ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?

|
Google Oneindia Kannada News

ಮೈಸೂರು, ಅಕ್ಟೋಬರ್. 31: ನವೆಂಬರ್‌ ಬಂತೆಂದರೆ ಸಾಕು ಎಲ್ಲೆಡೆ ಕನ್ನಡ ನಾಡು, ನುಡಿ ಬಗ್ಗೆ ಹೆಮ್ಮೆಯ ಮಾತುಗಳು, ಚರ್ಚೆಗಳು ಆರಂಭವಾಗಿ ಬಿಡುತ್ತದೆ.

ಅದರಲ್ಲೂ ಈಗ ಮೊಬೈಲ್ ಕಾಲ, ಫೇಸ್‌ಬುಕ್‌, ವಾಟ್ಸಾಪ್ ತೆರೆದರೆ ಸಾಕು ಕನ್ನಡದ ಒಂದು ಸ್ಲೋಗನ್, ಕೆಂಪು- ಹಳದಿ ಬಣ್ಣದ ಧ್ವಜ ಹಾಕಿ ನಾಡ ಮೇಲೆ ಅಭಿಮಾನವಿದ್ದರೆ ಷೇರ್ ಮಾಡಿ, ಲೈಕ್‌ ಮಾಡಿ, ನವೆಂಬರ್‌ 1 ರೊಳಗಾಗಿ 1 ಕೋಟಿ ಲೈಕ್‌ ಸಿಗಲಿ ಎಂಬ ಸಲಹೆ, ಸೂಚನೆ ಇರುತ್ತದೆ.

ಕನ್ನಡದ ಶ್ರೇಷ್ಠ ಕೃತಿಗಳು ಬ್ರೈಲ್‌ ಲಿಪಿಯಲ್ಲಿ, ಅಂಧರ ಈ ಸಾಧನೆ ಅತ್ಯದ್ಭುತಕನ್ನಡದ ಶ್ರೇಷ್ಠ ಕೃತಿಗಳು ಬ್ರೈಲ್‌ ಲಿಪಿಯಲ್ಲಿ, ಅಂಧರ ಈ ಸಾಧನೆ ಅತ್ಯದ್ಭುತ

ಆದರೆ ತಮ್ಮ ಹಾಗೂ ಕುಟುಂಬದ ಹೊಟ್ಟೆ ಹೊರೆಯಲು ಹಗಲಿರುಳು ದುಡಿಯುವ ಆಟೋ ರಾಜರು ಕನ್ನಡ ರಾಜ್ಯೋತ್ಸವವನ್ನು ತಮ್ಮ ಆಟೋ ನಿಲ್ದಾಣಗಳಲ್ಲಿ ಈ ತಿಂಗಳ ಪೂರ್ತಿ ಆಚರಿಸುವ ಮೂಲಕ ಅಭಿಮಾನ ತೋರಿಸುವುದರ ಜೊತೆಗೆ ಜನರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುತ್ತಾರೆ.

ಸಾಮಾನ್ಯವಾಗಿ ರಾಜ್ಯದ ಮೂಲೆ -ಮೂಲೆಯಲ್ಲಿನ ಬಹುತೇಕ ಎಲ್ಲಾ ಆಟೋ ನಿಲ್ದಾಣಗಳ ಬಳಿ ನಾಡದೇವತೆ ಚಾಮುಂಡಿ ದೇವತೆಯ ಚಿಕ್ಕಗುಡಿ, ಅದಕ್ಕೆ ಹೊಂದಿಕೊಂಡಂತೆ ಧ್ವಜಸ್ತಂಭ, ಅರಿಶಿನ -ಕುಂಕುಮ (ಕೆಂಪು- ಹಳದಿ) ಬಣ್ಣದ ಅಲಂಕಾರ, ಅದರ ಮೇಲೊಂದು ಕನ್ನಡದ ಧ್ವಜ ಹಾರಾಡುತ್ತಿರುತ್ತದೆ. ಮುಂದೆ ಓದಿ...

