ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್ ನಿಷೇಧಿಸಿದರೆ 10 ರೂ ಪ್ಯಾಕೆಟ್ ಆಗಲ್ಲ: ಪಾನೀಯ ಕಂಪನಿಗಳ ಅಳಲು

|
Google Oneindia Kannada News

ನವದೆಹಲಿ: ಒಮ್ಮೆ ಬಳಸಿ ಬಿಡಾಡುವ ಪ್ಲಾಸ್ಟಿಕ್ ವಸ್ತುಗಳನ್ನು (Single Use Plastics) ಕೇಂದ್ರ ಸರಕಾರ ನಿಷೇಧಿಸಿರುವುದು ದೇಶದ ಪಾನೀಯ ಕಂಪನಿಗಳಿಗೆ ಬೇಸರ ತರಿಸಿದೆ. ಡಾಬರ್, ಪಾರ್ಲೆ, ಕೋಕಾ ಕೋಲ, ಪೆಪ್ಸಿಕೋ ಮೊದಲಾದ ಪ್ರಮುಖ ಪಾನೀಯ ಕಂಪನಿಗಳು ಕಾಗದದ ಕಡ್ಡಿಗೆ ಹೇಗೆ ವ್ಯವಸ್ಥೆ ಮಾಡುವುದು ಎಂಬ ಚಿಂತೆಯಲ್ಲಿವೆ. ಗ್ರಾಹಕರಿಗೂ 10 ರೂಪಾಯಿಗೆ ಜ್ಯೂಸ್ ಪ್ಯಾಕೆಟ್ ದಕ್ಕದೇ ಹೋಗಬಹುದು.

ಕೇಂದ್ರದ ಪರಿಸರ ಇಲಾಖೆ 2021 ಆಗಸ್ಟ್ ತಿಂಗಳಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ರೂಪಿಸಿದೆ. ಅದರಂತೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು 2022 ಜುಲೈ ಒಂದರಿಂದ ನಿಷೇಧಿಸಲಾಗುವುದು ಎಂದು ತಿಳಿಸಿದೆ. ಅಂದರೆ ಇನ್ನು ಒಂದೂವರೆ ತಿಂಗಳವರೆಗೆ ಮಾತ್ರ ಇಂಥ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸಬಹುದು.

ಜೀವಂತ ಜನರ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪತ್ತೆ: ಅಧ್ಯಯನ ಜೀವಂತ ಜನರ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪತ್ತೆ: ಅಧ್ಯಯನ

ಸರಕಾರ ಪ್ಲಾಸ್ಟಿಕ್ ನಿಷೇಧಿಸುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು. ಪ್ಲಾಸ್ಟಿಕ್ ಸ್ಟ್ರಾ, ಕಟ್ಲೆರಿಗಳನ್ನೂ ನಿಷೇಧದ ಪಟ್ಟಿಗೆ ಸೇರಿಸುವುದು ಸರಿಯಾದ ಕ್ರಮವಲ್ಲ. ಪರಿಸರ ಹಾನಿ ತಪ್ಪಿಸಲು ಆಗುವುದಿಲ್ಲ ಎಂದು ಪಾನೀಯ ಉದ್ಯಮದಲ್ಲಿರುವವರ ವಾದವಾಗಿದೆ. ಪ್ಲಾಸ್ಟಿಕ್ ನಿಷೇಧಿಸಲಿ. ಆದರೆ, ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳಲು ಸೂಕ್ತ ಕಾಲಾವಕಾಶವನ್ನಾದರೂ ಕೊಡಬೇಕು ಎಂಬುದು ಪೆಪ್ಸಿಕೋ ಮೊದಲಾದ ಕಂಪನಿಗಳ ಒತ್ತಾಯವಾಗಿದೆ.

ಯಾವ್ಯಾವ ಪ್ಲಾಸ್ಟಿಕ್ ವಸ್ತು ನಿಷೇಧವಾಗಿವೆ?

