• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿರೋಧಿಗಳನ್ನೂ ಮೆಚ್ಚುವ, ಮೆಚ್ಚಿಸಿಕೊಳ್ಳುವ ತಾಕತ್ತಿದ್ದಿದ್ದು ವಾಜಪೇಯಿ ಅವರಿಗೆ ಮಾತ್ರ!

|

ಅದು 1957 ರ ಮಾತು. ಭಾರತದ ಆಗಿನ ಪ್ರಧಾನಿಯಾಗದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ವಾಜಪೇಯಿ ಅಂದರೆ ಅದೇನೋ ಅಕ್ಕರೆ. ಒಮ್ಮೆ ಭಾರತಕ್ಕೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ಯುವಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪರಿಚಯಿಸುತ್ತಾ, 'ಇವರು(ಅಟಲ್ ಜೀ) ವಿರೋಧಪಕ್ಷದ ಯುವ ನಾಯಕ. ಯಾವತ್ತಿಗೂ ನನ್ನನ್ನು ಟೀಕಿಸುವುದರಲ್ಲಿ ಇವರು ನಿಸ್ಸೀಮ! ಆದರೆ ನನಗಂತೂ ಇವರಲ್ಲಿ ಭಾರತದ ಭವಿಷ್ಯದ ಪ್ರಧಾನಿ ಕಾಣುತ್ತಿದ್ದಾನೆ' ಎಂದಿದ್ದರು ನೆಹರು!

ಹೀಗೆ ವಿರೋಧಿಗಳಿಂದ ಮೆಚ್ಚಿಸಿಕೊಳ್ಳುವ ಮತ್ತು ವಿರೋಧಿಗಳ ಸತ್ಕಾರ್ಯಕ್ಕೆ ಅವರನ್ನು ಉದಾರ ಮನಸ್ಸಿನಿಂದ ಮೆಚ್ಚಿಕೊಳ್ಳುವ ತಾಕತ್ತಿದ್ದ ನಾಯಕರೆಂದರೆ ಅದು ವಾಜಪೇಯಿ ಮತ್ತು ವಾಜಪೇಯಿ ಮಾತ್ರ!

ಜೋಗ ಜಲಪಾತದಲ್ಲಿ ಮೈಮರೆತು ಹಾಡಿದ ಅಟಲ್ ಜೀ!

ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಎಲ್ಲ ನಡೆಯನ್ನೂ ಟೀಕಿಸಲೇಬೇಕು ಎಂಬ ಮನಸ್ಥಿತಿಯನ್ನು ವಾಜಪೇಯಿ ಅವರು ಎಂದಿಗೂ ಒಪ್ಪಲಿಲ್ಲ. ಪಕ್ಷ, ಸಿದ್ಧಾಂತವನ್ನು ಮೀರಿ ಒಳಿತನ್ನು ಒಳಿತು ಎಂದು ಸ್ವೀಕರಿಸುವ ಉದಾರತೆಯೇ ಪ್ರಬುದ್ಧ ರಾಜಕಾರಣಿಯಾಗುವ ದಿಟ್ಟ ಹೆಜ್ಜೆ ಎಂಬುದು ಅವರ ನಿಲುವಾಗಿತ್ತು. ಅದೇ ಕಾರಣಕ್ಕೇ ಅವರು ಅಜಾತಶತ್ರು ಎಂಬ ಪದಕ್ಕೆ ಅನ್ವರ್ಥವಾಗಿಯೇ ಉಳಿದರು!

