ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ ಹೀಲ್ಡ್ ಚಪ್ಪಲಿಯಿಂದ ಬೆನ್ನು ನೋವು ಬರುತ್ತಾ?

|
Google Oneindia Kannada News

ಹೈ ಹೀಲ್ಡ್ ಚಪ್ಪಲಿ ಧರಿಸಿ ಓಡಾಡೋದು ಈಗ ಫ್ಯಾಷನ್. ಹೆಚ್ಚಿನ ಹೆಣ್ಣುಮಕ್ಕಳು ತನ್ನ ಬಳಿಯೊಂದು ಹೈಹೀಲ್ಡ್ ಚಪ್ಪಲಿ ಇರಲೆಂದು ಬಯಸೋದು ಸಹಜ. ಅದರಲ್ಲೂ ಸ್ವಲ್ಪ ಕುಳ್ಳಗೆ ಇರುವವರಂತು ಹೈಹೀಲ್ಡ್ ಚಪ್ಪಲಿ ಧರಿಸಿ ಎತ್ತರವಾಗಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಎಲ್ಲರೂ ಹೈಹೀಲ್ಡ್ ಚಪ್ಪಲಿ ಧರಿಸಿ ಲೀಲಾಜಾಲವಾಗಿ ಓಡಾಡಿಕೊಂಡಿರುತ್ತೇನೆ ಎಂದರೆ ಅದು ಸಾಧ್ಯವಾಗದ ಮಾತು. ಹೀಗಾಗಿ ಹೆಚ್ಚಿನವರು ಎಲ್ಲ ದಿನಗಳಲ್ಲಿ ಇದನ್ನು ಬಳಸದೆ ಕೆಲವೇ ಕೆಲವು ಕಾರ್ಯಕ್ರಮಗಳಿಗಷ್ಟೆ ಧರಿಸಿ ಬರುತ್ತಾರೆ. ಇಷ್ಟಕ್ಕೂ ದಿನನಿತ್ಯದ ಓಡಾಟಕ್ಕೆ ಇದು ಸೂಕ್ತವಲ್ಲ. ಏಕೆಂದರೆ ಇದನ್ನು ಹಾಕಿಕೊಂಡು, ಎಲ್ಲೆಂದರಲ್ಲಿ ಓಡಾಡುವುದು, ಹೇಗೆಂದರೆ ಹಾಗೆ ನಡೆಯುವುದು ಕಷ್ಟವೇ. ಇದನ್ನು ಧರಿಸಿದ ಬಳಿಕ ಕಾಲಿನ ಕಡೆಗೆ ನಮ್ಮ ಗಮನವನ್ನು ಕೊಡಲೇ ಬೇಕಾಗುತ್ತದೆ.

ಅತ್ತಿಮರ ಔಷಧೀಯ ಗಣಿ ಅಂದ್ರೆ ನಂಬ್ತೀರಾ?ಅತ್ತಿಮರ ಔಷಧೀಯ ಗಣಿ ಅಂದ್ರೆ ನಂಬ್ತೀರಾ?

ಹೆಣ್ಣುಮಕ್ಕಳಿಗೆ ಹೈಹೀಲ್ಡ್ ಚಪ್ಪಲಿ ಮೆರಗು

ಹೆಣ್ಣುಮಕ್ಕಳಿಗೆ ಹೈಹೀಲ್ಡ್ ಚಪ್ಪಲಿ ಮೆರಗು

ಈ ಹೈಹೀಲ್ಡ್ ಚಪ್ಪಲಿ ಫ್ಯಾಷನ್ ಹೌದು, ಹೆಣ್ಣುಮಕ್ಕಳ ಉಡುಗೆಗೆ ಮೆರಗು ಕೂಡ ಹೌದು. ಆದರೆ ಇದನ್ನು ಧರಿಸಿ ಹೆಚ್ಚು ಓಡಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವಂತೆ. ಹಾಗೆಂದು ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ನಡೆಯಲೇಬೇಡಿ ಎಂದು ಹೇಳಲಿಕ್ಕಾಗುವುದಿಲ್ಲ. ಬದಲಿಗೆ ಬಳಕೆ ಕಡಿಮೆ ಮಾಡಿಕೊಳ್ಳಿ ಎಂದಷ್ಟೆ ಸಲಹೆ ನೀಡಬಹುದು.