ಯಾವ್ಯಾವ ಪ್ಲಾಸ್ಟಿಕ್ ವಸ್ತು ನಿಷೇಧವಾಗಿವೆ?

ಒಮ್ಮೆ ಮಾತ್ರ ಬಳಸಿ ಬಿಸಾಡುವಂಥ ಎಲ್ಲಾ ಪ್ಲಾಸ್ಟಿಕ್ ಐಟಂಗಳನ್ನು ಸರಕಾರ ನಿಷೇಧಿಸಿದೆ. ಜ್ಯೂಸ್ ಪ್ಯಾಕ್‌ಗಳ ಜೊತೆ ಬರುವ ಸ್ಟ್ರಾ, ಕಟ್ಲೆರಿ, ಪ್ಲಾಸ್ಟಿಕ್ ಕಡ್ಡಿ ಇರುವ ಇಯರ್ ಬಡ್, ಐಸ್ ಕ್ರೀಮ್‌ನ ಪ್ಲಾಸ್ಟಿಕ್ ಡಬ್ಬಿ, ಕ್ಯಾಂಡಿ ಪ್ಲಾಸ್ಟಿಕ್ ಕಡ್ಡಿ, ಬಲೂನ್ ಸ್ಟಿಕ್, ಪ್ಲಾಸ್ಟಿಕ್ ಹೊದಿಕೆ (ಸಿಗರೇಟ್ ಪ್ಯಾಕ್ ಇತ್ಯಾದಿ ಮೇಲಿರುವ ಪ್ಲಾಸ್ಟಿಕ್), ತೆಳು ಥರ್ಮೋಕಾಲ್ ಶೀಟ್, ಪಿವಿಸಿ ಬ್ಯಾನರ್ ಇತ್ಯಾದಿ ವಸ್ತುಗಳನ್ನು ಸರಕಾರ ನಿಷೇಧಿಸುತ್ತಿದೆ. ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್ ಇತ್ಯಾದಿಗಳೂ ನಿಷೇಧದ ಪಟ್ಟಿಯಲ್ಲಿವೆ.

ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?

ಜ್ಯೂಸ್ ಕಂಪನಿಗಳಿಗೆ ಅಸಮಾಧಾನ

ಜ್ಯೂಸ್ ಕಂಪನಿಗಳಿಗೆ ಅಸಮಾಧಾನ

ಕಡಿಮೆ ಬೆಲೆಗೆ ಮಾರಲಾಗುವ ಜ್ಯೂಸ್ ಪೊಟ್ಟಣಗಳ ಜೊತೆ ನೀಡಲಾಗುವ ಸ್ಟ್ರಾ ಅಥವಾ ಪ್ಲಾಸ್ಟಿಕ್ ಪೈಪ್ ಅನ್ನು ನಿಷೇಧಿಸಲಾಗಿರುವುದು ಪಾನೀಯ ಕಂಪನಿಗಳಿಗೆ ಹೆಚ್ಚು ಅಸಮಾಧಾನ ತಂದಿದೆ. ಯಾಕೆಂದರೆ ಜ್ಯೂಸ್ ಪ್ಯಾಕೆಟ್ ಜೊತೆ ಸ್ಟ್ರಾ ಇದ್ದರೆ ಗ್ರಾಹಕರಿಗೆ ಅನುಕೂಲ. ಪ್ಲಾಸ್ಟಿಕ್ ಸ್ಟ್ರಾ (Plastic Straw) ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಹೀಗಾಗಿ, 10 ರೂಪಾಯಿಗೆ ಒಂದು ಜ್ಯೂಸ್ ಪ್ಯಾಕೆಟ್ ಕೊಡಲು ಕಂಪನಿಗಳಿಗೆ ಸಾಧ್ಯವಾಗುತ್ತದೆ. ಒಂದು ವೇಳೆ ಪ್ಲಾಸ್ಟಿಕ್ ಸ್ಟ್ರಾ ನಿಷೇಧಿಸಿದರೆ ಅದಕ್ಕೆ ಪರ್ಯಾಯವಾಗಿ ಕಡಿಮೆ ಬೆಲೆಗೆ ಬೇರೆ ಸ್ಟ್ರಾಗಳು ಸಿಗುವುದಿಲ್ಲ. ಪೇಪರ್‌ನಿಂದ ತಯಾರಿಸಿದ ಸ್ಟ್ರಾಗಳು (Paper Straw or PLA) ಸದ್ಯಕ್ಕೆ ದುಬಾರಿ ಆಗಿವೆ. ಇದರಿಂದ ಹತ್ತು ರೂಪಾಯಿಗೆ ಜ್ಯೂಸ್ ಪ್ಯಾಕೆಟ್ ಮಾರಲು ಸಾಧ್ಯವಾಗುವುದಿಲ್ಲ. ದರ ಹೆಚ್ಚಿಸಿದರೆ ಗ್ರಾಹಕರಿಗೆ ತೊಂದರೆ ಆಗುತ್ತದೆ. ಸ್ಟ್ರಾ ಇಲ್ಲದೇ ಪಾನೀಯ ಕೊಟ್ಟರೂ ಗ್ರಾಹಕರಿಗೆ ಅದು ಕಿರಿಕಿರಿ ಆಗುತ್ತದೆ ಎಂಬ ಭಯ ಪಾನೀಯ ಕಂಪನಿಗಳದ್ದು.

