ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್ಟ್ಯಾಗ್ ಆನ್‌ಲೈನ್ ರೀಚಾರ್ಜ್‌ ಮಾಡುವ ಮುನ್ನ ಎಚ್ಚರ: ಅಕೌಂಟ್‌ನಿಂದ ಹಣ ಮಾಯ!

|
Google Oneindia Kannada News

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬಳಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಫಾಸ್ಟ್ಯಾಗ್ ಸೌಲಭ್ಯ ನೀಡಿದೆ. ಆದರೆ ಆನ್‌ಲೈನ್‌ ಖದೀಮರು ಫಾಸ್ಟ್ಯಾಗ್ ಹೆಸರಿನಲ್ಲಿ ಕೂಡ ಹಲವರನ್ನು ಮೋಸ ಮಾಡುತ್ತಿದ್ದು, ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದಾರೆ.

34 ವರ್ಷ ವಯಸ್ಸಿನ ಮುಂಬೈ ಮೂಲದ ಮಹಿಳೆ ತನ್ನ ಫಾಸ್ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಲು ಪ್ರಯತ್ನಿಸಿ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ. ಆನ್‌ಲೈನ್‌ ಮೂಲಕ ರೀಚಾರ್ಜ್ ಮಾಡಲು ಯತ್ನಿಸಿದ ನಂತರ ಅವರ ಖಾತೆಯಿಂದ 4.5 ಲಕ್ಷ ರುಪಾಯಿ ಎಗರಿಸಿದ್ದಾರೆ. ಮುಂಬೈನ ದಹಿಸರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಂಚಕರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು ಜನರೇ ಸಿಮ್ ಕದ್ದು ಹಣ ಎಗರಿಸುತ್ತಾರೆ ಹುಷಾರ್!ಬೆಂಗಳೂರು ಜನರೇ ಸಿಮ್ ಕದ್ದು ಹಣ ಎಗರಿಸುತ್ತಾರೆ ಹುಷಾರ್!

ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್‌ಎಚ್‌ಎಐ) ನಿರ್ವಹಿಸುವ ಸ್ವಯಂಚಾಲಿತ ಟೋಲ್‌ಗೆ ಶುಲ್ಕ ಪಾವತಿಸುವ ತನ್ನ ಫಾಸ್ಟ್ಯಾಗ್, ಸ್ಟಿಕ್ಕರ್ ರೀಚಾರ್ಜ್‌ಗೆ ಬಾಕಿಯಿದೆ ಎಂದು ಮಹಿಳೆಗೆ ಆಕೆಯ ಸಹೋದರ ತಿಳಿಸಿದ್ದರು. ಸಂತ್ರಸ್ತೆ ತನ್ನ ವಾಹನದ ಫಾಸ್ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ರೀಚಾರ್ಜ್ ಮಾಡಬಹುದೆಂದು ತಿಳಿಯಲು ಇಂಟರ್ನೆಟ್‌ ಮೊರೆ ಹೋಗಿದ್ದಾರೆ. ಅಲ್ಲಿ ಸಿಕ್ಕ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾರೆ.

 ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕರು

ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕರು

ತಾನು ವಂಚನೆಗೆ ಬಲಿಯಾಗುತ್ತಿದ್ದೇನೆ ಎಂದು ತಿಳಿಯದೆ, ಮಹಿಳೆ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದ್ದಾಳೆ ಮತ್ತು ಇನ್ನೊಂದು ತುದಿಯಲ್ಲಿರುವ ವ್ಯಕ್ತಿಗೆ ಫಾಸ್ಟ್ಯಾಗ್ ಕಾರ್ಡ್ ರೀಚಾರ್ಜ್‌ ಮಾಡಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ.

