• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ನಂ. 1, ಅಮೆರಿಕ ನಂ. 2, ಭಾರತ ನಂ. 8..!: ಫೋರ್ಬ್ಸ್’ ವರದಿ

|

ಶತಮಾನಗಳ ಕಾಲ ಜಗತ್ತಿನ ನಂಬರ್ 1 ಪಟ್ಟ ಅಲಂಕರಿಸಿದ್ದ ಅಮೆರಿಕದ ಸ್ಥಾನಕ್ಕೆ ಕುತ್ತು ಎದುರಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಚೀನಾ ನಂ. 1 ಪಟ್ಟವನ್ನು ಅಲಂಕರಿಸುವ ಮೂಲಕ ಅಮೆರಿಕಾಗೆ ಶಾಕ್ ಕೊಟ್ಟಿದೆ.

ಚೀನಾ ದೈತ್ಯವಾಗಿ ಬೆಳೆಯುತ್ತಿದೆ, ಚೀನಾ ಇಡೀ ಜಗತ್ತನ್ನೇ ಆವರಿಸುತ್ತಿದೆ. ಹೌದು ಈ ಮಾತುಗಳು ಈಗ ನಿಜ ಆಗುತ್ತಿವೆ. ವಿಶ್ವದ ಅತಿಹೆಚ್ಚು ಬಿಲಿಯನೆರ್ಸ್ ಇರುವ ಪಟ್ಟಿಯಲ್ಲಿ ಚೀನಾ ರಾಜಧಾನಿ ಬೀಜಿಂಗ್ ನಂ. 1 ಸ್ಥಾನ ಅಲಂಕರಿಸಿದೆ. ಅದೂ ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್ ನಗರವನ್ನೂ ಮೀರಿಸಿ. ಜಗತ್ತಿನಲ್ಲಿರುವ ಶ್ರೀಮಂತರನ್ನು ಅಳೆದು ತೂಗುವ 'ಫೋರ್ಬ್ಸ್' ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಬಿಲಿಯನೆರ್ಸ್ (ಸುಮಾರು 7500 ಕೋಟಿ) ಸಂಖ್ಯೆ ಒಟ್ಟು 100 ಇದ್ದರೆ, ನ್ಯೂಯಾರ್ಕ್‌ನಲ್ಲಿ 99 ಮಂದಿ ಬಿಲಿಯನೆರ್ಸ್ ಇದ್ದಾರಂತೆ. ಕಳೆದ ಒಂದೇ ವರ್ಷದಲ್ಲಿ ಬರೋಬ್ಬರಿ 33 ಹೊಸ ಬಿಲಿಯನೆರ್ಸ್ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹುಟ್ಟಿಕೊಂಡಿದ್ದಾರೆ. ಕೊರೊನಾ ಕಾಲದಲ್ಲೂ ಚೀನಾ ಇಷ್ಟು ಅಭಿವೃದ್ಧಿಯನ್ನ ಸಾಧಿಸಿರುವುದು ಅಮೆರಿಕದ ನಿದ್ದೆಗೆಡಿಸಿದೆ.

ಭಾರತದ ನಗರಕ್ಕೆ 8ನೇ ಸ್ಥಾನ..!

ಭಾರತದ ನಗರಕ್ಕೆ 8ನೇ ಸ್ಥಾನ..!

ವಿಶ್ವದ ಟಾಪ್ 10 ಬಿಲಿಯನೆರ್ಸ್ ಪಟ್ಟಿಯಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ 8ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಗಿದೆ. ಮೊದಲ ಸ್ಥಾನದಲ್ಲಿ ಬೀಜಿಂಗ್ ಇದ್ದರೆ, 2ನೇ ಸ್ಥಾನದಲ್ಲಿ ನ್ಯೂಯಾರ್ಕ್, 3ನೇ ಸ್ಥಾನದಲ್ಲಿ ಹಾಂಗ್‌ಕಾಂಗ್, 4ನೇ ಸ್ಥಾನದಲ್ಲಿ ಮಾಸ್ಕೋ, 5ನೇ ಸ್ಥಾನಕ್ಕೆ ಶೆನ್ಜೆನ್ ಆಯ್ಕೆ ಆಗಿದ್ದರೆ, 6ನೇ ಸ್ಥಾನದಲ್ಲಿ ಶಾಂಘೈ, 7ನೇ ಸ್ಥಾನದಲ್ಲಿ ಲಂಡನ್ ಮತ್ತು 8ನೇ ಸ್ಥಾನದಲ್ಲಿ ಮುಂಬೈ ಸ್ಥಾನ ಗಿಟ್ಟಿಸಿದೆ. ಇನ್ನುಳಿದಂತೆ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಹ್ಯಾಂಗ್‌ಝೋ 9 ಮತ್ತು 10ನೇ ಸ್ಥಾನದಲ್ಲಿವೆ.

