ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದೊಡ್ಡಣ್ಣ’ ಅಲ್ಲ ‘ದಡ್ಡಣ್ಣ’! ಅಮೆರಿಕದ ತಲೆಯಲ್ಲಿ ಬುದ್ಧಿನೇ ಇಲ್ವಾ?

|
Google Oneindia Kannada News

ಊರಿಗೆ ಬೆಂಕಿ ಬಿದ್ದಾಗ ಬಾವಿ ತೋಡಿದ ಕಥೆ ನೀವೆಲ್ಲಾ ಕೇಳಿರುತ್ತೀರಿ. ಇದೀಗ ಅಮೆರಿಕದ ಕಥೆ ಕೂಡ ಅದೇ ಆಗಿದೆ. ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎಂಬಂತೆ, ದಿಢೀರ್ ಅಫ್ಘಾನಿಸ್ತಾನದಿಂದ ತನ್ನ ಸೇನೆ ವಾಪಸ್ ಕರೆಸಿಕೊಂಡ ಅಮೆರಿಕ ಈಗ ಪತರಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಗ್ಯಾಂಗ್ ಕಮ್‌ಬ್ಯಾಕ್ ಮಾಡಿದೆ.

ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸದ್ಯಕ್ಕೆ ಬಾಕಿ ಉಳಿದಿರುವುದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಮಾತ್ರ. ಆದರೆ ಮಾಡೋದನ್ನೆಲ್ಲಾ ಮಾಡಿ ಈಗ ನಿದ್ದೆಯಿಂದ ಎದ್ದಿರುವ ಅಮೆರಿಕ, ಕಾಬೂಲ್ ರಕ್ಷಣೆಗೆ 5000 ಸೈನಿಕರನ್ನು ಕಳುಹಿಸಲು ಮುಂದಾಗಿದೆ.

ಬೈಡನ್ ಈ ಆಜ್ಞೆ ಹೊರಡಿಸಿದ್ದು, ಅಮೆರಿಕ ಅಧ್ಯಕ್ಷರ ನಿರ್ಧಾರ ಟೀಕೆಗೂ ಗುರಿಯಾಗಿದೆ. ಮೊದಲಿಗೆ ಅಫ್ಘಾನ್‌ನಿಂದ ದಿಢೀರ್ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದೇ ದೊಡ್ಡ ತಪ್ಪು. ಆದ್ರೆ ಈಗ ತಪ್ಪನ್ನ ಮುಚ್ಚಿಕೊಳ್ಳಲು ಅಮೆರಿಕ 5000 ಸಾವಿರ ಸೈನಿಕರನ್ನ ಹೆಚ್ಚುವರಿಯಾಗಿ ಕಳುಹಿಸಿದೆ ಎಂದು ತಜ್ಞರು ಬೇಸರ ಹೊರಹಾಕಿದ್ದಾರೆ.

ನಿಂತಲ್ಲಿ, ಕುಂತಲ್ಲಿ ಬಾಂಬ್..!

ನಿಂತಲ್ಲಿ, ಕುಂತಲ್ಲಿ ಬಾಂಬ್..!

ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಲು ಪದಗಳು ಸಾಲದು ಕಣ್ಣೀರಿನಲ್ಲೇ ಅಫ್ಘಾನ್‌ ಜನರ ಕರುಣಾಜನಕ ಸ್ಥಿತಿಗತಿ ಹೇಳಬೇಕಾಗಿದೆ. ಏಕೆಂದರೆ ಕರುಣೆಯೇ ಇಲ್ಲದ ಆ ರಾಕ್ಷಸ ತಾಲಿಬಾನಿಗಳು ಅಫ್ಘಾನ್‌ನ ಇಂಚಿಂಚಾಗಿ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನದ ಗಡಿ, ಬಹುತೇಕ ರಾಜ್ಯಗಳ ರಾಜಧಾನಿಗಳು ತಾಲಿಬಾನ್‌ನ ವಶಕ್ಕೆ ಸಿಕ್ಕಿದ್ದಾಗಿದೆ. ಇನ್ನೇನಿದ್ದರೂ ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ಉಗ್ರರ ಕೆಂಗಣ್ಣು ನೆಟ್ಟಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಕುಂತಲ್ಲಿ, ನಿಂತಲ್ಲಿ ಬರೀ ಬಾಂಬ್ ಹಾಗೂ ಗುಂಡಿನ ಸದ್ದು ಕೇಳುತ್ತಿದೆ. ಲಕ್ಷಾಂತರ ಜನರು ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದಾರೆ.