ಮಹಿಳೆಯ ಕರೆ ಸ್ವೀಕರಿಸಿದ ವ್ಯಕ್ತಿ ಫಾಸ್ಟ್ಯಾಗ್ ರೀಚಾರ್ಜ್ ಮಾಡಲು ಮಹಿಳೆ ಮೊಬೈಲ್‌ಗೆ ಲಿಂಕ್‌ ಒಂದನ್ನು ಕಳುಹಿಸಿದ್ದಾನೆ. ಆ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಎಂದು ಸೂಚನೆ ನೀಡಿದ್ದಾನೆ. ಲಿಂಕ್ ಕ್ಲಿಕ್ ಮಾಡಿದ ನಂತರ, ಸಂತ್ರಸ್ತೆ ತನ್ನ ಫೋನ್‌ನಲ್ಲಿ 'ಗ್ರಾಹಕ ಬೆಂಬಲ' ಎಂಬ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿದೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

 ಅಕೌಂಟ್‌ನಿಂದ 6.99 ಲಕ್ಷ ರುಪಾಯಿ ವರ್ಗಾವಣೆ

ಅಕೌಂಟ್‌ನಿಂದ 6.99 ಲಕ್ಷ ರುಪಾಯಿ ವರ್ಗಾವಣೆ

ನಕಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ತನ್ನ ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್ ತೆರೆಯಲು ಮತ್ತು ಮೊಬೈಲ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಲು ಕೇಳಿಕೊಂಡಿದ್ದಾರೆ. ಹಾಗೆ ಮಾಡಿದಾಗ, ಫಾಸ್ಟ್ಯಾಗ್ ರೀಚಾರ್ಜ್ ಯಶಸ್ವಿಯಾಗಿದೆ ಎಂಬ ಸಂದೇಶವೊಂದು ಆಕೆಗೆ ಬಂದಿದೆ.

ನಂತರ ಸಂತ್ರಸ್ತೆಯ ಬ್ಯಾಂಕ್ ಖಾತೆಯನ್ನು ಬಳಸಿ ವಂಚಕರು ಅನೇಕ ವಹಿವಾಟು ಮಾಡಿರುವುದು ಮಹಿಳೆ ಗಮನಕ್ಕೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ವಂಚಕರು ಮಹಿಳೆಯ ಬ್ಯಾಂಕ್‌ ಖಾತೆಯಿಂದ 6.99 ಲಕ್ಷ ರುಪಾಯಿಗಳನ್ನು ದೋಚಿದ್ದಾರೆ. ನಾಲ್ಕು ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ಆಕೆಯ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ.

 ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕಾದದ್ದು ಹೇಗೆ? ದಾವಣಗೆರೆ ಎಸ್‌ಪಿ ರಿಷ್ಯಂತ್‌ ಸಲಹೆಗಳು.. ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕಾದದ್ದು ಹೇಗೆ? ದಾವಣಗೆರೆ ಎಸ್‌ಪಿ ರಿಷ್ಯಂತ್‌ ಸಲಹೆಗಳು..

 2.45 ಲಕ್ಷ ರುಪಾಯಿ ವರ್ಗಾವಣೆ ತಡೆದ ಪೊಲೀಸರು

2.45 ಲಕ್ಷ ರುಪಾಯಿ ವರ್ಗಾವಣೆ ತಡೆದ ಪೊಲೀಸರು

ತಾನು ಆನ್‌ಲೈನ್ ವಂಚನೆಯ ಜಾಲಕ್ಕೆ ಬಲಿಯಾಗಿದ್ದೇನೆ ಎಂದು ಮಹಿಳೆಗೆ ಅರಿವಾಗುತ್ತಲೇ ಮುಂಬೈನ ಉತ್ತರ ವಲಯದ ಸೈಬರ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾಂಕ್‌ನ ಸಹಾಯದಿಂದ 2.45 ಲಕ್ಷ ರುಪಾಯಿಗಳ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಆದರೂ ಆಕೆ 4.54 ಲಕ್ಷ ರುಪಾಯಿಗಳನ್ನು ಕಳೆದುಕೊಂಡಿದ್ದಾಳೆ.
ಟೋಲ್ ಸ್ಟಿಕ್ಕರ್ ಅನ್ನು ಹೇಗೆ ರೀಚಾರ್ಜ್ ಮಾಡುವುದು ಎಂದು ಇಂಟರ್ನೆಟ್‌ನಲ್ಲಿ ಹುಡುಕುವ ಬದಲು ಅಂತಹ ರೀಚಾರ್ಜ್‌ಗಳಿಗಾಗಿ ಅವರು ವಿಶ್ವಾಸಾರ್ಹ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ.