ಹಾಗಾದರೆ ಹೈಹೀಲ್ಡ್ ಚಪ್ಪಲಿಯನ್ನೇಕೆ ಹೆಚ್ಚು ಧರಿಸಬಾರದು ಎಂಬ ಪ್ರಶ್ನೆಗಳು ಇದನ್ನು ಧರಿಸುವವರ ಮನದಲ್ಲಿ ಮೂಡುವುದು ಸಹಜವೇ. ಈ ಪ್ರಶ್ನೆಗೆ ಉತ್ತರ ಸರಳ. ಅದೇನೆಂದರೆ ಹೈಹೀಲ್ಡ್ ಚಪ್ಪಲಿ ಧರಿಸಿ ಹೆಚ್ಚು ಓಡಾಟ ಮಾಡಿದರೆ ಬೆನ್ನು ನೋವು ಕಾಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ. ಇದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಹೈಹೀಲ್ಡ್ ಬೆನ್ನು ನೋವು ತರಬಹುದು!

ಹೈಹೀಲ್ಡ್ ಬೆನ್ನು ನೋವು ತರಬಹುದು!

ಪ್ರತಿದಿನ ಕೆಲಸಕ್ಕೆ ಹೈಹೀಲ್ಡ್ ಧರಿಸಿ ಹೋಗುವ ಹೆಣ್ಣು ಮಕ್ಕಳು ಒಂದೆಡೆ ಕುಳಿತು ಕೆಲಸ ಮಾಡುತ್ತಾರೆ. ಇವರಿಗೆ ಬೆನ್ನು ನೋವು ಕಾಣಿಸಿಕೊಂಡರೆ ಬಹುಶಃ ಬಗ್ಗಿ ಕೆಲಸ ಮಾಡುವುದಕ್ಕಾಗಿರಬಹುದು ಅಥವಾ ಇನ್ಯಾವುದೋ ಕಾರಣಗಳನ್ನು ಹುಡುಕಿಕೊಂಡು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಹಳಷ್ಟು ಮಂದಿಗೆ ತನಗೆ ಬಂದಿರುವ ಬೆನ್ನು ನೋವಿಗೆ ತಾನು ಧರಿಸುವ ಹೈಹೀಲ್ಡ್ ಕೂಡ ಕಾರಣವಾಗಿರಬಹುದು ಎಂಬ ಚಿಕ್ಕ ಸಂಶಯವೂ ಬರುವುದಿಲ್ಲ.

ಹಾಗೆನೋಡಿದರೆ ಹೈಹೀಲ್ಡ್ ಚಪ್ಪಲಿ ಧರಿಸಿದರೆ ಮಾಮೂಲಿ ಚಪ್ಪಲಿ ಧರಿಸಿ ನಡೆದಾಡಿದಂತೆ ನಡೆಯಲು ಸಾಧ್ಯವಿಲ್ಲ. ನಮ್ಮ ಗಮನ ಚಪ್ಪಲಿ ಮೇಲೆಯೇ ಇರುತ್ತದೆ. ಜತೆಗೆ ಕೆಲವೊಮ್ಮೆ ಕಾಲಿನ ಸಮತೋಲನ ತಪ್ಪಿ ಕಾಲು ಉಳುಕುವ ಸಾಧ್ಯತೆಯೂ ಇರುತ್ತದೆ. ಅದರಲ್ಲೂ ಹೈಹೀಲ್ಡ್ ಧರಿಸಿ ನಡೆದಾಡಿ ಅಭ್ಯಾಸ ಇಲ್ಲದವರಂತು ತುಂಬಾ ಜಾಗರೂಕರಾಗಿರ ಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ತೊಂದರೆ ತಪ್ಪಿದಲ್ಲ.

ಬೆನ್ನು ನೋವಿನ ಬಗ್ಗೆ ತಜ್ಞರು ಹೇಳುವುದೇನು?

ಬೆನ್ನು ನೋವಿನ ಬಗ್ಗೆ ತಜ್ಞರು ಹೇಳುವುದೇನು?

