ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 90 ಮಂದಿ ಕೋಟ್ಯಾಧಿಪತಿಗಳು: ಅಗ್ರ ಸ್ಥಾನದಲ್ಲಿ ಅಜೀಮ್‌ ಪ್ರೇಮ್‌ಜಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 01: ಕರ್ನಾಟಕ ರಾಜ್ಯದಲ್ಲಿ ಸುಮಾರು 90 ಮಂದಿ ಕೋಟ್ಯಾಧಿಪತಿಗಳು ಇದ್ದು, ಇದರಲ್ಲಿ ಪ್ರಥಮ ಸ್ಥಾನದಲ್ಲಿ ವಿಪ್ರೋದ ಸ್ಥಾಪಕ-ಅಧ್ಯಕ್ಷ ಅಜೀಮ್ ಪ್ರೇಮ್‌ಜಿ ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಇಂಡಿಯಾ ಇನ್ಫೋಲಿನ್ ಲಿಮಿಟೆಡ್ (ಐಐಎಫ್‌ಎಲ್‌) 2021 ತನ್ನ ಶ್ರೀಮಂತರುಗಳ ಪಟ್ಟಿಯಲ್ಲಿ ಹೇಳಿದೆ.

ಕರ್ನಾಟಕದಲ್ಲಿ ಪ್ರಸ್ತುತ 90 ಮಂದಿ ಕೋಟ್ಯಾಧಿಪತಿಗಳು ಇದ್ದು, ಕಳೆದ ಒಂದು ವರ್ಷದಲ್ಲಿ ಈ ಪಟ್ಟಿಗೆ ಸುಮಾರು 18 ಮಂದಿ ಸೇರ್ಪಡೆಯಾಗಿದ್ದಾರೆ. ಅಂದರೆ 18 ಮಂದಿಯ ಆದಾಯ ಹೆಚ್ಚಳವಾಗಿದ್ದು, ಅವರೂ ಕೋಟ್ಯಾಧಿಪತಿಗಳು ಆಗಿದ್ದಾರೆ. ಇನ್ನು ಅತೀ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿ ಇದೆ. ಹಾಗೆಯೇ ದೇಶದ ಅಗ್ರ ಹತ್ತು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅಜೀಮ್‌ ಪ್ರೇಮ್‌ಜಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಜೀಮ್‌ ಪ್ರೇಮ್‌ಜಿ ಆದಾಯವು 18 ಪಟ್ಟು ಅಧಿಕವಾಗಿದೆ ಎಂದು ಹೇಳಲಾಗಿದೆ.

ಕೊರೊನಾದಿಂದ ಬಚಾವಾಗಲು ವಿಶ್ವದ ಶ್ರೀಮಂತರ ಪ್ಲ್ಯಾನ್ ಇದುಕೊರೊನಾದಿಂದ ಬಚಾವಾಗಲು ವಿಶ್ವದ ಶ್ರೀಮಂತರ ಪ್ಲ್ಯಾನ್ ಇದು

ಸಂಸ್ಥೆಯ ಮಾಲೀಕರ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಹತ್ತರಲ್ಲಿ ಇಲ್ಲ. ನೂರು ಕೋಟ್ಯಾಂತರ ಆಸ್ತಿಯನ್ನು ಹೊಂದಿರುವ ಸಂಸ್ಥೆಗಳ ಮಾಲೀಕರ ಪಟ್ಟಿಯಲ್ಲಿ ಅಜೀಮ್‌ ಪ್ರೇಮ್‌ಜಿ ಆಂಡ್‌ ಫ್ಯಾಮಿಲಿ 33 ಸ್ಥಾನದಲ್ಲಿ ಇದೆ. ವಿಪ್ರೋ ಅಜೀಮ್‌ ಪ್ರೇಮ್‌ಜಿ ಆಂಡ್‌ ಫ್ಯಾಮಿಲಿ ಮಾಲೀಕತ್ವದ ಸಂಸ್ಥೆಯಾಗಿದೆ. ಅಜೀಮ್‌ ಪ್ರೇಮ್‌ಜಿ ಆಂಡ್‌ ಫ್ಯಾಮಿಲಿಯ ಒಟ್ಟು ಆಸ್ತಿಯು 36,900 ಕೋಟಿ ಆಗಿದೆ.