ಕಾಲಾವಕಾಶ ಕೋರಿರುವುದು ಯಾಕೆ?

ಕಾಲಾವಕಾಶ ಕೋರಿರುವುದು ಯಾಕೆ?

ಪಾನೀಯ ಕಂಪನಿಗಳು ಪ್ಲಾಸ್ಟಿಕ್ ನಿಷೇಧವನ್ನು ವಿರೋಧಿಸುತ್ತಿಲ್ಲ. ಬದಲಾಗಿ ಒಂದಾರು ತಿಂಗಳಾದರೂ ನಿಷೇಧವನ್ನು ಮುಂದೂಡಿ ಎಂದು ಕೇಳುತ್ತಿವೆ. ಯಾಕೆಂದರೆ, ಪ್ಲಾಸ್ಟಿಕ್ ಸ್ಟ್ರಾಗಳಿಗೆ ಪರ್ಯಾಯವಾಗಿರುವ ಪೇಪರ್ ಸ್ಟ್ರಾ ಅಥವಾ ಪಿಎಲ್‌ಎಗಳು ಸದ್ಯ ಸರಿಯಾದ ಪ್ರಮಾಣದಲ್ಲಿ ಸರಬರಾಜಿನಲ್ಲಿಲ್ಲ. ಭಾರತದಲ್ಲಿ ಇವುಗಳನ್ನು ತಯಾರಿಸುವ ಉದ್ದಿಮೆಗಳು ಬಹಳ ಕಡಿಮೆ ಇವೆ. ಹೀಗಾಗಿ, ಚೀನಾ, ಇಂಡೋನೇಷ್ಯಾ, ಫಿನ್ಲೆಂಡ್, ಮಲೇಷ್ಯಾ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಗ ಅದರ ವೆಚ್ಚ ದುಪ್ಪಟ್ಟು ಅಥವಾ ತ್ರಿಪಟ್ಟು ಹೆಚ್ಚಾಗಬಹುದು. ಇದರಿಂದ ಕಡಿಮೆ ಬೆಲೆಗೆ ಪಾನೀಯ ಮಾರಲು ಸಾಧ್ಯವಾಗುವುದಿಲ್ಲ ಎಂದು ಈ ಕಂಪನಿಗಳು ಅಳಲು ತೋಡಿಕೊಳ್ಳುತ್ತಿವೆ.