ಸೈನಿಕರೇ ಉಗ್ರರ ಟಾರ್ಗೆಟ್..!

ಸೈನಿಕರೇ ಉಗ್ರರ ಟಾರ್ಗೆಟ್..!

ಒಂದು ಕಡೆ ಸಂಧಾನ ಸೂತ್ರದ ನಾಟಕವಾಡುತ್ತಿರುವ ತಾಲಿಬಾನಿ ಉಗ್ರರು, ಮತ್ತೊಂದು ಕಡೆ ಅಫ್ಘಾನ್‌ನಲ್ಲಿ ಹಿಂಸಾಚಾರ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಾಲಿಬಾನ್‌ನ ಸಶಸ್ತ್ರದಳ ಅನೇಕ ಪ್ರದೇಶಗಳಿಗೆ ನುಗ್ಗಿ ಹಿಂಸೆ ನಡೆಸುತ್ತಿದೆ. ಅದರಲ್ಲೂ ಅಫ್ಘಾನಿಸ್ತಾನದ ಸೈನಿಕರು ಹಾಗೂ ಪೊಲೀಸರನ್ನ ಕಂಡರೆ ಸಾಕು ಅಲ್ಲೇ ಗುಂಡಿಕ್ಕಿ ಸಾಯಿಸುತ್ತಿದ್ದಾರೆ. ವಿಕೃತ ಮನೋಭಾವದ ತಾಲಿಬಾನಿಗಳು, ಮಹಿಳೆ ಅಥವಾ ಮಕ್ಕಳು ಎನ್ನದೆ ದೌರ್ಜನ್ಯ ನಡೆಸುತಿದ್ದಾರೆ. ಹೀಗಾಗಿಯೇ ಭಯಗೊಂಡ ಅಫ್ಘಾನ್ ಸೈನಿಕರು, ದೇಶಬಿಟ್ಟು ಹೋಡಿ ಹೋಗುತ್ತಿದ್ದಾರೆ.

Recommended Video

ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಅಫ್ಘಾನಿಸ್ತಾನದಿಂದ ಓಡಿಹೋದ ಅಶ್ರಫ್ ಘನಿ! | Oneindia Kannada
ಅಮೆರಿಕ ಓಡಿ ಹೋಯ್ತಾ..?

ಅಮೆರಿಕ ಓಡಿ ಹೋಯ್ತಾ..?

ಅಮೆರಿಕ ತಪ್ಪು ನಿರ್ಧಾರ ಕೈಗೊಂಡಿದೆ ಎಂಬ ಆಕ್ರೋಶ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಅಫ್ಘಾನ್ ನೆಲದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಅಮೆರಿಕ ನಿರ್ಧಾರಕ್ಕೆ ಬೇಸರ ವ್ಯಕ್ತವಾಗಿತ್ತು. ಅದರಲ್ಲೂ ಅಫ್ಘಾನ್ ಅಧ್ಯಕ್ಷ ಸೇರಿದಂತೆ ಸೇನಾಧಿಕಾರಿಗಳು ಅಮೆರಿಕ ಮಿಲಿಟರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಗಲೂ ಅಂತಹದ್ದೇ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ಅಮೆರಿಕ ಸೇನೆ ಬಗ್ರಾಮ್ ವಾಯು ನೆಲೆಯಿಂದ ಹೊರ ನಡೆದಿತ್ತು. ಆದರೆ ಹೊರ ಹೋಗುವ ಮೊದಲು ಅಮೆರಿಕ ಸೇನೆ ಸುಳಿವು ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಮೆರಿಕ ರಾತ್ರೋರಾತ್ರಿ ಎಸ್ಕೇಪ್ ಆಗಿದೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಆರೋಪಿಸಿದ್ದರು. ಇದು ಬರೀ ಒಂದು ಜಾಗದ ಕಥೆಯಲ್ಲ, ಅಮೆರಿಕ ಬಿಟ್ಟು ಹೊರಟಿರುವ ಪ್ರತಿಯೊಂದು ಸೇನಾ ನೆಲೆಯ ಕಥೆಯೂ ಇದೇ ಆಗಿದೆ. ಅಮೆರಿಕ ಮಾಡಿದ ಇಂತಹ ತಪ್ಪುಗಳೇ ತಾಲಿಬಾನ್‌ಗೆ ಅಫ್ಘಾನ್ ಮೇಲೆ ಹಿಡಿತ ಸಾಧಿಸಲು ದಾರಿ ಮಾಡಿದೆ.