 100 ಪಟ್ಟಿಯಲ್ಲಿ ಕರ್ನಾಟಕದವರು ಎಷ್ಟು ಮಂದಿ ಇದ್ದಾರೆ?

100 ಪಟ್ಟಿಯಲ್ಲಿ ಕರ್ನಾಟಕದವರು ಎಷ್ಟು ಮಂದಿ ಇದ್ದಾರೆ?

ಎಸ್‌ ಗೋಪಾಲಕೃಷ್ಣ ಆಂಡ್‌ ಫ್ಯಾಮಿಲಿ 37 ನೇ ಸ್ಥಾನದಲ್ಲಿ ಇದೆ. ಎಸ್‌ ಗೋಪಾಲಕೃಷ್ಣ ಆಂಡ್‌ ಫ್ಯಾಮಿಲಿ ಇನ್ಫೋಸಿಸ್‌ ಸಂಸ್ಥೆಯ ಮಾಲೀಕತ್ವ ಹೊಂದಿದೆ. ಇದರ ಒಟ್ಟು ಆಸ್ತಿಯು 35,200 ಕೋಟಿ ಆಗಿದೆ. ಎನ್‌ ಆರ್‌ ನಾರಾಯಣ ಮೂರ್ತಿ ಆಂಡ್‌ ಫ್ಯಾಮಿಲಿ 49 ನೇ ಸ್ಥಾನದಲ್ಲಿ ಇದೆ. ಎನ್‌ ಆರ್‌ ನಾರಾಯಣ ಮೂರ್ತಿ ಆಂಡ್‌ ಫ್ಯಾಮಿಲಿ ಇನ್ಫೋಸಿಸ್‌ ಸಂಸ್ಥೆಯ ಮಾಲೀಕತ್ವ ಹೊಂದಿದೆ. ಇದರ ಒಟ್ಟು ಆಸ್ತಿಯು 29,000 ಕೋಟಿ ಆಗಿದೆ. ಇನ್ನು ಕಿರಣ್‌ ಮಜುದ್ದೂರ್‌ ಶಾ 53 ನೇ ಸ್ಥಾನದಲ್ಲಿ ಇದೆ. ಬಯೋಕಾನ್‌ ಕಿರಣ್‌ ಮಜುದ್ದೂರ್‌ ಶಾದ ಮಾಲೀಕತ್ವದಲ್ಲಿದೆ. ಇದರ ಒಟ್ಟು ಆಸ್ತಿಯು 28,200 ಕೋಟಿ ಆಗಿದೆ. ನಿತಿನ್‌ ಕಾಮತ್‌ ಆಂಡ್‌ ಫ್ಯಾಮಿಲಿ 63 ನೇ ಸ್ಥಾನದಲ್ಲಿ ಇದೆ. ಜೆರೋಧಾ ಇದರ ಮಾಲೀಕತ್ವದ ಹಣಕಾಸು ವಿಭಾಗದ ಸಂಸ್ಥೆಯಾಗಿದೆ. 25,600 ಕೋಟಿ ಆಸ್ತಿ ನಿತಿನ್‌ ಕಾಮತ್‌ ಆಂಡ್‌ ಫ್ಯಾಮಿಲಿದ್ದು ಆಗಿದೆ. ಬೈಜು ರವೀಂದ್ರ ಆಂಡ್‌ ಫ್ಯಾಮಿಲಿ ಈ ಪಟ್ಟಿಯಲ್ಲಿ 67 ನೇ ಪಟ್ಟಿಯಲ್ಲಿ ಇದೆ. ಥಿಂಕ್‌ ಆಂಡ್‌ ಲರ್ನ್ ಈ ಬೈಜು ರವೀಂದ್ರ ಆಂಡ್‌ ಫ್ಯಾಮಿಲಿ ಮಾಲೀಕತ್ವದ ಸಂಸ್ಥೆಯಾಗಿದೆ. ಇದರ ಒಟ್ಟು ಆಸ್ತಿಯು 24,300 ಕೋಟಿ ಆಗಿದೆ.

