• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೊಂಬಾಟ್ ಬೆಂಗಳೂರು: ಆರಾಮದಾಯಕ ಜೀವನಕ್ಕೆ ಈ ನಗರವೇ ಬೆಸ್ಟ್!

|

ಬೆಂಗಳೂರು, ಮಾರ್ಚ್.04: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಪಿಂಚಣಿದಾರರ ಸ್ವರ್ಗ ಎಂತಲೇ ಪ್ರಖ್ಯಾತಿ ಪಡೆದಿರುವ. ಲಕ್ಷಾಂತರ ಜನರಿಗೆ ಹೊಸ ಜೀವನ ನೀಡಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಇಡೀ ದೇಶದಲ್ಲಿ ಸುಗಮ ಜೀವನಕ್ಕೆ ಹೇಳಿ ಮಾಡಿಸಿದ ನಗರ ಎಂದು ಗುರುತಿಸಿಕೊಂಡಿದೆ.

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಸುಗಮ ಜೀವನ ಸೂಚ್ಯಂಕ( Ease Of Living Index ) ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮಹಾರಾಷ್ಟ್ರದ ಪುಣೆ ಎರಡನೇ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶದ ಅಹ್ಮದಾಬಾದ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಸೋಲು ಎದುರಾದರೆ ಜೀವನವೇ ಮುಗಿಯಲ್ಲ!

ದೇಶದ 111 ಪ್ರಮುಖ ನಗರಗಳಲ್ಲಿ ಸುಗಮ ಜೀವನಕ್ಕೆ ಉತ್ತಮವಾದ ನಗರ ಯಾವುದು ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರವು ಪ್ರತಿವರ್ಷ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. 2020ನೇ ಸಾಲಿನ ಸುಗಮ ಜೀವನ ಸೂಚ್ಯಂಕದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಸಾರ್ವಜನಿಕರು ಆರಾಮದಾಯಕ ಜೀವನ ನಿರ್ವಹಣೆಗೆ ಭಾರತದಲ್ಲಿ ಉತ್ತಮ ಎನಿಸಿರುವ ನಗರಗಳು ಯಾವುವು. ಕೇಂದ್ರ ಸರ್ಕಾರದ "ಪ್ರೆಸ್ ಇನ್ ಫಾರ್ಮೆಷನ್ ಬ್ಯುರೋ" ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಯಾವ ನಗರಗಳು ಯಾವ ಸ್ಥಾನದಲ್ಲಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಸುಗಮ ಜೀವನ ಸೂಚ್ಯಂಕದ ಉದ್ದೇಶ?

ಸುಗಮ ಜೀವನ ಸೂಚ್ಯಂಕದ ಉದ್ದೇಶ?

ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೆಷನ್ ಬ್ಯುರೋ(PIB) ಬಿಡುಗಡೆಯ ಪ್ರಕಾರ, "ಸುಗಮ ಜೀವ ಸೂಚ್ಯಂಕ ( Ease Of Living Index ) ಒಂದು ಮೌಲ್ಯಮಾಪನ ಸಾಧನವಾಗಿದೆ. ಜೀವನದ ಗುಣಮಟ್ಟ ಮತ್ತು ನಗರ ಅಭಿವೃದ್ಧಿಗೆ ವಿವಿಧ ಉಪಕ್ರಮಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುವುದಕ್ಕೆ ಇದರಿಂದ ಸಹಾಯವಾಗಲಿದೆ" "ಇದು ಜೀವನದ ಗುಣಮಟ್ಟ, ನಗರದಲ್ಲಿ ಜೀವನಕ್ಕೆ ಅಗತ್ಯವಿರುವ ಆರ್ಥಿಕ-ಸಾಮರ್ಥ್ಯ, ಸ್ಥಿತಿ ಸ್ಥಾಪಕತ್ವ, ಸುಸ್ಥಿರತೆ ಆಧರಿಸಿ ಭಾರತದಲ್ಲಿನ ಪ್ರಮುಖ ನಗರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

2020ನೇ ಸಾಲಿನ ಸುಗಮ ಜೀವನ ಸೂಚ್ಯಂಕ

2020ನೇ ಸಾಲಿನ ಸುಗಮ ಜೀವನ ಸೂಚ್ಯಂಕ

ಭಾರತದಲ್ಲಿ 2020ನೇ ಸಾಲಿನಲ್ಲಿ ಸುಗಮ ಜೀವನ ಸೂಚ್ಯಂಕಕ್ಕೆ ಸಂಬಂಧಿಸಿದಂತೆ 111 ನಗರಗಳಲ್ಲಿ ಜೀವನ ನಿರ್ವಹಣೆ ಕುರಿತು ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯನ್ನು ಎರಡು ರೀತಿಯಾಗಿ ವಿಭಾಗಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಎರಡನೇ ಪಟ್ಟಿಯಲ್ಲಿ ಶಿಮ್ಲಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

ನೀವು ಸದ್ಗುಣಿಯಾದರೆ ಬದುಕು ಬಲು ಸುಂದರ..!

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ

ದೇಶದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳ ಪೈಕಿ ಯಾವ ನಗರವು ಸುಗಮ ಜೀವನಕ್ಕೆ ಉತ್ತಮ ಎಂಬ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಟಾಪ್-10 ನಗರಗಳ ಪಟ್ಟಿ ಇಲ್ಲಿದೆ ನೋಡಿ.

1. ಬೆಂಗಳೂರು

2. ಪುಣೆ

3. ಅಹ್ಮದಾಬಾದ್

4. ಚೆನ್ನೈ

5. ಸೂರತ್

6. ನವಿ ಮುಂಬೈ

7. ಕೊಯಮತ್ತೂರ್

8. ವಡೋದರಾ

9. ಇಂದೋರ್

10. ಗ್ರೇಟರ್ ಮುಂಬೈ

  ವಾಸಕ್ಕೆ ಯೋಗ್ಯ ಸ್ಥಳ ಸೂಚ್ಯಂಕದಲ್ಲಿ ದೇಶದಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ | Oneindia Kannada
  ಸುಗಮ ಜೀವ ಸೂಚ್ಯಂಕ ಪಟ್ಟಿ(10 ಲಕ್ಷಕ್ಕಿಂತ ಕಡಿಮೆ)

  ಸುಗಮ ಜೀವ ಸೂಚ್ಯಂಕ ಪಟ್ಟಿ(10 ಲಕ್ಷಕ್ಕಿಂತ ಕಡಿಮೆ)

  1. ಶಿಮ್ಲಾ

  2. ಭುವನೇಶ್ವರ್

  3. ಸಿಲ್ವಾಸ್ಸಾ

  4. ಕಾಕಿನಾಡ

  5. ಸೇಲಂ

  6. ವೆಲ್ಲೂರು

  7. ಗಾಂಧಿನಗರ

  8. ಗುರುಗ್ರಾಮ

  9. ದಾವಣಗೆರೆ

  10. ತಿರುಚಿನಾಪಳ್ಳಿ

  English summary
  Best Cities To Live In India | Ease of Living Index 2021: Bengaluru Top In List.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X