 ಫಾಸ್ಟ್ಯಾಗ್ ಎಕ್ಸಿಕ್ಯೂಟಿವ್ ಎಂದು ಮಹಿಳೆಗೆ ವಂಚನೆ

ಫಾಸ್ಟ್ಯಾಗ್ ಎಕ್ಸಿಕ್ಯೂಟಿವ್ ಎಂದು ಮಹಿಳೆಗೆ ವಂಚನೆ

ಇದೇ ರೀತಿ ತಾನು ಫಾಸ್ಟ್ಯಾಗ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ 70 ಸಾವಿರ ರುಪಾಯಿ ವಂಚನೆ ಮಾಡಿದ್ದ ಘಟನೆ, ಮಾರ್ಚ್‌ನಲ್ಲಿ ನಡೆದಿತ್ತು. ತನ್ನ ವಾಹನದ ಫಾಸ್ಟ್ಯಾಗ್ ಖಾತೆಯನ್ನು ರೀಚಾರ್ಜ್ ಮಾಡಲು ಪ್ರಯತ್ನಿಸುತ್ತಿದ್ದಳು ಆದರೆ ವಿಫಲವಾದಳು, ಆದ್ದರಿಂದ ಅವಳು ಆನ್‌ಲೈನ್‌ನಲ್ಲಿ ಅದರ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿ ಕರೆ ಮಾಡಿದ್ದಳು.

ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಫಾಸ್ಟ್ಯಾಗ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡ. ಆಕೆಯ ಬ್ಯಾಂಕ್ ಖಾತೆಯು ಆಕೆಯ ಫಾಸ್ಟ್‌ಟ್ಯಾಗ್ ಖಾತೆಗೆ ಲಿಂಕ್ ಮಾಡಿಲ್ಲ ಎಂದು ಹೇಳಿದ್ದ ಆತ ಮಹಿಳೆ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದನು. ಆತ ಹೇಳಿದಂತೆ ಮಹಿಳೆ ಮಾಡಿದ ತಕ್ಷಣ ಆಕೆಯ ಗಂಡನ ಖಾತೆಯಿಂದ 70 ಸಾವಿರ ರುಪಾಯಿ ಎಗರಿಸಲಾಗಿತ್ತು.

ವಾಹನ ಸವಾರರು ಫಾಸ್ಟ್ಯಾಗ್ ಕಾರ್ಡ್ ರೀಚಾಜ್‌ ಮಾಡಲು ದೃಡೀಕೃತ ಅಪ್ಲಿಕೇಷನ್ ಬಳಸುವುದು, ಮತ್ತು ಯಾರಾದರು ವ್ಯಕ್ತಿ ನಿಮ್ಮ ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಕೇಳಿದಾಗ, ಯಾವುದಾರು ಒಟಿಪಿ ಕೇಳಿದಾಗ ಕೊಡದೇ ಇದ್ದರೆ ಆನ್‌ಲೈನ್ ವಂಚನೆ ತಡೆಯಬಹುದು.

Recommended Video

ಟೀಂ ಇಂಡಿಯಾ ಆಟಗಾರರು ಸ್ನಾನ ಮಾಡೋಕೂ ಕಂಡಿಷನ್ ಹಾಕಿದ BCCI | *Cricket | Oneindia Kannada

English summary
A Mumbai-based Woman saw Rs 4.5 lakh vanish from account after she tried to recharge her FasTag online and fell prey to a phishing fraud. Unaware that she was falling prey to a scam, the woman called on the number and was offered assistance to recharge her card by the person on the other end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X