ಜಿತೇಂದ್ರ ವಿರ್ವಾನಿ 69 ನೇ ಸ್ಥಾನದಲ್ಲಿ ಇದ್ದಾರೆ. ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಇವರದ್ದಾಗಿದೆ. ಒಟ್ಟು 23,700 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ನಂದನ್‌ ನಿಲ್ಕಾನಿ ಆಂಡ್‌ ಫ್ಯಾಮಿಲಿ 79 ನೇ ಸ್ಥಾನದಲ್ಲಿ ಇದೆ. ಇನ್ಫೋಸಿಸ್‌ನ ಪಾಲುದಾರಿಕೆಯನ್ನು ಹೊಂದಿದೆ. ಒಟ್ಟು 20,900 ಕೋಟಿ ಆಸ್ತಿಯನ್ನು ಇದ್ದರದ್ದು ಆಗಿದೆ. ದಿನೇಶ್‌ ಕೃಷ್ಣಮೂರ್ತಿ ಆಂಡ್‌ ಫ್ಯಾಮಿಲಿ 90 ಸ್ಥಾನದಲ್ಲಿ ಇದ್ದು ಇದೂ ಕೂಡಾ ಇನ್ಫೋಸಿಸ್‌ನ ಪಾಲುದಾರಿಕೆಯನ್ನು ಹೊಂದಿದೆ. ಒಟ್ಟು 18,500 ಆಸ್ತಿಯನ್ನು ಹೊಂದಿದೆ. ರಾಜ ಬಾಗ್ಮನೆ 92 ಸ್ಥಾನದಲ್ಲಿ ಇದ್ದಾರೆ. ಬಾಗ್ಮನೆ ಡೆವಲಪರ್ಸ್ ರಿಯಲ್‌ ಎಸ್ಟೇಟ್‌ ಸಂಸ್ಥೆ ಇವರ ಮಾಲೀಕತ್ವದ್ದು ಆಗಿದ್ದು, ಒಟ್ಟು 18,200 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಎಸ್‌ಡಿ ಶಿಬುಲಾಲ್‌ ಆಂಡ್‌ ಫ್ಯಾಮಿಲಿ ಈ ಪಟ್ಟಿಯಲ್ಲಿ 97 ನೇ ಸ್ಥಾನದಲ್ಲಿ ಇದ್ದಾರೆ. ಇನ್ಫೋಸಿಸ್‌ನ ಪಾಲುದಾರಿಕೆಯನ್ನು ಹೊಂದಿದ್ದಾರೆ. ಒಟ್ಟು ಆಸ್ತಿ 17,700 ಕೋಟಿ ಆಗಿದೆ.

 ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ದೇಶದ ಟಾಪ್‌ 10 ಕುಟುಂಬಗಳು

ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ದೇಶದ ಟಾಪ್‌ 10 ಕುಟುಂಬಗಳು

ದೇಶದ ಟಾಪ್‌ 10 ಕೋಟ್ಯಾಧಿಪತಿ ಸಂಸ್ಥೆಗಳ ಪಟ್ಟಿಯಲ್ಲಿ ಎಂದಿನಂತೆ ಮುಖೇಶ್‌ ಅಂಬಾನಿ ಆಂಡ್‌ ಫ್ಯಾಮಿಲಿ ಮೊದಲ ಸ್ಥಾನದಲ್ಲಿ ಇದ್ದಾರೆ. 7,18,00 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಗೌತಮ್‌ ಅದಾನಿ ಆಂಡ್‌ ಫ್ಯಾಮಿಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಸಂಸ್ಥೆಯ ಆದಾಯ ಸುಮಾರು ಶೇಕಡ 261ರಷ್ಟು ಅಧಿಕವಾಗಿದೆ. ಮೂರನೇ ಸ್ಥಾನದಲ್ಲಿ ಶಿವ್‌ ನಡ್ಡರ್‌ ಆಂಡ್‌ ಫ್ಯಾಮಿಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಎಸ್‌ಪಿ ಹಿಂದೂಜಾ ಆಂಡ್‌ ಫ್ಯಾಮಿಲಿ ಇದ್ದಾರೆ. ಐದನೇ ಸ್ಥಾನದಲ್ಲಿ ಎಲ್‌ಎನ್‌ ಮಿತ್ತಲ್‌ ಆಂಡ್‌ ಫ್ಯಾಮಿಲಿ ಇದ್ದಾರೆ. ಇವರ ಆಸ್ತಿಯು ಶೇಕಡ 187 ರಷ್ಟು ಅಧಿಕವಾಗಿದೆ. ಸೀರಸ್‌ ಎಸ್‌ ಪೂನಾವಾಲ ಆಂಡ್‌ ಫ್ಯಾಮಿಲಿ ಆರನೇ ಸ್ಥಾನದಲ್ಲಿದೆ. ಸೀರಮ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ ಈ ಕುಟುಂಬದ ಮಾಲೀಕತ್ವದಲ್ಲಿದೆ. ರಾಧಾಕೃಷ್ಣನ್‌ ದಾಮನಿ ಆಂಡ್‌ ಫ್ಯಾಮಿಲಿ ಏಳನೇ ಸ್ಥಾನದಲ್ಲಿದೆ. ವಿನೋದ್‌ ಶಾಂತಿಲಾಲ್‌ ಅದಾನಿ ಆಂಡ್‌ ಫ್ಯಾಮಿಲಿ ಎಂಟನೇ ಸ್ಥಾನದಲ್ಲಿದೆ. ಕುಮಾರ್‌ ಮಂಗಲಂ ಬಿರ್ಲಾ ಆಂಡ್‌ ಫ್ಯಾಮಿಲಿ ಒಂಬತ್ತನೇ ಸ್ಥಾನದಲ್ಲಿ ಹಾಗೂ ಜಯ ಔಧರಿ ಹತ್ತನೇ ಸ್ಥಾನದಲ್ಲಿ ಇದ್ದಾರೆ. ಬೆಂಗಳೂರು ಮೂಲದ ಯಾವ ಕುಟುಂಬಗಳು ಕೂಡಾ ಈ ಪಟ್ಟಿಯಲ್ಲಿ ಇಲ್ಲ.

ಮೈಸೂರು: ಉಳ್ಳವರಿಗೆ ನಂಜುಂಡೇಶ್ವರನ ದರ್ಶನ, ಇಲ್ಲದವರಿಗೆ ಭ್ರಮನಿರಸನಮೈಸೂರು: ಉಳ್ಳವರಿಗೆ ನಂಜುಂಡೇಶ್ವರನ ದರ್ಶನ, ಇಲ್ಲದವರಿಗೆ ಭ್ರಮನಿರಸನ

 ವೈಯಕ್ತಿಕ ನೆಲೆಗಟ್ಟಿನಲ್ಲಿ ದೇಶದ ಕೋಟ್ಯಾಧಿಪತಿಗಳು

ವೈಯಕ್ತಿಕ ನೆಲೆಗಟ್ಟಿನಲ್ಲಿ ದೇಶದ ಕೋಟ್ಯಾಧಿಪತಿಗಳು

ಮುಖೇಶ್‌ ಅಂಬಾನಿ ಎಂದಿನಂತೆ ಮೊದಲ ಸ್ಥಾನದಲ್ಲಿ ಇದ್ದಾರೆ. ಎರಡನೇ ಸ್ಥಾನದಲ್ಲಿ ಶಿವ ನಡ್ಡರ್‌ ಇದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಅಜೀಮ್‌ ಪ್ರೇಮ್‌ಜಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಮುರಳಿ ದಿವಿ ಇದ್ದಾರೆ. ಐದನೇ ಸ್ಥಾನದಲ್ಲಿ ರಾಧಾ ವೆಂಭು ಇದ್ದಾರೆ. ಆರನೇ ಸ್ಥಾನದಲ್ಲಿ ಗೌತಮ್‌ ಅದಾನಿ ಇದ್ದಾರೆ. ಇನ್ನು ಏಳನೇ ಸ್ಥಾನದಲ್ಲಿ ವೇಣು ಗೋಪಾಲ ಬಂಗೂರು ಇದ್ದಾರೆ. ಎಂಟನೇ ಸ್ಥಾನದಲ್ಲಿ ಸೀರಸ್‌ ಎಸ್‌ ಪೂನವಾಲ ಇದ್ದಾರೆ. ಒಂಬತ್ತನೇ ಸ್ಥಾನದಲ್ಲಿ ಅಜಯ್‌ ಕುಮಾರ್‌ ಮನ್ಸುಖ್‌ಲಾಲ್‌ ಪಟೇಲ್‌ ಹಾಗೂ ಹತ್ತನೇ ಸ್ಥಾನದಲ್ಲಿ ವಿನೋದ್‌ ಶಾಂತಿಲಾಲ್‌ ಅದಾನಿ ಇದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಓರ್ವರು ಇದ್ದಾರೆ.

