ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರವೇ ಮುಂದೆ

|
Google Oneindia Kannada News

ಕೊವಿಡ್ 19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಉದ್ಯೋಗ, ನೇಮಕಾತಿ ಪ್ರಗತಿ ಸಾಧಿಸುತ್ತಿದ್ದು, ನೇಮಕಾತಿ ವಿಷಯದಲ್ಲಿ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರವೇ ಮುಂದಿದೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ.

ನೌಕ್ರಿ ಜಾಬ್ ಸ್ಪೀಕ್ ವರದಿ ಪ್ರಕಾರ, ಭಾರತದ ಔದ್ಯೋಗಿಕ ಮಾರುಕಟ್ಟೆ ಸತತವಾಗಿ ಮೂರನೇ ತಿಂಗಳು ಶೇ 57 ರಷ್ಟು ಪ್ರಗತಿ ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 2,753 ಹುದ್ದೆ ಸೃಷ್ಟಿ ಮೂಲಕ 2019ರಲ್ಲಿ ಸಾಧಿಸಿದ್ದ ಶೇ 21ರಷ್ಟು ಪ್ರಗತಿಯನ್ನು ಮೀರಿ ಮಾರುಕಟ್ಟೆ ಬೆಳೆದಿದೆ ಎಂದು ನೌಕ್ರಿ ಜಾಕ್ ಸ್ಪೀಕ್ ವರದಿ ಮಾಡಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 3261 ಹುದ್ದೆಗಳಿವೆಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 3261 ಹುದ್ದೆಗಳಿವೆ

ಪ್ರತಿ ತಿಂಗಳ ನೇಮಕಾತಿ ವಿವರಗಳ ಆಧಾರದ ಮೇಲೆ ಅಂಕಿ ಅಂಶ, ದಾಖಲೆ ಸಮೇತ ವರದಿ ನೀಡುವ ನೌಕ್ರಿ ಜಾಬ್ ಸ್ಪೀಕ್, ವಿವಿಧ ಕೈಗಾರಿಕೆ, ನಗರ, ಅನುಭವ ವಿವರಗಳ ಆಧಾರದ ಮೇಲೆ ವರದಿ ತಯಾರಿಸಲಾಗುತ್ತದೆ.

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರವೇ ಮುಂದೆ

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರವೇ ಮುಂದೆ

ವರ್ಷದಿಂದ ವರ್ಷಕ್ಕೆ ತುಲನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ(ಶೇಕಡಾ 138ರಷ್ಟು), ಹಾಸ್ಪಿಟಾಲಿಟಿ (ಶೇ 82 ರಷ್ಟು) ಪ್ರಗತಿ ಕಂಡಿದೆ. ಡಿಜಿಟಲ್ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡಿರುವ ಭಾರತದ ಸಂಸ್ಥೆಗಳು ಟೆಕ್ ವೃತ್ತಿಪರರಿಗಾಗಿ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತಿವೆ. ಸೆಪ್ಟೆಂಬರ್ 2021ರಂತೆ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಐಟಿ ಕ್ಷೇತ್ರ ಶೇ 138ರಷ್ಟು ಪ್ರಗತಿ ಕಂಡಿದೆ.

ಹಾಸ್ಪಿಟಾಲಿಟಿ, ರೀಟೈಲ್ ಕ್ಷೇತ್ರದಲ್ಲೂ ಪ್ರಗತಿ

ಹಾಸ್ಪಿಟಾಲಿಟಿ, ರೀಟೈಲ್ ಕ್ಷೇತ್ರದಲ್ಲೂ ಪ್ರಗತಿ

ಹೋಟೆಲ್, ರೆಸಾರ್ಟ್ ಉದ್ಯಮ ಶೇ 82ರಷ್ಟು, ರೀಟೈಲ್ ಕ್ಷೇತ್ರದ ಉದ್ಯೋಗ ಶೇ 70ರಷ್ಟು ಪ್ರಗತಿ ಕಂಡಿವೆ. ಕೋವಿಡ್ 19 ಲಾಕ್ ಡೌನ್ ಹಾಗೂ ನಿರ್ಬಂಧದಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ಕ್ಷೇತ್ರಗಳಲ್ಲಿ ಹೋಟೆಲ್ ಉದ್ಯಮ ಮುಂಚೂಣಿಯಲ್ಲಿತ್ತು. ಆದರೆ, ನಿಧಾನಗತಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಾಗಿದ್ದು, ದೇಶದೆಲ್ಲೆಡೆ ಹೋಟೆಲ್ ಉದ್ಯಮ ಚೇತರಿಸಿಕೊಳುತ್ತಿದೆ.

ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ

ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ

2020ರ ಸೆಪ್ಟೆಂಬರ್ ಅಂಕಿ ಅಂಶಕ್ಕೆ ಹೋಲಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಶೇ 53, ಬ್ಯಾಂಕಿಂಗ್/ ಹಣಕಾಸು ಸೇವೆ ಕ್ಷೇತ್ರದಲ್ಲಿ ಶೇ 43ರಷ್ಟು, ಟೆಲಿಕಾಂ/ಐಎಸ್ ಪಿ ಶೇ 37ರಷ್ಟು ನೇಮಕಾತಿಯಲ್ಲಿ ಪ್ರಗತಿ ಕಾಣಲಾಗಿದೆ. ಮೆಟ್ರೋ ನಗರಗಳಲ್ಲಿ ಶೇ 88ರಷ್ಟು ಪ್ರಗತಿ ಕಂಡು ಬಂದಿದ್ದರೆ, 2ನೇ ಸ್ತರದ ನಗರಗಳಲ್ಲಿ ಶೇ 30 ರಷ್ಟು ನೇಮಕಾತಿ ಹೆಚ್ಚಳವಾಗಿದೆ. ಐಟಿ/ಐಟಿಯೇತರ ಉದ್ಯೋಗಗಳು ಹಾಗೂ ರೀಟೈಲ್ ಉದ್ಯಮ 2ನೇ ಹಾಗೂ 3ನೇ ಸ್ತರದ ನಗರಗಳಲ್ಲಿ ಹೆಚ್ಚಾಗಿವೆ.

ನಗರಗಳ ಪೈಕಿ ಬೆಂಗಳೂರಲ್ಲಿ ನೇಮಕಾತಿ ಅಧಿಕ

ನಗರಗಳ ಪೈಕಿ ಬೆಂಗಳೂರಲ್ಲಿ ನೇಮಕಾತಿ ಅಧಿಕ

ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಲ್ಲಿ ಅತಿ ಹೆಚ್ಚು ನೇಮಕಾತಿ ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 133ರಷ್ಟು ಪ್ರಗತಿ ಕಾಣಲಾಗಿದೆ. ಬೆಂಗಳೂರು ಶೇ 133ರಷ್ಟು, ಹೈದರಾಬಾದ್ ಶೇ 110 ರಷ್ಟು, ಪುಣೆ ಶೇ 95ರಷ್ಟು ಹಾಗೂ ಚೆನ್ನೈ ಶೇ 85ರಷ್ಟು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡಿವೆ ಎಂದು ನೌಕ್ರಿ ವರದಿ ಮಾಡಿದೆ.

ಇದೇ ವೇಳೆ ದೆಹಲಿ/ ಎನ್ ಸಿಆರ್ ಶೇ 72ರಷ್ಟು, ಮುಂಬೈ ಹಾಗೂ ಕೋಲ್ಕತಾ ಶೇ 60ರಷ್ಟು ಪ್ರಗತಿ ಕಂಡಿವೆ. ಎರಡನೇ ಸ್ತರದ ನಗರಗಳಲ್ಲಿ ಅಹಮದಾಬಾದ್ (ಶೇ 82 ರಷ್ಟು), ಕೊಯಮತ್ತೂರು (ಶೇ 46ರಷ್ಟು) ನಂತರದ ಸ್ಥಾನದಲ್ಲಿ ಶೇ 33 ರಷ್ಟು ಹಾಗೂ ಕೊಚ್ಚಿ ಶೇ 19ರಷ್ಟು ಪ್ರಗತಿ ಸಾಧಿಸಿವೆ.

Recommended Video

ಕೆ. ಎಲ್ ರಾಹುಲ್ RCBಯ ನೆಕ್ಟ್ಸ್ ಕ್ಯಾಪ್ಟನ್ ಆಗೋದು ಕನ್ಫರ್ಮ್!! | Oneindia Kannada
ಅನುಭವಕ್ಕೆ ಮಣೆ ಹಾಕಿದ ಸಂಸ್ಥೆಗಳು

ಅನುಭವಕ್ಕೆ ಮಣೆ ಹಾಕಿದ ಸಂಸ್ಥೆಗಳು

ವಿವಿಧ ಕ್ಷೇತ್ರಗಳಲ್ಲಿ 8 ರಿಂದ 12 ವರ್ಷಗಳ ಅನುಭವುಳ್ಳ ಹಿರಿಯ ವೃತ್ತಿಪರರ ನೇಮಕಾತಿ ಶೇ 75ರಷ್ಟು ಏರಿಕೆ ಕಂಡರೆ, 4 ರಿಂದ 7 ವರ್ಶಹ್ ಅನುಭವವುಳ್ಳ ವೃತ್ತಿಪರರ ನೇಮಕಾತಿ ಶೇ 65ರಷ್ಟು ಏರಿಕೆಯಾಗಿದೆ, ಮಿಕ್ಕಂತೆ 13 ರಿಂದ 16 ವರ್ಷ ಅನುಭವವುಳ್ಳರ ನೇಮಕಾತಿ ಶೇ 57ರಷ್ಟು, 3 ವರ್ಷದ ತನಕ ವೃತ್ತಿ ಕೌಶಲ್ಯ ಅನುಭವವುಳ್ಳವರು ಶೇ 54ರಷ್ಟು ಅಧಿಕ ನೇಮಕ ಹಾಗೂ 16ಕ್ಕೂ ಅಧಿಕ ವರ್ಷ ಅನುಭವ ಹೊಂದಿದವರನ್ನು ಶೇ 38ರಷ್ಟು ಹೆಚ್ಚು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

English summary
Bengaluru tops the Hiring in Indian job market; It Not Limited to Just IT, These Sectors Witness Strong Growth Too: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X