ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲಾವಲ್ ಭುಟ್ಟೋ ಯಾರು? ಇಂಟ್ರೆಸ್ಟಿಂಗ್ ಆಗಿದೆ ಅವರ ಕುಟುಂಬದ ಹಿನ್ನೆಲೆ

|
Google Oneindia Kannada News

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರು ಶಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರಕಾರದ ನೂತನ ವಿದೇಶಾಂಗ ಮಂತ್ರಿಯಾಗಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆ ಸ್ಥಾನ ಪಡೆದ ದಾಖಲೆ ಅವರದ್ದಾಗಿದೆ. ಬಿಲಾವಲ್ ಭುಟ್ಟೋ ಜರ್ದಾರಿ ಪಾಕಿಸ್ತಾನದ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಮನೆತನಕ್ಕೆ ಸೇರಿದ ಕುಡಿ. ಹೀಗಾಗಿ, ಅವರು ಸಣ್ಣ ವಯಸ್ಸಿಗೆ ಕೇಂದ್ರ ಸಚಿವರಾಗಿದ್ದರಲ್ಲಿ ಅಚ್ಚರಿ ಇಲ್ಲ. ಪಿಪಿಪಿ ಪಕ್ಷಕ್ಕೆ ಈ ಹಿಂದೆಯೇ ಬಹುಮತ ಸಿಕ್ಕಿದ್ದರೆ ಇನ್ನೂ ಕಿರಿಯ ವಯಸ್ಸಿಗೆ ಬಿಲಾವಲ್ ಪ್ರಧಾನಿಯಾಗುತ್ತಿದ್ದುದರಲ್ಲಿ ಅನುಮಾನ ಇಲ್ಲ.

 ಪಾಕಿಸ್ತಾನಕ್ಕೆ ಅತ್ಯಂತ ಕಿರಿಯ ವಯಸ್ಸಿನ ವಿದೇಶಾಂಗ ಸಚಿವ; ಬಿಲಾವಲ್ ದಾಖಲೆ ಪಾಕಿಸ್ತಾನಕ್ಕೆ ಅತ್ಯಂತ ಕಿರಿಯ ವಯಸ್ಸಿನ ವಿದೇಶಾಂಗ ಸಚಿವ; ಬಿಲಾವಲ್ ದಾಖಲೆ

19ನೇ ವಯಸ್ಸಿಗೆ ಪಕ್ಷಾಧ್ಯಕ್ಷ ಸ್ಥಾನ:
ಬಿಲಾವಲ್ ಭುಟ್ಟೋ ಮತ್ತು ರಾಜೀವ್ ಗಾಂಧಿಗೆ ಒಂದು ಸಾಮ್ಯತೆಯಂತೂ ಇದೆ. ಇಬ್ಬರೂ ತಮ್ಮ ತಾಯಿಯ ಹತ್ಯೆ ಬಳಿಕ ರಾಜಕೀಯಕ್ಕೆ ಬಂದವರು. ಇಂದಿರಾ ಗಾಂಧಿ ಹತ್ಯೆ ಬಳಿಕ ರಾಜಕೀಯಕ್ಕೆ ಬಂದ ರಾಜೀವ್ ಗಾಂಧಿ ಆಗ ನಡೆದ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದು ಪ್ರಧಾನಮಂತ್ರಿಯಾಗಿ ಹೊಸ ಇತಿಹಾಸ ಬರೆದರು. ಅತ್ಯಂತ ಕಿರಿಯ ವಯಸ್ಸಿನ ಭಾರತೀಯ ಪ್ರಧಾನಿ ಎನಿಸಿದರು. ಅದು 1984ರಲ್ಲಿ. ಇನ್ನು 2007ರಲ್ಲಿ ಬೇನಜೀರ್ ಭುಟ್ಟೋ ಅವರು ಉಗ್ರರ ಬಾಂಬ್ ದಾಳಿಗೆ ಬಲಿಯಾಗಿ ಹೋದರು. ಆಗ ಬಿಲಾವಲ್ ಭುಟ್ಟೋ ವಯಸ್ಸು ಕೇವಲ 19 ವರ್ಷ. ಆಗಲೇ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷದ ಚುಕ್ಕಾಣಿ ಹಿಡಿದಿದ್ದರು. 14 ವರ್ಷಗಳ ನಂತರ ಅವರಿಗೆ ಪ್ರಧಾನಿಯಾಗುವ ಯೋಗ ಒಲಿಯಿತು.

