ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?

|
Google Oneindia Kannada News

ಬೆಂಗಳೂರು,ಅಕ್ಟೋಬರ್ 20: ನಮ್ಮ ಮೆಟ್ರೋ ಶುರುವಾಗಿ ಬರೋಬ್ಬರಿ 10 ವರ್ಷಗಳಾಗಿವೆ. 2011ರ ಅಕ್ಟೋಬರ್ 20 ರಿಂದ ಇಲ್ಲಿಯವರೆಗೆ ಬರೋಬ್ಬರಿ 60 ಕೋಟಿ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಆರಂಭದಲ್ಲಿ ಕೇವಲ 6.7 ಕಿ.ಮೀವರೆಗೆ ಮೆಟ್ರೋ ಸೇವೆ ಇತ್ತು, ಆದರೆ ಇದೀಗ 56.09 ಕಿ.ಮೀವರೆಗೆ ವಿಸ್ತರಣೆಗೊಂಡಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಆದರೂ ಇದುವರೆಗೆ 60 ಕೋಟಿ ಬಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ನಿತ್ಯ ನಮ್ಮ ಮೆಟ್ರೋದಲ್ಲಿ 5.26 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಇದೀಗ 2.12 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಬಸ್ ಅಥವಾ ಸ್ವಂತ ವಾಹನಗಳಿಗಿಂತ ನಾವು ಅಂದುಕೊಂಡ ಸಮಯಕ್ಕೆ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಮೆಟ್ರೋ ಮೂಲಕ ತಲುಪಬಹುದು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

Bengaluru Metro Completes 10 Years On October 20; Know Interesting Facts and Stats in kannada

ನಮ್ಮ ಮೆಟ್ರೋದಲ್ಲಿ 2019ರ ಅಕ್ಟೋಬರ್ 26 ರಂದು 6.01 ಲಕ್ಷ ಮಂದಿ ಪ್ರಯಾಣಿಸಿದ್ದರು, ಕೊರೊನಾ ಬಳಿಕ 2021ರ ಅಕ್ಟೋಬರ್ 11 ರಂದು 2.7 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

ನಗರ ಸಾರಿಗೆ ತಜ್ಞ ಸಂಜೀವ್ ಅವರ ಹೇಳಿಕೆ ಪ್ರಕಾರ, ಕಳೆದ ಒಂದು ದಶಕದಿಂದ ಮೆಟ್ರೋ ನೀಡುವ ಸೇವೆಯ ಗುಣಮಟ್ಟ ಉತ್ತಮವಾಗಿದೆ, ಹಾಗೂ ಇದು ಪ್ರಶಂಸೆಗೆ ಅರ್ಹವಾಗಿದೆ, ಕಾಲಾನಂತರ ಯಾವುದೇ ಸೇವೆಯಲ್ಲಾದರೂ ಗುಣಮಟ್ಟ ಹದಗೆಡುತ್ತದೆ ಆದರೆ ನಮ್ಮ ಮೆಟ್ರೋದಲ್ಲಿ ಹಾಗಾಗಿಲ್ಲ ಎಂದರು.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕಾರ್ಯಾಚರಣೆ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಮಾತನಾಡಿ, ಮೆಟ್ರೋದಲ್ಲಿ ಆರಂಭದಿಂದ ಇಲ್ಲಿಯವರೆಗೆ ಒಟ್ಟು 60 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ನಮ್ಮ ಆದಾಯ 1286.6 ಕೋಟಿಯಲ್ಲಿದೆ ಎಂದರು.

ಕೊರೊನಾದಿಂದಾಗಿ ಆದಾಯ ಕುಸಿತ ಕಂಡಿದೆ, 3 ಬೋಗಿಯ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಮಾರ್ಪಡಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ದಿನಕ್ಕೆ 8 ರಿಂದ 9 ಲಕ್ಷದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇದೀಗ ಕಚೇರಿಗಳಿಲ್ಲದೆ ವರ್ಕ್ ಫ್ರಂ ಹೋಂ ಇರುವುದರಿಂದ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ತೀರಾ ಕಡಿಮೆ ಇದೆ ಎಂದರು.

Bengaluru Metro Completes 10 Years On October 20; Know Interesting Facts and Stats in kannada

ಹೆದ್ದಾರಿಯಲ್ಲಿರುವ ನಾಗಸಂದ್ರ, ದಾಸರಹಳ್ಳಿ ನಿಲ್ದಾಣಗಳ ಮುಂದಿನಿಂದ ರಸ್ತೆ ದಾಟುವುದು ಕಷ್ಟ. ವೇಗವಾಗಿ ಚಲಿಸುವ ವಾಹನಗಳಿಂದ ತುಂಬಿರುವ ಈ ರಸ್ತೆಯನ್ನು ದಾಟಲು ಸುತ್ತಿ ಬಳಸಿಕೊಂಡು ಬರಬೇಕಾಗುತ್ತದೆ.