ವ್ಯಂಗ್ಯ-ವಿಡಂಬನೆಯ ಮಿಶ್ರಣ ವಾಜಪೇಯಿಯವರ ಹಾಸ್ಯೋಕ್ತಿ

ಇಂದು ಅವರ ಮೊದಲ ವರ್ಷದ ಪುಣ್ಯಸ್ಮರಣೆ. ಕಳೆದ ಆಗಸ್ಟ್ 16 ರಂದು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದ ಅವರ ಅಗಲಿಕೆಗೆ ಇಡೀ ದೇಶವೂ ಮರುಗಿತ್ತು. ಅಸ್ಖಲಿತ ಮಾತು, ಹಾಸ್ಯಪ್ರಜ್ಞೆ, ಮಾನವೀಯತೆ, ವಿರೋಧಿಗಳನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಸೌಜನ್ಯ, ಕವಿಹೃದಯದ ರಾಜಕಾರಣಿ ವಾಜಪೇಯಿ ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಂಥ ವಿಪಕ್ಷದ ನಾಯಕರನ್ನೂ ಮುಕ್ತ ಕಂಠದಿಂದ ಶ್ಲಾಘಿಸುವ ಕೆಲಸ ಮಾಡಿದರು. ಟೀಕಿಸುವುದು ಮಾತ್ರವಲ್ಲ, ಪಕ್ಷ, ಸಿದ್ಧಾಂತವನ್ನೂ ಮೀರಿ ಒಳಿತನ್ನು ಮೆಚ್ಚುವ ಪ್ರಬುದ್ಧತೆ ರಾಜಕಾರಣದ ಈ ಹೊತ್ತಿನ ಅಗತ್ಯ ಎಂಬುದನ್ನು ಅವರು ತೋರಿಸಿಕೊಟ್ಟರು. ವಿರೋಧಿಗಳೊಂದಿಗೂ ಆತ್ಮೀಯತೆ ಸಾಧಿಸಿದ್ದ ವಾಜಪೇಯಿ ಅವರ ಬದುಕಿನ ಕೆಲವು ಸ್ಮರಣಿಯ ಘಟನೆಗಳ ಮೆಲುಕು ಇಲ್ಲಿದೆ....

ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ ಎಂದಿದ್ದ ನೆಹರು!

ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ ಎಂದಿದ್ದ ನೆಹರು!

ಪರಸ್ಪರ ವಿರೋಧ ಪಕ್ಷಗಳಲ್ಲಿದ್ದರೂ ನೆಹರು ಮತ್ತು ವಾಜಪೇಯಿ ಅವರು ಆತ್ಮೀಯ ಸ್ನೇಹಿತರಾಗಿದ್ದರು. ವಯಸ್ಸಿನಲ್ಲಿ ನೆಹರು ಅವರಿಗಿಂತ ಬಹಳ ಚಿಕ್ಕವರಾಗಿದ್ದರೂ ವಾಜಪೇಯಿ ಅವರಿಗಿದ್ದ ಜ್ಞಾನ, ಹುಮ್ಮಸ್ಸನ್ನು ಕಂಡು ನೆಹರು ಸದಾ ಮೆಚ್ಚುಗೆಯ ನೋಟ ಬೀರುತ್ತಿದ್ದರು. ವಾಜಪೇಯಿ ಬಗ್ಗೆ ಮಾತನಾಡುವಾಗೆಲ್ಲ, 'ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ!' ಎನ್ನುವುದನ್ನು ನೆಹರು ಮರೆಯುತ್ತಿರಲಿಲ್ಲ. ಹಾಗೆಯೇ ನೆಹರು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ವಾಜಪೇಯಿ, 'ನನಗೆ ನೆಹರೂ ಅವರ ಚಿಂತನೆಗಳ ಬಗ್ಗೆ, ದೇಶದ ಕುರಿತು ಇರುವ ಅಭಿಮಾನದ ಬಗ್ಗೆ ಬಹಳ ಗೌರವವಿದೆ. ಅವರು ಚಿಂತನೆಗಳು ನನಗೆ ಆದರ್ಶ' ಎಂದು ಹಲವು ಬಾರಿ ಹೇಳಿದ್ದರು.

ವಾಜಪೇಯಿ ಕಚೇರಿಯಲ್ಲಿ ನೆಹರೂ ಭಾವಚಿತ್ರ!

ವಾಜಪೇಯಿ ಕಚೇರಿಯಲ್ಲಿ ನೆಹರೂ ಭಾವಚಿತ್ರ!

ವಾಜಪೇಯಿ ಅವರು ತಮ್ಮ ಕಚೇರಿಯ ಕೊಠಡಿಯಲ್ಲಿ ನೆಹರು ಅವರ ಭಾವಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು. 1977 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆ ಭಾವಚಿತ್ರವನ್ನು ಕಚೇರಿಯ ಸಿಬ್ಬಂದಿಯೊಬ್ಬರು ತೆಗೆದಿಟ್ಟುಬಿಟ್ಟಿದ್ದರು. ಹೇಗೂ ಕಾಂಗ್ರೆಸ್ ಸರ್ಕಾರ ಇಲ್ಲವಲ್ಲ, ಇನ್ನೇಕೆ ಆ ಚಿತ್ರ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ

ವಾಜಪೇಯಿ ಅವರು ಕಚೇರಿಗೆ ಆಗಮಿಸುತ್ತಿದ್ದಂತೆಯೇ ಅದನ್ನು ಗಮನಿಸಿ, ಕೂಡಲೇ ಆ ಚಿತ್ರವನ್ನು ವಾಪಸ್ ತರಿಸಿಕೊಂಡಿದ್ದರು!

