ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳನ್ನು ಕೊಲ್ಲಲು ತಯಾರಾಗಿವೆಯಾ ಹಿಟ್ ಸ್ಕ್ವಾಡ್‌ಗಳು?

By ವಿಕಿ ನಂಜಪ್ಪ
|
Google Oneindia Kannada News

ಭಾರತದಲ್ಲಿ ಇತ್ತೀಚೆಗೆ ಹಿಂಸಾಚಾರಗಳು ಗಣನೀಯವಾಗಿ ಹೆಚ್ಚುತ್ತಿವೆ. ಹಿಂದೂಗಳನ್ನು ಗುರಿ ಮಾಡಿ ಹಿಂಸಾಚಾರಗಳ ಸರಣಿ ನಡೆದಿರುವುದನ್ನು ನೀವು ಗಮನಿಸಿರಬಹುದು. ಪ್ರತಿಭಟನೆ, ದಂಗೆ, ಹಿಂಸಾಚಾರ ಘಟನೆಗಳ ಮಧ್ಯೆ ಹಿಂದೂಗಳು ಮತ್ತು ಹಿಂದೂ ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಿ ದಾಳಿಗಳಾಗುತ್ತಿವೆ.

ಈ ಮಧ್ಯೆ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸರಿಗೆ ಕೆಲ ಮಹತ್ವದ ವಿಚಾರಗಳು ಅರಿವಿಗೆ ಬಂದಿವೆ. ಪ್ರಕರಣದಲ್ಲಿ ಬಂಧಿತರಾಗಿರುವ ಅಬಿದ್ ಮತ್ತು ನೌಫಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹಿಟ್ ಸ್ಕ್ವಾಡ್ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಈ ಹಿಟ್ ಸ್ಕ್ವಾಡ್‌ನ ಪಟ್ಟಿಯಲ್ಲಿ ಇನ್ನೂ ಕೆಲ ಹಿಂದೂಗಳಿದ್ದರು. ಆದರೆ, ಪ್ರವೀಣ್‌ನನ್ನು ಮಾತ್ರ ಹತ್ಯೆ ಮಾಡಲು ಯಶಸ್ವಿಯಾಗಿದ್ದಾರೆ.

ಮನೆಗೆ ನುಗ್ಗಿದ ಉಗ್ರರನ್ನು ಸಂಹರಿಸಿದ ಕಾಶ್ಮೀರಿ ಹುಡುಗಿ ರುಕ್ಸಾನ ಕೌಸರ್; ಸ್ವಾತಂತ್ರ್ಯೋತ್ಸವದಂದು ಒಂದು ನೆನಪುಮನೆಗೆ ನುಗ್ಗಿದ ಉಗ್ರರನ್ನು ಸಂಹರಿಸಿದ ಕಾಶ್ಮೀರಿ ಹುಡುಗಿ ರುಕ್ಸಾನ ಕೌಸರ್; ಸ್ವಾತಂತ್ರ್ಯೋತ್ಸವದಂದು ಒಂದು ನೆನಪು

ರಾಷ್ಟ್ರೀಯ ತನಿಖಾ ದಳ ಎನ್‌ಐಎ ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿಯಂತೆ ದೇಶದ ಬೇರೆಡೆಯೂ ಇದೇ ರೀತಿಯ ಹಿಟ್ ಸ್ಕ್ವಾಡ್‌ಗಳು ಇರುವುದು ಎನ್‌ಐಎ ಗಮನಕ್ಕೆ ಬಂದಿದೆ.

ಮಹಾರಾಷ್ಟ್ರದ ಅಮರಾವತಿಯ ಉಮೇಶ್ ಕೊಲ್ಹೆ, ರಾಜಸ್ಥಾನದ ಉದಯಪುರ್‌ನ ಕನ್ಹಯ್ಯ ಲಾಲ್ ಅವರನ್ನು ಇಂಥವೇ ಹಿಟ್ ಸ್ಕ್ವಾಡ್‌ಗಳು ಕೊಂದಿವೆ. ಒಂದು ವಾರದ ಹಿಂದೆ, ಆಗಸ್ಟ್ ೪ರಂದು ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯಲ್ಲಿ ೨೩ ವರ್ಷದ ಪ್ರತೀಕ್ ಪವಾರ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ಸಂಭವಿಸಿದೆ.

ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ: ಸಿಎಂ ಹಿಮಂತ ಬಿಸ್ವಾ ಶರ್ಮಾ ಆತಂಕಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ: ಸಿಎಂ ಹಿಮಂತ ಬಿಸ್ವಾ ಶರ್ಮಾ ಆತಂಕ

ಪರಿಚಿತರಿಂದಲೇ ಕೃತ್ಯ

ಪರಿಚಿತರಿಂದಲೇ ಕೃತ್ಯ

ಉಮೇಶ್ ಕೊಲ್ಹೆ, ಕನ್ಹಯ್ಯ ಲಾಲ್, ಪ್ರವೀಣ್ ನೆಟ್ಟಾರು, ಪ್ರತೀಕ್ ಪವಾರ್ ಇವರೆಲ್ಲರ ಮೇಲಿನ ದಾಳಿ ಘಟನೆಗಳಲ್ಲಿ ಸಾಮಾನ್ಯ ಸಂಗತಿಯೊಂದು ಇರುವುದು ಗಮನಾರ್ಹ. ಈ ಎಲ್ಲಾ ಘಟನೆಗಳಲ್ಲೂ ದಾಳಿಗೊಳಗಾದವರಿಗೆ ಆರೋಪಿಗಳು ಪರಿಚಿತರೇ ಆಗಿದ್ದಾರೆ.

ಅಮರಾವತಿಯಲ್ಲಿ ಕೊಲೆಯಾದ ಉಮೇಶ್ ಕೊಲ್ಹೆ ಮತ್ತು ಆರೋಪಿ ಯೂಸುಫ್ ಖಾನ್ ಇಬ್ಬರೂ ಒಳ್ಳೆಯ ಸ್ನೇಹಿತರೇ ಆಗಿದ್ದರು. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಉಮೇಶ್ ಕೊಲ್ಹೆ ಬೆಂಬಲ ವ್ಯಕ್ತಪಡಿಸಿದ್ದರು. ಅವರ ಈ ಸಂದೇಶಗಳನ್ನು ಯೂಸುಫ್ ಖಾನ್ ಕೆಲ ಇಸ್ಲಾಮೀ ಮೂಲಭೂತವಾದಿಗಳಿಗೆ ಕಳುಹಿಸಿದ್ದರು. ವಿಚಿತ್ರ ಎಂದರೆ ಉಮೇಶ್ ಕೊಲ್ಹೆ ಅಂತ್ಯಕ್ರಿಯೆಯಲ್ಲಿ ಯೂಸುಫ್ ಖಾನ್ ಪಾಲ್ಗೊಂಡಿದ್ದರು.

ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಪ್ರಕರಣವೂ ಇದೇ ಸ್ವರೂಪದ್ದು. ನೆಟ್ಟಾರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರೇ ಕೊಲೆಯಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ.

ದೊಡ್ಡ ಸ್ತರದಲ್ಲಿ ಜಾಲ

ದೊಡ್ಡ ಸ್ತರದಲ್ಲಿ ಜಾಲ

ಇವು ಸ್ಥಳೀಯ ಹಿಟ್ ಸ್ಕ್ವಾಡ್‌ಗಳ ಕೃತ್ಯಗಳು. ಆದರೆ, ದೊಡ್ಡ ಮಟ್ಟದಲ್ಲಿ ಇಂಥದ್ದೇ ರೀತಿಯ ಕಾರ್ಯಾಚರಣೆಗಳು ನಡೆಯುತ್ತಿವೆ. ಡಿ-ಸಿಂಡಿಕೇಟ್ (ದಾವೂದ್ ಗ್ಯಾಂಗ್) ಐಎಸ್‌ಐ ಅಣತಿಯಂತೆ ಹಿಂದೂಗಳನ್ನು ಗುರಿಯಾಗಿಸಿ ದಾಳಿಯ ಹೊಣೆ ಪಡೆದಿದೆ. ಗುಜರಾತ್‌ ಮೊದಲಾದ ರಾಜ್ಯಗಳಲ್ಲಿ ಈ ಘಟನೆಗಳು ನಡೆದಿವೆ. ೨೦೧೬ರಲ್ಲಿ ಡಿ ಜಾಲದವರು ಹಿಂದೂ ಸಂಘಟನೆಯ ಮುಖಂಡ ಪ್ರಜ್ಞೇಶ್ ಮಿಸ್ತ್ರಿ ಮತ್ತು ಶಿರೀಶ್ ಬೆಂಗಾಳಿ ಎಂಬುವರನ್ನು ಹತ್ಯೆಗೈದಿದ್ದರು. ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಪ್ರಮುಖ ಸದಸ್ಯ ಜಾವೇದ್ ಚಿಕ್ನಾ ಎಂಬಾತ ಇಡೀ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಆಗಿದ್ದ. ಈತನ ಹಿಟ್ ಲಿಸ್ಟ್‌ನಲ್ಲಿ ಗುಜರಾತ್‌ನ ಇನ್ನೂ ಹಲವು ನಾಯಕರಿದ್ದರು.

ಮತಾಂತರ ಹೊಣೆ

ಮತಾಂತರ ಹೊಣೆ

ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯೂರೋದ ಅಧಿಕಾರಿಯೊಬ್ಬರು ಒನ್‌ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ ಹಿಂದೂಗಳನ್ನು ಮುಗಿಸುವ ಉದ್ದೇಶದಿಂದ ಇಸ್ಲಾಮಿಕ್ ಕೋರ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಕೋರ್ಟ್‌ಗಳ ಅಣತಿ ಮೇರೆಗೆ ದವಾ ತಂಡ ಅಥವಾ ಹಿಟ್ ಸ್ಕ್ವಾಡ್‌ಗಳನ್ನು ತಯಾರಿಸಲಾಗುತ್ತಿದೆ.