ಮುಕೇಶ್ ನಂತರ ಅತಿ ಶ್ರೀಮಂತರ ಪಟ್ಟಿಯಲ್ಲಿ ನಂ.2 ಯಾರು?ಮುಕೇಶ್ ನಂತರ ಅತಿ ಶ್ರೀಮಂತರ ಪಟ್ಟಿಯಲ್ಲಿ ನಂ.2 ಯಾರು?

Recommended Video

Pravaig Extinction Made in India | Real life review in Kannada | Made in Bangalore | Oneindia
 ಯಾವ ರಾಜ್ಯದಲ್ಲಿ, ಎಷ್ಟು ಕೋಟ್ಯಾಧಿಪತಿಗಳು ಇದ್ದಾರೆ ಗೊತ್ತಾ?

ಯಾವ ರಾಜ್ಯದಲ್ಲಿ, ಎಷ್ಟು ಕೋಟ್ಯಾಧಿಪತಿಗಳು ಇದ್ದಾರೆ ಗೊತ್ತಾ?

ಮಹಾರಾಷ್ಟ್ರದಲ್ಲಿ ದೇಶದಲ್ಲಿ ಅಧಿಕ ಕೋಟ್ಯಾಧಿಪತಿಗಳು ಇದ್ದಾರೆ. ಈ ರಾಜ್ಯದಲ್ಲಿ ಒಟ್ಟು 302 ಕೋಟ್ಯಾಧಿಪತಿಗಳು ಇದ್ದು ಹೊಸದಾಗಿ 54 ಮಂದಿ ಕೋಟ್ಯಾಧೀಶರು ಆಗಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು 167 ಮಂದಿ ಕೋಟ್ಯಾಧಿಪತಿಗಳು ಇದ್ದು ಈ ಪಟ್ಟಿಗೆ 39 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕರ್ನಾಟಕವು ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದು ಇಲ್ಲಿ 90 ಮಂದಿ ಕೋಟ್ಯಾಧಿಪತಿಗಳು ಇದ್ದಾರೆ. ಹೊಸದಾಗಿ 18 ಮಂದಿ ಕೋಟ್ಯಾಧೀಶರು ಆಗಿದ್ದಾರೆ. ಇನ್ನು ಗುಜರಾತ್‌ನಲ್ಲಿ ಒಟ್ಟು 75 ಮಂದಿ ಕೋಟ್ಯಾಧೀಶರು ಇದ್ದಾರೆ. ತಮಿಳುನಾಡಿನಲ್ಲಿ 65, ತೆಲಂಗಾಣ 63, ಪಶ್ಚಿಮ ಬಂಗಾಳ 37, ಹರಿಯಾಣ 25, ಉತ್ತರ ಪ್ರದೇಶ 22, ರಾಜಸ್ಥಾನ 16, ಕೇರಳ 15, ಪಂಜಾಬ್‌ 8, ಆಂಧ್ರ ಪ್ರದೇಶ 6, ಮಧ್ಯ ಪ್ರದೇಶ 4, ಛತ್ತೀಸ್‌ಗಢ 4, ಬಿಹಾರ 4, ಜಾರ್ಖಾಂಡ್‌ 4, ಒಡಿಶಾ 4, ಉತ್ತರಾಖಂಡ್‌ 2 ಮತ್ತು ಚಂಢೀಗಢ 2 ಕೋಟ್ಯಾಧಿಪತಿಗಳು ಇದ್ದಾರೆ. ಈ ಪೈಕಿ ಕೇರಳ ಹಾಗೂ ಆಂಧ್ರ ಪ್ರದೇಶದಲ್ಲಿ ಈ ಪಟ್ಟಿಯಲ್ಲಿ ಒಬ್ಬೊಬ್ಬರು ಹೊರಹೋಗಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Azim Premji richest man in Karnataka, 90 Billionaires in State: Hurun India Rich List. Explained details in Kannada, To know more Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X