ಇಂದಿರಾ ಗಾಂಧಿಗೆ ದುರ್ಗೆಯ ಬಿರುದು

ಇಂದಿರಾ ಗಾಂಧಿಗೆ ದುರ್ಗೆಯ ಬಿರುದು

1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಲ್ಲಿ ಯುದ್ಧವಾದಾಗ, ಮತ್ತು ನಂತರ ಬಾಂಗ್ಲಾ ವಿಮೋಚನೆಯನ್ನು ಬೆಂಬಲಿಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡಾಗ, ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು 'ದುರ್ಗೆ'ಎಂದು ಕರೆದಿದ್ದರು. ಇಂದಿರಾ ಗಾಂಧಿ ಅವರ ದಿಟ್ಟ ನಡೆಯನ್ನು ಶ್ಲಾಘಿಸಿ, ಸ್ವಾಗತಿಸಿದ್ದರು.

ನಾನು ಬದುಕಿದ್ದು ರಾಜೀವ್ ಗಾಂಧಿಯಿಂದ ಎಂದಿದ್ದ ವಾಜಪೇಯಿ!

ನಾನು ಬದುಕಿದ್ದು ರಾಜೀವ್ ಗಾಂಧಿಯಿಂದ ಎಂದಿದ್ದ ವಾಜಪೇಯಿ!

1988 ರಲ್ಲಿ ಅಂದರೆ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಜಪೇಯಿ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಇದಕ್ಕೂ ಮುನ್ನವೇ ಒಂದು ಕಿಡ್ನಿಯನ್ನು ಕಳೆದುಕೊಂಡಿದ್ದರು. ಇದೀಗ ಮತ್ತೊಂದು ಕಿಡ್ನಿ ಸಮಸ್ಯೆ ಆರಂಭವಾಗಿತ್ತು. ವಿದೇಶದಲ್ಲಿ ಚಿಕಿತ್ಸೆಯಾಗಬೇಕಿತ್ತು. ಆದರೆ ಮುಜುಗರದ ಸ್ವಭಾವದ ವಾಜಪೇಯಿ ಈ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿರಲಿಲ್ಲ. ಅದ್ಹೇಗೋ ವಾಜಪೇಯಿ ಅವರ ಅನಾರೋಗ್ಯದ ಬಗ್ಗೆ ತಿಳಿದ ರಾಜೀವ್ ಗಾಂಧಿ, ವಾಜಪೇಯಿ ಅವರನ್ನು ಅಮೆರಿಕಕ್ಕೆ ಕಳಿಸಿ, ಅಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಈ ಬಗ್ಗೆ ರಾಜೀವ್ ಗಾಂಧಿ ಅವರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳದೆ ಪ್ರಬುದ್ಧತೆ ಮೆರೆದಿದ್ದರು. ರಾಜೀವ್ ಗಾಂಧಿ ಹತ್ಯೆಯ ನಂತರ ಅತೀವ ನೋವಿನಿಂದ ಈ ವಿಷಯವನ್ನು ವಾಜಪೇಯಿ ಬಹಿರಂಗಪಡಿಸಿದ್ದರು. ರಾಜೀವ್ ಗಾಂಧಿ ನನ್ನ ಸ್ವಂತ ಸಹೋದರರಂತೆ ಇದ್ದರು. ಅವರಿಂದಲೇ ನಾನಿಂದು ಜೀವಂತವಾಗಿರುವುದು. ಆದರೆ ಈ ವಿಷಯವನ್ನು ಅವರು ಎಲ್ಲಿಯೂ ಚರ್ಚಿಸಿರಲಿಲ್ಲ" ಎಂದು ವಾಜಪೇಯಿ ಹೇಳಿಕೊಂಡಿದ್ದರು.

English summary
Atal Bihari Vajpayee Was A Good Friend Of Nehru, indira And Rajeev Gandhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X