ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: ಕೊವ್ಯಾಕ್ಸಿನ್ ಉತ್ಪಾದಿಸಿದ 12 ತಿಂಗಳವರೆಗೂ ಲಸಿಕೆ ಬಳಸಲು ಅನುಮೋದನೆ

|
Google Oneindia Kannada News

ನವದೆಹಲಿ, ನವೆಂಬರ್ 3: ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿದ ನಂತರ ಅದರ ಬಳಕೆ ಅವಧಿಯನ್ನು 12 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.

ಭಾರತದಲ್ಲಿ ವಿತರಣೆ ಮಾಡಲಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಜೀವಿತಾವಧಿ ಬಗ್ಗೆ ಕೇಂದ್ರ ಔಷಧೀಯ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿದೆ. ಹೆಚ್ಚುವರಿ ಸ್ಥಿರ ದತ್ತಾಂಶವನ್ನು ಪರಿಶೀಲಿಸಿ ಕೊವ್ಯಾಕ್ಸಿನ್ ಲಸಿಕೆಯನ್ನು ಬಳಸುವ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ನೀಡಿರುವ ಅನುಮೋದನೆ ಕುರಿತು ಭಾರತ್ ಬಯೋಟೆಕ್ ಸಂಸ್ಥೆಯು ಟ್ವೀಟ್ ಮಾಡಿದೆ.

Breaking News: ಭಾರತದ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ Breaking News: ಭಾರತದ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ

ದೇಶದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಲಭ್ಯತೆ ಮತ್ತು ಹೆಚ್ಚುವರಿ ದತ್ತಾಂಶದ ಕುರಿತು ಸಲ್ಲಿಸಿದ ಅಂಕಿ-ಅಂಶಗಳ ಆಧಾರದ ಮೇಲೆ ಕೇಂದ್ರ ಔಷಧೀಯ ನಿಯಂತ್ರಣ ಸಂಸ್ಥೆಯು ಲಸಿಕೆಯ ಬಳಕೆ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ಅನುಮೋದನೆ ನೀಡುವುದಕ್ಕೂ ಮೊದಲೇ ಲಸಿಕೆಯ ಜೀವಿತಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

24 ತಿಂಗಳವರೆಗೂ ಜೀವಿತಾವಧಿ ವಿಸ್ತರಿಸಲು ಮನವಿ

24 ತಿಂಗಳವರೆಗೂ ಜೀವಿತಾವಧಿ ವಿಸ್ತರಿಸಲು ಮನವಿ

ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿದ 6 ತಿಂಗಳವರೆಗೂ ಬಳಸುವುದಕ್ಕೆ ಈ ಮೊದಲು ಅನುಮೋದನೆ ನೀಡಲಾಗಿತ್ತು. ಆದರೆ ಈ ಅವಧಿಯನ್ನು 24 ತಿಂಗಳವರೆಗೆ ವಿಸ್ತರಿಸುವುದಕ್ಕೆ ಕಂಪನಿಯು ಕೇಂದ್ರ ಔಷಧೀಯ ನಿಯಂತ್ರಣ ಸಂಸ್ಥೆಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪರಿಶೀಲಿಸಿದ ಸಿಡಿಎಸ್ ಸಿಓ (CDSCO) ಲಸಿಕೆಯನ್ನು ಉತ್ಪಾದಿಸಿದ 12 ತಿಂಗಳವರೆಗೂ ಬಳಕೆಗೆ ಉಪಯುಕ್ತವಾಗಿದೆ ಎಂದು ಅನುಮೋದನೆ ನೀಡಿದೆ.

