ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ವೈರಲ್ ಸೋಂಕುಗಳಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆ

|
Google Oneindia Kannada News

ಬೆಂಗಳೂರು, ಜೂನ್ 18: ಮಧ್ಯಂತರ ಮಳೆ ಮತ್ತು ತಾಪಮಾನದ ಕುಸಿತವು ನಗರದಲ್ಲಿ ಆರೋಗ್ಯದ ಕಾಳಜಿಗೆ ಕಾರಣವಾಗುತ್ತಿದೆ. ನಾರಾಯಣ ಹೆಲ್ತ್ ಸಿಟಿಯ ವೈದ್ಯರ ಪ್ರಕಾರ, ಈ ಹವಾಮಾನ ಪರಿಸ್ಥಿತಿಯು ಟೈಫಾಯ್ಡ್, ಕಾಲರಾ, ಇನ್‌ಫ್ಲುಯೆಂಝಾ ಮತ್ತು ಡೆಂಗ್ಯೂ ಮುಂತಾದ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜೂನ್ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಮಹೇಶ್ ಕುಮಾರ್ ಈ ಬಗ್ಗೆ ವಿವರ ನೀಡಿ, ''ಸುತ್ತಮುತ್ತಲಿನ ವಾತಾವರಣದಲ್ಲಿನ ಬದಲಾವಣೆಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಈ ವರ್ಷ ತಾಪಮಾನದಲ್ಲಿನ ಕುಸಿತವು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದ್ದು ಪ್ರತಿ ರಕ್ಷಣಾ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವೈರಲ್ ಸೋಂಕುಗಳಲ್ಲದೆ, ಮಧ್ಯಂತರ ಮಳೆಯು ಡೆಂಗ್ಯೂ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ,'' ಎಂದರು.

ಕರ್ನಾಟಕದಲ್ಲಿ ಕೋವಿಡ್ ಏರಿತು, ಡೆಂಘೀ ಕೂಡ ಹೆಚ್ಚಿತು: ಸುಧಾಕರ್ ಹೇಳೋದೇನು?ಕರ್ನಾಟಕದಲ್ಲಿ ಕೋವಿಡ್ ಏರಿತು, ಡೆಂಘೀ ಕೂಡ ಹೆಚ್ಚಿತು: ಸುಧಾಕರ್ ಹೇಳೋದೇನು?

ನಗರದಲ್ಲಿ ಪ್ರಸ್ತುತ ಬಾಧಿಸುವ ವೈರಲ್ ಸೋಂಕುಗಳ ಸಾಮಾನ್ಯ ಲಕ್ಷಣಗಳೆಂದರೆ ಕಡಿಮೆ ಜ್ವರ, ಮೂಗು ಸ್ರಾವ, ತಲೆ ನೋವು, ಹೊಟ್ಟೆ ನೋವು ಇತ್ಯಾದಿ. ಡೆಂಗ್ಯೂಗೆ ಸೌಮ್ಯ ಜ್ವರದಿಂದ ದೇಹದ ನೋವು, ಕೀಲು ನೋವು, ಸ್ನಾಯು ನೋವು, ವಾಕರಿಕೆ ಮತ್ತು ವಾಂತಿ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

 4- 5 ಕಾಲರಾ ಸೋಂಕುಗಳು ವರದಿ

4- 5 ಕಾಲರಾ ಸೋಂಕುಗಳು ವರದಿ

ಆದರೆ, ಆತಂಕಕಾರಿ ವಿಷಯವೆಂದರೆ ಸೋಂಕಿನ ತೀವ್ರತೆ. ಪ್ರತಿದಿನ ನಾವು 3- 4 ಅತಿಸಾರ ಪ್ರಕರಣಗಳು, 5- 6 ಟೈಫಾಯಿಡ್ ಪ್ರಕರಣಗಳು, 4- 5 ಕೋವಿಡ್ ಪಾಸಿಟಿವ್ ಪ್ರಕರಣಗಳು, 20- 25 ಕೋವಿಡ್ ನೆಗೆಟಿವ್ ಸೀಸನಲ್ ಇನ್‌ಫ್ಲುಯೆಂಝಾ ಪ್ರಕರಣಗಳನ್ನು ನೋಡುತ್ತಿದ್ದೇವೆ. ಇದರೊಂದಿಗೆ 30- 40 ವರ್ಷದೊಳಗಿನ 4- 5 ಕಾಲರಾ ಸೋಂಕುಗಳು ವರದಿಯಾಗಿವೆ. ನಮ್ಮ ಒಪಿಡಿಯಲ್ಲಿ ನಾವು ಪ್ರತಿದಿನ 25- 30 ಡೆಂಗ್ಯೂ ರೋಗಿಗಳನ್ನು ನೋಡುತ್ತಿದ್ದೇವೆ, ಅವರಲ್ಲಿ 5-6 ಮಂದಿ ತೀವ್ರತರಾಗಿದ್ದು, 5 ರಿಂದ 7 ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ರಕ್ತದ ಪ್ಲೇಟ್ಲೆಟ್ ಎಣಿಕೆ 15000 ಕ್ಕಿಂತ ಕಡಿಮೆಯಾದ ರೋಗಿಗಳನ್ನು ನಾವು ನೋಡುತ್ತಿದ್ದೇವೆ, ಆದ್ದರಿಂದ, ಪರಿಣಾಮವನ್ನು ನಿಗ್ರಹಿಸಲು ಹೆಚ್ಚಿನ ಕಾಳಜಿ ಮತ್ತು ತಡೆಗಟ್ಟುವ ಕ್ರಮಗಳ ಕಟ್ಟುನಿಟ್ಟಾದ ಅನುಸರಣೆ ಅಗತ್ಯವಿರುತ್ತದೆ ಎಂದು ಹೇಳಿದರು.

ಬೆಂಗಳೂರಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಬಿಬಿಎಂಪಿ ಆಯುಕ್ತರ ಸೂಚನೆಬೆಂಗಳೂರಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಬಿಬಿಎಂಪಿ ಆಯುಕ್ತರ ಸೂಚನೆ

 ವೈರಲ್‌ ಫೀವರ್‌ಗಳಲ್ಲಿ ಹಲವು ವಿಧಗಳಿವೆ

ವೈರಲ್‌ ಫೀವರ್‌ಗಳಲ್ಲಿ ಹಲವು ವಿಧಗಳಿವೆ

ವೈರಲ್‌ ಫೀವರ್‌ಗಳಲ್ಲಿ ಹಲವು ವಿಧಗಳಿವೆ ಹೀಗೆ ಅದರ ಲಕ್ಷಣಗಳಿರುತ್ತದೆ ಎನ್ನಲು ಸಾಧ್ಯವಿಲ್ಲ, ಆದರೆ ಇದರಲ್ಲಿ ಕೆಲವೊಂದು ಲಕ್ಷಣಗಳು ಆ ರೋಗವಿದೆ ಎನ್ನುವುದನ್ನು ಹೇಳುತ್ತದೆ. ವಿವಿಧ ಮಾಹಿತಿಗಳ ಪ್ರಕಾರ ಈ ವೈರಾಣುಗಳು ದೇಹವನ್ನು ಸೇರಿದಾಗ, ತಲೆನೋವು, ನೆಗಡಿ, ಕೆಮ್ಮು, ಮೈ-ಕೈನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ-ಭೇದಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜ್ವರ ತೀವ್ರವಾಗಿ ಕಾಡುತ್ತಿರುವ ಅನುಭವವಾಗುವುದಿಲ್ಲ. ವೈರಲ್‌ ಫೀವರ್‌ ವಿಪರೀತ ಮೈ-ಕೈನೋವು, ಕಣ್ಣಿನ ಹಿಂಭಾಗದಲ್ಲಿ ನೋವು ತರುತ್ತದೆ.

 ಸಂರಕ್ಷಣೆ ಹೇಗೆ?:

ಸಂರಕ್ಷಣೆ ಹೇಗೆ?:

"ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವುದು, ಸುತ್ತಮುತ್ತಲಿನ ಶುಷ್ಕ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಸೊಳ್ಳೆಗಳು ಸಂತಾನೋತ್ಪತ್ತಿಗೆ ಅವಕಾಶವನ್ನು ನೀಡದಿರುವುದು ನಾವು ಅಳವಡಿಸಿಕೊಳ್ಳಬೇಕಾದ ಕೆಲವು ಪ್ರಮುಖ ತಡೆಗಟ್ಟುವ ಕ್ರಮಗಳು. ಸಾಕಷ್ಟು ನೀರು ಕುಡಿಯುವ ಮೂಲಕ ಸಾಕಷ್ಟು ನೀರಿನ ಅಂಶವನ್ನು ಕಾಪಾಡಿಕೊಳ್ಳುವುದು ಮತ್ತು ತಾಜಾ ಹಣ್ಣುಗಳನ್ನು ತಿನ್ನುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಿಕೊಳ್ಳಲು ಶಿಫಾರಸು ಮಾಡಲಾಗುತ್ತದೆ. ಹೊರಾಂಗಣ ಆಹಾರದಿಂದ ದೂರವಿರುವುದು ಮತ್ತು ಮನೆಯಲ್ಲಿ ಬೇಯಿಸಿದ ಬೆಚ್ಚಗಿನ ಆಹಾರವನ್ನು ಸೇವಿಸುವುದು, ಕುದಿಸಿದ ನೀರನ್ನು ಕುಡಿಯುವುದು ಮತ್ತು ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದು ಆರೋಗ್ಯಕರ ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಡಾ. ಮಹೇಶ್ ಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಳಬೆಂಗಳೂರಿನಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಳ

 ಆಹಾರ ಸೇವನೆಯಲ್ಲೂ ಎಚ್ಚರ ವಹಿಸಬೇಕು

ಆಹಾರ ಸೇವನೆಯಲ್ಲೂ ಎಚ್ಚರ ವಹಿಸಬೇಕು

ವೈಯಕ್ತಿಕ ಯೋಗಕ್ಷೇಮದ ಹೊರತಾಗಿ ಸುತ್ತಮುತ್ತಲಿನ ಪರಿಸರವು ವೈರಸ್‌ಗಳು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಸಹ ರೋಗಗಳ ಆಕ್ರಮಣವನ್ನು ತಡೆಗಟ್ಟುವ ಪರಿಣಾಮಕಾರಿ ಮಾರ್ಗಗಳಾಗಿವೆ.

ಸೋಂಕುಕಾರಕ ರೋಗಾಣು, ಬ್ಯಾಕ್ಟೀರಿಯಾಗಳು, ಗಾಳಿ ಇತ್ಯಾದಿಗಳಿಂದ ಅಲ್ಲದೆ ಸೊಳ್ಳೆ ಕಡಿತದಿಂದಲೂ ಹರಡಬಹುದು. ಹಾಗಾಗಿ ಜನರು ಸೊಳ್ಳೆಗಳು ಆದಷ್ಟು ಮನೆಯೊಳಗೆ ಬರದಂತೆ ನೋಡಿಕೊಳ್ಳಬೇಕು. ಹಳ್ಳ-ಕೊಳ್ಳ ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಮ್‌ಗಳಲ್ಲಿ ನೀರು ಶೇಖರಿಸಿಟ್ಟು ಮೇಲ್ಭಾಗವನ್ನು ಸರಿಯಾಗಿ ಮುಚ್ಚಬೇಕು. ಹಾಗೆಯೇ ಆಹಾರ ಸೇವನೆಯಲ್ಲೂ ಎಚ್ಚರ ವಹಿಸಬೇಕು. ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಒಬ್ಬರಿಂದ ಒಬ್ಬರಿಗೆ ವೈರಾಣು ಹರಡದಂತೆ ಮುಖಕ್ಕೆ ಕರ್ಚೀಫ್‌, ಮಾಸ್ಕ್‌ ಬಳಸಬೇಕು. ಆಹಾರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ಬಿಸಿಯಾದ ತಾಜಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕು.

 ಹೆಚ್ಚಿನ ದ್ರವ ಪದಾರ್ಥವನ್ನು ಸೇವಸಿ

ಹೆಚ್ಚಿನ ದ್ರವ ಪದಾರ್ಥವನ್ನು ಸೇವಸಿ

ಶುಚಿತ್ವವಲ್ಲದ ಆಹಾರ, ನೀರು ಸೇವನೆ, ಸೋಂಕು ತಗುಲಿದ ವ್ಯಕ್ತಿಯಿಂದ ಉಸಿರಾದ ವೇಳೆ ಹೊಟ್ಟೆಗೆ ಸೇರುವ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ವಾಂತಿ-ಭೇದಿ ಹೆಚ್ಚಾಗಿ ದೇಹದಲ್ಲಿನ ನೀರಿನಂಶ ಕಳೆದುಕೊಳ್ಳುತ್ತಾರೆ, ಹೀಗಾಗಿ ಹೆಚ್ಚಿನ ದ್ರವ ಪದಾರ್ಥವನ್ನು ಸೇವಿಸಲು ನೀಡಬೇಕೆಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದೆ. ಇದು ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ (ಎನ್‌ಐಸಿಎಸ್), ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಜುಂದಾರ್ ಶಾ ಮೆಡಿಕಲ್ ಸೆಂಟರ್, ಕ್ಯಾನ್ಸರ್ ಕೇರ್, ನರವಿಜ್ಞಾನ, ನೆಫ್ರಾಲಜಿ, ಮತ್ತು ಸುಧಾರಿತ ಮಲ್ಟಿಡಿಸಿಪ್ಲಿನರಿ ಆಸ್ಪತೆ ಮತ್ತು ತೀವ್ರ ಆರೈಕೆ ಘಟಕ (ಎಂಐಸಿಯು)ವನ್ನು ಒಳಗೊಂಡಿದೆ.

English summary
With dengue on the rise, Karnataka intensifies prevention and control measures, perticulary Bengaluru city sees spike in Dengue, Covid & Influenza cases states Narayana Health City
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X