ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12ಗಂಟೆಯಲ್ಲೇ ಕಾರ್ಯಕ್ಷಮತೆ ಮೆರೆದ ಬೆಂಗಳೂರು ಏರ್ಪೋರ್ಟ್ ಪೊಲೀಸರು

|
Google Oneindia Kannada News

ದೇಶದ ಅತ್ಯಂತ ಸುಸಜ್ಜಿತ/ವಿಶಾಲವಾದ/ಅತ್ಯುತ್ತಮ ನಿರ್ವಹಣೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಚೂಣಿಯಲ್ಲಿ ನಿಲ್ಲುವ ನಿಲ್ದಾಣಗಳಲ್ಲೊಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ದೇಶದ ಐಟಿ ಹಬ್ ಎನ್ನುವ ಟ್ಯಾಗ್ ಅನ್ನು ಉಳಿಸಿಕೊಂಡಿರುವುದರಿಂದ ಇಲ್ಲಿ ಏರ್ ಟ್ರಾಫಿಕ್ ಹೆಚ್ಚು.

ವಿಮಾನಗಳ ಹಾರಾಟ ಇಲ್ಲೇನೋ ಹೆಚ್ಚಿರಬಹುದು, ಆದರೆ ನಿಲ್ದಾಣದ ಅಧಿಕಾರಿಗಳ ಕಾರ್ಯಕ್ಷಮತೆ ಸರಿಯಿದ್ದರೆ ಮಾತ್ರ ನಿಲ್ದಾಣ ಉತ್ತಮ ಹೆಸರನ್ನು ಉಳಿಸಿಕೊಳ್ಳಬಹುದು. ಅಂತಹ ಒಂದು ಘಟನೆ ಶನಿವಾರದಂದು (ಜ 29) ವರದಿಯಾಗಿದೆ.

ಬೆಂಗಳೂರು: ಸಮೀಪದಲ್ಲೇ 2 ವಿಮಾನ ಟೇಕ್‌ ಆಫ್‌, ತಪ್ಪಿದ ಭಾರೀ ಅನಾಹುತಬೆಂಗಳೂರು: ಸಮೀಪದಲ್ಲೇ 2 ವಿಮಾನ ಟೇಕ್‌ ಆಫ್‌, ತಪ್ಪಿದ ಭಾರೀ ಅನಾಹುತ

ಬೆಂಗಳೂರು ಹೊರ ವಲಯದ ದೇವನಹಳ್ಳಿಯ 4,700 ಎಕರೆ ವಿಶಾಲವಾದ ಪ್ರದೇಶದಲ್ಲಿರುವ ಈ ವಿಮಾನ ನಿಲ್ದಾಣ, ಏರ್ ಟ್ರಾಫಿಕ್ ಮತ್ತು ಕಾರ್ಗೋ ವಿಚಾರದಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತು ಇದು ಸಂಪೂರ್ಣವಾಗಿ ಸೋಲಾರ್ ಪವರ್ ನಿಂದ ನಡೆಯುವ ವಿಮಾನ ನಿಲ್ದಾಣವಾಗಿದೆ.

ಶುಚಿತ್ವಕ್ಕೆ ಹೆಸರಾಗಿರುವ ಈ ವಿಮಾನ ನಿಲ್ದಾಣದಲ್ಲಿ, ನಿಲ್ದಾಣದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಮತ್ತು ಸಂಬಂಧ ಪಟ್ಟ ಪೊಲೀಸ್ ಆಫೀಸರುಗಳು ಎಷ್ಟು ಕಾರ್ಯಕ್ಷಮತೆಯಿಂದ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಶನಿವಾರ (ಜ 29) ನಡೆದ ವಿದ್ಯಮಾನ ಒಂದು ಉದಾಹರಣೆಯಾಗಬಲ್ಲದು. ಮುಂದೆ ಓದಿ..

ಅಧಿಕ ಮಂಜಿನಿಂದಾಗಿ ಬೆಂಗಳೂರು KIAನಲ್ಲಿ ವಿಮಾನಗಳ ಮಾರ್ಗ ಬದಲಾವಣೆಅಧಿಕ ಮಂಜಿನಿಂದಾಗಿ ಬೆಂಗಳೂರು KIAನಲ್ಲಿ ವಿಮಾನಗಳ ಮಾರ್ಗ ಬದಲಾವಣೆ

