ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮಹಾಮಾರಿಯಿಂದ ಭಾರತವನ್ನು ಕಾಪಾಡುತ್ತಿದೆಯಾ BCG ಲಸಿಕೆ?

|
Google Oneindia Kannada News

''ಕಡ್ಡಾಯವಾಗಿ ಬಿಸಿಜಿ ಲಸಿಕೆ ಹಾಕಿಸಬೇಕು'' ಎಂಬ ನಿಯಮ ಹೊಂದಿರುವ ದೇಶಗಳಲ್ಲಿ ಕೋವಿಡ್-19 ನಿಂದಾಗಿ ಸಂಭವಿಸಿರುವ ಸಾವಿನ ಪ್ರಮಾಣ ಕಡಿಮೆ ಇದೆ'' ಎಂಬ ಸಂಗತಿ ಇತ್ತೀಚೆಗಷ್ಟೇ ಅಧ್ಯಯನವೊಂದರಿಂದ ತಿಳಿದುಬಂದಿತ್ತು.

ಇದೀಗ, ''ಕಡ್ಡಾಯವಾಗಿ ಬಿಸಿಜಿ ಹಾಕಿಸಬೇಕು'' ಎಂಬ ನಿಯಮ ಹೊಂದಿಲ್ಲದ ದೇಶಗಳಲ್ಲಿ ಕೋವಿಡ್-19 ನಿಂದ ಹತ್ತು ಪಟ್ಟು ಹೆಚ್ಚು ಸಾವು ಸಂಭವಿಸಿದೆ'' ಎಂಬುದು ಮತ್ತೊಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ BCG - Bacillus Calmette Guerin ಲಸಿಕೆಯನ್ನು ಮಕ್ಕಳು ಜನಿಸಿದಾಗ ನೀಡಲಾಗುತ್ತದೆ. ಆದರೆ, ಯು.ಎಸ್.ಎ, ಇಟಲಿ, ಹಾಲ್ಯಾಂಡ್ ಸೇರಿದಂತೆ ಕೆಲ ಶ್ರೀಮಂತ ದೇಶಗಳು ಸಾರ್ವತ್ರಿಕ ಬಿಸಿಜಿ ಲಸಿಕೆ ನೀತಿ ಹೊಂದಿಲ್ಲ.

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಮಾರ್ಚ್ 9 ರಿಂದ ಮಾರ್ಚ್ 24 ರವರೆಗೆ 178 ದೇಶಗಳಲ್ಲಿನ ಕೋವಿಡ್-19 ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣದ ಮಾಹಿತಿಯನ್ನು ಕಲೆಹಾಕಲಾಗಿದ್ದು, ಸಾರ್ವತ್ರಿಕ ಬಿಸಿಜಿ ಲಸಿಕೆ ನೀತಿ ಹೊಂದಿರುವ ದೇಶಗಳಿಗೆ ಹೋಲಿಸಿದರೆ, ಆ ನೀತಿ ಹೊಂದಿಲ್ಲದ ದೇಶಗಳಲ್ಲಿ ಹತ್ತು ಪಟ್ಟು ಹೆಚ್ಚು ಸಾವು ಸಂಭವಿಸಿರುವುದು ಕಂಡು ಬಂದಿದೆ.

ಫಲಿತಾಂಶ ಆಶ್ಚರ್ಯಕರವಾಗಿದೆ

ಫಲಿತಾಂಶ ಆಶ್ಚರ್ಯಕರವಾಗಿದೆ

''ಅಧ್ಯಯನದ ಮೂಲಕ ಬಿಸಿಜಿ ಲಸಿಕೆಯ ರಕ್ಷಣಾತ್ಮಕ ಪರಿಣಾಮವನ್ನು ನೋಡುವುದು ನಮ್ಮ ಉದ್ದೇಶ ಆಗಿತ್ತು. ಅಧ್ಯಯನದಿಂದ ಹೊರಬಂದಿರುವ ಫಲಿತಾಂಶ ಆಶ್ಚರ್ಯಕರವಾಗಿದೆ'' ಎಂದು ಡಾ.ಆಶೀಶ್ ಕಾಮತ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪ್ರಯೋಗ

ಆಸ್ಟ್ರೇಲಿಯಾದಲ್ಲಿ ಪ್ರಯೋಗ

ಕೋವಿಡ್-19 ವಿರುದ್ಧ ಬಿಸಿಜಿ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಪರೀಕ್ಷಿಸಲು 4000 ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಲು ಆಸ್ಟ್ರೇಲಿಯಾ ಮುಂದಾಗಿದೆ.

ಭಾರತದಲ್ಲಿ ಬಿಸಿಜಿ

ಭಾರತದಲ್ಲಿ ಬಿಸಿಜಿ

ಭಾರತದಲ್ಲಿ ದಶಕಗಳಿಂದ ಬಿಸಿಜಿ ಲಸಿಕೆ ಬಳಸಲಾಗುತ್ತಿದೆ. ಹೀಗಾಗಿ, ಭಾರತೀಯರ ಮೇಲೆ ಕೋವಿಡ್-19 ಅಷ್ಟೊಂದು ಪ್ರಭಾವ ಬೀರುವುದಿಲ್ಲ. ಹೆಚ್ಚು ಸಾವು ಸಂಭವಿಸುವುದಿಲ್ಲ ಎಂಬುದು ಕೆಲವರ ನಂಬಿಕೆ.

English summary
BCG Vaccination policies make 10 times difference in Covid 19 mortality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X