• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018: ಒನ್ಇಂಡಿಯಾ ಕನ್ನಡ ಫೇಸ್ಬುಕ್ ಟಾಪ್ ಸುದ್ದಿಗಳು

|

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.

ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ.

ಪ್ರಮುಖ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಧಿಕೃತ ತಾಣ ಎಂಬ ಮಾನ್ಯತೆ ಸಿಕ್ಕಿದೆ. 2018ರಲ್ಲಿ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪಟ್ಟಿ ಇಲ್ಲಿದೆ.

2018- ಭಾರತಕ್ಕೆ ಒಂದಷ್ಟು ಸಿಹಿ, ಒಂದಷ್ಟು ಕಹಿ

ಕನ್ನಡದ ಅಗ್ರ ಅಂತರ್ಜಾಲ ತಾಣವಾಗಿರುವ ದಟ್ಸ್ ಕನ್ನಡ (ಒನ್ಇಂಡಿಯಾ ಕನ್ನಡ) 2000ರಿಂದ ಕಾರ್ಯನಿರ್ವಹಿಸುತ್ತಿದೆ. ವಿಳಾಸ : ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಮೊಬೈಲ್ ನಲ್ಲಿ http://m.oneindia.in/kannada/ ತಾಣದಲ್ಲಿಯೂ ಪಡೆಯಬಹುದು. ನಮ್ಮ ಫೇಸ್ ಬುಕ್ ವಿಳಾಸ: https://www.facebook.com/oneindiakannada/

ಮೋದಿ ಹಾಗೂ ರಮ್ಯಾ ಟ್ವೀಟ್ ವಾರ್

ಮೋದಿ ಹಾಗೂ ರಮ್ಯಾ ಟ್ವೀಟ್ ವಾರ್

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ಮೋದಿ ಅವರ ಹಳೆ ಟ್ವೀಟೊಂದನ್ನು ತಿದ್ದಿ, 'ಬಿಜೆಪಿ ಮುಕ್ತ ಭಾರತ' ಎಂದು ಟ್ವೀಟ್ ಮಾಡಿದ್ದರು.

ಈ ಫೇಸ್ ಬುಕ್ ಪೋಸ್ಟ್ 1,30,961 ಜನರನ್ನು ತಲುಪಿದ್ದು, 2.2 K ಲೈಕ್ಸ್, 529 ಕಾಮೆಂಟ್ಸ್ ಹಾಗೂ 171 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯ ಸಾಧನೆ

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯ ಸಾಧನೆ

ಮಂಗಳಮುಖಿಯರೆಂದರೆ ಕೀಳಾಗಿ ನೋಡುವ ಸಾಮಾಜದ ಮುಂದೆ ಸ್ವಾವಲಂಬಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಚಿಕ್ಕಮಗಳೂರಿನ ಮಂಗಳಮುಖಿಯೊಬ್ಬರ ಲೇಖನವನ್ನು ಬಹುಜನ ಮೆಚ್ಚಿಕೊಂಡಿದ್ದರು.

ಈ ಫೇಸ್ ಬುಕ್ ಪೋಸ್ಟ್ 1,13,135 ಜನರನ್ನು ತಲುಪಿದ್ದು, 1.8K ಲೈಕ್ಸ್, 16 ಕಾಮೆಂಟ್ಸ್ ಹಾಗೂ 181 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

2018ರಲ್ಲಿ ಹಠಾತ್ತನೆ ಪ್ರಸಿದ್ಧರಾದ ಅದೃಷ್ಟವಂತರಿವರು

ಬಿಎಂಟಿಸಿ ಬಸ್ ರೂಟ್ ನಂಬರ್ 600 ಇನ್ನಿಲ್ಲ

ಬಿಎಂಟಿಸಿ ಬಸ್ ರೂಟ್ ನಂಬರ್ 600 ಇನ್ನಿಲ್ಲ

ಬೆಂಗಳೂರು ಮಹಾನಗರದ ಅತಿ ದೊಡ್ಡ ಬಸ್ ಮಾರ್ಗಗಳಲ್ಲಿ ರೂಟ್ ನಂಬರ್ 600 ಬಸ್ ಮಾರ್ಗವು ಒಂದೆನಿಸಿತ್ತು. ಆದರೆ, ಕಾರಣಾಂತರದಿಂದ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 1,40,052 ಜನರನ್ನು ತಲುಪಿದ್ದು, 2K ಲೈಕ್ಸ್, 6 ಕಾಮೆಂಟ್ಸ್ ಹಾಗೂ 102 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