ಈ ಹಿಟ್ ಸ್ಕ್ವಾಡ್‌ಗಳು ಕೇವಲ ಹಿಂದೂಗಳ ಹತ್ಯೆ ಮಾಡುವ ಉದ್ದೇಶ ಮಾತ್ರವಲ್ಲ, ಇಸ್ಲಾಮ್‌ಗೆ ಮತಾಂತರ ಮಾಡಿಸುವ ಹೊಣೆಯನ್ನೂ ಹೊಂದಿರುತ್ತವೆ. ಯಾರು ಮತಾಂತರವನ್ನು ವಿರೋಧಿಸುತ್ತಾರೋ ಅವರನ್ನು ಗುರಿಯಾಗಿಸಲಾಗುತ್ತದೆ. ತಂಜಾವೂರ್‌ನಲ್ಲಿ ಬೆಳಕಿಗೆ ಬಂದ ರಾಮಲಿಂಗಂ ಪ್ರಕರಣವನ್ನು ಉಲ್ಲೇಖಿಸುತ್ತಾ ಐಬಿ ಅಧಿಕಾರಿ ಈ ಮಾಹಿತಿ ನೀಡಿದರು.

ಇತರ ಪ್ರಕರಣಗಳು

ಇತರ ಪ್ರಕರಣಗಳು

ಬೆಂಗಳೂರಿನ ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್, ಶಿವಮೊಗ್ಗದಲ್ಲಿ ಬಜರಂಗ ದಳ ಮುಖಂಡ ಹರ್ಷ, ತಮಿಳುನಾಡಿನಲ್ಲಿ ಹಿಂದೂ ಮುನ್ನಣಿ ಕಾರ್ಯಕರ್ತ ಕೆಪಿ ಸುರೇಶ್ ಕುಮಾರ್ ಇವರೆಲ್ಲರ ಹತ್ಯೆ ಹಿಂದೆ ಇಂಥದ್ದೇ ಜಾಲ ಇರುವ ಅನುಮಾನವಿದೆ.

ಸೂರತ್‌ನಲ್ಲಿ 2019ರಲ್ಲಿ ಹಿಂದೂ ನಾಯಕ ಕಮಲೇಶ್ ತಿವಾರಿಯ ಹತ್ಯೆಯಾಗಿತ್ತು. ಶೇಖ್ ಅಷ್ಫಾಕ್ ಹುಸೇನ್ ಮತ್ತು ಪಠಾಣ್ ಮೊಯಿನುದ್ದೀನ್ ಅಹ್ಮದ್ ಇಬ್ಬರೂ ಸೇರಿ ತಿವಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.

ಪಂಜಾಬ್ ಆರೆಸ್ಸೆಸ್ ನಾಯಕ ಜಗದೀಶ್ ಗಾಗ್ನೇಗಾ ಎಂಬುವರ ಕೊಲೆ ಸೇರಿದಂತೆ ಆ ರಾಜ್ಯದಲ್ಲಿ ಇಂಥವೇ ಘಟನೆಗಳು ಜರುಗಿವೆ. ಇವೆಲ್ಲವನ್ನೂ ಹಿಟ್ ಸ್ಕ್ವಾಡ್‌ಗಳೇ ಮಾಡಿರುವುದು ತಿಳಿದುಬಂದಿದೆ. ಪಂಜಾಬ್‌ನಲ್ಲಿ ನಡೆದಿರುವ ಇಂಥ ಹತ್ಯೆ ಪ್ರಕರಣಗಳನ್ನು ಐಎಸ್‌ಐ ಕುಮ್ಮಕ್ಕಿನಿಂದ ಖಾಲಿಸ್ತಾನೀ ಸಂಘಟನೆ ಎಸಗಿದೆ.

ಗುಪ್ತಚರ ಸಂಸ್ಥೆಗಳ ಅಂದಾಜಿನ ಪ್ರಕಾರ ಭಾರತದಲ್ಲಿ ತಲೆ ಎತ್ತಿರುವ ಹಿಟ್ ಸ್ಕ್ವಾಡ್‌ಗಳು ಅಂತಾರಾಷ್ಟ್ರೀಯ ಪಿತೂರಿಯ ಒಂದು ಭಾಗವಾಗಿವೆ. ಪಾಕಿಸ್ತಾನ, ಇಟಲಿ ಮತ್ತು ಕೆನಡಾ ದೇಶಗಳಿಂದ ಈ ತಂಡಗಳಿಗೆ ಫಂಡಿಂಗ್ ಆಗುತ್ತಿದೆಯಂತೆ.

(ಒನ್ಇಂಡಿಯಾ ಸುದ್ದಿ)

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
An Intelligence Bureau official says that such hit squads are being formed following a clarion call by the Islamic Courts which have been specifically set up to target Hindus in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X