ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾಗುತ್ತಿದೆಯಾ ಬಾಬಾ ವಂಗಾ 2022ರ ಬಗ್ಗೆ ಹೇಳಿದ ಭವಿಷ್ಯ?: ಹೌದು ಎನ್ನುತ್ತಿವೆ ನಡೆದ ಘಟನೆಗಳು

|
Google Oneindia Kannada News

ತನ್ನ ಭವಿಷ್ಯವಾಣಿಯಿಂದಲೇ ಜಗತ್ತಿನಾದ್ಯಂತ ಹೆಸರು ಗಳಿಸಿರುವ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅಲಿಯಾಸ್ ಬಾಬಾ ವಂಗಾ 2022ರ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗುತ್ತಿದೆಯಾ? ಎನ್ನುವ ಅನುಮಾನ ಮೂಡಲು ಶುರುವಾಗಿದೆ. ಅಂಧರಾಗಿದ್ದ ಇವರು ಹೇಳಿದ ಬಹುತೇಕ ಭವಿಷ್ಯವಾಣಿ ನಿಜವಾಗಿದೆ.

ಭವಿಷ್ಯವಾಣಿಗಳಿಗಾಗಿ ನಾಸ್ಟ್ರಾಡಾಮಸ್‌ನಂತೆಯೇ ಬಾಬಾ ವಂಗಾರನ್ನು ಜನ ನಂಬುತ್ತಾರೆ. 1996ರಲ್ಲೇ ಬಾಬಾ ವಂಗಾ ಮೃತಪಟ್ಟಿದ್ದರು, ಅವರು 5079ರವರೆಗೆ ಭೂಮಿಯ ಮೇಲೆ ನಡೆಯುವ ಪ್ರಮುಖ ಘಟನೆಗಳ ಭವಿಷ್ಯ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ. 5079ಕ್ಕೆ ಮಾನವನ ಅಂತ್ಯವಾಗಲಿದೆ ಎಂದು ಹೇಳುವ ಮೂಲಕ ಅಲ್ಲಿಗೆ ತನ್ನ ಭವಿಷ್ಯವನ್ನು ಮುಗಿಸಿದ್ದಾರೆ ಎಂದು ಹೇಳಲಾಗುತ್ತದೆ.

ಯೂರೋಪ್‌ ದೇಶಗಳಲ್ಲಿ ಶಾಖದ ಅಲೆಯ ಹೊಡೆತಕ್ಕೆ ನೂರಾರು ಮಂದಿ ಸಾವು, ಅರಣ್ಯ ನಾಶಯೂರೋಪ್‌ ದೇಶಗಳಲ್ಲಿ ಶಾಖದ ಅಲೆಯ ಹೊಡೆತಕ್ಕೆ ನೂರಾರು ಮಂದಿ ಸಾವು, ಅರಣ್ಯ ನಾಶ

ಭವಿಷ್ಯವನ್ನು ಹೇಳುವುದರಲ್ಲಿ ಬಾಬಾ ವಂಗಾ ಶೇಕಡಾ 85 ರಷ್ಟು ನಿಖರತೆಯನ್ನು ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ. ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ, 2004 ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷರಾಗುವ ಬಗ್ಗೆ ಅವರು ನುಡಿದಿದ್ದ ಭವಿಷ್ಯ ಎಲ್ಲವೂ ನಿಜವಾಗಿದೆ. ಆದ್ದರಿಂದಲೇ ಅವರ ಭವಿಷ್ಯವಾಣಿಯನ್ನು ಜಗತ್ತಿನಾದ್ಯಂತ ಹಲವರು ನಂಬುತ್ತಾರೆ.