ಎರಡು ನಿಲ್ದಾಣಗಳ ಮುಂದೆ ರಸ್ತೆಯನ್ನು ಕೊರೆದು ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ನಾಗಸಂದ್ರ-ಬಿಐಇಸಿ ಮಾರ್ಗ ನಿರ್ಮಾಣ ಪೂರ್ಣಗೊಂಡ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಾದಚಾರಿ ಮಾರ್ಗದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ನಾಗಸಂದ್ರ-ಬಿಐಇಸಿ ಮೆಟ್ರೊ ಮಾರ್ಗ

-ಉದ್ದ-3.77 ಕಿ.ಮೀ.
-ಯೋಜನಾ ವೆಚ್ಚ-298.65 ಕೋಟಿ ರೂ.
-ಒಟ್ಟು ನಿಲ್ದಾಣಗಳು : ಮಂಜುನಾಥನಗರ, ಜಿಂದಾಲ್‌, ಬಿಐಇಸಿ

ನಮ್ಮ ಮೆಟ್ರೋ ಸೇವೆ ಪ್ರಾರಂಭವಾಗಿ ಒಂದು ದಶಕ ಪೂರ್ಣಗೊಳ್ಳುತ್ತಿರುವ ಹಿನ್ನೆಯಲ್ಲಿ ಬಿಎಂಆರ್‌ಸಿಎಲ್‌ ಅ.21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಬಿಡುಗಡೆ ಮಾಡುತ್ತಿದೆ.

Bengaluru Metro Completes 10 Years On October 20; Know Interesting Facts and Stats in kannada

ಮೊದಲ ಹಂತದಲ್ಲಿ 25,000 ಕಾರ್ಡ್‌ಗಳನ್ನು ಬಿಎಂಆರ್‌ಸಿಎಲ್‌ ಪರಿಚಯಿಸುತ್ತಿದೆ. ಆದರೆ ಇವುಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಬಿಎಂಟಿಸಿ ಇನ್ನೂ ಸಿದ್ಧಗೊಂಡಿಲ್ಲ. ''ಮೊದಲ ಹಂತದ ಮೆಟ್ರೋೕ ನಿಲ್ದಾಣದಲ್ಲಿ ಸ್ವಯಂಚಾಲಿತ ಪಾವತಿ ಗೇಟ್‌ಗಳನ್ನು ಎನ್‌ಸಿಎಂಸಿ ಕಾರ್ಡ್‌ಗಳ ಬಳಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ.

ಎರಡನೇ ಹಂತದ ಮೆಟ್ರೋ ಸ್ಟೇಷನ್‌ಗಳು ಸಿದ್ಧಗೊಂಡಿವೆ. ರುಪೇ ಡೆಬಿಟ್‌ ಕಾರ್ಡ್‌ಗಳು ಎಲ್ಲಾ ಬ್ಯಾಂಕ್‌ ಹಾಗೂ ಮೆಟ್ರೋ ಸ್ಟೇಷನ್‌ಗಳಲ್ಲಿ ಲಭ್ಯವಿರಲಿದೆ,'' ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಹೇಳಿದ್ದಾರೆ.

ಈ ಕಾರ್ಡ್‌ ಅನ್ನು ಕೇವಲ ಕರ್ನಾಟಕದ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಈ ಕಾರ್ಡ್‌ಗಳನ್ನು ಬಳಸಬಹುದಾಗಿದೆ. ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ. ದಿಲ್ಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲಿ ಎನ್‌ಸಿಎಂಸಿ ಕಾರ್ಡ ಬಳಕೆಗೆ ಚಾಲನೆ ನೀಡಲಾಗಿದೆ.

'ಸಾರ್ವಜನಿಕರಿಗೆ ಈ ಕಾರ್ಡ್‌ನಿಂದ ಸಾಕಷ್ಟು ಅನುಕೂಲವಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಬಿಎಂಟಿಸಿಯಲ್ಲಿ ಅಳವಡಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ಹದಿನೈದು ದಿನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್‌.

Recommended Video

ಪಾಕಿಸ್ತಾನಕ್ಕೆ ಮತ್ತೊಮ್ಮೆ ಶಾಕ್:ಇಮ್ರಾನ್ ಖಾನ್ ಸರ್ಕಾರಕ್ಕೆ ಸಾಲ ಕೊಡಲ್ಲ ಎಂದ IMF | Oneindia Kannada

English summary
From a network of 6.7-km on October 20, 2011, to 56.09-km at present, South India’s first Metro service has traversed quite a distance from its once derided ‘Toy Train’ status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X