ಬಿಲಾವಲ್ ಕುಟುಂಬದ ರಾಜಕೀಯ ಹಿನ್ನೆಲೆ:

ಬಿಲಾವಲ್ ಕುಟುಂಬದ ರಾಜಕೀಯ ಹಿನ್ನೆಲೆ:

ಬಿಲಾವಲ್ ಭುಟ್ಟೋ ಅವರ ಅಜ್ಜ ಜುಲ್ಫಿಕರ್ ಅಲಿ ಭುಟ್ಟೋ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಂಸ್ಥಾಪಕರು. ಮುಂದೆ ಅವರು ಪಾಕಿಸ್ತಾನದ ಅಧ್ಯಕ್ಷ ಮತ್ತು ಪ್ರಧಾನಿ ಸ್ಥಾನ ಅಲಂಕರಿಸಿದರು. ಆದರೆ, ಜನರಲ್ ಜಿಯಾ ವುಲ್ ಹಕ್ ಅವರು ಪಾಕ್ ಅಧ್ಯಕ್ಷರಾದ ಬಳಿಕ ಜುಲ್ಫಿಕರ್ ಮೇಲಿನ ಕೊಲೆ ಪ್ರಕರಣದಲ್ಲಿ ನೇಣಿಗೆ ಹಾಕಿಸಿದರು.

ತಾಯಿ ಬೇನಜೀರ್ ಉಗ್ರರಿಗೆ ಬಲಿಯಾದಾಗ...

ತಾಯಿ ಬೇನಜೀರ್ ಉಗ್ರರಿಗೆ ಬಲಿಯಾದಾಗ...

ಬಿಲಾವಲ್ ಅವರ ತಾಯಿ ಬೇನಜಿರ್ ಭುಟ್ಟೋ ಅವರು ಪಾಕಿಸ್ತಾನದ ಮೊತ್ತಮೊದಲ ಮಹಿಳಾ ಪ್ರಧಾನಿ ಎಂಬ ಖ್ಯಾತಿ ಹೊಂದಿದ್ದವರು. ಆದರೆ, ವಿಪರೀತ ರಾಜಕೀಯ ಮನೆತನ ವೈಷಮ್ಯಗಳಿಂದಾಗಿ ಅವರು ಅನೇಕ ವರ್ಷ ಪಾಕಿಸ್ತಾನದಿಂದ ಹೊರಗುಳಿಯಬೇಕಾಯಿತು. ತಾಯಿ ಜೊತೆ ಬಿಲಾವಲ್ ಕೂಡ ದುಬೈನಲ್ಲಿ ಇರಬೇಕಾಯಿತು. ಕೊನೆಗೆ 2007ರಲ್ಲಿ ಮತ್ತೆ ರಾಜಕೀಯ ಮರಳಿದರು. ದುರದೃಷ್ಟಕ್ಕೆ ಚುನಾವಣಾ ಪ್ರಚಾರದಲ್ಲಿ ಇರುವಾಗಲೇ ಆ ವರ್ಷ ಅವರನ್ನು ಭಯೋತ್ಪಾದಕರು ಬಾಂಬ್ ದಾಳಿ ಎಸಗಿ ಹತ್ಯೆಗೈದರು.