 ಆಟೋ ನಿಲ್ದಾಣದತ್ತ ಸ್ವಲ್ಪ ಗಮನಕೊಡಿ

ಆಟೋ ನಿಲ್ದಾಣದತ್ತ ಸ್ವಲ್ಪ ಗಮನಕೊಡಿ

ಎಲ್ಲರೂ ನಿತ್ಯ ಆಟೋ ನಿಲ್ದಾಣ ನೋಡಿರುತ್ತಾರೆಯೇ ಹೊರತು ಅಲ್ಲಿರುವ ಕನ್ನಡ ಪ್ರೀತಿ ನೋಡಿರುವುದಿಲ್ಲ. ಏಕೆಂದರೆ ಅದು ಅವರಿಗೆ ಬೇಕಿಲ್ಲ. ಆದರೆ, ಈ ಬಾರಿ ನವೆಂಬರ್‌. 1ರಿಂದ ಇಡೀ ತಿಂಗಳು ಆಟೋ ನಿಲ್ದಾಣದತ್ತ ಸ್ವಲ್ಪ ಗಮನಕೊಡಿ ಅವರ ಕನ್ನಡಾಭಿಮಾನದ ಆಚರಣೆಯನ್ನು ಕಣ್ತುಂಬಿಕೊಂಡರೆ ಸಂತಸಪಡಲು ಪಾರವೇ ಇರುವುದಿಲ್ಲ.

 ಸಿಹಿ, ಉಪಾಹಾರ ಹಂಚುವುದು ವಾಡಿಕೆ

ಸಿಹಿ, ಉಪಾಹಾರ ಹಂಚುವುದು ವಾಡಿಕೆ

ನವೆಂಬರ್‌ ತಿಂಗಳ ಪೂರ್ತಿ ಎಲ್ಲಾ ಆಟೋ ನಿಲ್ದಾಣಗಳಲ್ಲಿ ಕನ್ನಡ ಧ್ವಜಾರೋಹಣ ಮಾಡುತ್ತಾರೆ. ಧ್ವನಿವರ್ಧಕಗಳ ಮೂಲಕ ನಾಡಗೀತೆಗಳು, ರೈತ ಗೀತೆಗಳು ಮೊಳಗುತ್ತವೆ. ಬರುವ ಜನರಿಗೆ ಸಿಹಿ, ಉಪಾಹಾರ ಹಂಚುವುದು ಸಹ ವಾಡಿಕೆ.

ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

 ಧ್ವಜಾರೋಹಣ ವಿತರಣೆ

ಧ್ವಜಾರೋಹಣ ವಿತರಣೆ

ರಾಜ್ಯೋತ್ಸವದ ಅಂಗವಾಗಿ ರಕ್ತದಾನ ಮಾಡಲು ಮುಂದಾಗುವ ನಮ್ಮ ಆಟೋ ಚಾಲಕರು ಈ ಮೂಲಕ ಕನ್ನಡಮ್ಮನ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಚಾಲಕರೆಲ್ಲರೂ ಸೇರಿ ತಮ್ಮ ಕೈಲಾದ ಮಟ್ಟಿಗೆ ಹಣ ಸಂಗ್ರಹಿಸಿ ಧ್ವಜಾರೋಹಣ ವಿತರಿಸುತ್ತಾರೆ.

 ಆಟೋ ಚಾಲಕರ ಪಾತ್ರ ಹಿರಿದು

ಆಟೋ ಚಾಲಕರ ಪಾತ್ರ ಹಿರಿದು

ನಮ್ಮ ಹಿಂದೂ ಹಬ್ಬಗಳೊಟ್ಟಿಗೆ ಕನ್ನಡ ರಾಜ್ಯೋತ್ಸವವು ಮತ್ತೊಂದು ಹಬ್ಬವಾಗಿ ಮಾರ್ಪಾಟಾಗಿರುವುದು ಸಂತಸವೇ ಸರಿ. ಇದರಲ್ಲಿ ಆಟೋ ಚಾಲಕರ ಪಾತ್ರ ಹಿರಿದು ಎಂಬುದರಲ್ಲಿ ಅತಿಶಯೋಕ್ತಿಯೇನು ಇಲ್ಲ.

ರಾಜ್ಯೋತ್ಸವ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ ರಾಜ್ಯೋತ್ಸವ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ

English summary
Auto drivers make a flag hoisting at all auto stations throughout November. It is also customary to share sweet and breakfast with people.This special article is part of Kannada Rajyotsava for you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X