ಸರಕಾರ ಸೂಕ್ತ ಕಾಲಾವಕಾಶ ಕೊಟ್ಟರೆ ಪೇಪರ್ ಸ್ಟ್ರಾಗಳ ಸರಬರಾಜಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು ಎಂಬುದು ಇವರ ವಾದ. ಅಂದರೆ, ಭಾರತದಲ್ಲೇ ಸ್ಥಳೀಯವಾಗಿ ಪಿಎಲ್‌ಎ ಅಥವಾ ಕಾಗದದ ಸ್ಟ್ರಾವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ವ್ಯವಸ್ಥೆ ಮಾಡಿಕೊಳ್ಳಬಹುದು. ಅದಕ್ಕೆ ಪಾರ್ಲೆ ಕಂಪನಿಯ ಸಿಇಒ ಅವರು ಕನಿಷ್ಠ ಆರು ತಿಂಗಳು ಪ್ಲಾಸ್ಟಿಕ್ ನಿಷೇಧದ ಕ್ರಮವನ್ನು ಮುಂದಕ್ಕೆ ಹಾಕುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ವರ್ಷಕ್ಕೆ 600 ಕೋಟಿ ಪ್ಯಾಕೆಟ್ ಮಾರಾಟ

ವರ್ಷಕ್ಕೆ 600 ಕೋಟಿ ಪ್ಯಾಕೆಟ್ ಮಾರಾಟ

ಭಾರತದಲ್ಲಿ ಮಾರಾಟವಾಗುವ ಪಾನೀಯಗಳಲ್ಲಿ ಡಾಬರ್, ಪಾರ್ಲೆ, ಕೋಕ ಕೋಲಾ ಮತ್ತು ಪೆಪ್ಸಿಕೋ ಕಂಪನಿಗಳದ್ದೇ ಉತ್ಪನ್ನಗಳು ಹೆಚ್ಚು. ಪ್ರತೀ ವರ್ಷ ಭಾರತದಲ್ಲಿ 600 ಕೋಟಿ ಜ್ಯೂಸ್ ಪ್ಯಾಕ್‌ಗಳು ಮಾರಾಟವಾಗುತ್ತವಂತೆ. ಇದರಲ್ಲಿ ಶೇ. 60ರಷ್ಟು ಜ್ಯೂಸ್‌ಗಳು ಸಣ್ಣ ಪ್ಯಾಕೆಟ್‌ನವೇ ಆಗಿವೆ. ಹತ್ತು ರುಪಾಯಿಯ ಪ್ಯಾಕೆಟ್ ಎಂದರೆ ಗ್ರಾಹಕರಿಗೂ ಒಂದು ರೀತಿಯಲ್ಲಿ ಮಾನಸಿಕವಾಗಿ ಹಿತ ನೀಡುವ ದರ. ಹೀಗಾಗಿ, ಈ ಬೆಲೆಯ ಪಾನೀಯ ಪ್ಯಾಕೆಟ್‌ಗಳು ಬಹಳ ಹೆಚ್ಚು ಮಾರಾಟವಾಗುತ್ತವೆ.

ಬೇರಾರಿಗೆ ಪರಿಣಾಮ ಹೆಚ್ಚು?

ಬೇರಾರಿಗೆ ಪರಿಣಾಮ ಹೆಚ್ಚು?