 ಸೆಂಡ್ ಆಫ್ ಮಾಡಲು ಅವರ ಕುಟುಂಬದ ಸದಸ್ಯರು ಆಗಮಿಸಿರುತ್ತಾರೆ

ಸೆಂಡ್ ಆಫ್ ಮಾಡಲು ಅವರ ಕುಟುಂಬದ ಸದಸ್ಯರು ಆಗಮಿಸಿರುತ್ತಾರೆ

ಕುಮಾರ್ ಎನ್ನುವ ಪ್ರಯಾಣಿಕ ತಮ್ಮ ಕುಟುಂಬದೊಂದಿಗೆ (ಹೆಸರು ಬದಲಾಯಿಸಲಾಗಿದೆ) ನಗರದಿಂದ ಕೊಲೊಂಬೋ, ಸಿಂಗಾಪುರ್ ಮೂಲಕವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನಿಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಾರೆ. ಸೆಕ್ಯೂರಿಟಿ/ಐಡಿ ವೆರಿಫಿಕೇಶನ್/ಕೋವಿಡ್ ಕಟ್ಟುನಿಟ್ಟಿನ ಟೆಸ್ಟ್ ನಂತರ ವಿಮಾನ ಪಾರ್ಕಿಂಗ್ ಆಗುವ ಲಾಂಜಿಗೆ ತೆರಳಲು ಸಜ್ಜಾಗುತ್ತಾರೆ. ಅವರನ್ನು ಸೆಂಡ್ ಆಫ್ ಮಾಡಲು ಅವರ ಕುಟುಂಬದ ಸದಸ್ಯರು ಆಗಮಿಸಿರುತ್ತಾರೆ.

 ಬೀಳ್ಕೊಡಲು ಬಂದ ಇಬ್ಬರು ಮಕ್ಕಳಿಗೆ ಕುಮಾರ್ ಅದೆಷ್ಟೋ ದುಡ್ಡನ್ನು ಕೊಡುತ್ತಾರೆ

ಬೀಳ್ಕೊಡಲು ಬಂದ ಇಬ್ಬರು ಮಕ್ಕಳಿಗೆ ಕುಮಾರ್ ಅದೆಷ್ಟೋ ದುಡ್ಡನ್ನು ಕೊಡುತ್ತಾರೆ

ಆ ಕುಟುಂಬದ ಪದ್ದತಿಯಂತೆ, ಬೀಳ್ಕೊಡಲು ಬಂದ ಇಬ್ಬರು ಮಕ್ಕಳಿಗೆ ಕುಮಾರ್ ಅದೆಷ್ಟೋ ದುಡ್ಡನ್ನು ಕೊಡುತ್ತಾರೆ. ಮಕ್ಕಳು ಆ ದುಡ್ಡನ್ನು ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ, ಆ ಮಕ್ಕಳು ದುಡ್ಡನ್ನು ಒಂದು ಒಂದು ಜೀಬಿನಿಂದ ಇನ್ನೊಂದು ಜೇಬಿಗೆ ಇಡುತ್ತಾ, ಆಟವಾಡುತ್ತಾ ಇರುತ್ತವೆ. ಇಬ್ಬರು ಮಕ್ಕಳಲ್ಲಿ ಒಬ್ಬರ ಜೇಬಿನಲ್ಲಿ ದುಡ್ಡು ಇರುತ್ತದೆ, ಇನ್ನೊಂದು ಮಗುವಿನ ಜೇಬಿನಿಂದ ದುಡ್ಡು ಕೆಳಗೆ ಬಿದ್ದಿರುತ್ತದೆ. ಅದನ್ನು ಮಕ್ಕಳಾಗಲಿ, ಕುಟುಂಬದವರಾಗಲಿ ಗಮನಿಸಿರುವುದಿಲ್ಲ, ಆದರೆ ಸಿಸಿಟಿವಿ ಅನ್ನೋದು ಇದೆಯಲ್ಲಾ, ಅದರಲ್ಲಿ ದುಡ್ಡು ಬಿದ್ದಿದ್ದನ್ನು ಮತ್ತೋರ್ವ ಪ್ರಯಾಣಿಕ ಜೇಬಿಗಿಳಿಸಿದ್ದು ಸೆರೆಯಾಗಿರುತ್ತದೆ.

