• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಈ ನಗರಗಳಲ್ಲಿ ಬದುಕು ಬೊಂಬಾಟ್: ಇಲ್ಲಿದೆ ನೋಡಿ ಲಿಸ್ಟ್

|

ಬೆಂಗಳೂರು, ಮಾರ್ಚ್.05: ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ 2020ನೇ ಸಾಲಿನ ಸುಗಮ ಜೀವನ ಸೂಚ್ಯಂಕದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದ ಪುಣೆ ಎರಡನೇ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶದ ಅಹ್ಮದಾಬಾದ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಸುಗಮ ಜೀವನ ಸೂಚ್ಯಂಕ ( Ease Of Living Index ) ಮತ್ತು ಪುರಸಭೆಗಳ ಸಾಮರ್ಥ್ಯ ಸೂಚ್ಯಂಕ [ಎಂ.ಪಿ.ಐ] 2020 ಶ್ರೇಯಾಂಕಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಆನ್ ಲೈನ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದ್ದಾರೆ.

ಬೊಂಬಾಟ್ ಬೆಂಗಳೂರು: ಆರಾಮದಾಯಕ ಜೀವನಕ್ಕೆ ಈ ನಗರವೇ ಬೆಸ್ಟ್!

ಸಾರ್ವಜನಿಕರು ಆರಾಮದಾಯಕ ಜೀವನ ನಿರ್ವಹಣೆಗೆ ಭಾರತದಲ್ಲಿ ಉತ್ತಮ ಎನಿಸಿರುವ ನಗರಗಳು ಯಾವುವು. ಮಹಾನಗರ ಪಾಲಿಕೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಯಾವ ನಗರಗಳು ಉತ್ತಮ. "ಪ್ರೆಸ್ ಇನ್ ಫಾರ್ಮೆಷನ್ ಬ್ಯುರೋ" ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಯಾವ ನಗರಗಳು ಯಾವ ಸ್ಥಾನದಲ್ಲಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಸುಗಮ ಜೀವನ ಸೂಚ್ಯಂಕ ಮತ್ತು ಅಳತೆಗೋಲು

ಸುಗಮ ಜೀವನ ಸೂಚ್ಯಂಕ ಮತ್ತು ಅಳತೆಗೋಲು

ಭಾರತದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು ಮತ್ತು ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸುಗಮ ಜೀವನ ಸೂಚ್ಯಂಕವನ್ನು ಪ್ರಕಟಿಸಲಾಗಿದೆ. 2020ರಲ್ಲಿ ನಡೆಸಿದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 111 ನಗರಗಳು ಭಾಗವಹಿಸಿದ್ದವು. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು ಮತ್ತು ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ವಿಭಾಗದ ಎಲ್ಲಾ ನಗರಗಳು ಸ್ಮಾರ್ಟ್ ಸಿಟಿ ಕಾರ್ಯಕ್ರಮದಡಿ ಬರುತ್ತವೆ.

ಸುಗಮ ಜೀವನ ಸೂಚ್ಯಂಕದ ಅರ್ಥವೇನು?

ಸುಗಮ ಜೀವನ ಸೂಚ್ಯಂಕದ ಅರ್ಥವೇನು?

ದೇಶದಲ್ಲಿ ಸುಗಮ ಜೀವನ ಸೂಚ್ಯಂಕವು ಗುಣಮಟ್ಟದ ಜೀವನ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ, ಆಧಾರ ಸ್ತಂಭಗಳ ಮೂಲಕ ಅಸ್ಥಿತ್ವದಲ್ಲಿರುವ ಜೀವನದ ಪರಿಸ್ಥಿತಿಗಳಿಗೆ ಕಾರಣವಾಗುವ ಫಲಿತಾಂಶಗಳನ್ನು ಪರಿಶೀಲಿಸುತ್ತದೆ. ಶಿಕ್ಷಣ, ಆರೋಗ್ಯ, ವಸತಿ ಮತ್ತು ಸೂರು, ವಾಶ್ ಅಂಡ್ ಎಸ್.ಡಬ್ಲ್ಯೂ.ಎಂ, ಸಾರಿಗೆ, ಸುರಕ್ಷತೆ ಮತ್ತು ಭದ್ರತೆ, ಮನರಂಜನೆ, ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕತೆಯ ಅವಕಾಶಗಳು, ಪರಿಸರ, ಹಸಿರು ಸ್ಥಳ ಮತ್ತು ಕಟ್ಟಡಗಳು, ಇಂಧನ ಬಳಕೆ ಮತ್ತು ನಗರ ಸ್ಥಿತಿ ಸ್ಥಾಪಕತ್ವವು 13 ವರ್ಗಗಳ ವ್ಯಾಪ್ತಿಗೆ ಬರುತ್ತದೆ.

ಪುರಸಭೆ ಸಾಧನೆ ಸೂಚ್ಯಂಕ ಬಗ್ಗೆ ಮಾಹಿತಿ

ಪುರಸಭೆ ಸಾಧನೆ ಸೂಚ್ಯಂಕ ಬಗ್ಗೆ ಮಾಹಿತಿ

ಪುರಸಭೆಗಳ ಸಾಧನೆ ಸೂಚ್ಯಂಕವನ್ನು ಸುಲಭ ಜೀವನ ಸೂಚಕಗಳ ಆಧಾರದ ಮೇಲೆ ಜಾರಿಗೊಳಿಸಲಾಗುತ್ತದೆ. ಸ್ಥಳೀಯ ಆಡಳಿತದಲ್ಲಿ ಪೌರ ಸಂಸ್ಥೆಗಳು ನೀಡುವ ಸೇವೆಗಳು, ಹಣಕಾಸು, ನೀತಿ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯನ್ನು ಪರಿಶೀಸಲಾಗುತ್ತದೆ. ಸ್ಥಳೀಯ ಆಡಳಿತ ಅಭ್ಯಾಸಗಳಲ್ಲಿ ಸಂಕಿರ್ಣತೆಗಳನ್ನು ಸರಳೀಕರಿಸಲು ಮತ್ತು ಮೌಲ್ಯಮಾಪನ ಮಾಡಲು ಸಹಾಯವಾಗುತ್ತದೆ. ಅಲ್ಲದೇ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸಲು ಪ್ರಯತ್ನಿಸುತ್ತದೆ.

