ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬಾಹು ಇ ಬೀಟ್ ಮೂಲಕ ಮನೆಗಳ್ಳತನ ಕಂಟ್ರೋಲ್‌ಗೆ ಬೆಂಗಳೂರು ಪೊಲೀಸರ ಪ್ಲಾನ್

|
Google Oneindia Kannada News

ಬೆಂಗಳೂರು, ಸೆ. 13: ಬೀಟ್ ಪೋಲೀಸರ ಕಳ್ಳಾಟ ತಪ್ಪಿಸಲು ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಸುಬಾಹು ಇ- ಬೀಟ್ ಮೂಲಕ ಮನೆ ಕಳ್ಳತನಕ್ಕೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರು ಚಿಂತನೆ ನಡೆಸಿದ್ದಾರೆ. ಸುಬಾಹು ಇ ಬೀಟ್ ಪೊಲೀಸ್ ಆಪ್ ಬಳಕೆ ಮಾದರಿಯಲ್ಲಿಯೇ ನಾಗರಿಕರ ಸಹ ಆಪ್ ಬಳಕೆಗೆ ಅವಕಾಶವಿದೆ. ಮನೆ ಕಳ್ಳತನ ತಡೆಯಲು ಸಾರ್ವಜನಿಕರು ಈ ಆಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರೆ, ಪೊಲೀಸರು ನಿಮ್ಮ ಮನೆಗೆ ಭೇಟಿ ಬೀಟ್ ಹೋಗಲಿದ್ದಾರೆ. ಇಂತಹ ಹೊಸ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಸದ್ಯಕ್ಕೆ ಬೆಂಗಳೂರಿನ ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸುಬಾಹು ಇ-ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸುಬಾಹು ಪರ್ಸನಲ್ ಹೆಸರಿನ ಆಪ್ ಈಗಾಗಲೇ ಅಭಿವೃದ್ಧಿ ಪಡಿಸಿದೆ. ಅದರ ಆವೃತ್ತಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಸಾರ್ವಜನಿಕರು ಹೊರಗೆ ಹೋಗುವಾಗ ತಮ್ಮ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಆಪ್ ನಲ್ಲಿ ಉಲ್ಲೇಖಿಸಿದರೆ ಮನೆ ಯಾವ ಠಾಣೆ ವ್ಯಾಪ್ತಿಗೆ ಬರುತ್ತೋ ಆ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ವಿಶೇಷವಾಗಿ ಯಾರೂ ಇಲ್ಲದ ಮನೆಗಳ ಬಗ್ಗೆ ಮಾಹಿತಿ ಪಡೆದು ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಲಿದ್ದಾರೆ. ಈ ಮೂಲಕ ರಾತ್ರಿ ವೇಳೆ ಕಳ್ಳತನ ನಿಯಂತ್ರಣ ಮಾಡಬಹುದು ಎಂಬುದು ಪೊಲೀಸ್ ಅಧಿಕಾರಿಗಳ ಆಲೋಚನೆ. ಆದರೆ ಇದರಿಂದ ಪೂರ್ಣ ಅಪರಾಧ ತಡೆಯಲು ಅಸಾಧ್ಯವೇ ಸಂಪೂರ್ಣ ಮನೆಕಳ್ಳತನ ತಡೆಯುವುದು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ.

