾಗಿದ್ದಾರೆ.

English summary
Biden stopped the border wall project & Biden decision can save around 20 billion dollars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X