ಪಾನೀಯದ ಪೊಟ್ಟಣ ಮಾತ್ರವಲ್ಲ ಅನೇಕ ಕಡೆ ಪ್ಲಾಸ್ಟಿಕ್ ಕಡ್ಡಿಯನ್ನು ಬಳಸುವುದು ಸಾಮಾನ್ಯ. ಹಾಲಿನ ಉತ್ಪನ್ನಗಳನ್ನು ತಯಾರಿಸುವ ಡೈರಿ ಕಂಪನಿಗಳು ತಮ್ಮ ಉತ್ಪನ್ನದ ಪ್ಯಾಕೆಟ್‌ಗಳ ಜೊತೆ ಸ್ಟ್ರಾ ನೀಡುತ್ತವೆ. ಓಆರ್‌ಎಸ್ ಇತ್ಯಾದಿ ಪ್ಯಾಕೆಟ್‌ಗಳಿಗೂ ಸ್ಟ್ರಾ ಅಗತ್ಯ ಇದೆ. ಇವುಗಳಿಗೂ ಪ್ಲಾಸ್ಟಿಕ್ ನಿಷೇಧದಿಂದ ತೊಂದರೆ ಆಗಬಹುದು. ಆದರೆ, ಹೋಟೆಲ್ ಉದ್ಯಮ ಬಹುತೇಕ ಸಿಂಗಲ್ ಯೂಸ್ ಪ್ಲಾಸ್ಟಿಕ್‌ನಿಂದ ಮುಕ್ತವಾಗಿದೆ. ಬಿದಿರಿನಿಂದ ತಯಾರಿಸಿದ ಕಡ್ಡಿಗಳನ್ನು ಬಳಸಲಾಗುತ್ತದೆ. ಅದರ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲಾಗುತ್ತದೆ. ಹಾಗೆಯೇ, ಕಾಫಿ ಶಾಪ್‌ಗಳಲ್ಲಿ ಬಳಸಲಾಗುವ ಪೇಪರ್ ಸ್ಟ್ರಾಗಳು ೮ ಮಿಮೀ ಸುತ್ತಳತೆಯದ್ದಾಗಿವೆ. ಆದರೆ, ಜ್ಯೂಸ್ ಪ್ಯಾಕೆಟ್‌ಗಳ ಜೊತೆ ಇರುವ ಸ್ಟ್ರಾನ ಸುತ್ತಳತೆ ಕೇವಲ ಮೂರು ಮಿಲಿಮೀಟರ್ ಮಾತ್ರ. ಈ ಸಣ್ಣ ಸ್ಟ್ರಾವನ್ನು ಕಾಗದದಲ್ಲಿ ತಯಾರಿಸುವುದು ಸವಾಲಿನ ಕೆಲಸ. ಯಾಕೆಂದರೆ ಇದು ನೀರಿನಲ್ಲಿ ಅದ್ದಿದರೆ ಮೆತ್ತಗಾಗಿ ಹೋಗುವ ಸಾಧ್ಯತೆ ಇರುತ್ತದೆ.

ನಿಷೇಧ ನಿರ್ಧಾರ ಅರ್ಥಹೀನ

ನಿಷೇಧ ನಿರ್ಧಾರ ಅರ್ಥಹೀನ

ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್‌ನಿಂದ ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲಿ ಪ್ಲಾಸ್ಟಿಕ್ ಸ್ಟ್ರಾ ಪ್ರಮಾಣ ಬಹಳ ಕಡಿಮೆ. ಈ ಸ್ಟ್ರಾಗಳಿಂದ ಪರಿಸರಕ್ಕೆ ಆಗುವ ಹಾನಿಯೂ ಹೆಚ್ಚೇನಿಲ್ಲ. ಪ್ಲಾಸ್ಟಿಕ್ ಸ್ಟ್ರಾ ನಿಷೇಧದಿಂದ ಪ್ರಯೋಜನವಾಗುವುದು ಕಡಿಮೆ. ಸರಕಾರ ಏಕಾಏಕಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ನಿಷೇಧ ಕ್ರಮ ಜಾರಿಗೆ ತರುವುದು ತಪ್ಪಾಗುತ್ತದೆ ಎಂದು ಪಾನೀಯ ಉದ್ಯಮದಲ್ಲಿರುವವರ ಅಭಿಪ್ರಾಯ.

English summary
The ban on single-use plastic, effective from July 1, poses a challenge to makers of cool beverages such as Frooti, Real, Tropicana and Maaza, who attach small plastic straws to help buyers puncture the juice boxes and drink up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X