ಆಪ್ ಮೂಲಕ ಆಪ್ತ ಸಮಾಲೋಚನೆ

ಆಪ್ ಮೂಲಕ ಆಪ್ತ ಸಮಾಲೋಚನೆ

ಇನ್ನು ವೃದ್ಧರು, ಒಂಟಿ ಮಹಿಳೆಯರು, ಅಸುರಕ್ಷತೆ ಭಾವನೆ ಇರುವರ ನೋಂದಣಿ ಕಾರ್ಯ ಪೊಲೀಸ್ ಠಾಣಾ ವಾರು ಆರಂಭವಾಗಿದ್ದು, ಇದೇ ಸುಬಾಹು ಇ ಬೀಟ್ ಆಪ್ ಮೂಲಕವೇ ಪರಿಹಾರ ನೀಡಲು ಪೊಲೀಸರು ಪ್ರಯತ್ನಿಸಿದ್ದಾರೆ. ನೋಂದಣಿ ಮಾಡಿದವರ ಮನೆಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಂ ಅಳವಡಿಸಲಾಗುತ್ತದೆ. ಸಂಬಂಧಪಟ್ಟ ಠಾಣಾ ಸಿಬ್ಬಂದಿ ಆ ಮನೆಗೆ ಭೇಟಿ ನೀಡಿ ಅವರೊಂದಿಗೆ ಕಡ್ಡಾಯವಾಗಿ ಹತ್ತು ನಿಮಿಷ ಮಾತುಕತೆ ಮಾಡಬೇಕು. ಮನೆಗೆ ಹೋಗಿದ ಕೂಡಲೇ ಕ್ಯು ಆರ್. ಕೋಡ್‌ನಲ್ಲಿ ಸ್ಕಾನ್ ಮಾಡಿದ ಕ್ಷಣದಿಂದ ಹತ್ತು ನಿಮಿಷ ಮಾತುಕತೆ ಮಾಡಬೇಕು. ಆ ಬಳಿಕವಷ್ಟೇ ಬೀಟ್ ಪೊಲೀಸರು ಕಡ್ಡಾಯವಾಗಿ ಬೀಟ್ ಹೋಗಿ ಸಾಂತ್ವನ ಹೇಳಿ ಬರಬೇಕು. ಈ ಮೂಲಕ ಬೆಂಗಳೂರಿನಲ್ಲಿ ಅಸುರಕ್ಷತೆ ಮತ್ತು ಆತಂಕವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ.

ತಿಂಗಳಿಗೆ ಠಾಣೆಯಿಂದ 2 ಸಾವಿರ ರೂ.

ತಿಂಗಳಿಗೆ ಠಾಣೆಯಿಂದ 2 ಸಾವಿರ ರೂ.

ಖಾಸಗಿ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಸುಬಾಹು ಇ ಬೀಟ್ ಆಪ್ ಬಳಕೆ ಮಾಡುವ ಪ್ರತಿ ಪೊಲೀಸ್ ಠಾಣೆಯಿಂದ ಮಾಸಿಕ ಎರಡು ಸಾವಿರ ಸೇವಾ ವೆಚ್ಚ ಪಾವತಿಸಬೇಕು. ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 166 ಪೊಲೀಸ್ ಠಾಣೆಗಳಿವೆ. ಏಳು ವಿಭಾಗದಲ್ಲಿ 111 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿವೆ. 44 ಸಂಚಾರ ಪೊಲೀಸ್ ಠಾಣೆಗಳಿವೆ. ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಒಂದು ವೇಳೆ ಇಷ್ಟು ಪೊಲೀಸ್ ಠಾಣೆಗಳಲ್ಲಿ ಸಂಪೂರ್ಣವಾಗಿ ಸುಬಾಹು ಇ ಬೀಟ್ ವ್ಯವಸ್ಥೆ ಜಾರಿಗೆ ಮಾಡಿದರೆ, ಪ್ರತಿ ಪೊಲೀಸ್ ಠಾಣೆಯಿಂದಲೂ ಮಾಸಿಕ 2 ಸಾವಿರ ರೂ. ಪಾವತಿ ಮಾಡಬೇಕು ಎಂದು ಹೇಳಲಾಗುತ್ತಿದೆ. ಉತ್ತರ ವಿಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸುಬಾಹು ಇ ಬೀಟ್ ಜಾರಿಗೆ ತಂದಿರುವ ಬಗ್ಗೆ ಹಾಗೂ ಪಾವತಿ ಸೇವೆ ಕುರಿತು ಡಿಸಿಪಿ ಉತ್ತರ ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲಾಯಿತು. ಮಾಸಿಕ ಪಾವತಿ ಆಧಾರದ ಮೇಲೆ ಈ ಸೇವೆ ಸದ್ಯಕ್ಕೆ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾದೂ ಅಚ್ಚರಿ ಪಡಬೇಕಿಲ್ಲ. ಅದರ ನಿಯಂತ್ರಣ ಪೊಲೀಸರ ಕೈಯಲ್ಲಿಲ್ಲ.