ಕೊವ್ಯಾಕ್ಸಿನ್ ಲಸಿಕೆ ಶೇ.77.80ರಷ್ಟು ಪರಿಣಾಮಕಾರಿ

ಕೊವ್ಯಾಕ್ಸಿನ್ ಲಸಿಕೆ ಶೇ.77.80ರಷ್ಟು ಪರಿಣಾಮಕಾರಿ

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೊವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

ಕೊವಿಡ್-19 ಲಸಿಕೆ ಕುರಿತು ತಿಳಿದುಕೊಳ್ಳಬೇಕಾದ ಅಂಶ

ಕೊವಿಡ್-19 ಲಸಿಕೆ ಕುರಿತು ತಿಳಿದುಕೊಳ್ಳಬೇಕಾದ ಅಂಶ

ಸಾಮಾನ್ಯವಾಗಿ ಯಾವುದೇ ಲಸಿಕೆಯಿರಲಿ. ದೇಹದಲ್ಲಿ ಇರುವ ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವುದು ಹೇಗೆ ಎಂಬುದನ್ನು ಲಸಿಕೆ ಕಲಿಸಿಕೊಡುತ್ತದೆ. ರೋಗಾಣುಗಳನ್ನು ನಿಭಾಯಿಸುವುದು ಹಾಗೂ ರೋಗ ನಿರೋಧಕ ಶಕ್ತಿ ಮೂಲಕ ಹೆಚ್ಚಿನ ಅನಾರೋಗ್ಯದಿಂದ ರಕ್ಷಿಸುವ ಕಾರ್ಯವನ್ನು ಲಸಿಕೆಗಳು ಮಾಡುತ್ತವೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಲಭ್ಯವಿರುವ ಎಲ್ಲಾ ಮೂರು COVID-19 ಲಸಿಕೆಗಳು SARS-CoV-2 ವೈರಸ್ ಅಥವಾ ಕೊರೊನಾವೈರಸ್‌ನ ಪ್ರೊಟೀನ್ ಹೆಚ್ಚಿಸುವವು ಎಂದು ಹೇಳಲಾಗುತ್ತದೆ. SARS-CoV-2 ಒಂದು ಮಾದರಿಯ ರೋಗಾಣುವಾಗಿದೆ. ಅದರ ಮೇಲೆ ಉಬ್ಬುಗಳಿದ್ದು, ಒಂದು ರೀತಿಯ ಬೇಸ್‌ಬಾಲ್ ಗಾಲ್ಫ್ ಟೀಸ್‌ನಿಂದ ಆವೃತವಾಗಿದೆ. ಉಬ್ಬುಗಳೇ ಸ್ಪೈಕ್ ಪ್ರೋಟೀನ್ ಆಗಿವೆ.

ಕೊರೊನಾವೈರಸ್ ಸೋಂಕಿನ ರೋಗಾಣುಗಳ ಮೇಲೆ ಪ್ರೊಟೀನ್ ಹೆಚ್ಚಳದಿಂದ ಕೊವಿಡ್-19 ವೈರಸ್ ಮನುಷ್ಯದ ಜೀವಕೋಶಗಳಿಗೆ ಪ್ರವೇಶಿಸಲು ಅವಕಾಶ ಸಿಗುತ್ತದೆ. ಆದ್ದರಿಂದ ರೋಗಾಣುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಇವು ದೇಹದೊಳಗಿನ ಜೀವಕೋಶಗಳ ಮೇಲೆ ಅದರಲ್ಲೂ ವಿಶೇಷವಾಗಿ ಶ್ವಾಸಕೋಶಗಳ ಮೇಲೆ ಅಂಟಿಕೊಳ್ಳುತ್ತವೆ. ಹೀಗೆ ಅಂಟಿಕೊಂಡ ಪ್ರೊಟೀನ್ ರೋಗಾಣು ವಿರುದ್ಧ ಹೋರಾಡುವ ಶಕ್ತಿಯನ್ನು ವೃದ್ಧಿಸುತ್ತವೆ.

ಕೊರೊನಾವೈರಸ್ ಲಸಿಕೆಗಳ ಕಾರ್ಯವಿಧಾನ ಹೇಗಿರಲಿದೆ?