2018ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಒನ್ಇಂಡಿಯಾ ವಿಡಿಯೋಗಳು

ಹುಚ್ಚ ಎನಿಸಿಕೊಂಡಿದ್ದ ವ್ಯಕ್ತಿಗೆ ಸಿಎಂರಿಂದ ಸನ್ಮಾನ

ಹುಚ್ಚ ಎನಿಸಿಕೊಂಡಿದ್ದ ವ್ಯಕ್ತಿಗೆ ಸಿಎಂರಿಂದ ಸನ್ಮಾನ

ಊರ ಜನ ಅಂದು ಹುಚ್ಚನೆಂದು ಕರೆದಿದ್ದ ಅದೇ ವ್ಯಕ್ತಿಗೆ ಇಂದು ಸಿಎಂ ಕುಮಾರಸ್ವಾಮಿ ಅವರು ಸನ್ಮಾನ ಮಾಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ 'ಕನ್ನಡ ರಾಜ್ಯೋತ್ಸವ' ಪ್ರಶಸ್ತಿ ಅವರ ಮುಡಿಗೇರಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್291,779 ಜನರನ್ನು ತಲುಪಿದ್ದು, 4.6K ಲೈಕ್ಸ್, 4.6 ಕಾಮೆಂಟ್ಸ್ ಹಾಗೂ 762 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

ರತ್ನಖಚಿತ ಸಾಲಿಗ್ರಾಮವಾದ ಮಂತ್ರಾಕ್ಷತೆ

ರತ್ನಖಚಿತ ಸಾಲಿಗ್ರಾಮವಾದ ಮಂತ್ರಾಕ್ಷತೆ

ಎಲ್ಲರಿಗೂ ಒಲಿಯುವ ರಾಘವೇಂದ್ರ ಸ್ವಾಮಿಗಳಿಂದ ಬಾಗಲಕೋಟೆಯಲ್ಲಿ ಅಚ್ಚರಿಯ ಪವಾಡವೊಂದು ನಡೆದಿದ್ದು, ರಾಯರ ಮಂತ್ರಾಕ್ಷತೆ 10 ಸಾಲಿಗ್ರಾಮಗಳಾಗಿ ಪರಿವರ್ತನೆಯಾದ ಘಟನೆ ಜರುಗಿದೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 254,384 ಜನರನ್ನು ತಲುಪಿದ್ದು, 3.3K ಲೈಕ್ಸ್, 30 ಕಾಮೆಂಟ್ಸ್ ಹಾಗೂ 1000 ಬಾರಿ ಶೇರ್ ಆಗಿದೆ.

ಪೋಸ್ಟ್ ನೋಡಲು ಕ್ಲಿಕ್ ಮಾಡಿ

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ

ಒಂದೇ ತಿಂಗಳಲ್ಲಿ ವಿಧಿಯಾಟಕ್ಕೆ ಬಲಿಯಾದ ಸ್ನೇಹಿತರು

ಒಂದೇ ತಿಂಗಳಲ್ಲಿ ವಿಧಿಯಾಟಕ್ಕೆ ಬಲಿಯಾದ ಸ್ನೇಹಿತರು

ಮಾಜಿ ಸಚಿವ ಅಂಬರೀಶ್ ಮತ್ತು ಅವರ ಆಪ್ತ ಸ್ನೇಹಿತರೊಬ್ಬರು ಕೆಲವೇ ದಿನಗಳ ಅಂತರದಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 160,768 ಜನರನ್ನು ತಲುಪಿದ್ದು, 720 ಲೈಕ್ಸ್ ಹಾಗೂ 58 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಅಂಬರೀಷ್ ಮೊಬೈಲಲ್ಲಿ ಸುಮಲತಾ ನಂಬರ್