ಪುರಸಭೆ ಸಾಧನೆ ಸೂಚ್ಯಂಕ ವ್ಯಾಪ್ತಿಯಲ್ಲಿರುವ ವಿಷಯ

ಪುರಸಭೆ ಸಾಧನೆ ಸೂಚ್ಯಂಕ ವ್ಯಾಪ್ತಿಯಲ್ಲಿರುವ ವಿಷಯ

ಶಿಕ್ಷಣ, ಆರೋಗ್ಯ, ನೀರು ಮತ್ತು ತ್ಯಾಜ್ಯ ನೀರು, ಎಸ್.ಡಬ್ಲ್ಯೂ.ಎಂ ಮತ್ತು ನೈರ್ಮಲ್ಯ, ನೋಂದಣಿ ಮತ್ತು ಅನುಮತಿಗಳು, ಮೂಲ ಸೌಕರ್ಯ, ಕಂದಾಯ ನಿರ್ವಹಣೆ, ವೆಚ್ಚ ನಿರ್ವಹಣೆ, ವಿತ್ತೀಯ ಶಿಸ್ತು, ವಿತ್ತೀಯ ವಿಕೇಂದ್ರೀಕರಣ, ಡಿಜಿಟಲ್ ಆಡಳಿತ, ಕೈಗೆಟುವ ರೀತಿಯಲ್ಲಿ ಡಿಜಿಟಲ್ ವ್ಯವಸ್ಥೆ, ಡಿಜಿಟಲ್ ಸಾಕ್ಷರತೆ, ಯೋಜನೆಗಳ ಸಿದ್ಧತೆ, ಯೋಜನೆಗಳ ಅನುಷ್ಠಾನ, ಯೋಜನೆಗಳ ಜಾರಿ, ಪಾರದರ್ಶಕತೆ ಮತ್ತು ಜವಾಬ್ದಾರಿತನ, ಮಾನವ ಸಂಪನ್ಮೂಲ, ಪಾಲ್ಗೊಳ್ಳುವಿಕೆ ಮತ್ತು ಪರಿಣಾಮಕಾರಿತನ ಸೇರಿದಂತೆ ಒಟ್ಟು 20 ವಲಯಗಳು ಪುರಸಭೆ ಸಾಧನೆ ಸೂಚ್ಯಂಕದ ವ್ಯಾಪ್ತಿಗೆ ಬರುತ್ತವೆ.

ಪುರಸಭೆ ವ್ಯಾಪ್ತಿಯಲ್ಲಿ ಯಾವುದು ಬೆಸ್ಟ್ ನಗರ?

ಪುರಸಭೆ ವ್ಯಾಪ್ತಿಯಲ್ಲಿ ಯಾವುದು ಬೆಸ್ಟ್ ನಗರ?

ದೇಶದಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಹಾಗೂ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಯಾವುದು ಟಾಪ್ ಎನ್ನುವುದರ ಬಗ್ಗೆ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳ ಪೈಕಿ ಯಾವ ನಗರವು ಸುಗಮ ಜೀವನಕ್ಕೆ ಉತ್ತಮ ಎಂಬ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಟಾಪ್-10 ನಗರಗಳ ಪಟ್ಟಿ ಇಲ್ಲಿದೆ ನೋಡಿ.

1. ಇಂದೋರ್

2. ಸೂರತ್

3. ಭೂಪಾಲ್

4. ಪಿಂಪ್ರಿ ಚಿಂಚ್ವಾಡ್

5. ಪುಣೆ

6. ಅಹ್ಮದಾಬಾದ್

7. ರಾಯ್ಪುರ್

8. ಗ್ರೇಟರ್ ಮುಂಬೈ

9. ವಿಶಾಖಪಟ್ಟಣಂ

10. ವಡೋದರ

  ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೋಳ್ತಿದ್ದಾರಾ ನಮ್ಮ ಸಚಿವರು? | Oneindia Kannada
  ಪುರಸಭೆ ವ್ಯಾಪ್ತಿಯಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ

  ಪುರಸಭೆ ವ್ಯಾಪ್ತಿಯಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ

  ದೇಶದಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಹಾಗೂ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಯಾವುದು ಟಾಪ್ ಎನ್ನುವುದರ ಕುರಿತು ಒಂದು ಪಟ್ಟಿ ಇಲ್ಲಿದೆ.

  1. ಹೊಸ ದೆಹಲಿ ಎಂ.ಸಿ

  2. ತಿರುಪತಿ

  3. ಗಾಂಧಿನಗರ

  4. ಕರ್ನೂಲ್

  5. ಸೇಲಂ

  6. ತಿರುಪ್ಪೂರ್

  7. ಬಿಲಾಸ್ಪುರ್

  8. ಉದಯ್ ಪುರ್

  9. ಝಾನ್ಸಿ

  10. ತಿರುನಲ್ವೇಲಿ

  English summary
  Best Cities To Live In India | Municipal Performance Index 2020: Bengaluru Top In List.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X