ಹೈಹೀಲ್ಡ್ ಧರಿಸಿದವರು ನಡೆಯುವಾಗ ಬೆರಳಿನ ಮೇಲೆ ಹೆಚ್ಚಿನ ಶಕ್ತಿ ಕೊಡಬೇಕಾಗುತ್ತದೆ. ಕೆಲವೊಮ್ಮೆ ಸಮತೋಲನ ತಪ್ಪಿ ಕಾಲುಗಳಿಗೆ ತೊಂದರೆಗಳು ಆಗುವುದು ಸಹಜ. ಆದರೆ ಬೆನ್ನು ನೋವು ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ ಒಂದಷ್ಟು ಮಾಹಿತಿಯನ್ನು ತಜ್ಞರು ನೀಡುತ್ತಾರೆ. ಅವರ ಪ್ರಕಾರ ಹೈಹೀಲ್ಡ್ ಚಪ್ಪಲಿಗಳು ದೇಹದ ಸಮತೋಲನವನ್ನು ಪಲ್ಲಟಗೊಳಿಸಿ ಭಾರ ಬೀಳುವ ಅಕ್ಷರೇಖೆಯನ್ನು ಬದಲಿಸುತ್ತವೆಯಂತೆ. ಈ ಅಕ್ಷರೇಖೆಯು ತನ್ಮೂಲಕ ದೇಹದ ಭಾರವನ್ನು ಭೂಮಿಗೆ ಸ್ಥಳಾಂತರಿಸುವ ಒಂದು ಕಾಲ್ಪನಿಕ ರೇಖೆಯಂತಿದ್ದು, ಇದು ಬೆನ್ನು ಹುರಿಯ ಸ್ಯಾಕ್ರಲ್ ಭಾಗದ ಎದುರುಗಡೆ ಹಾದು ಹೋಗುತ್ತದೆಯಂತೆ. ಹೀಗಾಗಿ ಹೈಹೀಲ್ಡ್ ಧರಿಸಿದಾಗ ಆ ರೇಖೆಯು ಅಸ್ತವ್ಯಸ್ತಗೊಂಡು ಹೆಚ್ಚಿನ ಭಾರವು ಬೆನ್ನು ಹುರಿಯ ಲಂಬಾರ್ ಭಾಗದ ಮೇಲೆ ಬಿದ್ದು ಬೆನ್ನು ನೋವು ಕಾಣಿಸುತ್ತದೆಯಂತೆ.

ಗರ್ಭಿಣಿಯರು ಹೈಹೀಲ್ಡ್ ಚಪ್ಪಲಿ ಧರಿಸಬೇಡಿ

ಗರ್ಭಿಣಿಯರು ಹೈಹೀಲ್ಡ್ ಚಪ್ಪಲಿ ಧರಿಸಬೇಡಿ

ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸಿ ನಡೆದಾಡುವುದು ಸೂಕ್ತವಲ್ಲ. ಹಾಕಿದ್ದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೆನ್ನು ನೋವು ಸಾಮಾನ್ಯವಾಗಿ ಎಲ್ಲ ವಯಸ್ಸಿನವರಲ್ಲಿಯೂ ಒಂದೊಂದು ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಅತಿಯಾದ ತೂಕವೂ ಬೆನ್ನು ನೋವನ್ನು ತರಬಹುದು. ವಯಸ್ಸಾದಂತೆ ಮೂಳೆಗಳ ಸವೆತವೂ ಬೆನ್ನು ನೋವಿಗೆ ಕಾರಣವಾಗಬಹುದು. ಆದರೆ ಸದಾ ಹೈಹೀಲ್ಡ್ ಚಪ್ಪಲಿ ಧರಿಸಿ ಓಡಾಡುವ ಮಹಿಳೆಯರಲ್ಲಿ ಬೆನ್ನು ನೋವು ಕಾಣಿಸಿಕೊಂಡರೆ ಅದು ಚಪ್ಪಲಿಯಿಂದಲೇ ಬಂದಿರಬಹುದು ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ.

English summary
Weared high heeled slippers now is fashion. It is natural for most females to have a high-heeled slippers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X