 ಕುಮಾರ್ ಕುಟುಂಬದವರು ಪೊಲೀಸರಿಗೆ ದೂರನ್ನು ನೀಡುತ್ತಾರೆ

ಕುಮಾರ್ ಕುಟುಂಬದವರು ಪೊಲೀಸರಿಗೆ ದೂರನ್ನು ನೀಡುತ್ತಾರೆ

ಮೆಲ್ಭೋರ್ನಿಗೆ ಹೋಗುವವರನ್ನು ಸೆಂಡ್ ಆಫ್ ಮಾಡಿ ಬಂದ ಮಕ್ಕಳ ಪೋಷಕರಿಗೆ ದುಡ್ಡು ಕಳೆದು ಹೋಗಿರುವ ವಿಚಾರ ಗಮನಕ್ಕೆ ಬರುತ್ತದೆ. ಕೂಡಲೇ ಕಂಟ್ರೋಲ್ ರೂಂ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸುತ್ತಾರೆ. ಏನೇ ಕಳೆದು ಹೋದರೂ ಅದು ನಮ್ಮಲ್ಲಿಗೆ ಬರುತ್ತದೆ, ಆದರೆ ನೀವು ಕಳೆದುಕೊಂಡಿರುವ ದುಡ್ಡು ಇದುವರೆಗೂ ನಮಗೆ ಬಂದಿಲ್ಲ. ಯಾವುದಕ್ಕೂ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ದೂರು ನೀಡಲು ಏರ್ಪೋರ್ಟ್ ಅಧಿಕಾರಿಗಳು ಹೇಳುತ್ತಾರೆ. ಅದರಂತೆಯೇ, ಕುಮಾರ್ ಕುಟುಂಬದವರು ಪೊಲೀಸರಿಗೆ ದೂರನ್ನು ನೀಡುತ್ತಾರೆ.

 ಪೊಲೀಸರು ಸಿಸಿಟಿವಿಯಲ್ಲಿ ಚೆಕ್ ಮಾಡಿದಾಗ, ರಾಂಚಿಗೆ ಪ್ರಯಾಣಿಸಿದ ವ್ಯಕ್ತಿ

ಪೊಲೀಸರು ಸಿಸಿಟಿವಿಯಲ್ಲಿ ಚೆಕ್ ಮಾಡಿದಾಗ, ರಾಂಚಿಗೆ ಪ್ರಯಾಣಿಸಿದ ವ್ಯಕ್ತಿ

ಪೊಲೀಸರು ಸಿಸಿಟಿವಿಯಲ್ಲಿ ಚೆಕ್ ಮಾಡಿದಾಗ, ರಾಂಚಿಗೆ ಪ್ರಯಾಣಿಸಿದ ವ್ಯಕ್ತಿಯು ಕೆಳಗೆ ಬಿದ್ದಿದ್ದ ದುಡ್ಡನ್ನು ತೆಗೆದುಕೊಂಡಿದ್ದಾನೆ ಎಂದು ಗೊತ್ತಾಗುತ್ತದೆ. ಆತನನ್ನು ಸಂಪರ್ಕಿಸಲು ಹೊರಟಾಗ ಆತನಿರುವ ವಿಮಾನ ಅಷ್ಟೊತ್ತಿಗಾಗಲೇ ಟೇಕ್ ಆಫ್ ಆಗಿರುತ್ತದೆ. ಪೊಲೀಸರು ರಾಂಚಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. ರಾಂಚಿಯ ಅಧಿಕಾರಿಗಳು ದುಡ್ಡು ತೆಗೆದುಕೊಂಡ ವ್ಯಕ್ತಿಯನ್ನು ವಿಮಾನ್ ಲ್ಯಾಂಡ್ ಆಗುತ್ತಿದ್ದಂತೆಯೇ, ಬೆಂಗಳೂರಿನ ಪೊಲೀಸ್ ಅಧಿಕಾರಿಗಳ ಮೂಲಕ ವರ್ಚುಯಲ್ ತನಿಖೆ ನಡೆಸುತ್ತಾರೆ.

 ಬೆಂಗಳೂರು ಪೊಲೀಸ್ ಅಧಿಕಾರಿಗಳು ಯಶಸ್ವಿ

ಬೆಂಗಳೂರು ಪೊಲೀಸ್ ಅಧಿಕಾರಿಗಳು ಯಶಸ್ವಿ

ಹಣ ಪಡೆದಿದ್ದನ್ನು ಒಪ್ಪಿಕೊಂಡ ವ್ಯಕ್ತಿಯಿಂದ ರಾಂಚಿ ವಿಮಾನ ನಿಲ್ದಾಣದಲ್ಲೇ ವಾಪಸ್ ಜೀಪೇ ಮೂಲಕ ಹಣ ಕಳೆದುಕೊಂಡವರಿಗೆ ಕೊಡಿಸುವಲ್ಲಿ ಬೆಂಗಳೂರು ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗುತ್ತಾರೆ. ಈ ಎಲ್ಲಾ ಕೆಲಸವನ್ನು ಹಣ ಕಳೆದುಕೊಂಡ ಹನ್ನೆರಡು ಗಂಟೆಯೊಳಗೆ ಬೆಂಗಳೂರು ಪೊಲೀಸರು ಮಾಡುವ ಮೂಲಕ ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದನ್ನು ಸಾರಿದ್ದಾರೆ. ಗುಡ್ ಜಾಬ್, ಬೆಂಗಳೂರು ಪೊಲೀಸ್.

English summary
Bengaluru Kempe Gowda International Airport Police Station Officials Swift Action. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X