ಸುಬಾಹು ಇ ಬೀಟ್

ಸುಬಾಹು ಇ ಬೀಟ್

ಜಿಪಿಅರ್‌ಎಸ್ ಟ್ರಾಕಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲ್ ಜೆನ್ಸಿ ತಂತ್ರಜ್ಞಾನ ಆಪ್ ಸುಬಾಹು ಇ- ಬೀಟ್. ಇದರಲ್ಲಿ ಆ ಆಪ್‌ನ್ನು ನಿರ್ವಹಣೆ ಮಾಡುವರಿಗೆ ಸುಬಾಹು ಅಡ್ಮಿನ್, ಸುಬಾಹು ಇ ಬೀಟ್, ಹಾಗೂ ಸಾರ್ವಜನಿಕರ ಬಳಕೆಗೆ ಸುಬಾಹು ಪರ್ಸನಲ್ ಎಂಬ ಮೂರು ಅವತರಣಿಕೆ ಆಪ್ ರಚನೆ ಮಾಡಲಾಗಿದೆ. ಈ ಆಪ್ ನೆರವಿನಿಂದಲೇ ಇ ಬೀಟ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಬೀಟ್‌ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ಸೂಚಿಸಿದ ಪಾಯಿಂಟ್‌ಗೆ ಹೋಗಿ ಬೀಟ್ ಪಾಯಿಂಟ್ ನಲ್ಲಿ ಹಾಕಿರುವ ಆರ್‌ಎಫ್ ಐಡಿಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಬೀಟ್ ಹಾಕಿದ ಮೇಲಾಧಿಕಾರಿಗಳಿಗೆ ಬೀಟ್ ಜಾಗಕ್ಕೆ ಹೋಗಿ ಬಂದಿರುವ ಸಮಯ, ಎಷ್ಟು ಹೊತ್ತು ಅಲ್ಲಿದ್ದರು ಎಂಬ ಎಲ್ಲಾ ವಿವರವನ್ನು ರವಾನಿಸುತ್ತದೆ. ಹೀಗಾಗಿ ಪೊಲೀಸರು ಇನ್ನು ಮುಂದೆ ಬೀಟ್ ನಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಇ ಬೀಟ್ ಆಡ್ಮಿನ್ ಆಪ್‌ಗೆ ಅಂದರೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಎಸಿಪಿ ಹಾಗೂ ಡಿಸಿಪಿಗೆ ಈ ಮಾಹಿತಿ ನೋಡಲು ಅವಕಾಶ ಇರುತ್ತದೆ.ಆಯಾ ವಿಭಾಗದ ಠಾಣೆಗಳ ವಿವರ ಪರಿಶೀಲಿಸಲು ಸಂಬಂಧಪಟ್ಟ ಡಿಸಿಪಿಗಳಿಗೆ ಅವಕಾಶ ನೀಡಲಾಗುತ್ತಿದೆ.

