• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಕಾಲದಲ್ಲಿ ಬಸವೇಶ್ವರ ಜಯಂತಿ, ವಚನ ಸ್ಮರಣೆ

By ದಿವ್ಯಶ್ರೀ.ವಿ, ಬೆಂಗಳೂರು
|

ಭಾರತದ 12ನೇ ಶತಮಾನದಲ್ಲಿ ಲೋಕಕಲ್ಯಾಣಕ್ಕಾಗಿ ಜನಿಸಿ ಕಾರ್ಯನಿರ್ವಹಿಸಿದ ನಮ್ಮ ಕರ್ನಾಟಕದ ವಿದ್ವಾಂಸರು, ಸಾಮಾಜಿಕ ಸುಧಾರಕರು, ತತ್ವಜ್ಞಾನಿಗಳಾದ ಶ್ರೀ ಬಸವೇಶ್ವರ ರವರು ಕ್ರಿ. ಶ 1134ರಲ್ಲಿ ವಿಜಯಪೂರು ಜಿಲ್ಲೆಯ ಬಾಗೆವಾಡಿಯಲ್ಲಿ ಬ್ರಾಹ್ಮಣ ದಂಪತಿಗಳಾದ ಮಾದರಸ -ಮಾದಲಾಂಬಿಕೆಯರ ಮಗನಾಗಿ ಹುಟ್ಟಿದರು.ಇವರು ಸುಮಾರು 22000 ವಚನಗಳನ್ನು ರಚಿಸಿದ್ದಾರೆ ಇವರ ವಚನಗಳ ಪ್ರೇರಣೆಯಿಂದ ಎಷ್ಟೋ ಯುವಜನರು ಇವರ ಹಾಗೆ ಕವಿಗಳಾಗಿ ಹೆಣ್ಣುಮಕ್ಕಳು ಕವಯತ್ರಿಗಳಾಗಿ ಹೊರಹೊಮ್ಮಿದರು.

ಇವರ ವಚನಗಳ ಪ್ರಭಾವದಿಂದ ಸಮಾಜದಲ್ಲಿನ ಜನರು ಲಿಂಗ ಭೇದಭಾವ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿ ಎಲ್ಲರೂ ಒಂದೇ ಎನ್ನುವ ಮನೋಭಾವನೆಯಲ್ಲಿ ಬದುಕು ಕಟ್ಟಿಕೊಂಡರು. ಬಸವಣ್ಣನವರ ಪ್ರಾಮುಖ್ಯತೆ, ವೈಶಿಷ್ಟತೆ ಹಾಗು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿದೆ. ಆಧ್ಯಾತ್ಮಿಕವಾಗಿ ಪ್ರತಿಯೊಬ್ಬರಲ್ಲೂ ಲಿಂಗಪೂಜೆಯ ಮಹತ್ವ ಹಾಗು ಲಿಂಗಧಾರಣೆಯ ಮಹತ್ವವನ್ನು ಪ್ರತ್ಯೇಕಿಸಿದ್ದಾರೆ.

ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!

ಇಂದಿನ ಈ ಕೊರೊನಾ ಮಹಾಮಾರಿಯ ದುಸ್ಥಿತಿಯಲ್ಲಿ ನಮ್ಮ ಬಸವಣ್ಣವರ ವಚನಗಳು ನಮಗೆ ತುಂಬಾ ಅವಲೋಕಿಸುತ್ತವೆ. ನಾವು ಮಾಡುವ ಪ್ರತಿಯೊಂದು ಕಾಯಕವು ನಮ್ಮನ್ನು ಪ್ರತಿಬಿಂಬಿಸುತ್ತದೆ ಹಾಗೆಯೇ ಇಂದಿನ ಕೊರೋನಾ ಅಲೆಯಲ್ಲಿ ಜನರಿಗೆ ಎಷ್ಟೇ ಎಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಿದರೂ ಅವುಗಳನ್ನು ಅನುಸರಿಸದೆ ತಮ್ಮನ್ನು ತಾವೇ ದಹಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