 2022ರ ಭವಿಷ್ಯದಲ್ಲಿ ಎರಡು ನಿಜವಾಗಿದೆ

2022ರ ಭವಿಷ್ಯದಲ್ಲಿ ಎರಡು ನಿಜವಾಗಿದೆ

2022 ವರ್ಷದ ಕುರಿತು ಬಾಬಾ ವಂಗಾ ಹೇಳಿರುವ ಭವಿಷ್ಯಗಳಲ್ಲಿ ಎರಡು ಆಗಲೇ ನಿಜವಾಗಿದೆ ಎನಿಸುತ್ತದೆ. 2022ರಲ್ಲಿ ಹಲವು ಏಷ್ಯನ್ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹ ಉಂಟಾಗಲಿದೆ ಎಂದು ಹೇಳಿದ್ದರು. ಬಾಬಾ ವಂಗಾ ಹೇಳಿದಂತೆಯೇ 2022ರ ಆಸ್ಟ್ರೇಲಿಯಾದಲ್ಲಿ ಅತ್ಯಂತ ಭೀಕರ ಪ್ರವಾಹ ಸಂಭವಿಸಿತ್ತು. ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ನ ಕೆಲವು ಭಾಗಗಳು, ವೈಡ್ ಬೇ-ಬರ್ನೆಟ್ ಮತ್ತು ನ್ಯೂ ಸೌತ್ ವೇಲ್ಸ್, ಬ್ರಿಸ್ಬೇನ್ ಸೇರಿದಂತೆ ಹಲವಾರು ನಗರಗಳು ಮುಳುಗಿದವು.

ಬರಗಾಲದ ಪರಿಣಾಮವಾಗಿ ನಗರಗಳು ನೀರಿನ ಕೊರತೆಯಿಂದ ಬಳಲುತ್ತವೆ ಎಂದು ಬಾಬಾ ವಂಗಾ ಸಲಹೆ ನೀಡಿದರು. ಇದು ಪ್ರಸ್ತುತ ಯುರೋಪಿನಲ್ಲಿ ನಡೆಯುತ್ತಿದೆ. ವರದಿಗಳ ಪ್ರಕಾರ, ಪೋರ್ಚುಗಲ್ ತನ್ನ ದೇಶದ ನಾಗರಿಕರಿಗೆ ನೀರಿನ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡಿದೆ. ಇಟಲಿಯು ಪ್ರಸ್ತುತ 1950ರ ದಶಕದ ನಂತರ ಅವರ ಕೆಟ್ಟ ಬರಗಾಲವನ್ನು ಎದುರಿಸುತ್ತಿದೆ. ಮಾತ್ರವಲ್ಲದೇ ಹಲವು ಯೂರೋಪ್ ರಾಷ್ಟ್ರಗಳನ್ನು ಶಾಖದ ಅಲೆ ತೀವ್ರವಾಗಿ ಬಾಧಿಸುತ್ತಿದೆ.

 2022ರ ಕುರಿತು ಬಾಬಾ ವಂಗಾ ಭವಿಷ್ಯ

2022ರ ಕುರಿತು ಬಾಬಾ ವಂಗಾ ಭವಿಷ್ಯ

2022ರಲ್ಲಿ ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್ ಕಾಣಿಸಿಕೊಳ್ಳಲಿದ್ದು ಜಗತ್ತನ್ನೇ ಕಾಡಲಿದೆ ಎಂದು ಹೇಳಿದ್ದಾರೆ. ಈ ವರ್ಷದಲ್ಲಿ ಭೂಮಿಯ ಮೇಲ ಅನ್ಯಗ್ರಹದ ಜೀವಿಗಳು ಆಕ್ರಮಣ ಮಾಡಲಿವೆ ಎಂದು ಕೂಡ ನುಡಿದಿದ್ದಾರೆ. ಜಗತ್ತಿನ ಹಲವು ಭಾಗಗಳಲ್ಲಿ ಮಿಡತೆ ಆಕ್ರಮಣ ಮಾಡಲಿದ್ದು, ಬೆಳೆ ನಾಶಕ್ಕೆ ಕಾರಣವಾಗಲಿದೆ ಎಂದು ಕೂಡ ಹೇಳಿದ್ದಾರೆ. ವರ್ಚುವಲ್ ರಿಯಾಲಿಟಿ ಬಳಕೆಯಲ್ಲಿ ಏರಿಕೆಯಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಜಗತ್ತು ಈಗಷ್ಟೇ ಕೋವಿಡ್-19 ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಮಂಕಿಪಾಕ್ಸ್ ಜಗತ್ತಿಗೆ ಮತ್ತೊಂದು ಆತಂಕ ಶುರುಮಾಡಿದೆ. ಮತ್ತೊಂದು ವೈರಸ್‌ ಜಗತ್ತಿಗೆ ಕಂಟಕವಾಗಲಿದೆ ಹೇಳಿರುವ ಬಾಬಾ ವಂಗಾ ಭವಿಷ್ಯವಾಣಿ ಆತಂಕ ಮೂಡಿಸಿದೆ.