ಅಂಬರೀಷ್ ಮೊಬೈಲಲ್ಲಿ ಸುಮಲತಾ ನಂಬರ್

ಪತ್ನಿ ಸುಮಲತಾ ಅವರ ಮೊಬೈಲ್ ನಂಬರ್ ಅನ್ನು ಅಂಬರೀಶ್‌ ವಿಚಿತ್ರ ಹೆಸರಿನಿಂದ ಸೇವ್ ಮಾಡಿದ್ದರು. ಅವರು ಸೇವ್ ಮಾಡಿದ್ದ ಹೆಸರೇ ಹೇಳುತ್ತಿತ್ತು ಸುಮಲತಾ ಎಡೆಗೆ ಅಂಬರೀಶ್‌ಗೆ ಯಾವ ಪರಿ ಪ್ರೀತಿ ಇತ್ತೆಂದು...

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 710,577 ಜನರನ್ನು ತಲುಪಿದ್ದು, 10K ಲೈಕ್ಸ್, 82 ಕಾಮೆಂಟ್ಸ್ ಹಾಗೂ 274 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ

ಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋ ಬಗ್ಗೆ ಹಾಕಿದ್ದ ಫೇಸ್ ಬುಕ್ ಪೋಸ್ಟ್ ಹೆಚ್ಚು ಸದ್ದು ಮಾಡಿತ್ತು. ಹೆಚ್ಚು ಕಾಮೆಂಟ್ ಗಳು ಬರದಿದ್ದರೂ ರೀಚ್ ಚೆನ್ನಾಗಿ ಆಗಿತ್ತು.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 172,606 ಜನರನ್ನು ತಲುಪಿದ್ದು, 2.2K ಲೈಕ್ಸ್, ಹಾಗೂ 23 ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಕೇವಲ 10 ರು ಗೆ ಚಿಕಿತ್ಸೆ ನೀಡುವ ಮೈಸೂರಿನ ವೈದ್ಯ

ಕೇವಲ 10 ರು ಗೆ ಚಿಕಿತ್ಸೆ ನೀಡುವ ಮೈಸೂರಿನ ವೈದ್ಯ

ಮೈಸೂರಿನಲ್ಲೊಬ್ಬರು ಡಾಕ್ಟರ್ ಇದ್ದಾರೆ. ಅವರು ಪಡೆಯುವ ವೈದ್ಯಕೀಯ ಸಲಹಾ ಚಿಕಿತ್ಸೆ ಶುಲ್ಕ (ಕನ್ಸಲ್ಟೆನ್ಸಿ ಫೀ) 10 ರೂ ಅಷ್ಟೇ.

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 273,538 ಜನರನ್ನು ತಲುಪಿದ್ದು, 2.2K ಲೈಕ್ಸ್,59 ಕಾಮೆಂಟ್ಸ್ ಹಾಗೂ 1.3K ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಶಿರಡಿಗೆ ಬೆಂಗಳೂರಿನಿಂದ ವಾರದ 6 ದಿನ ವಿಮಾನ

ಶಿರಡಿಗೆ ಬೆಂಗಳೂರಿನಿಂದ ವಾರದ 6 ದಿನ ವಿಮಾನ

ಬೆಂಗಳೂರಿನಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವವರಿಗೆ ಸ್ಪೈಸ್ ಜೆಟ್ ವಿಮಾನ ಸೌಲಭ್ಯ ಒದಗಿಸುತ್ತಿದೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ವಿಮಾನಯಾನ ಲಭ್ಯವಿರಲಿದೆ

ಈ ಕುರಿತ ಈ ಫೇಸ್ ಬುಕ್ ಪೋಸ್ಟ್ 332,633 ಜನರನ್ನು ತಲುಪಿದ್ದು, 3.8K ಲೈಕ್ಸ್, 56 ಕಾಮೆಂಟ್ಸ್ ಹಾಗೂ 2,296ಬಾರಿ ಶೇರ್ ಆಗಿದೆ. ಈ ಪೋಸ್ಟ್ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

English summary
Best of 2018: Oneindia Kannada Top viewed Facebook posts list is here. Facebook post varies from Cinema to Crime, Politics to Police, Job information to How to do series. Check the list. Oneindia-Kannada is a leading Kannada portal. We have been in this space since 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X