ವಿಜಯನಗರ ಠಾಣೆಯಲ್ಲಿ

ವಿಜಯನಗರ ಠಾಣೆಯಲ್ಲಿ

ರಾಜ್ಯದಲ್ಲಿ ಪ್ರಥಮ ಬಾರಿಗೆ ಸುಬಾಹು ಇ ಬೀಟ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು ಪಶ್ಚಿಮ ವಿಭಾಗದ ವಿಜಯನಗರ ಪೊಲೀಸ್ ಠಾಣೆಯಲ್ಲಿ. ಈ ಹಿಂದೆ ಡಿಸಿಪಿಯಾಗಿದ್ದ ಎಂ.ಎನ್.ಅನುಚೇತ್ ಅವರೇ ಪ್ರಯೋಗಿಕವಾಗಿ ಈ ಯೋಜನೆ ಜಾರಿಗೆ ವಿಜಯನಗರ ಠಾಣೆಯನ್ನು ಪ್ರಾಯೋಗಿಕವಾಗಿ ಬಳಸಿಕೊಂಡರು. ಇದು ಯಶಸ್ಸು ಆದ ಹಿನ್ನೆಲೆಯಲ್ಲಿ ಇಡೀ ರಾಜ್ಯದೆಲ್ಲೆಡೆ ಸುಬಾಹು ಇ- ಬೀಟ್ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಯಿತು. ಇದೀಗ ಬೆಂಗಳೂರಿನ ಎಲ್ಲಾ ವಿಭಾಗದಲ್ಲಿ ಇ-ಬೀಟ್ ವ್ಯವಸ್ಥೆ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ.

Recommended Video

ವಿರಾಟ್ & ಎಬಿಡಿ ಗೆ ಕಾಡ್ತಿದೆ ದೊಡ್ಡ ಸಮಸ್ಯೆ!| Oneindia Kannada
ಕೊಡಗು ಪೂರ್ತಿ ಇ ಬೀಟ್

ಕೊಡಗು ಪೂರ್ತಿ ಇ ಬೀಟ್

2020 ರಲ್ಲಿ ಕೊಡಗಿನ ಜಿಲ್ಲೆಯಾದ್ಯಂತ ಇ ಬೀಟ್ ಜಾರಿಗೆ ತರಲಾಗಿದೆ. ಅಲ್ಲಿನ ಎಸ್ಪಿಯಾಗಿದ್ದ ಸುಮನ್ ಡಿ. ಪೆನ್ನೇಕರ್ ಅವರು ಪ್ರಾಯೋಗಿಕವಾಗಿ ಮಡಿಕೇರಿ ಪಟ್ಟಣದಲ್ಲಿ ಸುಬಾಹು ಇ ಬೀಟ್ ಜಾರಿಗೆ ತಂದಿದ್ದರು. ಆನಂತರ ಜಿಲ್ಲೆಯಾದ್ಯಂತ ಇ- ಸುಬಾಹು ಇ ಬೀಟ್ ಅನುಷ್ಠಾನ ಮಾಡಿದ್ದರು. ಈ ಮೂಲಕ ಸಂಪ್ರಾದಾಯಿಕ ಬೀಟ್ ವ್ಯವಸ್ಥೆ ಬಿಟ್ಟು ಇ ಬೀಟ್ ಮೂಲಕ ಪಾರದರ್ಶಕ ಬೀಟ್ ವ್ಯವಸ್ಥೆ ಜಾರಿ ಮಾಡಿ ಸುದ್ದಿಯಾಗಿದ್ದರು. ಬೀಟ್ ಪೊಲೀಸರಿಗೆ ಸುಬಾಹು ಇ ಬೀಟ್ ಆಪ್ ಬಳಿಸಿದರೆ, ಪೊಲೀಸ್ ಅಧಿಕಾರಿಗಳು ಸುಬಾಹು ಅಡ್ಮಿನ್ ಎಂಬ ಆಫ್ ಬಳಿಸಿ ಬೀಟ್ ಪೊಲೀಸರ ಕಾರ್ಯ ಚಟುವಟಿಕೆ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಸುಬಾಹು ಇ- ಬೀಟ್ ಆಪ್ ಅಭಿವೃದ್ಧಿ ಪಡಿಸಿದೆ. ಸುಬಾಹು ಪರ್ಸನಲ್ ಹೆಸರಿನ ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸಮೀಪದ ಪೊಲೀಸರನ್ನು ಸಂಪರ್ಕಿಸಬಹುದು. ಅಥವಾ ಯಾವುದೇ ಅಪರಾಧ ಕೃತ್ಯದ ಇತರೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಬಹುದು. ಸಾರ್ವಜನಿಕರು ಈ ಆಪ್ ಬಳಸಲು ಸುಬಾಹು ಅವಕಾಶ ನೀಡಿದೆ.

English summary
Bengaluru police Subahu E beat system inside story: Subahu E Beat in all Police Stations in Bangalore read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X