ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿ ಗದರಿದರೂ 'ಅಮ್ಮ ನನಗೆ ಫೋನ್ ಬೇಕಮ್ಮ' ಎಂದ ಮರಿ ಮಂಗ

|
Google Oneindia Kannada News

ಜಗತ್ತಿನಲ್ಲಿ ಅನೇಕ ಜಾತಿಯ ಜೀವಿಗಳಿವೆ. ಮನುಷ್ಯರ ನಂತರ ಬುದ್ಧಿವಂತ ಜೀವಿಗಳಲ್ಲಿ ಯಾರಾದರೂ ಇದ್ದಾರೆ ಅಂದರೆ ಅದು ಕೋತಿ. ಯಾಕೆಂದರೆ ಮಂಗಗಳು ತುಂಬಾ ಚುರುಕಾಗಿರುತ್ತವೆ. ಹೀಗೆಂದು ಹೇಳಲು ಈ ವೈರಲ್ ವಿಡಿಯೋ ಸಾಕು.

ಮಂಗನ ಮರಿ ವ್ಯಕ್ತಿಯೊಬ್ಬನ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋವೊಂದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪುಟ್ಟ ಕೋತಿ ಮೊಬೈಲ್ ಕೈಗೆ ತೆಗೆದುಕೊಳ್ಳಲು ಬಹಳ ಕಾತರದಿಂದ ನೋಡುತ್ತಿದೆ. ಆದರೆ ಮರುಕ್ಷಣವೇ ಅಲ್ಲಿದ್ದ ಅದರ ತಾಯಿ ಅದನ್ನು ನಿರಾಕರಿಸುತ್ತಾಳೆ. ಆದರೆ ಮರಿ ಮಂಗ ತಾಯಿ ಒತ್ತಾಯಕ್ಕೆ ಮಣಿಯಲಿಲ್ಲ. ಅದು ಫೋನ್ ಬಿಡಲು ಸಿದ್ಧನವಿರಲಿಲ್ಲ. ಯಾವುದೇ ಬೆಲೆ ತೆತ್ತಾದರೂ ಆ ವ್ಯಕ್ತಿಯ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಅದು ಬಯಸುತ್ತದೆ. ಈ ವೇಳೆ ಅದರ ತಾಯಿ ಮಂಗ ಮರಿ ಮಂಗನನ್ನು ಮತ್ತೆ ಮತ್ತೆ ಎಳೆಯುತ್ತದೆ. ಈ ವೇಳೆ ಚಿಕ್ಕ ಕೋತಿ ತಾಯಿ ಮೇಲೆ ಕೋಪ ಮಾಡಿಕೊಳ್ಳುತ್ತದೆ.

ವಿಡಿಯೋ; ಜಾದೂ ಪ್ರದರ್ಶನ ನೋಡಿ ಬೆರಗಾದ ಮಂಗ ವಿಡಿಯೋ; ಜಾದೂ ಪ್ರದರ್ಶನ ನೋಡಿ ಬೆರಗಾದ ಮಂಗ

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಕ್ಲಿಪ್ ಕಾಡಿನಲ್ಲಿ ತೆಗೆದಂತೆ ಕಾಣುತ್ತದೆ. ಅಲ್ಲಿ ವ್ಯಕ್ತಿಯೊಬ್ಬ ಕೋತಿಯ ಚಿತ್ರ ತೆಗೆಯಲು ಮುಂದಾಗುತ್ತಾನೆ. ಚಿತ್ರವನ್ನು ಕ್ಲಿಕ್ಕಿಸಲು ಕೋತಿ ಮಗುವಿನ ಬಳಿಗೆ ಹೋದಾಗ ಮರಿ ಮಂಗ ವ್ಯಕ್ತಿಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸುತ್ತದೆ.

ಮಂಗ

ಈ ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದು ಟ್ವಿಟರ್‌ನಲ್ಲಿ ಸುಮಾರು 88.9 ಸಾವಿರ ವೀಕ್ಷಣೆಗಳನ್ನು ಮತ್ತು 3436 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಜೊತೆಗಿನ ಶೀರ್ಷಿಕೆ "ಯುವ ಪೀಳಿಗೆಯು ಸ್ಮಾರ್ಟ್‌ಫೋನ್‌ಗಳ ಗೀಳನ್ನು ಹೊಂದಿದೆ" ಎಂದು ಬರೆಯಲಾಗಿದೆ. ಈ ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋ ಜೊತೆಗಿನ ಶೀರ್ಷಿಕೆಯನ್ನು 'ಯುವ ಪೀಳಿಗೆಗೆ ಸ್ಮಾರ್ಟ್‌ಫೋನ್‌ಗಳ ಹುಚ್ಚಿದೆ' ಎಂದು ಬರೆಯಲಾಗಿದೆ. ಈ ವಿಡಿಯೊ ಕುರಿತು ಬಳಕೆದಾರರಿಂದ ಕಾಮೆಂಟ್‌ಗಳು ಬರುತ್ತಿವೆ. ಒಬ್ಬ ಬಳಕೆದಾರ, 'ತಾಯಿ ತನ್ನ ಮಗುವಿಗೆ ಸಲಹೆ ನೀಡುವ ರೀತಿ ನನಗೆ ಇಷ್ಟವಾಗಿದೆ 'ಇದು ಅಪಾಯಕಾರಿ. ಅವರನ್ನು ತುಂಬಾ ನಂಬಬೇಡಿ'. ಮತ್ತೊಬ್ಬರು, 'ಪ್ರಾಣಿಗಳಿಗೂ ಫೋನ್, ಕ್ಯಾಮೆರಾ ಇಷ್ಟ' ಎಂದು ಬರೆದಿದ್ದಾರೆ.

Recommended Video

ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ ಬಿಸಿಸಿಐ! | OneIndia Kannada

English summary
A video of a baby monkey trying to take a phone from a person and being stopped by its mother has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X