ಚೀನಾದಲ್ಲಿ ಬಡವರೇ ಇಲ್ಲ..!

ಚೀನಾದಲ್ಲಿ ಬಡವರೇ ಇಲ್ಲ..!

ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸಾಮಾನ್ಯವಾಗಿ ಜನಸಂಖ್ಯೆಯೇ ದೊಡ್ಡ ಶಾಪ ಎಂದು ಭಾವಿಸುವ ರೂಢಿ ಈ ಜಗತ್ತಿನಲ್ಲಿದೆ. ಆದರೆ ತನ್ನಲ್ಲಿದ್ದ ಅಗಾಧ ಮಾನವ ಸಂಪನ್ಮೂಲವನ್ನೇ ದೊಡ್ಡ ಅಸ್ತ್ರ ಮಾಡಿಕೊಂಡ ಚೀನಾ ನಾಯಕರು, ಅಭಿವೃದ್ಧಿಯ ಪಥದಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಎಷ್ಟೆಲ್ಲಾ ಸವಾಲುಗಳು ಇದ್ದರೂ ಬಡವರಿಗೆ ಬೇಕಾದ ಮೂಲಸೌಕರ್ಯ, ಬದಕಲು ಅಗತ್ಯವಿರುವ ವಸ್ತುಗಳ ಜೊತೆಗೆ, ದೇಶಕ್ಕೆ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನೂ ಚೀನಾ ಸರ್ಕಾರ ತನ್ನ ಪ್ರಜೆಗಳಿಗೆ ಕಲಿಸಿಕೊಟ್ಟಿದೆ. ಈ ಎಲ್ಲಾ ಹಂತಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಚೀನಾ ಸರ್ಕಾರದ ಸ್ವದೇಶಿ ಮಂತ್ರ. ತೊಡುವ ಬಟ್ಟೆಯಿಂದ ಹಿಡಿದು, ಶೋಕಿ ಮಾಡುವ ಕಾರುಗಳು ಕೂಡ ಅಲ್ಲಿಯೇ ತಯಾರಾದವು. ಇದನ್ನು ಚೀನಿಯರು ಪಾಲಿಸದೇ ಇದ್ದಿದ್ದರೆ ಇಂತಹ ಸಾಧನೆ ಅಸಾಧ್ಯವಾಗುತ್ತಿತ್ತು.

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನು ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

ವಾಯುಮಾಲಿನ್ಯ ಕೂಡ ಮಾಯ..!

ವಾಯುಮಾಲಿನ್ಯ ಕೂಡ ಮಾಯ..!

10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನು ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ..!

ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ..!

ಸಾಮಾನ್ಯವಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಎಂಬ ಮಾತು ಬಂದಾಗ ಬೊಟ್ಟು ಮಾಡುವುದು ಪಾಶ್ಚಿಮಾತ್ಯ ದೇಶಗಳ ಕಡೆಗೆ. ಅದರಲ್ಲೂ ಯುರೋಪ್ ದೇಶಗಳು ಜಗತ್ತನ್ನು ಸುಮಾರು ಅರ್ಧ ಸಾವಿರ ವರ್ಷಗಳ ಕಾಲ ಆಳಿವೆ. ಆದರೆ ಸದ್ಯ ಯುರೋಪ್ ದೇಶಗಳ ಸ್ಥಿತಿ ಕಂಡರೆ ಆಶ್ಚರ್ಯ ಆಗಬಹುದು. ಅಲ್ಲಿ ಎದುರಾದ ಆರ್ಥಿಕ ಸಮಸ್ಯೆ ಬಡತನ ಹೆಚ್ಚುವಂತೆ ಮಾಡಿದೆ. ಯುರೋಪ್‌ನ ಬಹುತೇಕ ದೇಶಗಳಲ್ಲಿ ಲಕ್ಷಾಂತರ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಅದರಲ್ಲೂ ಸೆರ್ಬಿಯಾ, ಉಕ್ರೇನ್, ರೊಮೇನಿಯಾ ಸೇರಿದಂತೆ ಹತ್ತಾರು ದೇಶಗಳು ಕಡುಬಡ ದೇಶಗಳಾಗಿ ಬದುಕುತ್ತಿವೆ.

ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಚೀನಾ ಎಷ್ಟರಮಟ್ಟಿಗೆ ಜಾಗತಿಕವಾಗಿ ಹಿಡಿತ ಸಾಧಿಸಿದೆ ಎಂದರೆ ಯುರೋಪ್ ದೇಶಗಳು ಚೀನಾ ಮೇಲೆಯೇ ಅವಲಂಬಿತವಾಗಿವೆ. ಯುರೋಪ್‌ನ ಹಲವು ಬಡ ರಾಷ್ಟ್ರಗಳಲ್ಲಿ ಚೀನಾ ಸರ್ಕಾರ ಹಾಗೂ ಚೀನಾ ಮೂಲದ ಕಂಪನಿಗಳು ಹೂಡುವ ಬಂಡವಾಳವೇ ಬಹುಮುಖ್ಯ ಎನಿಸಿದೆ. ಇದೇ ಕಾರಣಕ್ಕೆ ಯುರೋಪ್ ಒಕ್ಕೂಟದಲ್ಲಿ ಚೀನಾ ಪರ ಹಾಗೂ ವಿರುದ್ಧದ ಧ್ವನಿ ಮೊಳಗುತ್ತಿರುತ್ತದೆ. ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಈ ಮೊದಲು ಯುರೋಪ್ ಒಕ್ಕೂಟದ ಭಾಗವಾಗಿದ್ದ ಬ್ರಿಟನ್, ಚೀನಾ ಬಗ್ಗೆ ಅಷ್ಟಾಗಿ ಒಲವು ಬೆಳೆಸಿಕೊಂಡಿರಲಿಲ್ಲ. ಆದರೆ ಇದೇ ಒಕ್ಕೂಟದ ಬಡ ರಾಷ್ಟ್ರಗಳು, ತಮ್ಮ ಮೂಲ ಸೌಕರ್ಯದಿಂದ ಹಿಡಿದು ಕೈಗಾರಿಕೆಗಳ ಅಭಿವೃದ್ಧಿವರೆಗೂ ಚೀನಾದ ಬೆನ್ನು ಬಿದ್ದಿವೆ ಎಂದರೆ ಲೆಕ್ಕ ಹಾಕಿ ಡ್ರ್ಯಾಗನ್ ರಾಷ್ಟ್ರ ಎಷ್ಟರಮಟ್ಟಿಗೆ ಬೆಳೆದಿದೆ ಎಂದು.

ಆಫ್ರಿಕಾ ರಾಷ್ಟ್ರಗಳಲ್ಲೂ ಹಪಾಹಪಿ..!

ಆಫ್ರಿಕಾ ರಾಷ್ಟ್ರಗಳಲ್ಲೂ ಹಪಾಹಪಿ..!

ಮಾನವ ಹುಟ್ಟಿದ್ದೇ ಆಫ್ರಿಕಾ ಖಂಡದಲ್ಲಿ ಎಂಬುದು ವಿಜ್ಞಾನಿಗಳ ವಾದ. ಆದರೆ ಮಾನವನ ಜನ್ಮಸ್ಥಳವೇ ಅತೀ ಹೆಚ್ಚು ಬಡವರಿಂದ ಕೂಡಿದೆ. ಆಫ್ರಿಕಾ ಖಂಡದ ಬಹುತೇಕ ದೇಶಗಳು ಬಡತನದ ಬೇಗೆಯಲ್ಲೇ ನರಳುತ್ತಿವೆ. ಇಂತಹ ರಾಷ್ಟ್ರಗಳಿಗೆ ಚೀನಾ ನೆರವಾಗುತ್ತಿದೆ. ಇಲ್ಲಿ ರಸ್ತೆಗಳ ನಿರ್ಮಾಣ ರೈಲು ಹಳಿ, ಬುಲೆಟ್‌ ರೈಲು ಹೀಗೆ ನಾನಾ ಯೋಜನೆಗಳಲ್ಲಿ ಚೀನಾ ಸಕ್ರಿಯ. ಅದರಲ್ಲೂ ನೈಸರ್ಗಿಕ ಸಂಪನ್ಮೂಲ ಹೆಚ್ಚಾಗಿರುವ ಭೂಮಧ್ಯೆ ರೇಖೆ ಆಸುಪಾಸಿನ ರಾಷ್ಟ್ರಗಳಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇಲ್ಲಿ ಕೂಡ ಅಮೆಜಾನ್‌ ರೀತಿ ಭಾರಿ ಪ್ರಮಾಣದ ಅರಣ್ಯ ಹಬ್ಬಿಕೊಂಡಿದ್ದು, ಟಿಂಬರ್ ಸೇರಿದಂತೆ ಹಲವು ಕೈಗಾರಿಕೆ ಸ್ಥಾಪನೆಗೆ ಚೀನಾ ಸರ್ಕಾರ ಆಫ್ರಿಕಾದ ಬಡ ರಾಷ್ಟ್ರಗಳಿಗೆ ನೆರವಾಗುತ್ತಿದೆ.

English summary
China capital Beijing overtakes New York City as home to most billionaires.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X