ಪಾಕ್ ಅಧ್ಯಕ್ಷರಾದ ಬಿಲಾವಲ್ ತಂದೆ ಜರ್ದಾರಿ:

ಪಾಕ್ ಅಧ್ಯಕ್ಷರಾದ ಬಿಲಾವಲ್ ತಂದೆ ಜರ್ದಾರಿ:

ಬೇನಜೀರ್ ಭುಟ್ಟೋ ಹತ್ಯೆಯಾದಾಗ ಬಿಲಾವಲ್ ಭುಟ್ಟೋ ಕೇವಲ 19 ವರ್ಷ ವಯಸ್ಸಿನವರಾಗಿದ್ದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಚುಕ್ಕಾಣಿಯನ್ನು ಅವರಿಗೆ ಕೊಡಲಾಗಿತ್ತು. ಆ ಬಳಿಕ ನಡೆದ ಚುನಾವಣೆಯಲ್ಲಿ ಪಿಪಿಪಿ ಭರ್ಜರಿ ಗೆಲುವು ಪಡೆಯಿತು. ಬಿಲಾವಲ್ ಅವರನ್ನ ಆಗಲೇ ಪಾಕ್ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನವಾಗಿತ್ತು. ತೀರಾ ಚಿಕ್ಕ ವಯಸ್ಸಾದ್ದರಿಂದ ಅದು ಕಾನೂನು ಸಮ್ಮತವಾಗಿರಲಿಲ್ಲ. ಅವರ ತಂದೆ ಅಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ಅಧ್ಯಕ್ಷರಾದರು. ಜರ್ದಾರಿ ಬಳಿಕ ಭುಟ್ಟೋ ಮನೆತನಕ್ಕೆ ಅಧಿಕಾರ ಒಲಿದು ಬಂದದ್ದು ಈಗಲೇ.

ಬಿಲಾವಲ್ ಮುತ್ತಾತ ಶಾಹನವಾಜ್ ದಿವಾನರಾಗಿದ್ದರು:

ಬಿಲಾವಲ್ ಮುತ್ತಾತ ಶಾಹನವಾಜ್ ದಿವಾನರಾಗಿದ್ದರು:

ಬಿಲಾವಲ್ ಭುಟ್ಟೋ ಅವರ ತಾತ ಜುಲ್ಫಿಕರ್ ಅಲಿ ಭುಟ್ಟೋ ಅವರ ತಂದೆ ಶಾನವಾಜ್ ಭುಟ್ಟೋ ಅವರು ಜುನಾಗಡ್ ಸಂಸ್ಥಾನದ ದಿವಾನರಾಗಿ ಕೆಲಸ ಮಾಡಿದ್ದರು. ಭಾರತದ ವಿಭಜನೆ ವೇಳೆ ಹಿಂದು ಬಾಹುಳ್ಯದ ಜುನಾಗಡ್ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಯತ್ನ ವಿಫಲವಾಯಿತು. ವಿಭಜನೆ ಬಳಿಕ ಭುಟ್ಟೋ ಕುಟುಂಬದವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಗೆ ವಲಸೆ ಹೋದರು.

ಮೊಘಲರ ಕಾಲದಲ್ಲಿ ಇಸ್ಲಾಮ್‌ಗೆ ಮತಾಂತರ:

ಮೊಘಲರ ಕಾಲದಲ್ಲಿ ಇಸ್ಲಾಮ್‌ಗೆ ಮತಾಂತರ:

ಭುಟ್ಟೋ ಮನೆತನದವರು ಮೂಲತಃ ರಾಜಸ್ಥಾನದ ಭಾಟಿ ರಜಪೂತ್ ಜನಾಂಗಕ್ಕೆ ಸೇರಿದವರಾಗಿದ್ದರು. ಮೊಘಲ್ ದೊರೆ ಔರಂಗಜೇಬರ ಆಡಳಿತದಲ್ಲಿ ಮುಸ್ಲಿಮೇತರರಿಗೆ ಜಜಿಯಾ ತೆರಿಗೆ ಹೇರಲಾಗುತ್ತಿತ್ತು. ಆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಇವರ ಕುಟುಂಬದ ಪೂರ್ವಿಕರು ಇಸ್ಲಾಮ್ ಮತ ಸ್ವೀಕಾರ ಮಾಡಿದ್ದರೆನ್ನಲಾಗುತ್ತಿದೆ. ಹೀಗೆ ಇಸ್ಲಾಮ್‌ಗೆ ಮತಾಂತರಗಂಡ ಇವರ ಮನೆತನದ ಮೊದಲ ವ್ಯಕ್ತಿ ಸೆಹ್ತೋ ಎನ್ನಲಾಗಿದೆ. ಮತಾಂತರಗೊಂಡ ಬಳಿಕ ಇವರಿಗೆ ಖಾನ್ ಹೆಸರು ಕೊಡಲಾಗಿ ಸೆಹ್ತೋ ಖಾನ್ ಆದರು. ಜುನಾಗಡ್ ದಿನಾನರಾಗಿದ್ದ ಶಾಹ್ ನವಾಜ್ ಭುಟ್ಟೋ ಅವರು ಸೆಹ್ತೋ ಖಾನ್ ಮನೆತನಕ್ಕೆ ಸೇರಿದವರಾಗಿದ್ದರು. ಅಂದಹಾಗೆ, ಭುಟ್ಟೋ ಕುಟುಂಬದವರು ಶಿಯಾ ಮುಸ್ಲಿಮ್ ವರ್ಗಕ್ಕೆ ಸೇರಿದವರಾಗಿದ್ದಾರೆ.