ಕೊರೊನಾವೈರಸ್ ಲಸಿಕೆಗಳ ಕಾರ್ಯವಿಧಾನ ಹೇಗಿರಲಿದೆ?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನೀಡುವ ಫೈಜರ್-ಬಯೋ-ಎನ್-ನಟೆಕ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳು ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಿವೆ. ಲಸಿಕೆಯಲ್ಲಿ ದೇಹದ ಕಣಗಳನ್ನು ನೀಡುವ ಮೂಲಕ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಫೈಜರ್ ಮತ್ತು ಮಾಡರ್ನಾ ಲಸಿಕೆಯಲ್ಲಿ mRNA ಕಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ mRNA ಮಾದರಿಯ ಲಸಿಕೆಯ ಪರಿಣಾಮವು ಆರು ತಿಂಗಳಿನಿಂದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿವರೆಗೂ ಇರುತ್ತದೆ. ಈ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ರೋಗಾಣುವನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಫೈಜರ್-ಬಯೋ-ಎನ್-ನಟೆಕ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳನ್ನು mRNA ಲಸಿಕೆ ಎಂದು ಕರೆಯಲಾಗುತ್ತದೆ. ಅಸಲಿಗೆ ಈ ಮಾದರಿ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.

ಕೊವ್ಯಾಕ್ಸಿನ್ mRNA ಮಾದರಿಯ ಲಸಿಕೆಯಲ್ಲ

ಕೊವ್ಯಾಕ್ಸಿನ್ mRNA ಮಾದರಿಯ ಲಸಿಕೆಯಲ್ಲ

ಭಾರತದಲ್ಲಿ ಅನುಮೋದನೆ ನೀಡಲಾಗಿರುವ ಕೊವ್ಯಾಕ್ಸಿನ್ ಲಸಿಕೆಯೊಂದರನ್ನು ಹೊರತುಪಡಿಸಿ ಉಳಿದ ಮೂರು ಲಸಿಕೆಗಳು mRNA ಮಾದರಿಯ ಲಸಿಕೆಗಳಾಗಿವೆ. ಕೊವಿಶೀಲ್ಡ್, ಸ್ಪುಟ್ನಿಕ್-ವಿ ಮತ್ತು ಮಾಡರ್ನಾ ಕಂಪನಿಯ ಲಸಿಕೆಗಳು mRNA ಮಾದರಿಯದ್ದಾಗಿವೆ. ಅಸಲಿಗೆ ಈ ಮಾದರಿಯ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಲಾಗಿದೆ.

ಕೊವ್ಯಾಕ್ಸಿನ್ ಲಸಿಕೆ ಒಂದು ಬ್ಯಾಚ್ ಉತ್ಪಾದನೆಗೆ ಎಷ್ಟು ದಿನ?

ಕೊವ್ಯಾಕ್ಸಿನ್ ಲಸಿಕೆ ಒಂದು ಬ್ಯಾಚ್ ಉತ್ಪಾದನೆಗೆ ಎಷ್ಟು ದಿನ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿದ ಭಾರತದಲ್ಲಿ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕಳೆದ ಜನವರಿ 3ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಅನುಮೋದನೆ ನೀಡಿತ್ತು. ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ, ಪರಿಶೋಧನೆ ಹಾಗೂ ಪರೀಕ್ಷೆ ಸೇರಿದಂತೆ ಎಲ್ಲ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ಒಂದು ಬ್ಯಾಚ್ ಹೊರ ಬರುವುದಕ್ಕೆ ಕನಿಷ್ಠ 120 ದಿನಗಳೇ ಬೇಕಾಗುತ್ತವೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ ಲಸಿಕೆ ಉತ್ಪಾದನೆ ಆರಂಭಿಸಿದ 9 ತಿಂಗಳ ನಂತರದಲ್ಲಿಯೂ ಕೊವ್ಯಾಕ್ಸಿನ್ ಉತ್ಪಾದನಾ ಹಂತದಲ್ಲಿ ಗುಣಮಟ್ಟದ ದೋಷ ಹೇಗೆ ಕಾಣಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಪ್ರಶ್ನೆಗೆ ಭಾರತ್ ಬಯೋಟೆಕ್ ಸಂಸ್ಥೆಯು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.

English summary
Bharat Biotech's Covaxin Gets Shelf Life Extension Of Up To 12 Months From Manufacturing Date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X