ಪಾಕಿಸ್ತಾನದ ಜೊತೆಗೆ ದೋಸ್ತಿ..!

ಪಾಕಿಸ್ತಾನದ ಜೊತೆಗೆ ದೋಸ್ತಿ..!

ಅಮೆರಿಕ ತನ್ನ ಸ್ವಾರ್ಥಕ್ಕೆ ಯಾರನ್ನು ಬೇಕಾದ್ರೂ ಬಳಸಿಕೊಳ್ಳುತ್ತದೆ, ಯಾರಿಗೆ ಬೇಕಾದರೂ ದೋಖ ಮಾಡುತ್ತೆ ಅನ್ನೋ ಆರೋಪಗಳಿವೆ. ಹಾಗೇ ಈ ಆರೋಪಗಳಿಗೆ ತಕ್ಕಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ. ಪಾಕಿಸ್ತಾನ ವಿಚಾರದಲ್ಲೂ ಅಮೆರಿಕ ಇಂತಹದ್ದೇ ನಿಲುವು ತಳೆದಿದೆ. ಸರಿಯಾಗಿ 1 ದಶಕದ ಹಿಂದೆ, ಅಂದ್ರೆ 2011ರ ಬಳಿಕ ಪಾಕಿಸ್ತಾನದ ಜೊತೆ ಅಮೆರಿಕ ಮುನಿಸಿಕೊಂಡಿತ್ತು. ನಟೋರಿಯಸ್ ಉಗ್ರ ಒಸಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಳಸಿತ್ತು. ಆದ್ರೆ ಕಳೆದ 10 ವರ್ಷಗಳಿಂದಲೂ ಪಾಕ್‌ ವಿರುದ್ಧ ಕೆಂಡಕಾರುತ್ತಿದ್ದ ಅಮೆರಿಕ ಈಗ ದೋಸ್ತಿಗೆ ಮುಂದಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ತಾಲಿಬಾನ್ ಉಗ್ರರು. ಹೌದು, ಅಮೆರಿಕ ಸೇನೆ ಅಫ್ಘಾನಿಸ್ತಾನ ಬಿಟ್ಟು ಹೊರಬಂದಿದೆ. ಹೀಗೆ ಅಮೆರಿಕ ಹೊರ ಹೋಗುತ್ತಿದ್ದಂತೆ ಉಗ್ರರ ಗ್ಯಾಂಗ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಈ ಹೊತ್ತಲ್ಲಿ ಅಫ್ಘಾನ್ ಪಕ್ಕದಲ್ಲಿ ಕಾವಲಿಗೆ ಒಬ್ಬ ಮಿತ್ರ ಬೇಕು ಎಂಬ ನೆಪದಲ್ಲಿ ಅಮೆರಿಕ ಪಾಕಿಸ್ತಾನ ಜೊತೆ ಮಾತುಕತೆಗೆ ಮುಂದಾಗಿದೆ.

English summary
US President Biden decided to send 5000 troops to protect Afghan’s capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X