ಆಗರ್ಭ ಶ್ರೀಮಂತರು ಭುಟ್ಟೋ ಕುಟುಂಬದವರು:

ಆಗರ್ಭ ಶ್ರೀಮಂತರು ಭುಟ್ಟೋ ಕುಟುಂಬದವರು:

ಭುಟ್ಟೋ ಮನೆತನ ಪೂರ್ವಿಕರು ಬಹಳ ವರ್ಷಗಳ ಹಿಂದೆಯೇ ಸಿಂಧ್ ಪ್ರಾಂತ್ಯಕ್ಕೆ ವಲಸೆ ಹೋಗಿ ಅಲ್ಲಿ ಬಹಳಷ್ಟು ಆಸ್ತಿಪಾಸ್ತಿ ಸಂಪಾದನೆ ಮಾಡಿದ್ದಾರೆ. ಲರ್ಕಾನ ಜಿಲ್ಲೆಯಲ್ಲಿ ಸಾವಿರಾರು ಎಕರೆಗಳಷ್ಟು ಭೂಮಿಯ ಒಡೆಯರಾಗಿದ್ದಾರೆ.

ಜರ್ದಾರಿ ಕುಟುಂಬದವರೂ ಸಾಮಾನ್ಯರಲ್ಲ:

ಜರ್ದಾರಿ ಕುಟುಂಬದವರೂ ಸಾಮಾನ್ಯರಲ್ಲ:

ಬಿಲಾವಲ್ ಅವರ ತಂದೆ ಹಾಗು ಬೇನಜಿರ್ ಅವರ ಪತಿ ಅಸಿಫ್ ಅಲಿ ಜರ್ದಾರಿ ಅವರದ್ದೂ ಪ್ರಭಾವಿ ಕುಟುಂಬ. ಸಿಂಧಿ-ಬಲೂಚಿಯ ಜರ್ದಾರಿ ಬುಡಕಟ್ಟು ಜನಾಂಗದವರಿಗೆ ಜರ್ದಾರಿ ಮನೆತನದವರೇ ಮೊದಲಿಂದಲೇ ಮುಂದಾಳತ್ವ ವಹಿಸಿದ್ದಾರೆ. ನವಾಬ್‌ಶಾ ಜಿಲ್ಲೆಯಲ್ಲಿ ಇವರಿಗೆ ಸಾವಿರಾರು ಎಕರೆ ಭೂಮಿ ಆಸ್ತಿ ಇದೆ.

ಪ್ರಗತಿಪರ ವಿಚಾರಗಳಿರುವ ಭುಟ್ಟೋ ಕುಟುಂಬ:

ಪ್ರಗತಿಪರ ವಿಚಾರಗಳಿರುವ ಭುಟ್ಟೋ ಕುಟುಂಬ:

ಪಾಕಿಸ್ತಾನದಲ್ಲಿ ಭುಟ್ಟೋ ಮನೆತನದವರು ಬೇರೆಯವರಿಗೆ ಹೋಲಿಸಿದರೆ ಜಾತ್ಯತೀತ ತತ್ವಗಳಿಗೆ ಬದ್ಧರಾದವರು. ಆಧುನಿಕ ಮತ್ತು ಪ್ರಗತಿಪರ ವಿಚಾರಗಳಿಗೆ ಹೆಸರುವಾಸಿಯಾದವರು. ವಿದೇಶಗಳಲ್ಲಿ ವ್ಯಾಸಂಗ ಮಾಡಿದ ಕಾರಣಕ್ಕೆ ಇವರ ಕುಟುಂಬದವರು ಆಧುನಿಕತೆಗೆ ಹೆಚ್ಚು ತೆರೆದುಕೊಂಡಿದ್ದಾರೆ. ಬೆನಜೀರ್ ಭುಟ್ಟೋ ಅವರೂ ಸೆಕ್ಯೂಲರ್ ವಿಚಾರಗಳಿಗೆ ಫೇಮಸ್ ಆಗಿದ್ದರು. ಬಿಲಾವಲ್ ಭುಟ್ಟೋ ಅವರೂ ಕೂಡ ಅಲ್ಪಸಂಖ್ಯಾತರ ಹಕ್ಕು ಮತ್ತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದಾರೆ.

ಬಿಲಾವಲ್ ಮುಂದಿರುವ ಸವಾಲು

ಬಿಲಾವಲ್ ಮುಂದಿರುವ ಸವಾಲು

* ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಕೆಲ ದಶಕಗಳಿಂದ ಆಪ್ತ ಸಂಬಂಧ ಇದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಅಮೆರಿಕದ ವಿರುದ್ಧ ಹೇಳಿಕೆಗಳನ್ನ ಕೊಟ್ಟಿದ್ದರು. ಈಗ ಪಾಕಿಸ್ತಾನದಿಂದ ಅಮೆರಿಕ ದೂರ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ. ಇಂಥ ಹೊತ್ತಿನಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ಮತ್ತೆ ಬಾಂಧವ್ಯ ಬೆಳೆಸುವ ಜವಾಬ್ದಾರಿ ಬಿಲಾವಲ್ ಹೆಗಲಿಗಿದೆ.
* ಭಾರತ ಜೊತೆಗಿನ ನಿರಂತರ ಘರ್ಷಣೆ ಪಾಕಿಸ್ತಾನದ ಆರ್ಥಿಕತೆಗೆ ಸಂಚಕಾರ ತಂದಿದೆ. ಪಾಕಿಸ್ತಾನ ಶಾಂತಿ ಬಯಸುತ್ತದೆ ಎಂಬ ಸಂದೇಶವನ್ನು ಹೊರಡಿಸಿ ಭಾರತದ ವಿಶ್ವಾಸ ಗಳಿಸುವ ಹೊಣೆಗಾರಿಕೆ ಮತ್ತು ಸವಾಲು ಭುಟ್ಟೋ ಅವರ ಮುಂದಿದೆ.
* ಭಾರತದೊಂದಿಗೆ ತಿಕ್ಕಾಟ ಇಲ್ಲದೇ ಜಮ್ಮು ಕಾಶ್ಮೀರ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳುವುದು ಈಗ ಪಾಕಿಸ್ತಾನಕ್ಕೆ ಬಹುದೊಡ್ಡ ಸವಾಲು.
* ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕ ಶಕ್ತಿಗಳ ಕಾರಣದಿಂದ ಹಾಗು ಭಾರತದ ಜೊತೆ ನಿರಂತರವಾಗಿ ಘರ್ಷಣೆ ಮಾಡುತ್ತಾ ಬಂದಿರುವುದರಿಂದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ಇದೆ. ಈ ಕಳಂಕ ನೀಗಿಸುವ ನಿಟ್ಟಿನಲ್ಲಿ ಭುಟ್ಟೋ ಸಕಾರಾತ್ಮಕ ಹೆಜ್ಜೆಗಳನ್ನ ಇಡುವುದು ಅಗತ್ಯವಿದೆ.

English summary
Pakistan's new foreign minister Bilawal Bhutto is from big family which has its origin in Bhat Rajput clan. Bilawal's great grandfather was Dewan of Junagarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X