 ಬಾಬಾ ವಂಗಾ ಹೇಳಿರುವ ಜಗತ್ತಿನ ಭವಿಷ್ಯ

ಬಾಬಾ ವಂಗಾ ಹೇಳಿರುವ ಜಗತ್ತಿನ ಭವಿಷ್ಯ

2023ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ ಮತ್ತು 2028ರಲ್ಲಿ ಗಗನಯಾತ್ರಿಗಳು ಶುಕ್ರ ಗ್ರಹಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 2046 ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

2100ರ ವೇಳೆಗೆ ರಾತ್ರಿ ಎನ್ನುವುದೇ ಕಣ್ಮರೆಯಾಗುತ್ತದೆ, ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಅವರು ಹೇಳಿದ್ದಾರೆ. 5079 ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಅವಳು ಭವಿಷ್ಯ ನುಡಿದಳು.

 ಭವಿಷ್ಯ ಹೇಳುವ ಈ ಬಾಬಾ ವಂಗಾ ಯಾರು?

ಭವಿಷ್ಯ ಹೇಳುವ ಈ ಬಾಬಾ ವಂಗಾ ಯಾರು?

ಬಾಬಾ ವಂಗಾ ಉತ್ತರ ಮೆಸಿಡೋನಿಯಾದ ಸ್ಟ್ರುಮಿಕಾದಲ್ಲಿ 1911 ರಲ್ಲಿ ಜನಿಸಿದರು. ಎಲ್ಲರಂತೆಯೇ ಸಹಜವಾಗಿದ್ದ ಬಾಬಾ ವಂಗಾ ತನ್ನ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ತನ್ನ ದೃಷ್ಟಿ ಕಳೆದುಕೊಂಡಳು.

ಸುಂಟರಗಾಳಿ ತನ್ನನ್ನು ನೆಲದಿಂದ ಎತ್ತಿಕೊಂಡು ಹೋಗಿತ್ತು ಎಂದು ಅವಳು ಹೇಳಿಕೊಂಡಳು, ಸುದೀರ್ಘ ಹುಡುಕಾಟದ ನಂತರ ವಂಗಾ ಪತ್ತೆಯಾಗಿದ್ದಳು. ಆಗ ವಂಗಾ ತುಂಬಾ ಭಯಗೊಂಡಿದ್ದಳು ಎಂದು ನೋಡಿದವರು ಹೇಳಿದ್ದರು, ಅವಳ ಕಣ್ಣುಗಳು ಮರಳು ಮತ್ತು ಧೂಳಿನಿಂದ ಮುಚ್ಚಲ್ಪಟ್ಟಿದ್ದವು.

ಆಕೆಯ ಕುಟುಂಬವು ಚಿಕಿತ್ಸೆಗೆ ಸಾಕಷ್ಟು ಹಣವನ್ನು ಹೊಂದಿಲ್ಲದ ಕಾರಣ, ವಂಗಾ ತನ್ನ ದೃಷ್ಟಿ ಕಳೆದುಕೊಂಡಳು. ಆದರೆ, ಭವಿಷ್ಯವನ್ನು ನೋಡುವ ಶಕ್ತಿಯನ್ನು ತನಗೆ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು.

English summary
Baba Vanga's predictions for 2022, And it appears that some of those premonitions have already come true. she predicted ‘intense bouts of floods’ for several Asian countries and Australia. Turns out, it exactly happened how she predicted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X