'ಕರಿಘನ ಅಂಕುಶ ಕಿರಿದೆನ್ನಬಹುದೇ? ಬಾರದಯ್ಯಾ,
'ಗಿರಿಘನ ವಜ್ರ ಕಿರಿದೆನ್ನಬಹುದೇ? ಬಾರದಯ್ಯಾ,
ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೇ? ಬಾರದಯ್ಯಾ,
ಮರಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೇ? ಬಾರದಯ್ಯಾ,
ಕೂಡಲಸಂಗಮದೇವಾ.
--
ಅಂಕುಶವು ಸಣ್ಣದಿದ್ದರೂ ಆನೆಯನ್ನು ಅಂಕಿತದಲ್ಲಿಡುತ್ತದೆ.
ವಜ್ರಾಯುಧವು ಸಣ್ಣದಿದ್ದರೂ ಪರ್ವತವನ್ನು ಸೀಳುತ್ತದೆ.
ದೀಪವು ಸಣ್ಣದಿದ್ದರೂ ಕಗ್ಗತ್ತಲೆಯನ್ನು ಓಡಿಸುತ್ತದೆ.
ನಿಮ್ಮ ಚಿಂತೆಯಲ್ಲಿ ಮಗ್ನವಾದ ಮನಸ್ಸು ಸಣ್ಣದಿದ್ದರೂ ನಿಮ್ಮ ಮರವಿನಿಂದ ಉಂಟಾದ ಮಹಾಮಾಯೆಯನ್ನು ಹೊಡೆದೋಡಿಸುತ್ತದೆ.

ಒಳ್ಳೆಯದೇ ಆಗಲಿ ಕೆಟ್ಟದೇ ಆಗಲಿ ಅದರ ಚಿಕ್ಕ ಪ್ರಯತ್ನ ದೊಡ್ಡ ಪರಿಣಾಮವು ಆಗಬಹುದು, ದೊಡ್ಡ ಪ್ರಯೋಜನಕಾರಿಯೂ ಆಗಬಹುದು. ಕೊರೋನಾ ಎಂಬ ಚಿಕ್ಕ ವೈರಾಣು ಇಡೀ ಮನುಷ್ಯ ದೇಹವನ್ನೇ ನುಸುಳಿ ದಹಿಸುತ್ತಿದೆ. ಇದನ್ನು ತಡೆಯಲು ನಮ್ಮ ಜನರು ಮಾಡಬೇಕಾದ ಚಿಕ್ಕ ಪ್ರಯತ್ನ ಎಂದರೆ ಮಾಸ್ಕ್ ಧರಿಸಿಕೊಳ್ಳುವುದು, ಅಂತರ ಕಾಪಾಡಿಕೊಳ್ಳುವುದು ಸ್ವಚ್ಚತೆಯಿಂದಿರುವುದು ಇಲ್ಲದಿದ್ದರೆ ಒಂದು ಸಣ್ಣ ಆಲಕ್ಷ್ಯತನಕ್ಕೆ ದೊಡ್ಡ ಪರಿಣಾಮ ಎದುರಿಸುವ ಪರಿಸ್ಥಿತಿ ಈಗಾಗಲೇ ಸಂಭವಿಸುತ್ತಿದೆ.

ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ

   Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada

   ಇನ್ನು ಇದರಲ್ಲಿ ಶ್ರೀಮಂತ ವರ್ಗದವರು ತಮಗೆ ಬೇಕಾದ ಚಿಕಿತ್ಸೆ ಸೌಲಭ್ಯಗಳನ್ನು ತೆಗೆದುಕೊಂಡರು ಬದುಕಲು ಅನರ್ಹರಾಗಿದ್ದಾರೆ ಇನ್ನು ಬಡವರ ಸ್ಥಿತಿ ಹೇಳತೀರದಾಗಿದೆ. ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಹಿತನುಡಿಗಳನ್ನು ಅನುಸರಿಸಿಕೊಂಡು ಬಾಳೋಣ... ಹಾಗೂ ಎಲ್ಲರಿಗೂ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು.

   English summary
   Basava Jayanti marks the birth anniversary of 12th-century poet-philosopher Lord Basavanna.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X